ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಂಜು ಸ್ಯಾಮ್ಸನ್‌ ಪರವಾಗಿ ನಿಂತು ಭಾರತ ತಂಡದ ಆಡಳಿತ ಮಂಡಳಿಯನ್ನು ಟೀಕಿಸಿದ ಆಶಿಶ್ ನೆಹ್ರಾ!

Ashish Nehra criticizes Indias selection After Drop Sanju Samson In 2nd ODI

ಭಾರತ ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿಯ 2ನೇ ಪಂದ್ಯ ಮಳೆಯಿಂದಾಗಿ ರದ್ದಾಯಿತು. 12.5 ಓವರ್‌ಗಳಲ್ಲಿ ಭಾರತ 1 ವಿಕೆಟ್ ಕಳೆದುಕೊಂಡು 89 ರನ್ ಗಳಿಸಿದ್ದಾಗ ಮಳೆ ಸುರಿದ ಕಾರಣ ಪಂದ್ಯವನ್ನು ರದ್ದುಗೊಳಿಸಲಾಯಿತು. ಭಾರತ ತಂಡ ಎರಡನೇ ಏಕದಿನ ಪಂದ್ಯದಲ್ಲಿ ಆಡುವ ಬಳಗದಲ್ಲಿ ಎರಡು ಬದಲಾವಣೆಗಳನ್ನು ಮಾಡಿತ್ತು.

ಮೊದಲ ಏಕದಿನ ಪಂದ್ಯದಲ್ಲಿ ಉತ್ತಮವಾಗಿ ಆಡಿದ ಹೊರತಾಗಿಯೂ ಸಂಜು ಸ್ಯಾಮ್ಸನ್‌ಗೆ ಎರಡನೇ ಪಂದ್ಯದಲ್ಲಿ ಅವಕಾಶ ಸಿಗಲಿಲ್ಲ. ಶಾರ್ದಲ್ ಠಾಕೂರ್ ಕೂಡ ಎರಡನೇ ಪಂದ್ಯದಲ್ಲಿ ಬೆಂಚ್ ಕಾಯಬೇಕಾಯಿತು. ಇವರಿಬ್ಬರ ಬದಲಾಗಿ ತಂಡದಲ್ಲಿ ದೀಪಕ್ ಹೂಡಾ ಮತ್ತು ದೀಪಕ್ ಚಾಹರ್ ಸ್ಥಾನ ಪಡೆದರು.

ಒಂದು ಪಂದ್ಯದಲ್ಲಿ ಅವಕಾಶ ನೀಡಿ ಎರಡನೇ ಪಂದ್ಯದಲ್ಲಿ ಕೈಬಿಟ್ಟ ಬಗ್ಗೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ಭಾರತದ ಮಾಜಿ ಆಟಗಾರ ಆಶಿಶ್ ನೆಹ್ರಾ ಕೂಡ ಭಾರತ ತಂಡದ ಆಡಳಿತ ಮಂಡಳಿಯನ್ನು ಟೀಕಿಸಿದ್ದಾರೆ.

ಒಂದು ಪಂದ್ಯದಲ್ಲಿ ಅವಕಾಶ ನೀಡಿ ಎರಡನೇ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ಮತ್ತು ಸಂಜು ಸ್ಯಾಮ್ಸನ್ ಅವರನ್ನು ಕೈಬಿಟ್ಟಿದ್ದು ಉತ್ತಮ ನಿರ್ಧಾರವಲ್ಲ ಎಂದು ಅವರು ಹೇಳಿದ್ದಾರೆ.

