ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಿಂಗ್‌ ಕೊಹ್ಲಿ ದಾಖಲೆ ಪುಡಿಗಟ್ಟಿದ ಆಸ್ಟ್ರೇಲಿಯಾದ ಸ್ಟೀವನ್‌ ಸ್ಮಿತ್‌!

Steven Smith becomes 2nd fastest 2019

ಬರ್ಮಿಂಗ್‌ಹ್ಯಾಮ್‌, ಆಗಸ್ಟ್‌ 04: ಬರೋಬ್ಬರಿ ಒಂದೂವರೆ ವರ್ಷದ ಬಳಿಕ ಟೆಸ್ಟ್‌ ಕ್ರಿಕೆಟ್‌ ಆಡುತ್ತಿರುವ ಆಸ್ಟ್ರೇಲಿಯಾ ತಂಡದ ಅನುಭವಿ ಬ್ಯಾಟ್ಸ್‌ಮನ್‌ ಹಾಗೂ ಮಾಜಿ ನಾಯಕ ಸ್ಟೀವನ್‌ ಸ್ಮಿತ್‌, ಇಂಗ್ಲೆಂಡ್‌ ವಿರುದ್ಧದ ಆ್ಯಷಸ್‌ ಟೆಸ್ಟ್‌ ಸರಣಿಯ ಮೊದಲ ಹಣಾಹಣಿಯ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಬಾರಿಸಿ ಅಬ್ಬರಿಸಿದ್ದಾರೆ.

1
44038

ಇಲ್ಲಿನ ಎಡ್ಜ್‌ಬಾಸ್ಟನ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ ಪಂದ್ಯದಲ್ಲಿ ಅಕ್ಷರಶಃ ಮಿಂಚಿನ ಆಟವಾಡಿರುವ ಸ್ಮಿತ್‌, ಎರಡನೇ ಇನಿಂಗ್ಸ್‌ನಲ್ಲೂ 142 ರನ್‌ಗಳ ಅಮೋಘ ಶತಕದೊಂದಿಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತ್ಯಂತ ವೇಗದ 25 ಶತಗಳನ್ನು ದಾಖಲಿಸಿದವರ ಪೈಕಿ ಎರಡನೇ ಸ್ಥಾನ ಅಲಂಕರಿಸಿದ್ದಾರೆ.

ಖಾಲಿ ಜೇಬಿಂದ ಇಂಗ್ಲೆಂಡ್‌ ಪ್ರೇಕ್ಷಕರ ಮನ ಗೆದ್ದ ಡೇವಿಡ್‌ ವಾರ್ನರ್‌!ಖಾಲಿ ಜೇಬಿಂದ ಇಂಗ್ಲೆಂಡ್‌ ಪ್ರೇಕ್ಷಕರ ಮನ ಗೆದ್ದ ಡೇವಿಡ್‌ ವಾರ್ನರ್‌!

ಈ ಮೂಲಕ ಟೀಮ್‌ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿ ಅವರ ದಾಖಲೆ ಮುರಿದಿರುವ ಸ್ಮಿತ್‌, 119 ಇನಿಂಗ್ಸ್‌ಗಳಲ್ಲಿ 25 ಶತಕಗಳನ್ನು ದಾಖಲಿಸಿದ್ದಾರೆ. ವಿರಾಟ್‌ 127 ಇನಿಂಗ್ಸ್‌ಗಳಲ್ಲಿ ಈ ಮೈಲುಗಲ್ಲು ಮುಟ್ಟಿದ್ದರು. ಅಂದಹಾಗೆ ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಬ್ಯಾಟಿಂಗ್‌ ದಂತಕತೆ ಡಾನ್‌ ಬ್ರಾಡ್‌ಮನ್‌ ಅಗ್ರಸ್ಥಾನದಲ್ಲಿದ್ದು, ಕೇವಲ 68 ಇನಿಂಗ್ಸ್‌ಗಳಲ್ಲಿ ಈ ದಾಖಲೆ ಬರೆದಿದ್ದರು. ಸಚಿನ್‌ ತೆಂಡೂಲ್ಕರ್‌ 25 ಶತಕಗಳ ಸಲುವಾಗಿ 130 ಇನಿಂಗ್ಸ್‌ ತೆಗೆದುಕೊಂಡಿದ್ದರು.

