ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಶಸ್‌ಗೆ ತಟ್ಟಿದ ಕೊರೊನಾ ಬಿಸಿ: ಆಸ್ಟ್ರೇಲಿಯಾ ಕ್ರಿಕೆಟಿಗ ಟ್ರೆವಿಸ್ ಹೆಡ್ ಕೊರೊನಾ ಪಾಸಿಟಿವ್

Ashes test series: Australian cricketer Travis Head tested positive for Coronavirus

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ ಪ್ರತಿಷ್ಠಿತ ಆಶಸ್ ಟೆಸ್ಟ್ ಸರಣಿ ನಡೆಯುತ್ತಿದ್ದು ನಾಲ್ಕನೇ ಟೆಸ್ಟ್ ಪಂದ್ಯದ ಆರಂಭಕ್ಕೆ ಮುನ್ನ ಕೊರೊನಾವೈರಸ್ ಆಘಾತ ನೀಡಿದೆ. ಆಸ್ಟ್ರೇಲಿಯಾ ತಂಡದ ಆಟಗಾರ ಟ್ರೆವೀಸ್ ಹೆಡ್ ಕೊರೊನಾವೈರಸ್‌ಗೆ ತುತ್ತಾಗಿರುವುದು ದೃಢಪಟ್ಟಿದೆ. ಹೀಗಾಗಿ ಸಿಡ್ನಿಗೆ ತೆರಳಬೇಕಿದ್ದ ಆಸಿಸ್ ಆಟಗಾರರ ಪ್ರಯಾಣ ತಡವಾಗಿದೆ.

ಟ್ರೆವೀಸ್ ಹೆಡ್ ಕೊರೊನಾವೈರಸ್ ಪಾಸಿಟಿವ್ ವರದಿಯನ್ನು ಪಡೆದುಕೊಂಡಿರುವ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ ಖಚಿತಪಡಿಸಿದೆ. ಶುಕ್ರವಾರ ಬೆಳಿಗ್ಗೆ ಈ ಬಗ್ಗೆ ಮಾಧ್ಯಮ ಪ್ರಕಟಣೆಯ ಮೂಲಕ ಕ್ರಿಕೆಟ್ ಆಸ್ಟ್ರೇಲಿಯಾ ಮಾಹಿತಿಯನ್ನು ನೀಡಿದೆ.

"ಆಸ್ಟ್ರೇಲಿಯಾದ ಬ್ಯಾಟರ್ ಡ್ರೆವೀಸ್ ಹೆಡ್ ಪಿಸಿಆರ್ ಪರೀಕ್ಷೆಯ ಸಂದರ್ಭದಲ್ಲಿ ಕೊರೊನಾವೈರಸ್ ಪಾಸಿಟಿವ್ ವರದಿಯನ್ನು ಪಡೆದುಕೊಂಡಿದ್ದಾರೆ. ಹೆಡ್ ಅವರು ಕೊರೊನಾವೈರಸ್‌ನ ಯಾವುದೇ ಲಕ್ಷಣವನ್ನು ಹೊಂದಿಲ್ಲ. ಅವರು ಮೆಲ್ಬರ್ನ್‌ನಲ್ಲಿಯೇ ಉಳಿದುಕೊಳ್ಳಲಿದ್ದು ವಿಕ್ಟೋರಿಯನ್ ಸರ್ಕಾರದ ಆರೋಗ್ಯ ನೆರವಿನಿಂದಿಗೆ ಏಳು ದಿನಗಳ ಕಾಲ ಪ್ರತ್ಯೇಕವಾಗಿರಲಿದ್ದಾರೆ. ಜನವರಿ 5ರಿಂದ ಎಸ್‌ಸಿಜಿಯಲ್ಲಿ ಆರಂಭವಾಗಲಿರುವ ವೊಡಾಫೊನ್ ಪುರುಷರ ಆಶಸ್ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯಕ್ಕೆ ಅಲಭ್ಯವಾಗಲಿದ್ದಾರೆ. " ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ಪ್ರಕಟಣೆಯಲ್ಲಿ ಮಾಹಿತಿಯನ್ನು ನೀಡಿದೆ.