ಮೊದಲನೇ ಪಂದ್ಯದಲ್ಲೇ ಚಹಾರ್ ಆಡಿಸಬೇಕಿತ್ತು

ಮೊದಲನೇ ಪಂದ್ಯದಲ್ಲೇ ಚಹಾರ್ ಆಡಿಸಬೇಕಿತ್ತು

ಪ್ರೈಮ್ ವೀಡಿಯೋದಲ್ಲಿ ನಡೆದ ಚರ್ಚೆಯಲ್ಲಿ ಭಾರತ ತಂಡವನ್ನು ಬದಲಾವಣೆ ಮಾಡಿದ ಬಗ್ಗೆ ಮಾತನಾಡಿದ ನೆಹ್ರಾ, ಮೊದಲ ಏಕದಿನ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್‌ ಬದಲಾಗಿ ದೀಪಕ್ ಚಹಾರ್ ಅವರನ್ನು ಆಡಿಸಬೇಕಿತ್ತು. ಆದರೆ ಮೊದಲನೇ ಪಂದ್ಯದಲ್ಲಿ ಠಾಕೂರ್ ಅವರನ್ನು ಆಡಿಸಿದ ಬಳಿಕ ಎರಡನೇ ಪಂದ್ಯದಲ್ಲಿ ಬದಲಾವಣೆ ಮಾಡಬಾರದಿತ್ತು ಎಂದು ಹೇಳಿದರು.

"ಭಾರತವು ಎರಡು ಬದಲಾವಣೆಗಳನ್ನು ಮಾಡಿದೆ. ನನ್ನ ಪ್ರಕಾರ ಶಾರ್ದೂಲ್ ಠಾಕೂರ್ ಉತ್ತಮವಾಗಿ ಕಾರ್ಯನಿರ್ವಹಿಸಲಿಲ್ಲ, ಆದರೆ ಶಾರ್ದೂಲ್ ಠಾಕೂರ್ ಬದಲಿಗೆ ಮೊದಲನೇ ಪಂದ್ಯದಲ್ಲೇ ದೀಪಕ್ ಚಹಾರ್ ಆಡಬೇಕಿತ್ತು. ಆದರೆ ಆಗ ಶಾರ್ದೂಲ್ ಠಾಕೂರ್ ಅವರನ್ನು ಆಡಿಸಿ, ಒಂದು ಆಟದ ನಂತರ ಯಾರನ್ನಾದರೂ ತಂಡದಿಂದ ಕೈ ಬಿಡುವುದು ಉತ್ತಮ ನಿರ್ಧಾರವಲ್ಲ" ಎಂದರು.

IND vs NZ 2nd ODI: ಮಳೆಯಿಂದ 2ನೇ ಏಕದಿನ ಪಂದ್ಯ ರದ್ದು; ಸರಣಿಯಲ್ಲಿ ನ್ಯೂಜಿಲೆಂಡ್ ಮುನ್ನಡೆ

ಸ್ಯಾಮ್ಸನ್ ವಿಚಾರದಲ್ಲೂ ತಪ್ಪು ಮಾಡಲಾಗಿದೆ

ಸ್ಯಾಮ್ಸನ್ ವಿಚಾರದಲ್ಲೂ ತಪ್ಪು ಮಾಡಲಾಗಿದೆ

"ಸಂಜು ಸ್ಯಾಮ್ಸನ್ ಅವರನ್ನು ಮೊದಲನೇ ಪಂದ್ಯದಲ್ಲೇ ಆಡಿಸಬಾರದಿತ್ತು. ಸ್ಯಾಮ್ಸನ್ ಬದಲಾಗಿ ದೀಪಕ್ ಹೂಡಾರನ್ನು ಮೊದಲ ಪಂದ್ಯದಲ್ಲಿ ಆಡಿಸಬೇಕಿತ್ತು, ಹೂಡಾ ಟಿ20 ವಿಶ್ವಕಪ್ ತಂಡದಲ್ಲಿದ್ದರು. ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಕೂಡ ಉತ್ತಮವಾಗಿ ಬೌಲಿಂಗ್ ಮಾಡಿದ್ದರು. ಆದರೆ, ಅವರನ್ನು ಮೊದಲನೇ ಏಕದಿನ ಪಂದ್ಯದಲ್ಲಿ ಕೂರಿಸಿದ್ದು ಉತ್ತಮ ನಿರ್ಧಾರವಲ್ಲ" ಎಂದು ಹೇಳಿದರು.