ದಿಲ್ಲಿ ಎಕ್ಸ್‌ಪ್ರೆಸ್‌ ನವದೀಪ್‌ ಸೈನಿ ಬಗ್ಗೆ ಕ್ಯಾಪ್ಟನ್‌ ಕೊಹ್ಲಿ ಹೇಳಿದ್ದೇನು?ದಿಲ್ಲಿ ಎಕ್ಸ್‌ಪ್ರೆಸ್‌ ನವದೀಪ್‌ ಸೈನಿ ಬಗ್ಗೆ ಕ್ಯಾಪ್ಟನ್‌ ಕೊಹ್ಲಿ ಹೇಳಿದ್ದೇನು?

29 ವರ್ಷದ ಅನುಭವಿ ಬ್ಯಾಟ್ಸ್‌ಮನ್‌ ಸ್ಮಿತ್‌ ಇದೇ ವೇಳೆ ಆ್ಯಷಸ್‌ ಟೆಸ್ಟ್‌ ಪಂದ್ಯವೊಂದರ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ ಆಸ್ಟ್ರೇಲಿಯಾದ ಐದನೇ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಆಸ್ಟ್ರೇಲಿಯಾ ತಂಡ ಸ್ಮಿತ್‌ ಅವರ 144 ರನ್‌ಗಳ ಶತಕದ ನೆರವಿನಿಂದ 284 ರನ್‌ಗಳನ್ನು ದಾಖಲಿಸಿತ್ತು. ಇದಕ್ಕುತ್ತರವಾಗಿ ಇಂಗ್ಲೆಂಡ್‌ 374 ರನ್‌ಗಳನ್ನು ಗಳಿಸಿ ಮೊದಲ ಇನಿಂಗ್ಸ್‌ನಲ್ಲಿ 90 ರನ್‌ಗಳ ಮುನ್ನಡೆ ಗಳಿಸಿತ್ತು. ಆದರೆ, ಆಸ್ಟ್ರೇಲಿಯಾ ಎರಡನೇ ಇನಿಂಗ್ಸ್‌ನಲ್ಲಿ ತಿರುಗೇಟು ನೀಡಿದ್ದು, ಸ್ಮಿತ್‌ ಮತ್ತು ಮ್ಯಾಥ್ಯೂ ವೇಡ್‌ ಅವರ ಶತಕಗಳ ನೆರವಿನಿಂದ 300+ ರನ್‌ಗಳ ಭಾರಿ ಮುನ್ನಡೆ ಗಳಿಸಿದೆ.

ಗ್ಲೋಬಲ್‌ ಟಿ20 ಕ್ರಿಕೆಟ್‌ ಕೆನಡಾದಲ್ಲಿ ಯುವರಾಜ್‌ 'ಸಿಂಗ್‌ ಈಸ್‌ ಕಿಂಗ್‌' ಗ್ಲೋಬಲ್‌ ಟಿ20 ಕ್ರಿಕೆಟ್‌ ಕೆನಡಾದಲ್ಲಿ ಯುವರಾಜ್‌ 'ಸಿಂಗ್‌ ಈಸ್‌ ಕಿಂಗ್‌'

ಸ್ಟೀವ್‌ ಸ್ಮಿತ್‌ಗೂ ಮುನ್ನ ಆಸ್ಟ್ರೇಲಿಯಾ ಪರ ಆ್ಯಷಸ್‌ ಟೆಸ್ಟ್‌ ಪಂದ್ಯವೊಂದರ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ ಬ್ಯಾಟ್ಸ್‌ಮನ್‌ಗಳು.

