ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಖಾಲಿ ಜೇಬಿಂದ ಇಂಗ್ಲೆಂಡ್‌ ಪ್ರೇಕ್ಷಕರ ಮನ ಗೆದ್ದ ಡೇವಿಡ್‌ ವಾರ್ನರ್‌!

David Warner Empties Pockets 2019

ಬರ್ಮಿಂಗ್‌ಹ್ಯಾಮ್‌, ಆಗಸ್ಟ್‌ 04: ಕಳೆದ ವರ್ಷ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಕೇಪ್‌ಟೌನ್‌ನಲ್ಲಿ ನಡೆದ ಟೆಸ್ಟ್‌ ಪಂದ್ಯದಲ್ಲಿ ಸ್ಯಾಂಡ್‌ ಪೇಪರ್‌ ಮೂಲಕ ಚೆಂಡನ್ನು ಪೀರೂಪಗೊಳಿಸುವುದರಲ್ಲಿ ಭಾಗಿಯಾಗಿ ಕ್ರೀಡಾ ಸ್ಫೂರ್ತಿಗೆ ಧಕ್ಕೆತಂದು ಒಂದು ವರ್ಷ ನಿಷೇಧ ಶಿಕ್ಷೆಗೆ ಗುರಿಯಾಗಿದ್ದ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌ಗೆ ಇದೀಗ ಇಂಗ್ಲೆಂಡ್‌ ನಲ್ಲಿ ನಡೆಯುತ್ತಿರುವ ಆ್ಯಷಸ್‌ ಟೆಸ್ಟ್‌ ಸರಣಿಯಲ್ಲಿ ಪ್ರೇಕ್ಷಕರು ತರಹೇವಾರಿ ರೀತಿಯಲ್ಲಿ ಕಾಲೆಳೆಯುತ್ತಿದ್ದಾರೆ.

1
44038

ಬರೋಬ್ಬರಿ ಒಂದೂವರೆ ವರ್ಷದ ಬಳಿಕ ವಾರ್ನರ್‌ ಟೆಸ್ಟ್‌ ಕ್ರಿಕೆಟ್‌ಗೆ ಮರಳಿದ್ದಾರೆ. ಇಲ್ಲಿನ ಎಡ್ಜ್‌ಬಾಸ್ಟನ್‌ ಕ್ರೀಡಾಂಗಣದಲ್ಲಿ ವಾರ್ನರ್‌ ಕಣಕ್ಕಿಳಿಯುವುದನ್ನೇ ಕಾಯುತ್ತಿದ್ದ ಪ್ರೇಕ್ಷಕರು ಸ್ಯಾಂಡ್‌ ಪೇಪರ್‌ ಪ್ರದರ್ಶಿಸಿ ಅಣಕವಾಡಿದ್ದರು.

ದಿಲ್ಲಿ ಎಕ್ಸ್‌ಪ್ರೆಸ್‌ ನವದೀಪ್‌ ಸೈನಿ ಬಗ್ಗೆ ಕ್ಯಾಪ್ಟನ್‌ ಕೊಹ್ಲಿ ಹೇಳಿದ್ದೇನು?ದಿಲ್ಲಿ ಎಕ್ಸ್‌ಪ್ರೆಸ್‌ ನವದೀಪ್‌ ಸೈನಿ ಬಗ್ಗೆ ಕ್ಯಾಪ್ಟನ್‌ ಕೊಹ್ಲಿ ಹೇಳಿದ್ದೇನು?

ಬ್ಯಾಟಿಂಗ್‌ ವೇಳೆ ವಾರ್ನರ್‌ಗೆ ಬೂಗುಟ್ಟಿದ್ದ ಪ್ರೇಕ್ಷಕರು, ಬಳಿಕ ವಾರ್ನರ್‌ ಕ್ಷೇತ್ರರಕ್ಷಣೆಗೆ ಬಂದಾಗಲೂ ಗ್ಯಾಲರಿಯಿಂದ ಕೀಟಲೆ ಮಾಡುವುದನ್ನು ಮುಂದುವರಿಸಿದ್ದರು. "ವಾರ್ನರ್‌ ಜೇಬಲ್ಲಿ ಸ್ಯಾಂಡ್‌ ಪೇಪರ್ ಇದೆ ಎಂದು ಪ್ರೇಕ್ಷಕರು ಕೂಗಲಾರಂಭಿಸಿದ್ದರು" ಇದಕ್ಕೆ ನಗುತ್ತಲೇ ಉತ್ತರ ನೀಡಿದ ಎಡಗೈ ಬ್ಯಾಟ್ಸ್‌ಮನ್‌, ತಮ್ಮ ಪ್ಯಾಂಟ್‌ನ ಎರಡೂ ಜೇಬುಗಳನ್ನು ಹೊರತಗೆದು 'ಜೇಬಲ್ಲಿ ಏನೂ ಇಲ್ಲ ನೋಡಿ' ಎಂದು ಪ್ರದರ್ಶಿಸಿದರು. ಇದಕ್ಕೆ ಮನಸೋತ ಪ್ರೇಕ್ಷರು ಭಾರಿ ಕರತಾಡನವನ್ನೇ ನೀಡಿದರು.

