ಆಶಿಶ್ ನೆಹ್ರಾ ಹೆಸರಿಸಿದ ಬೆಸ್ಟ್ ಐಪಿಎಲ್ 2020 ತಂಡದಲ್ಲಿ ರೋಹಿತ್, ಕೊಹ್ಲಿಗೆ ಸ್ಥಾನವಿಲ್ಲ!

ಈ ಬಾರಿಯ ಐಪಿಎಲ್ ಟೂರ್ನಿ ಮುಕ್ತಾಯ ಕಂಡಿದ್ದರೂ ಅದರ ಬಗೆಗಿನ ಚರ್ಚೆ ಇನ್ನೂ ಮುಂದುವರಿದಿದೆ. ಟೀಮ್ ಇಂಡಿಯಾದ ಮಾಜಿ ಆಟಗಾರ ಆಶಿಶ್ ನೆಹ್ರಾ ಈ ಬಾರಿಯ ಐಪಿಎಲ್ ಪ್ರದರ್ಶನದ ಆಧಾರದ ಮೇಲೆ ಅತ್ಯುತ್ತಮ ತಂಡವನ್ನು ಹೆಸರಿಸಿದ್ದಾರೆ. ಇದರಲ್ಲಿ ಕೆಲ ಅಚ್ಚರಿಗಳೂ ಇದೆ.

ಆಶಿಶ್ ನೆಹ್ರಾ ಹೆಸರಿಸಿರುವ ಈ ತಂಡದಲ್ಲಿ ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಸ್ಥಾನವನ್ನು ಪಡೆದುಕೊಂಡಿಲ್ಲ. ಜೊತೆಗೆ ಈ ಬಾರಿಯ ಚಾಂಪಿಯನ್ ತಂಡವಾಗಿರುವ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಕೂಡ ಈ ತಂಡದಲ್ಲಿಲ್ಲ. ಆರಂಭಿಕ ಸ್ಥಾನದಲ್ಲಿ ಕೆಎಲ್ ರಾಹುಲ್ ಅವರನ್ನು ಆಯ್ಕೆ ಮಾಡಿದ್ದರೂ ಟೂರ್ನಿಯಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿರುವ ಶಿಖರ್ ಧವನ್ ಅವರನ್ನು ತಂಡದಿಂದ ಹೊರಗಿಟ್ಟಿದ್ದಾರೆ.

ಟೀಮ್ ಇಂಡಿಯಾದ ನಾಯಕತ್ವ ವಿಭಜನೆ ಬಗ್ಗೆ ಅಭಿಪ್ರಾಯ ಮಂಡಿಸಿದ ಶೋಯೆಬ್ ಅಖ್ತರ್

ಹಾಗಾದರೆ ಆಶಿಶ್ ನೆಹ್ರಾ ಅವರ ತಂಡದಲ್ಲಿ ಯಾರೆಲ್ಲಾ ಸ್ಥಾನವನ್ನು ಪಡೆದುಕೊಂಡಿದ್ದಾರೆ ಮುಂದೆ ಓದಿ..

ಆರಂಭಿಕ ಆಟಗಾರರು

ಆರಂಭಿಕ ಆಟಗಾರರು

ಆಶಿಶ್ ನೆಹ್ರಾ ಆರಂಭಿಕ ಆಟಗಾರರ ಸ್ಥಾನಕ್ಕೆ ಕೆಎಲ್ ರಾಹುಲ್ ಅವರನ್ನು ಆಯ್ಕೆ ಮಾಡಿಕೊಂಡಿದ್ದರೆ ಇನ್ನೋರ್ವ ಆಟಗಾರನ ಸ್ಥಾನಕ್ಕೆ ಟೂರ್ನಿಯಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಧವನ್ ಬದಲಿಗೆ ಡೇವಿಡ್ ವಾರ್ನರ್ ಅವರನ್ನು ಹೆಸರಿಸಿದ್ದಾರೆ.

ಅಗ್ರ ಕ್ರಮಾಂಕ

ಅಗ್ರ ಕ್ರಮಾಂಕ

ಮೂರನೇ ಸ್ಥಾನಕ್ಕೆ ನಾನು ವಿರಾಟ್ ಕೊಹ್ಲಿಯನ್ನು ಆಯ್ಕೆ ಮಾಡುವುದಿಲ್ಲ. ಅದಕ್ಕೆ ಕಾರಣ ಅವರು ರನ್ ಗಳಿಸಿಲ್ಲ ಎಂಬುದಲ್ಲ. ಬದಲಾಗಿ ತಂಡಕ್ಕೆ ಪರಿಣಾಮಕಾರಿಯಾಗಿ ರನ್ ಕೊಡುಗೆಯನ್ನು ಸೂರ್ಯಕುಮಾರ್ ಯಾದವ್ ನೀಡಿದ್ದಾರೆ. ಟಿ20 ತಂಡ ಎಬಿ ಡಿವಲಿಯರ್ಸ್ ಅವರನ್ನು ಸೇರಿಸಿಕೊಳ್ಳದೆ ಸಂಪೂರ್ಣವಾಗಲಾರದು, ಹೀಗಾಗಿ ನಾಲ್ಕನೇ ಸ್ಥಾನಕ್ಕೆ ಎಬಿ ಡಿವಿಲಿಯರ್ಸ್ ಸೇರಿಸಿಕೊಳ್ಳುತ್ತೇನೆ" ಎಂದಿದ್ದಾರೆ ನೆಹ್ರಾ.

