ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆ್ಯಷಸ್‌ ಟೆಸ್ಟ್‌: ಆಸ್ಟ್ರೇಲಿಯಾ ಎದುರು ಮಣ್ಣುಮುಕ್ಕಿದ ವಿಶ್ವ ಚಾಂಪಿಯನ್ಸ್‌

Lyon, Cummins Combine to Hand Oz Rare Edgbaston Win

ಬರ್ಮಿಂಗ್ಹ್ಯಾಮ್, ಆಗಸ್ಟ್‌ 05: ಅನುಭವಿ ಆಫ್‌ ಸ್ಪಿನ್ನರ್‌ ನೇಥನ್‌ ಲಯಾನ್ (49ಕ್ಕೆ 6) ಮತ್ತು ವೇಗಿ ಪ್ಯಾಟ್ ಕಮಿನ್ಸ್ (32ಕ್ಕೆ 4) ಅವರ ಭರ್ಜರಿ ಬೌಲಿಂಗ್ ದಾಳಿಯ ಬಲದಿಂದ ಆಸ್ಟ್ರೇಲಿಯಾ ತಂಡ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಭಾಗವಾದ ಆ್ಯಶಸ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ವಿಶ್ವಕಪ್ ವಿಜೇತ ಇಂಗ್ಲೆಂಡ್ ವಿರುದ್ಧ 251 ರನ್‌ಗಳ ಭರ್ಜರಿ ಜಯ ದಾಖಲಿಸಿದೆ.

1
44038

ಇದರೊಂದಿಗೆ ಐದು ಪಂದ್ಯಗಳ ಆ್ಯಶಸ್ ಸರಣಿಯಲ್ಲಿ ಪ್ರವಾಸಿ ಆಸೀಸ್ ತಂಡ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ ಸ್ಟೀವ್‌ ಸ್ಮಿತ್‌ ಪಂದ್ಯಶ್ರೇಷ್ಠ ಗೌರವ ಪಡೆದರು.

ಟೆಸ್ಟ್‌ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ದಕ್ಷಿಣ ಆಫ್ರಿಕಾದ ವೇಗದ ಬೌಲರ್‌ಟೆಸ್ಟ್‌ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ದಕ್ಷಿಣ ಆಫ್ರಿಕಾದ ವೇಗದ ಬೌಲರ್‌

ಇಲ್ಲಿನ ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಅಂತಿಮ ದಿನವಾದ ಸೋಮವಾರ ಆಸ್ಟ್ರೇಲಿಯಾ ಒಡ್ಡಿದ 398 ರನ್‌ಗಳ ಸವಾಲಿಗೆ ಪ್ರತಿಯಾಗಿ ವಿಕೆಟ್ ನಷ್ಟವಿಲ್ಲದೆ 13 ರನ್ ಗಳಿಂದ ಕಠಿಣ ಗುರಿ ಬೆನ್ನತ್ತಿ ಹೊರಟ ಜೋ ರೂಟ್ ಪಡೆ, ನಾಟಕೀಯ ಕುಸಿತದೊಂದಿಗೆ 52.3 ಓವರ್‌ಗಳಲ್ಲಿ ಕೇವಲ 146 ರನ್‌ಗಳಿಗೆ ಸರ್ವಪತನಗೊಂಡಿತು.

ಜೇಸನ್ ರಾಯ್(28), ನಾಯಕ ರೂಟ್(28) ಮತ್ತು ಕ್ರಿಸ್‌ ವೋಕ್ಸ್ (37) ಹೊರತುಪಡಿಸಿದರೆ ಬೇರಾವ ಬ್ಯಾಟ್ಸ್‌ಮನ್‌ಗಳು ಸಹ ಪ್ರವಾಸಿ ಪಡೆಯ ಮಾರಕ ದಾಳಿಯನ್ನು ಎದುರಿಸುವ ಕೆಚ್ಚೆದೆ ಪ್ರದರ್ಶಿಸಲಿಲ್ಲ. ಮೂರು ವಿಕೆಟ್‌ಗೆ 80 ರನ್ ಗಳಿಸಿದ್ದ ಆತಿಥೇಯ ತಂಡ, ಕೊನೆಯ 66 ರನ್ ಕಲೆಹಾಕಲು ಉಳಿದ ಏಳು ವಿಕೆಟ್ ಕಳೆದುಕೊಂಡಿತು. ಇದು ರೂಟ್‌ ಪಡೆಯ ಬ್ಯಾಟಿಂಗ್ ವೈಲ್ಯಕ್ಕೆ ಹಿಡಿದ ಕೈನ್ನಡಿಯಾದರೆ, ಪ್ರವಾಸಿ ತಂಡದ ಬೌಲಿಂಗ್ ಪರಾಕ್ರಮಕ್ಕೆ ಸಾಕ್ಷಿಯಾಯಿತು.

