ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಧೋನಿ ವಿರುದ್ಧ ತೋರಿದ ವರ್ತನೆಗೆ ಕ್ಷಮೆಯಾಚಿಸಿದ ಆಶಿಶ್ ನೆಹ್ರಾ

Ashish Nehra Regrets Abusing Ms Dhoni For A Dropped Shahid Afridi

ಟೀಮ್ ಇಂಡಿಯಾದ ಪ್ರಮುಖ ಬೌಲರ್ ಆಗಿದ್ದ ಆಶಿಶ್ ನೆಹ್ರಾ ಅನೇಕ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಜಹೀರ್ ಖಾನ್ ಜೊತೆಗೆ ಬೌಲಿಂಗ್ ಜೊತೆಗಾರನಾಗಿ ದಶಕಕ್ಕೂ ಹೆಚ್ಚುಕಾಲ ಟೀಮ್ ಇಂಡಿಯಾದ ಭಾಗವಾಗಿದ್ದರು ಆಶಿಶ್ ನೆಹ್ರಾ. ಆದರೆ ಇಂದು ಘಟನೆಯೊಂದನ್ನು ನೆನಪಿಸಿಕೊಂಡು ಧೋನಿಯ ಕ್ಷಮೆಯಾಚಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನ 2005ರಲ್ಲಿ ಮುಖಾಮುಖಿಯಾಗಿದ್ದ ಸಂದರ್ಭವದು. ಭಾರತ ನೀಡಿದ ಬೃಹತ್ ಗುರಿಯನ್ನು ಪಾಕಿಸ್ತಾನ ಬೆನ್ನತ್ತಿತ್ತು. ನೆಹ್ರಾ ಎಸೆತ ಎಸೆತ ಪಾಕಿಸ್ತಾನದ ಆರಂಭಿಕ ಆಟಗಾರನಾಗಿದ್ದ ಶಾಹಿದ್ ಬ್ಯಾಟನ್ನು ಸವರಿಕೊಂಡು ಕೀಪರ್ ಧೋನಿ ಮತ್ತು ಸ್ಲಿಪ್‌ನಲ್ಲಿದ್ದ ದ್ರಾವಿಡ್ ಇಬ್ಬರನ್ನೂ ವಂಚಿಸಿ ಬೌಂಡರಿಗೆರೆ ತಲುಪಿತು.

ಟಿ20 ಕ್ರಿಕೆಟ್‌ನ ಅತ್ಯುತ್ತಮ ಆರಂಭಿಕ ಆಟಗಾರರನ್ನು ಹೆಸರಿಸಿದ ಸನ್‌ರೈಸರ್ಸ್ ಮಾಜಿ ಕೋಚ್ಟಿ20 ಕ್ರಿಕೆಟ್‌ನ ಅತ್ಯುತ್ತಮ ಆರಂಭಿಕ ಆಟಗಾರರನ್ನು ಹೆಸರಿಸಿದ ಸನ್‌ರೈಸರ್ಸ್ ಮಾಜಿ ಕೋಚ್

ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ನೆಹ್ರಾ ತಾಳ್ಮೆ ಕಳೆದುಕೊಳ್ಳು ಇಷ್ಟೇ ಸಾಕಾಗಿತ್ತು. ತಕ್ಷಣವೇ ಕೋಪಗೊಂಡ ಆಶಿಶ್ ನೆಹ್ರಾ ಜೋರಾಗಿ ವಿಕೆಟ್ ಕೀಪರ್ ಧೋನಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದು ಕ್ಯಾಮರಾದಲ್ಲೂ ಸೆರೆಯಾಗಿತ್ತು. ಈಗಳು ಈ ವಿಡಿಯೋ ವೈರಸ್ ಆಗುತ್ತಿರುತ್ತದೆ. ಈ ವಿಡಿಯೋ ವಿಚಾರವಾಗಿಯೇ ನೆಹ್ರಾ ಕ್ಷಮೆಕೇಳಿದ್ದಾರೆ.

ಆ ಸಂದರ್ಭ ನನಗೆ ಸರಿಯಾಗಿ ನೆನಪಿದೆ. ಹೆಚ್ಚಿನವರು ಅದು ವಿಶಾಖಪಟ್ಟಣಂನಲ್ಲಿ ನಡೆದ ಘಟನೆ ಎಂದು ನೆನಪಿಸಿಕೊಳ್ಳುತ್ತಾರೆ. ಆದರೆ ಅದು ಅಹ್ಮದಾನಾದ್‌ನಲ್ಲಿ ನಡೆದ ಸರಣಿಯ ನಾಲ್ಕನೇ ಪಂದ್ಯವಾಗಿತ್ತು. ಅಲ್ಲಿ ಧೋನಿಯನ್ನು ನಿಂದಿಸಿದ ನನ್ನ ವರ್ತನೆ ನನಗೇ ಬೇಸರ ತರಿಸುತ್ತದೆ ಎಂದು ಹೇಳಿಕೊಂಡಿದ್ದಾರೆ.

ಧೋನಿ ಮಗಳು ಜೀವಾ ಇಲ್ಲೊಬ್ಬರ ಕೆಲಸಕ್ಕೇ ಕಲ್ಲು ಹಾಕ್ತಿದ್ದಾಳಂತೆ!ಧೋನಿ ಮಗಳು ಜೀವಾ ಇಲ್ಲೊಬ್ಬರ ಕೆಲಸಕ್ಕೇ ಕಲ್ಲು ಹಾಕ್ತಿದ್ದಾಳಂತೆ!

ಆದರೆ ಈ ಘಟನೆ ನಮ್ಮಿಬ್ಬರ ನಡುವಿನ ಬಾಂಧವ್ಯಕ್ಕೆ ಯಾವುದೇ ಧಕ್ಕೆಯನ್ನೂ ತರಲಿಲ್ಲ. ಬಳಿಕ ನಾವಿಬ್ಬರೈ ಎಂದಿನಂತೆಯೇ ಇದ್ದೆವು ಎಂದು ಆಶಿಶ್ ನೆಹ್ರಾ ಸುಮಾರು ಒಂದೂವರೆ ದಶಕದ ಹಿಂದಿನ ಘಟನೆಯ ಬಗ್ಗೆ ಮಾತನಾಡಿದ್ದಾರೆ. ಮತ್ತು ಈ ಸಂದರ್ಭದಲ್ಲಿ ಧೋನಿಯ ಕ್ಷಮೆ ಕೇಳಿದ್ದಾರೆ ಮಾಜಿ ಸೀಮರ್ ಆಶಿಶ್ ನೆಹ್ರಾ.

Story first published: Sunday, April 5, 2020, 19:46 [IST]
Other articles published on Apr 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X