ಹೊಸ ಚೆಂಡನ್ನು ಸ್ವಿಂಗ್ ಮಾಡುವ ಸಾಮರ್ಥ್ಯದ ಕಾರಣದಿಂದಾಗಿ ಠಾಕೂರ್ ಬದಲಾಗಿ ಚಹಾರ್ ಅವರಿಗೆ ಅವಕಾಶ ನೀಡಲಾಗಿದೆ ಎಂದು ಶಿಖರ್ ಧವನ್ ಪಂದ್ಯದ ನಂತರದ ಪ್ರಸ್ತುತಿಯಲ್ಲಿ ಉಲ್ಲೇಖಿಸಿದ್ದಾರೆ. ಆರನೇ ಬೌಲಿಂಗ್ ಆಯ್ಕೆಯಾಗಿ ಹೂಡಾ ಅವರನ್ನು ಕರೆತರಲಾಗಿದೆ ಆದ್ದರಿಂದ ಸಂಜು ಸ್ಯಾಮ್ಸನ್ ತಂಡದಿಂದ ಹೊರಗುಳಿದರು ಎಂದು ಹೇಳಿದರು.

ನಾಲ್ವರು ವೇಗಿಗಳು, ಎರಡು ಸ್ಪಿನ್ ಆಯ್ಕೆ ಇರಬೇಕು

ನಾಲ್ವರು ವೇಗಿಗಳು, ಎರಡು ಸ್ಪಿನ್ ಆಯ್ಕೆ ಇರಬೇಕು

ತಂಡದಲ್ಲಿ ಠಾಕೂರ್ ಆಡಬೇಕಿತ್ತು ಮತ್ತು ಚಹಾರ್ ಆರನೇ ಬೌಲಿಂಗ್ ಆಯ್ಕೆಯಾಗಿರಬೇಕು ಎಂದು ನೆಹ್ರಾ ಹೇಳಿದ್ದಾರೆ. "ನನ್ನ ಪ್ರಕಾರ ಭಾರತ ತಂಡ 6ನೇ ಬೌಲಿಂಗ್ ಆಯ್ಕೆಯನ್ನು ಹೊಂದಿರಬೇಕು. ನನಗೆ 6ನೇ ಬೌಲಿಂಗ್ ಆಯ್ಕೆ ದೀಪಕ್ ಹೂಡಾ ಅಲ್ಲ. ಆರನೇ ಬೌಲಿಂಗ್ ಆಯ್ಕೆ ದೀಪಕ್ ಚಹಾರ್ ಆಗಿರಬೇಕು. ವಾಷಿಂಗ್ಟನ್ ಸುಂದರ್ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. 7ನೇ ಕ್ರಮಾಂಕದಲ್ಲಿ ಶಾರ್ದೂಲ್ ಠಾಕೂರ್ ನಂತರ ಚಹಾರ್ ಬ್ಯಾಟಿಂಗ್ ಮಾಡಬಹುದು, ಇದರಿಂದ ಭಾರತದ ಬ್ಯಾಟಿಂಗ್ ಕೂಡ ಬಲವಾಗುತ್ತದೆ" ಎಂದು ಹೇಳಿದ್ದಾರೆ.

"ಭಾರತ ತಂಡ ನಾಲ್ಕು ವೇಗದ ಬೌಲರ್ ಮತ್ತು ಇಬ್ಬರು ಸ್ಪಿನ್ನರ್ ಗಳ ಜೊತೆ ಆಡಬೇಕು. ಆಸ್ಟ್ರೇಲಿಯಾದಲ್ಲಿ ವಿಕೆಟ್‌ಗಳು ಉತ್ತಮವಾಗಿವೆ. ತಂಡದಲ್ಲಿ ಹಾರ್ದಿಕ್ ಪಾಂಡ್ಯ ಇಲ್ಲದ ಕಾರಣ, ಇಬ್ಬರು ಸ್ಪಿನ್ನರ್ ಗಳೊಂದಿಗೆ ಆಡಬೇಕು" ಎಂದು ಹೇಳಿದ್ದಾರೆ.

Story first published: Sunday, November 27, 2022, 19:03 [IST]
Other articles published on Nov 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X