ಆ್ಯಶಸ್ 5ನೇ ಟೆಸ್ಟ್‌: ಆಸ್ಟ್ರೇಲಿಯಾವನ್ನ 300 ರನ್ ಗಡಿಯೊಳಗೆ ಆಲೌಟ್ ಮಾಡಲು ಇಂಗ್ಲೆಂಡ್ ಪ್ಲ್ಯಾನ್ LIVE SCORE

ಆ್ಯಶಸ್ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಬೌಲಿಂಗ್ ಆಯ್ದುಕೊಂಡ ಪ್ರವಾಸಿ ಇಂಗ್ಲೆಂಡ್ ತಂಡ ಮೊದಲ ದಿನದಾಟದಲ್ಲಿ ಕೊಂಚ ಯಶಸ್ವಿಯಾದಂತಿದೆ. ಎರಡನೇ ದಿನದಾಟದಲ್ಲಿ ಕಾಂಗರೂ ಪಡೆಯನ್ನ 300ರನ್‌ಗಳೊಳಗೆ ಕಟ್ಟಿಹಾಕುವ ಯೋಜನೆ ಹಾಕಿಕೊಂಡಿದೆ.

ಹೊಬಾರ್ಟ್‌ನ ಓವಲ್‌ನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಆಸ್ಟ್ರೇಲಿಯಾ, ಆರಂಭದಲ್ಲೇ ಓಪನರ್‌ಗಳಿಬ್ಬರನ್ನು ಕಳೆದುಕೊಂಡಿತು. ಡೇವಿಡ್ ವಾರ್ನರ್ ಶೂನ್ಯಕ್ಕೆ ಔಟಾದ್ರೆ, ಸಿಡ್ನಿ ಟೆಸ್ಟ್‌ನಲ್ಲಿ ಎರಡು ಶತಕ ಸಿಡಿಸಿದ್ದ ಉಸ್ಮಾನ್ ಖವಾಜ 6 ರನ್‌ಗಳಿಸಿ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದ್ರು.

ಓಪನರ್‌ಗಳಿಬ್ಬರು ಬಹುಬೇಗನೆ ವಿಕೆಟ್ ಒಪ್ಪಿಸಿದ ಬೆನ್ನಲ್ಲೇ ಆಸೀಸ್ ಬೆಸ್ಟ್ ಬ್ಯಾಟ್ಸ್‌ಮನ್ ಸ್ಟೀವನ್‌ ಸ್ಮಿತ್ ಕೂಡ ಶೂನ್ಯಕ್ಕೆ ರಾಬಿನ್‌ಸನ್‌ಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದ್ರು. ಆದ್ರೆ ಟ್ರಾವಿಸ್ ಹೆಡ್‌ ಜೊತೆಗೂಡಿ ಮಾರ್ನಸ್ ಲ್ಯಾಬುಸ್ಚಾಗ್ನೆ ನಾಲ್ಕನೇ ವಿಕೆಟ್‌ಗೆ ಉತ್ತಮ ಜೊತೆಯಾಟವಾಡಿದ್ರು.

ದ.ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಸೋತ ಭಾರತ: ಟೀಮ್ ಇಂಡಿಯಾ ಕಾಲೆಳೆದು ಕೆಂಗಣ್ಣಿಗೆ ಗುರಿಯಾದ ಎಬಿಡಿ!ದ.ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಸೋತ ಭಾರತ: ಟೀಮ್ ಇಂಡಿಯಾ ಕಾಲೆಳೆದು ಕೆಂಗಣ್ಣಿಗೆ ಗುರಿಯಾದ ಎಬಿಡಿ!