ಸೈನಿ ಸಾಮರ್ಥ್ಯ ಪ್ರಶ್ನಿಸಿದ್ದವರಿಗೆ ನಾಚಿಕೆಯಾಗಬೇಕು: ಗಂಭೀರ್‌ಸೈನಿ ಸಾಮರ್ಥ್ಯ ಪ್ರಶ್ನಿಸಿದ್ದವರಿಗೆ ನಾಚಿಕೆಯಾಗಬೇಕು: ಗಂಭೀರ್‌

ಮೊದಲ ಟೆಸ್ಟ್‌ ಪಂದ್ಯದಲ್ಲಿ ವಾರ್ನರ್‌ ತಮ್ಮ ಬ್ಯಾಟ್‌ ಮೂಲಕ ಹೆಚ್ಚೇನು ಅಬ್ಬರಿಸಿಲ್ಲ. ಮೊದಲ ಇನಿಂಗ್ಸ್‌ನಲ್ಲಿ 2 ರನ್‌ಗಳಿಸಿದ ಡೇವಿಡ್‌, 2ನೇ ಇನಿಂಗ್ಸ್‌ನಲ್ಲಿ 8 ರನ್‌ಗಳಿಸಿ ಪೆವಿಲಿಯನ್‌ ಸೇರಿದ್ದರು.

ಮೊದಲ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ, ಸ್ಟೀವನ್‌ ಸ್ಮಿತ್‌ (144) ಅವರ ಶತಕದ ಬಲದಿಂದ 284 ರನ್‌ಗಳನ್ನು ದಾಖಲಿಸಿತ್ತು. ಒಂದು ಹಂತದಲ್ಲಿ 150ರ ಒಳಗೆ ಆಲ್ಔಟ್‌ ಆಗಬೇಕಿದ್ದ ತಂಡವನ್ನು ಸ್ಮಿತ್‌ 300ರ ಗಡಿ ಸಮೀಪಕ್ಕೆ ಕೊಂಡೊಯ್ದರು. ಬಳಿಕ ಮೊದಲ ಇನಿಂಗ್ಸ್‌ ಆರಂಭಿಸಿದ ಇಂಗ್ಲೆಂಡ್‌, ಆರಂಭಿಕ ಬ್ಯಾಟ್ಸ್‌ಮನ್‌ ರೋರಿ ಬರ್ನ್ಸ್‌ (133) ಅವರ ಶತಕದ ಬಲದಿಂದ ಬೃಹತ್‌ ಮೊತ್ತ ದಾಖಲಿಸುವ ಕಡೆಗೆ ಮುನ್ನುಗ್ಗಿತ್ತಾದರೂ, ಅಚ್ಚರಿಯ ಕುಸಿತ ಕಂಡು 374 ರನ್‌ಗಳಿಗೆ ಆಲ್‌ಔಟ್‌ ಆಯಿತು.

ಟೀಮ್‌ ಇಂಡಿಯಾ ವಿರುದ್ಧ ಮುಗ್ಗರಿಸಿದ ಬಳಿಕ ವಿಂಡೀಸ್‌ ನಾಯಕ ಹೇಳಿದ್ದಿದುಟೀಮ್‌ ಇಂಡಿಯಾ ವಿರುದ್ಧ ಮುಗ್ಗರಿಸಿದ ಬಳಿಕ ವಿಂಡೀಸ್‌ ನಾಯಕ ಹೇಳಿದ್ದಿದು

ಬಳಿಕ 90 ರನ್‌ಗಳ ಮೊದಲ ಇನಿಂಗ್ಸ್‌ ಹಿನ್ನಡೆಯೊಂದಿಗೆ ಪಂದ್ಯದ ನಾಲ್ಕನೇ ದಿನವಾದ ಭಾನುವಾರ ಬ್ಯಾಟಿಂಗ್‌ ಆರಂಭಿಸಿರುವ ಆಸ್ಟ್ರೇಲಿಯಾ ತಂಡ ಮತ್ತೊಮ್ಮೆ ಸ್ಮಿತ್‌ ಅವರ ಭರ್ಜರಿ ಬ್ಯಾಟಿಂಗ್‌ ನೆರವಿನಿಂದ 120+ ರನ್‌ಗಳ ಮುನ್ನಡೆ ಪಡೆದಿದೆ. ಸ್ಮಿತ್‌ ಎರಡನೇ ಇನಿಂಗ್ಸ್‌ನಲ್ಲೂ ಶತಕದ ಕಡೆಗೆ ಕಾಲಿಟ್ಟಿದ್ದಾರೆ.

Story first published: Sunday, August 4, 2019, 17:31 [IST]
Other articles published on Aug 4, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X