ವಾರೆನ್‌ ಬ್ರಾಡ್‌ಸ್ಲೀ (136-130)

ವಾರೆನ್‌ ಬ್ರಾಡ್‌ಸ್ಲೀ (136-130)

ಇಂಗ್ಲೆಂಡ್‌ ವಿರುದ್ಧ 1909ರಲ್ಲಿ ದಿ ಓವಲ್‌ನಲ್ಲಿ ನಡೆದ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ಪರ ವಾರೆನ್‌ ಬ್ರಾಡ್‌ಸ್ಲೀ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಬಾರಿಸಿ ಈ ಸಾಧನೆ ಮಾಡಿದ ಮೊದಲ ಆಸೀಸ್‌ ಬ್ಯಾಟ್ಸ್‌ಮನ್‌ ಎನಿಸಿದ್ದರು. ಮೊದಲ ಇನಿಂಗ್ಸ್‌ನಲ್ಲಿ 136 ಮತ್ತು ಎರಡನೇ ಇನಿಂಗ್ಸ್‌ನಲ್ಲಿ 130 ರನ್‌ ಬಾರಿಸಿದ್ದರು.

ಆರ್ಥರ್‌ ಮಾರಿಸ್‌ (122-124*)

ಆರ್ಥರ್‌ ಮಾರಿಸ್‌ (122-124*)

1946-1947ರಲ್ಲಿ ನಡೆದ ಟೆಸ್ಟ್‌ ಸರಣಿಯ ಪಂದ್ಯವೊಂದರಲ್ಲಿ ಆಸೀಸ್‌ ಪರ ಮಿಂಚಿದ ಆರ್ಥರ್‌ ಮಾರಿಸ್‌, ಇಂಗ್ಲೆಂಡ್‌ ಎದುರು ಮೊದಲ ಇನಿಂಗ್ಸ್‌ನಲ್ಲಿ 122 ರನ್‌ ಗಳಿಸಿದರೆ, ಎರಡನೇ ಇನಿಂಗ್ಸ್‌ನಲ್ಲಿ ಅಜೇಯ 124 ರನ್‌ಗಳನನ್ನು ದಾಖಲಿಸಿ ಈ ಸಾಧನೆ ಮಾಡಿದ ಆಸ್ಟ್ರೇಲಿಯಾದ ಎರಡನೇ ಬ್ಯಾಟ್ಸ್‌ಮನ್‌ ಎನಿಸಿದರು.

ಸ್ಟೀವ್‌ ವಾ (108-116)

ಸ್ಟೀವ್‌ ವಾ (108-116)

ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವ್‌ ವಾ, 1997ರ ಟೆಸ್ಟ್‌ ಸರಣಿಯಲ್ಲಿ ಇಂಗ್ಲೆಂಡ್‌ ಎದುರು ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ್ದರು. ಮೊದಲ ಇನಿಂಗ್ಸ್‌ನಲ್ಲಿ 108 ರನ್‌ಗಳನ್ನು ಗಳಿಸಿದ ವಾ, ಬಳಿಕ ಎರಡನೇ ಇನಿಂಗ್ಸ್‌ನಲ್ಲೂ ಸ್ಥಿರತೆ ಕಾಯ್ದುಕೊಂಡು 116 ರನ್‌ಗಳನ್ನು ಗಳಿಸಿದ್ದರು.

 ಮ್ಯಾಥ್ಯೂ ಹೇಡನ್‌

ಮ್ಯಾಥ್ಯೂ ಹೇಡನ್‌

ಆಸ್ಟ್ರೇಲಿಯಾ ತಂಡದ ಸಾರ್ವಕಾಲಿಕ ಶ್ರೇಷ್ಠ ಆರಂಭಿಕ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಮ್ಯಾಥ್ಯೂ ಹೇಡನ್‌ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು, 2002-2003ರ ಟೆಸ್ಟ್‌ ಸರಣಿಯಲ್ಲಿ ಇಂಗ್ಲೆಂಡ್‌ ಎದುರು ಮೊದಲ ಇನಿಂಗ್ಸ್‌ನಲ್ಲಿ 197 ಮತ್ತು ಎರಡನೇ ಇನಿಂಗ್ಸ್‌ನಲ್ಲಿ 103 ರನ್‌ಗಳಸಿ ಮನಸೂರೆಗೊಂಡಿದ್ದರು.

Story first published: Sunday, August 4, 2019, 21:35 [IST]
Other articles published on Aug 4, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X