ಮಧ್ಯಮ ಕ್ರಮಾಂಕ

ಮಧ್ಯಮ ಕ್ರಮಾಂಕ

ಮಧ್ಯಮ ಕ್ರಮಾಂಕದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ಅವರನ್ನು ನೆಹ್ರಾ ಹೆಸರಿಸಿದ್ದಾರೆ. ಇಶಾನ ್ಕಿಶನ್ ಅವರನ್ನು ಎಬಿ ಡಿವಿಲಿಯರ್ಸ್ ಜೊತೆಗೆ ವಿಕೆಟ್ ಕೀಪರ್ ಆಗಿಯೂ ಪರಿಗಭಿಸುವುದಾಗಿ ನೆಹ್ರಾ ಹೇಳಿದ್ದಾರೆ.

ಬೌಲಿಂಗ್ ವಿಭಾಗ

ಬೌಲಿಂಗ್ ವಿಭಾಗ

ಜೋಫ್ರಾ ಆರ್ಚರ್ ಹಾಗೂ ರಶೀದ್ ಖಾನ್ ನಂತರದ ಸ್ಥಾನವನ್ನು ಪಡೆದುಕೊಳ್ಳಲಿದ್ದಾರೆ. ಈ ಇಬ್ಬರೂ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮಿಂಚಬಲ್ಲವರು ಎಂದು ನೆಹ್ರಾ ವಿವರಿಸಿದ್ದಾರೆ. ಬಳಿಕ ಚಾಹಲ್ ಹಾಗೂ ಬೂಮ್ರಾ ಅವರನ್ನು ಹೆಸರಿಸಿರುವ ನೆಹ್ರಾ ಅಂತಿಮವಾಗಿ ಆರ್ ಅಶ್ವಿನ್ ಅಥವಾ ಮೊಹಮದ್ ಶಮಿ ಈ ಇಬ್ಬರಲ್ಲಿ ಓರ್ವನನ್ನು ಆಯ್ಕೆ ಮಾಡುವುದಾಗಿ ಹೇಳಿದ್ದಾರೆ.

ಧೋನಿ ಹೊರಗಿಟ್ಟು ತಂಡ ರಚಿಸುವುದು ಕಷ್ಟ

ಧೋನಿ ಹೊರಗಿಟ್ಟು ತಂಡ ರಚಿಸುವುದು ಕಷ್ಟ

ಇದೇ ಸಂದರ್ಭದಲ್ಲಿ ಮಾಜಿ ನಾಯಕ ಎಂಎಸ್ ಧೋನಿಯನ್ನು ಹೊರಗಿಟ್ಟು ಟಿ20 ತಂಡವನ್ನು ರಚನೆ ಮಾಡುವುದು ಕಷ್ಟ ಎಂದಿರುವ ನೆಹ್ರಾ "ನಾನು ಧೋನಿಯನ್ನು ಹೊರತಾಗಿಸಿ ತಂಡವನ್ನು ರಚಿಸುತ್ತೇನೆ ಎಂದು ಯೋಚಿಸುವುದಿಲ್ಲ. ಆದರೆ ಈ ಬಾರಿಯ ಟೂರ್ನಿ ಉತ್ತಮವಾಗಿರಲಿಲ್ಲ. ಟೂರ್ನಮೆಂಟ್‌ನ ಪ್ರದರ್ಶನದ ಆಧಾರದಲ್ಲಿ ನೋಡುವುದಾದರೆ ಇದು ನನ್ನ ಐಪಿಎಲ್ 2020 ತಂಡ" ಎಂದಿದ್ದಾರೆ ಆಶಿಶ್ ನೆಹ್ರಾ.

ನೆಹ್ರಾ ಐಪಿಎಲ್ 2020 XI

ನೆಹ್ರಾ ಐಪಿಎಲ್ 2020 XI

ಕೆ.ಎಲ್. ರಾಹುಲ್, ಡೇವಿಡ್ ವಾರ್ನರ್, ಸೂರ್ಯಕುಮಾರ್ ಯಾದವ್, ಎಬಿ ಡಿವಿಲಿಯರ್ಸ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಜೋಫ್ರಾ ಆರ್ಚರ್, ರಶೀದ್ ಖಾನ್, ಯುಜುವೇಂದ್ರ ಚಾಹಲ್, ಜಸ್ಪ್ರೀತ್ ಬೂಮ್ರಾ, ರವಿಚಂದ್ರನ್ ಅಶ್ವಿನ್/ಮೊಹಮ್ಮದ್ ಶಮಿ

For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, November 19, 2020, 16:59 [IST]
Other articles published on Nov 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X