ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಡೆಲ್ಲಿಯಲ್ಲಿನ ತನ್ನ ದಿನಗಳನ್ನು ನೆನಪಿಸಿ ಆರ್‌ಸಿಬಿಗೆ ಸಲಹೆ ನೀಡಿದ ನೆಹ್ರಾ

Ashish Nehra remembered his days in Delhi Daredevils, given advice to RCB

ಚೆನ್ನೈ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಈವರೆಗೆ ಆಡಿರುವ ನಾಲ್ಕು ಪಂದ್ಯಗಳಲ್ಲಿ ನಾಲ್ಕರಲ್ಲೂ ಗೆಲುವು ಕಂಡಿದೆ. ಆರ್‌ಸಿಬಿ ಪ್ರದರ್ಶನವನ್ನು ತಂಡದ ಮಾಜಿ ಬೌಲಿಂಗ್‌ ಕೋಚ್ ಆಶಿಷ್ ನೆಹ್ರಾ ಶ್ಲಾಘಿಸಿದ್ದಾರೆ.

ಐಪಿಎಲ್: ಈ ವಿಶೇಷ ದಾಖಲೆಯಿರುವುದು ಆರ್‌ಸಿಬಿ ಹೆಸರಿನಲ್ಲಿ ಮಾತ್ರ!ಐಪಿಎಲ್: ಈ ವಿಶೇಷ ದಾಖಲೆಯಿರುವುದು ಆರ್‌ಸಿಬಿ ಹೆಸರಿನಲ್ಲಿ ಮಾತ್ರ!

ಸೀಸನ್‌ನ ಆರಂಭದಿಂದಲೂ ಉತ್ತಮ ಪ್ರದರ್ಶನದೊಂದಿಗೆ ಪಂದ್ಯಗಳನ್ನು ಗೆಲ್ಲುತ್ತಲೇ ಸಾಗುತ್ತಿರುವ ಆರ್‌ಸಿಬಿ ಏಪ್ರಿಲ್ 22ರಂದು ನಡೆದ 16ನೇ ಪಂದ್ಯದಲ್ಲೂ ರಾಜಸ್ಥಾನ್ ರಾಯಲ್ಸ್ ವಿರುದ್ಧ ಬಲಿಷ್ಠ ಪ್ರದರ್ಶನ ನೀಡಿತ್ತು. ಆರ್‌ಆರ್ ವಿರುದ್ಧ 10 ವಿಕೆಟ್‌ಗಳ ಜಯ ದಾಖಲಿಸಿತ್ತು.

'ವಿರಾಟ್ ಕೊಹ್ಲಿ ನಾಯರಾಗಿ ವಿಚಾರಗಳನ್ನು ಹಗುರವಾಗಿ ಪರಿಗಣಿಸುವುದಿಲ್ಲ. ಅವರು ಸೀಸನ್ ಆರಂಭಿಸಿರುವ ರೀತಿ ಅದ್ಭುತವಾಗಿದೆ. ಆಡಿರುವ ನಾಲ್ಕೂ ಪಂದ್ಯಗಳನ್ನೂ ಗೆದ್ದಿದ್ದಾರೆ. ಇಷ್ಟಕ್ಕೇ ಪರಿಧಿ ಹಾಕಿಕೊಳ್ಳಬಾರದು. ಮುಂದಿನ ಪಂದ್ಯಗಳನ್ನೂ ಗೆಲ್ಲಬೇಕು,' ಎಂದು ಕ್ರಿಕ್‌ ಬಝ್‌ ಜೊತೆ ಮಾತನಾಡಿದ ನೆಹ್ರಾ ಹೇಳಿದ್ದಾರೆ.

ಮೈದಾನದಲ್ಲಿಯೇ ಹರ್ಭಜನ್ ಕಾಲನ್ನು ಸ್ಪರ್ಶಿಸಿದ ಸುರೇಶ್ ರೈನಾ ; ವಿಡಿಯೋ ನೋಡಿಮೈದಾನದಲ್ಲಿಯೇ ಹರ್ಭಜನ್ ಕಾಲನ್ನು ಸ್ಪರ್ಶಿಸಿದ ಸುರೇಶ್ ರೈನಾ ; ವಿಡಿಯೋ ನೋಡಿ

ಮುಂಬೈ ವಿರುದ್ಧ ಗೆದ್ದ ನಂತರ KL Rahul ಹೇಳಿದ್ದು ಒಂದೇ ಮಾತು | Oneindia Kannada

ಮಾತು ಮುಂದುವರೆಸಿದ ನೆಹ್ರಾ, 'ನಾನು ನನ್ನ ಡೆಲ್ಲಿ ಡೇರ್‌ಡೆವಿಲ್ಸ್ (ಈಗಿನ ಡೆಲ್ಲಿ ಕ್ಯಾಪಿಟಲ್ಸ್) ದಿನಗಳನ್ನು ನೆನಪಿಸಿಕೊಳ್ಳಬಲ್ಲೆ. ದಕ್ಷಿಣ ಆಫ್ರಿಕಾಕ್ಕೆ ನಾವು ಹೋಗಿದ್ದಾಗ 12ರಲ್ಲಿ 10 ಪಂದ್ಯಗಳನ್ನು ಗೆದ್ದಿದ್ದೆವು. ಆದರೆ ನಮಗೆ ಪ್ರಶಸ್ತಿ ಗೆಲ್ಲಲಾಗಲಿಲ್ಲ. ಹೀಗಾಗಿ ಗೆಲುವಿನ ಲಯದಲ್ಲಿರುವ ತಂಡಗಳು ಮೊದಲು ಪ್ಲೇ ಆಫ್‌ ಪ್ರವೇಶಿಸುವುದರ ಕಡೆ ಗಮನ ಹರಿಸಬೇಕು. ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ 2ರಲ್ಲಿ ಮುಗಿಸಲು ಪ್ರಯತ್ನಿಸಬೇಕು,' ಎಂದು ಸಲಹೆ ನೀಡಿದ್ದಾರೆ.

Story first published: Friday, April 23, 2021, 18:39 [IST]
Other articles published on Apr 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X