ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಶಸ್ ಟೆಸ್ಟ್: ಗಾಬಾಗೆ ಬೆದರಿದ ಇಂಗ್ಲೆಂಡ್ ದಾಂಡಿಗರು 147ಕ್ಕೆ ಆಲೌಟ್: ಆಸಿಸ್ ಬೌಲರ್‌ಗಳ ಅಬ್ಬರ

Ashes series: 1st match, 1st day, England all-out for 147 in 1st innings

ಸಾಕಷ್ಟು ಕುತೂಹಲ ಮೂಡಿಸಿರುವ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಆ್ಯಶಸ್ ಸರಣಿ ಆರಂಭವಾಗಿದೆ. ಮೊದಲ ದಿನದ ಆಟದಲ್ಲಿ ಆಸ್ಟ್ರೇಲಿಯಾ ತಂಡ ಸಂಪೂರ್ಣ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದ್ದು ಪಂದ್ಯದಲ್ಲಿ ಬಿಗಿಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಮಳೆ ಅಡ್ಡಿಯಿಂದಾಗಿ ಪಂದ್ಯದ ಮೊದಲ ದಿನದಾಟ ಸ್ಥಗಿತಗೊಳ್ಳುವ ಮುನ್ನ ಇಂಗ್ಲೆಂಡ್ ತಂಡ ತನ್ನ ಎಲ್ಲಾ ವಿಕೆಟ್ ಕಳೆದುಕೊಂದು ಮೊದಲ ಇನ್ನಿಂಗ್ಸ್‌ನ ಬ್ಯಾಟಿಂಗ್ ಮುಗಿಸಿದೆ.

ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆಮಾಡಿಕೊಂಡ ಇಂಗ್ಲೆಂಡ್ ನಾಯಕ ಜೋ ರೂಟ್ ನಂತರ ಅನುಭವಿಸಿದ್ದು ಸಂಪೂರ್ಣ ನಿರಾಸೆ ಮಾತ್ರ. ಈ ಪಂದ್ಯದ ಮೊದಲ ಎಸೆತದಲ್ಲಿಯೇ ಆಸ್ಟ್ರೇಲಿಯಾ ತಂಡದ ವೇಗಿ ಮಿಚೆಲ್ ಸ್ಟಾರ್ಕ್ ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ ರೋರಿ ಬರ್ನ್ಸ್ ಅವರನ್ನು ಬೌಲ್ಡ್ ಮಾಡುವ ಮೂಲಕ ಕೆಡವಿದರು. ಈ ಮೂಲಕ ಸರಣಿಯ ಮೊದಲ ಎಸೆತದಲ್ಲಿಯೇ ವಿಕೆಟ್ ಪಡೆದ ಅಪರೂಪದ ಸಾಧನೆ ಮಾಡಿದ್ದಾರೆ ಮಿಚೆಲ್ ಸ್ಟಾರ್ಕ್. ನಂತರ ಒಂದಾದ ಮೇಲೊಂದರಂತೆ ಆಸ್ಟ್ರೇಲಿಯಾ ತಂಡ ತನ್ನ ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿತ್ತು.

ಡೇವಿಡ್ ಮಲನ್ 6 ರನ್‌ಗಳಿಗೆ ಔಟಾದರೆ ನಾಯಕ ಜೋ ರೂಟ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಬೆನ್ ಸ್ಟೋಕ್ಸ್ ಕೂಡ 5 ರನ್‌ಗಳಿಗೆ ಆಟ ಮುಗಿಸಿದರು. ಅಲ್ಲಿಗೆ ಪ್ರವಾಸಿ ಇಂಗ್ಲೆಂಡ್ ಕೇವಲ 29 ರನ್‌ಗಳಿಗೆ ಇಂಗ್ಲೆಂಡ್ ತಂಡ 4 ವಿಕೆಟ್ ಕಳೆದುಕೊಂಡಿತ್ತು. ನಂತರ ಹಸೀಬ್ ಹಮೀದ್ 25 ರನ್‌ಗಳಿಸಿ ಔಟಾದರೆ ಜೋಸ್ ಬಟ್ಲರ್ 39 ರನ್‌ಗಳ ಕೊಡುಗೆ ನೀಡಿದರು. ಒಲ್ಲಿ ಪೋಪ್ 35 ರನ್‌ ಗಳಿಸಿ ವಿಕೆಟ್ ಒಪ್ಪಿಸಿದರು. ಕ್ರಿಸ್ ವೋಕ್ಸ್ 21 ರನ್‌ಗಳಿಗೆ ಔಟಾಗಿದ್ದಾರೆ. ಒಲ್ಲೀ ರಾಬಿನ್ಸನ್ ಶೂನ್ಯಕ್ಕೆ ಔಟಾದರೆ ಮಾರ್ಕ್ ವುಡ್ 8 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು.