ಇನ್ನು ಈ ಪ್ರಕಟಣೆಯಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ನೀಡಿರುವ ಮಾಹಿತಿಯ ಪ್ರಕಾರ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳ ಇತರ ಆಟಗಾರರು ಹಾಗೂ ಅವರ ಸಂಗಾತಿಗಳು ಇಂದು ಬೆಳಿಗ್ಗೆ ಮತ್ತೊಂದು ಸುತ್ತಿನ ಕೊರೊನಾ ಪರೀಕ್ಷೆಗೆ ಒಳಗಾಗಿದ್ದಾರೆ. ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳ ಸದಸ್ಯರು ಪ್ರತ್ಯೇಕವಾಗಿ ಇಂದು ಸಿಡ್ನಿಗೆ ಪ್ರಯಾಣವನ್ನು ಬೆಳೆಸಲಿದ್ದಾರೆ.

ಇನ್ನು ಕ್ರಿಕೆಟ್ ಆಸ್ಟ್ರೇಲಿಯಾ ನೀಡಿರುವ ಮಾಹಿತಿಯ ನಾಲ್ಕನೇ ಟೆಸ್ಟ್‌ಗೆ ಟ್ರೆವಿಸ್ ಹೆಡ್ ಅಲಭ್ಯವಾಗಲಿದ್ದಾರೆ. ಹೀಗಾಗಿ ಅವರ ಸ್ಥಾನಕ್ಕೆ ಅನುಭವಿ ಆಟಗಾರ ಉಸ್ಮಾನ್ ಖವಾಜ ಕಣಕ್ಕಿಳಿಯುವುದು ಬಹುತೇಖ ಖಚಿತವಾಗಿದೆ. ಖವಾಜ ಮುಂದಿನ ಪಂದ್ಯದಲ್ಲಿ ಆಡಿದರೆ 2019ರ ಆಗಸ್ಟ್ ಬಳಿಕ ಆಸ್ಟ್ರೇಲಿಯಾ ತಂಡದ ಪರವಾಗಿ ಮೊದಲ ಟೆಸ್ಟ್ ಪಂದ್ಯವನ್ನು ಆಡಿದಂತಾಗುತ್ತದೆ.

ಸೌತ್ ಆಫ್ರಿಕಾವನ್ನು ಬಗ್ಗುಬಡಿದಿದ್ದು ಹೇಗೆ ಅಂತಾ ಹೇಳಿದ ವಿರಾಟ್ | Oneindia Kannada

ಇನ್ನು ಆಶಸ್ ಟೆಸ್ಟ್ ಸರಣಿಯಲ್ಲಿ ಈಗಾಗಲೇ ಮೂರು ಪಂದ್ಯಗಳು ಅಂತ್ಯವಾಗಿದೆ. ಈ ಮೂರು ಪಂದ್ಯಗಳನ್ನು ಕೂಡ ಆತಿಥೇಯ ಆಸ್ಟ್ರೇಲಿಯಾ ತಂಡ ಗೆದ್ದುಕೊಂಡಿದ್ದು ಐದು ಪಂದ್ಯಗಳ ಸರಣಿಯನ್ನು ಇನ್ನೂ ಎರಡು ಪಂದ್ಯಗಳು ಉಳಿದುಕೊಂಡಿರುವಂತೆಯೇ ವಶಕ್ಕೆ ಪಡೆದುಕೊಂಡಿದೆ. ನಾಲ್ಕನೇ ಟೆಸ್ಟ್ ಪಂದ್ಯ ಸಿಡ್ನಿಯ ಎಸ್‌ಸಿಗಿ ಕ್ರೀಡಾಂಗಣದಲ್ಲಿ ಜನವರಿ 5ರಿಂದ ಆರಂಭವಾಗಲಿದೆ.

Story first published: Friday, December 31, 2021, 12:22 [IST]
Other articles published on Dec 31, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X