ಗಾಯಗೊಂಡ ಪರಿಣಾಮ ಹಿಂದಿನ ಪಂದ್ಯಗಳಲ್ಲಿ ಹೊರಗುಳಿದಿದ್ದ ಟ್ರಾವಿಸ್ ಹೆಡ್ 113 ಎಸೆತಗಳಲ್ಲಿ 101ರನ್‌ ಕಲೆಹಾಕಿ ಕುಸಿತ ತಂಡಕ್ಕೆ ಆಧಾರವಾದ್ರು. ನಾಲ್ಕನೇ ವಿಕೆಟ್‌ಗೆ ಮಾರ್ನಸ್ ಲ್ಯಾಬುಸ್ಚಾಗ್ನೆ ಜೊತೆಗೂಡಿ ಉತ್ತಮ ಜೊತೆಯಾಟವಾಡಿದ್ರು.

ಟ್ರಾವಿಸ್ ಜೊತೆಗೆ ಇಂಗ್ಲೆಂಡ್ ಬೌಲರ್‌ಗಳನ್ನ ಉತ್ತಮವಾಗೇ ಎದುರಿಸಿದ್ದ ವೇಳೆ ಮಾರ್ನಸ್ ಲ್ಯಾಬುಸ್ಚಾಗ್ನೆ 44 ರನ್‌ಗಳಿಸಿದ್ದಾಗ ಅತ್ಯಂತ ಕೆಟ್ಟದಾಗಿ ವಿಕೆಟ್ ಒಪ್ಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ ಆದ್ರು. 52 ಎಸೆತಗಳಲ್ಲಿ 44 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದ ಲ್ಯಾಬುಸ್ಚಾಗ್ನೆ ಚೀಕಿ ಶಾಟ್ ಆಡಲು ಪ್ರಯತ್ನಿಸಿದರು. ಚೆಂಡು ಬರುವ ಮುನ್ನವೇ ಅವರು ಆಫ್-ಸ್ಟಂಪ್‌ನಾದ್ಯಂತ ಮುಂದಾಗಿ ಬ್ರಾಡ್‌ ಬೌಲಿಂಗ್‌ಗೆ ಕ್ಲೀನ್ ಬೌಲ್ಡ್‌ ಆದ್ರು.

ಇದಾದ ಬಳಿಕ ಕ್ಯಾಮರೂನ್ ಗ್ರೀನ್ ಜೊತೆಗೂಡಿ ಐದನೇ ವಿಕೆಟ್‌ಗೆ ಶತಕದ ಜೊತೆಯಾಟವಾಡಿದ್ದ ಟ್ರಾವಿಸ್ ಹೆಡ್‌ ತನ್ನ ನಾಲ್ಕನೇ ಟೆಸ್ಟ್ ಶತಕ ದಾಖಲಿಸಿ ಕ್ರಿಸ್‌ವೋಕ್ಸ್‌ಗೆ ವಿಕೆಟ್ ಒಪ್ಪಿಸಿದ್ರು. 74 ರನ್‌ಗಳಿಸಿ ಉತ್ತಮ ಆಟವಾಡಿದ್ದ ಕ್ಯಾಮರೂನ್ ಗ್ರೀನ್ ಮಾರ್ಕ್‌ ವುಡ್‌ ಬೌಲಿಂಗ್‌ನಲ್ಲಿ ಔಟಾದ್ರು.

ದಿನದ ಕೊನೆಯ ಸೆಷನ್‌ನಲ್ಲಿ ಮಳೆಯಿಂದಾಗಿ ದಿನದಾಟ ಅಂತ್ಯಗೊಂಡಿತು. ಆದ್ರೆ ಅದಕ್ಕೂ ಮೊದಲು ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಅಜೇಯ 10 ರನ್ ಮತ್ತು ಮಿಚೆಲ್‌ ಸ್ಟಾರ್ಕ್‌ ಶೂನ್ಯಕ್ಕೆ ಎರಡನೇ ದಿನದಾಟ ಕಾಯ್ದುಕೊಂಡಿದ್ದಾರೆ. ಪಂದ್ಯದ ಲೈವ್‌ ಸ್ಕೋರ್ ಈ ಕೆಳಗಿದೆ.