ತಮ್ಮ ವಿವಾಹಕ್ಕೆ ಭಾರತೀಯ ಆಟಗಾರರನ್ನು ಆಹ್ವಾನಿಸಲಿರುವ ಪಾಕ್‌ ಕ್ರಿಕೆಟಿಗತಮ್ಮ ವಿವಾಹಕ್ಕೆ ಭಾರತೀಯ ಆಟಗಾರರನ್ನು ಆಹ್ವಾನಿಸಲಿರುವ ಪಾಕ್‌ ಕ್ರಿಕೆಟಿಗ

ಜೇಸನ್ ರಾಯ್, ಜೋ ರೂಟ್, ಜೋ ಡೆನ್ಲಿ, ಬೆನ್ ಸ್ಟೋಕ್ಸ್‌, ಮೊಯೀನ್ ಅಲಿ ಮತ್ತು ಸ್ಟುವರ್ಟ್ ಬ್ರಾಡ್ ವಿಕೆಟ್ ಪಡೆದ ನೇಥನ್‌ ಲಯಾನ್ ಆಸೀಸ್ ಗೆಲುವಿನ ರೂವಾರಿಯಾದರೆ, ರೋರಿ ಬರ್ನ್ಸ್, ಜೋಸ್ ಬಟ್ಲರ್, ಜಾನಿ ಬೈರ್‌ಸ್ಟೋವ್ ಮತ್ತು ಕ್ರಿಸ್‌ವೋಕ್ಸ್ ವಿಕೆಟ್ ಉರುಳಿಸಿದ ಪ್ಯಾಟ್ ಕಮಿನ್ಸ್ ತಂಡದ ಗೆಲುವಿಗೆ ತಮ್ಮ ಕಾಣಿಕೆ ಅರ್ಪಿಸಿದರು. ಈ ಜಯದೊಂದಿಗೆ ಆಸೀಸ್ ತಂಡ ವಿಶ್ವಕಪ್ನಲ್ಲಿ ಅನುಭವಿಸಿದ ಸೆಮಿಫೈನಲ್ ಸೋಲಿಗೆ ಸೇಡು ತೀರಿಸಿಕೊಂಡಿತು.

WWE ಕುಸ್ತಿಗೆ ನಿವೃತ್ತಿ ಘೋಷಿಸಿದ 'ದಿ ರಾಕ್‌' ಖ್ಯಾತಿಯ ದಿಗ್ಗಜWWE ಕುಸ್ತಿಗೆ ನಿವೃತ್ತಿ ಘೋಷಿಸಿದ 'ದಿ ರಾಕ್‌' ಖ್ಯಾತಿಯ ದಿಗ್ಗಜ

ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ: 284 ಮತ್ತು ದ್ವಿತೀಯ ಇನಿಂಗ್ಸ್ 487ಕ್ಕೆ 7 ಡಿ.
ಇಂಗ್ಲೆಂಡ್: 374 ಮತ್ತು 2ನೇ ಇನಿಂಗ್ಸ್ 52.3 ಓವರ್‌ಗಳಲ್ಲಿ 146/10 ( ಕ್ರಿಸ್‌ವೋಕ್ಸ್ 37, ಜೇಸನ್ ರಾಯ್ 28, ಜೋ ರೂಟ್ 28; ನೇಥನ್‌ ಲಯಾನ್ 49ಕ್ಕೆ 6, ಪ್ಯಾಟ್ ಕಮಿನ್ಸ್ 32ಕ್ಕೆ 4).

Story first published: Monday, August 5, 2019, 22:32 [IST]
Other articles published on Aug 5, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X