ಈ ಮೂಲಕ ಇಂಗ್ಲೆಂಡ್ ತಂಡ 50.1 ಓವರ್‌ಗಳಲ್ಲಿ ತನ್ನ ಮೊದಲ ಇನ್ನಿಂಗ್ಸ್‌ನ ಆಟವನ್ನು ಮುಕ್ತಾಯಗೊಳಿಸಿದೆ. ಬ್ರಿಸ್ಬೇನ್‌ನ ಗಾಬಾದಲ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿ ರುವ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಸೋಲುಣಿಸಬೇಕು ಎಂಬ ಗುರಿಯೊಂದಿಗೆ ಕಣಕ್ಕಿಳಿದಿರುವ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ತೀವ್ರ ನಿರಾಸೆಯನ್ನು ಅನುಭವಿಸಿದೆ.

ನಾಯಕತ್ವ ವಹಿಸಿದ ಮೊದಲ ಪಂದ್ಯದಲ್ಲಿಯೇ ಕಮ್ಮಿನ್ಸ್ ಆರ್ಭಟ: ಈ ಆಶಸ್ ಸರಣಿಯ ಮೂಲಕ ಆಸ್ಟ್ರೇಲಿಯಾ ತಂಡವನ್ನು ಟೆಸ್ಟ್ ಮಾದರಿಯಲ್ಲಿ ಮುನ್ನಡೆಸುವ ಜವಾಬ್ಧಾರಿಯನ್ನು ವೇಗಿ ಪ್ಯಾಟ್ ಕಮ್ಮಿನ್ಸ್ ವಹಿಸಿಕೊಂಡಿದ್ದಾರೆ. ಈ ಪಂದ್ಯದಲ್ಲಿ ನಾಯಕನಾಗಿ ಹಾಗೂ ಬೌಲರ್ ಆಗಿ ಕಮ್ಮಿನ್ಸ್ ಮಿಂಚುವಲ್ಲಿ ಯಶಸ್ವಿಯಾಗಿದ್ದಾರೆ. ನಾಯಕನಾದ ಮೊದಲ ಪಂದ್ಯದಲ್ಲಿಯೇ ಐದು ವಿಕೆಟ್‌ಗಳ ಗೊಂಚಲು ಪಡೆದು ಪ್ಯಾಟ್ ಕಮ್ಮಿನ್ಸ್ ಎದುರಾಳಿ ತಂಡಕ್ಕೆ ಆಘಾತ ನೀಡಿದರು. ಈ ಮೂಲಕ ಆಸ್ಟ್ರೇಲಿಯಾ ತಂಡದ ಪರವಾಗಿ ಕಮ್ಮಿನ್ಸ್ ವಿಶೇಷ ಭರವಸೆ ಮೂಡಿಸಿದ್ದಾರೆ.

ಆಸಿಸ್ ಪರವಾಗಿ ನಾಯಕ ಪ್ಯಾಟ್ ಕಮ್ಮಿನ್ಸ್ ಐದು ವಿಕೆಟ್ ಪಡೆದು ಮಿಂಚಿದರೆ ಮಿಚೆಲ್ ಸ್ಟಾರ್ಕ್ 2 ವಿಕೆಟ್ ಕಬಳಿಸಿದರು. ಜೋಶ್ ಹ್ಯಾಜಲ್‌ವುಡ್ ಕೂಡ ಎರಡು ವಿಕೆಟ್‌ಗಳನ್ನು ಪಡೆದು ಮಿಂಚಿದ್ದಾರೆ. ಒಂದು ವಿಕೆಟ್ ಕ್ಯಾಮರೂನ್ ಗ್ರೀನ್ ಪಾಲಾಗಿದೆ.

ಗಾಬಾ ಕ್ರಿಕೆಟ್ ಮೈದಾನದಲ್ಲಿ ಗೆಲುವು ಇಂಗ್ಲೆಂಡ್ ತಂಡಕ್ಕೆ ಸುದೀರ್ಘ ಕಾಲದಿಂದ ಕನಸಾಗಿಯೇ ಉಳಿದುಕೊಂಡಿದೆ. ಗಾಬಾದಲ್ಲಿ ಇಂಗ್ಲೆಂಡ್ ತಂಡ ಕೊನೆಯ ಬಾರಿ ಟೆಸ್ಟ್ ಗೆಲುವು ಸಾಧಿಸಿದಾದ ಈಗ ಇಂಗ್ಲೆಂಡ್ ತಂಡದಲ್ಲಿರುವ ಆಟಗಾರ ಪೈಕಿ ಜೇಮ್ಸ್ ಆಂಡರ್ಸನ್ ಹಾಗೂ ಸ್ಟುವರ್ಟ್ ಬ್ರಾಡ್ ಮಾತ್ರವೇ ಜನಿಸಿದ್ದರು. ಸುದೀರ್ಘ ಕಾಲದಿಂದ ಗಾಬಾದಲ್ಲಿ ಆಸ್ಟ್ರೇಲಿಯಾ ತನ್ನ ಸಂಪೂರ್ಣ ಪಾರುಪತ್ಯವನ್ನು ಸಾಧಿಸುತ್ತಾ ಬಂದಿದೆ. 1986ರಲ್ಲಿ ಕೊನೆಯ ಬಾರಿಗೆ ಆಶಸ್ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಗಾಬಾದಲ್ಲಿ ಆಸ್ಟ್ರೇಲಿಯಾ ಸೋಲು ಕಂಡಿತ್ತು.

ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ತಂಡವನ್ನು ಗಾಬಾ ಅಂಗಳದಲ್ಲಿ ಸೋಲಿಸುವ ಮೂಲಕ ಈ ಮೈದಾನದಲ್ಲಿ ಕಳೆದ 32 ವರ್ಷಗಳಿಂದ ಅಜೇಯವಾಗಿ ಉಳಿದಿದ್ದ ಆಸ್ಟ್ರೇಲಿಯಾಗೆ ಸೋಲಿನ ರುಚಿ ತೋರಿಸಿತ್ತು. ಈ ಮೂಲಕ ಐತಿಹಾಸಿಕ ಗೆಲುವು ಸಾಧಿಸಿ ಟ್ರೋಫಿಯನ್ನು ಕೂಡ ವಶಕ್ಕೆ ಪಡೆದುಕೊಂಡಿತ್ತು. ಭಾರತದ ಈ ಗೆಲುವಿನಿಂದ ಸ್ಪೂರ್ತಿ ಪಡೆದುಕೊಂಡ ಇಂಗ್ಲೆಂಡ್ ತಾನು ಕೂಡ ಅದೇ ರೀರಿ ಪ್ರದರ್ಶನ ನೀಡುವ ಆತ್ಮ ವಿಶ್ವಾಸದೊಂದಿಗೆ ಕಣಕ್ಕಿಳಿದಿತ್ತು. ಆದರೆ ಮೊದಲ ಇನ್ನಿಂಗ್ಸ್‌ನಲ್ಲಿ ಅದರಲ್ಲಿ ವಿಫಲವಾಗಿದೆ

ಪಂದ್ಯಕ್ಕೆ ಮಳೆ ಅಡ್ಡಿ: ಇನ್ನು ಇಂಗ್ಲೆಂಡ್ ತಂಡದ ಮೊದಲ ಇನ್ನಿಂಗ್ಸ್‌ನ ಆಟ ಮುಕ್ತಾಯವಾದ ಬಳಿಕ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ನಂತರ ದಿನದಾಟವನ್ನು ಮುಂದುವರಿಸುವುದು ಅಸಾಧ್ಯ ಎಂದು ನಿರ್ಧರಿಸಲಾಗಿದ್ದು ಮೊದಲ ದಿನದಾಟವನ್ನು ಅಂತ್ಯಗೊಳಿಸಲಾಗಿದೆ. ಮೊದಲ ದಿನ ಕೇವಲ 50 ಓವರ್‌ಗಳ ಆಟ ಮಾತ್ರವೇ ನಡೆದಿದೆ. ಎರಡನೇ ದಿನ ಆಸ್ಟ್ರೇಲಿಯಾ ತಂಡ ಬ್ಯಾಟಿಂಗ್ ಮುಂದುವರಿಸಲಿದೆ.

ಆಸ್ಟ್ರೇಲಿಯಾ ಆಡುವ ಬಳಗ: ಡೇವಿಡ್ ವಾರ್ನರ್, ಮಾರ್ಕಸ್ ಹ್ಯಾರಿಸ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ನಾಥನ್ ಲಿಯಾನ್, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್
ಬೆಂಚ್: ಉಸ್ಮಾನ್ ಖವಾಜಾ, ಝೈ ರಿಚರ್ಡ್ಸನ್, ಮೈಕೆಲ್ ನೆಸರ್, ಮಿಚೆಲ್ ಸ್ವೆಪ್ಸನ್

ಇಂಗ್ಲೆಂಡ್ ಆಡುವ ಬಳಗ: ಹಸೀಬ್ ಹಮೀದ್, ರೋರಿ ಬರ್ನ್ಸ್, ಡೇವಿಡ್ ಮಲನ್, ಜೋ ರೂಟ್ (ನಾಯಕ), ಬೆನ್ ಸ್ಟೋಕ್ಸ್, ಆಲಿ ಪೋಪ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಆಲಿ ರಾಬಿನ್ಸನ್, ಮಾರ್ಕ್ ವುಡ್, ಜ್ಯಾಕ್ ಲೀಚ್
ಬೆಂಚ್: ಜಾನಿ ಬೈರ್ಸ್ಟೋವ್, ಕ್ರೇಗ್ ಓವರ್ಟನ್, ಡೊಮಿನಿಕ್ ಬೆಸ್, ಡೇನಿಯಲ್ ಲಾರೆನ್ಸ್, ಝಾಕ್ ಕ್ರಾಲಿ, ಸ್ಟುವರ್ಟ್ ಬ್ರಾಡ್

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ನಾಯಕ ಇವರೇ | Oneindia Kannada

Story first published: Wednesday, December 8, 2021, 16:34 [IST]
Other articles published on Dec 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X