1
51147

ಇಂಗ್ಲೆಂಡ್ ಪರ ಸ್ಟುವರ್ಟ್ ಬ್ರಾಡ್‌ 2, ಒಲ್ಲಿ ರಾಬಿನ್‌ಸನ್ 2, ಮಾರ್ಕ್‌ ವುಡ್ ಮತ್ತು ಕ್ರಿಸ್‌ ವೋಕ್ಸ್ ತಲಾ 1 ವಿಕೆಟ್ ಪಡೆದಿದ್ದಾರೆ. ಆಸೀಸ್ ಪಡೆಯನ್ನ ಎರಡನೇ ದಿನದಾಟದಲ್ಲಿ ಬೇಗನೆ ಆಲೌಟ್ ಮಾಡುವ ಗುರಿ ಹೊಂದಿದೆ. ಆದ್ರೆ ಎರಡನೇ ದಿನದಾಟದ ಆರಂಭದಲ್ಲಿ ಸ್ವಲ್ಪ ಹಿನ್ನಡೆಯಾಗಿದ್ದು, ಒಲ್ಲಿ ರಾಬಿನ್ಸನ್ ಇನ್ನೂ ಬೆನ್ನು ಮೂಳೆಯ ಸೆಳೆತದಿಂದ ಬಳಲುತ್ತಿದ್ದಾರೆ. ಹೀಗಾಗಿ ಇಂದು ಮೊದಲ ಸೆಷನ್‌ನಲ್ಲಿ ಬೌಲಿಂಗ್ ಮಾಡುವುದಿಲ್ಲ ಆದ್ರೆ ಅವರು ಫೀಲ್ಡಿಂಗ್ ಮಾಡುತ್ತಾರೆ. ಎರಡನೇ ಸೆಷನ್‌ನಿಂದ ಬೌಲ್ ಮಾಡಬಹುದು.

ಆಸ್ಟ್ರೇಲಿಯಾ ಪ್ಲೇಯಿಂಗ್ 11
ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಸ್ಕಾಟ್ ಬೋಲ್ಯಾಂಡ್
ಬೆಂಚ್: ಮೈಕೆಲ್ ನೆಸರ್, ಮಾರ್ಕಸ್ ಹ್ಯಾರಿಸ್, ಜೈ ರಿಚರ್ಡ್ಸನ್, ಮಿಚೆಲ್ ಸ್ವೆಪ್ಸನ್

ಇಂಗ್ಲೆಂಡ್ ಪ್ಲೇಯಿಂಗ್ 11
ರೋರಿ ಬರ್ನ್ಸ್, ಝಾಕ್ ಕ್ರಾಲಿ, ಡೇವಿಡ್ ಮಲನ್, ಜೋ ರೂಟ್ (ನಾಯಕ), ಬೆನ್ ಸ್ಟೋಕ್ಸ್, ಆಲಿ ಪೋಪ್, ಸ್ಯಾಮ್ ಬಿಲ್ಲಿಂಗ್ಸ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಮಾರ್ಕ್ ವುಡ್, ಒಲ್ಲಿ ರಾಬಿನ್ಸನ್, ಸ್ಟುವರ್ಟ್ ಬ್ರಾಡ್
ಬೆಂಚ್: ಜಾನಿ ಬೈರ್ಸ್ಟೋವ್, ಜ್ಯಾಕ್ ಲೀಚ್, ಜೇಮ್ಸ್ ಆಂಡರ್ಸನ್, ಕ್ರೇಗ್ ಓವರ್ಟನ್, ಡೇನಿಯಲ್ ಲಾರೆನ್ಸ್, ಹಸೀಬ್ ಹಮೀದ್, ಡೊಮಿನಿಕ್ ಬೆಸ್

For Quick Alerts
ALLOW NOTIFICATIONS
For Daily Alerts
Story first published: Saturday, January 15, 2022, 9:09 [IST]
Other articles published on Jan 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X