ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆ್ಯಷ್ಟನ್ ಅಗರ್‌ಗೆ ಹ್ಯಾಟ್ರಿಕ್ ವಿಕೆಟ್, ದಕ್ಷಿಣ ಆಫ್ರಿಕಾಕ್ಕೆ ಕೆಟ್ಟ ಹಣೆಪಟ್ಟಿ!

Ashton Agars Hat-Trick Helps Australia Thrash South Africa By 107 Runs in 1st T20I

ಜೋಹಾನ್ಸ್‌ಬರ್ಗ್, ಫೆಬ್ರವರಿ 22: ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆದ ದಕ್ಷಿಣ ಆಫ್ರಿಕಾ vs ಆಸ್ಟ್ರೇಲಿಯಾ ಮೊದಲನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾದ ಎಡಗೈ ಸ್ಪಿನ್ನರ್ ಆ್ಯಷ್ಟನ್ ಅಗರ್ ಹ್ಯಾಟ್ರಿಕ್ ಸಹಿತ ದಾಖಲೆಯ ವಿಕೆಟ್ ಪಡೆದಿದ್ದಾರೆ. ಆ್ಯಷ್ಟನ್ ಮಾರಕ ಬೌಲಿಂಗ್‌ನಿಂದಾಗಿ ಪ್ರವಾಸಿ ಆಸೀಸ್, ಆತಿಥೇಯರ ವಿರುದ್ಧ ನೂರಕ್ಕೂ ಹೆಚ್ಚಿನ ರನ್ ಜಯ ದಾಖಲಿಸಿದೆ.

ನೊ ಡೌಟ್, ಈತನೇ ವಿಶ್ವಶ್ರೇಷ್ಟ ಆಟಗಾರ: ಮತ್ತೊಮ್ಮೆ ಭಾರತೀಯರ ಹೃದಯ ಗೆದ್ದ ಕೇನ್ ವಿಲಿಯಮ್ಸನ್ನೊ ಡೌಟ್, ಈತನೇ ವಿಶ್ವಶ್ರೇಷ್ಟ ಆಟಗಾರ: ಮತ್ತೊಮ್ಮೆ ಭಾರತೀಯರ ಹೃದಯ ಗೆದ್ದ ಕೇನ್ ವಿಲಿಯಮ್ಸನ್

ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಸೀಸ್ ಭರ್ಜರಿ 107 ರನ್‌ನಿಂದ ಗೆದ್ದಿದೆ. ಈ ಸೋಲಿನೊಂದಿಗೆ ದಕ್ಷಿಣ ಆಫ್ರಿಕಾ ತಂಡ, ಟಿ20ಐ ಕ್ರಿಕೆಟ್‌ನಲ್ಲಿ ಸುಮಾರು 14 ವರ್ಷಗಳ ಹಿಂದಿನ ಕೆಟ್ಟದಾಖಲೆಯನ್ನು ಮತ್ತೆ ಬರೆದಂತಾಗಿದೆ.

ಮಹಿಳಾ ಟಿ20 ವಿಶ್ವಕಪ್: ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಗೆದ್ದ ಭಾರತೀಯ ವನಿತೆಯರುಮಹಿಳಾ ಟಿ20 ವಿಶ್ವಕಪ್: ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಗೆದ್ದ ಭಾರತೀಯ ವನಿತೆಯರು

ಆ್ಯಷ್ಟನ್ ಅಗರ್ ದಾಖಲೆ ವಿಕೆಟ್, ದಕ್ಷಿಣ ಆಫ್ರಿಕಾ ತಂಡದ ಹೀನಾಯ ಸೋಲು, ಆಸ್ಟ್ರೇಲಿಯಾದ ದಾಖಲೆ ಗೆಲುವಿನ ಬಗ್ಗೆ ಇಲ್ಲೊಂದಿಷ್ಟು ಮಾಹಿತಿಯಿದೆ.

ದ.ಆಫ್ರಿಕಾ ಅತೀ ಕನಿಷ್ಠ ರನ್‌

ದ.ಆಫ್ರಿಕಾ ಅತೀ ಕನಿಷ್ಠ ರನ್‌

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆಸ್ಟ್ರೇಲಿಯಾ ತಂಡ, ನಾಯಕ ಆ್ಯರನ್ ಫಿಂಚ್ 42, ಸ್ಟೀವ್ ಸ್ಮಿತ್ 45 ರನ್‌ನೊಂದಿಗೆ 20 ಓವರ್‌ಗೆ 6 ವಿಕೆಟ್ ನಷ್ಟದಲ್ಲಿ 196 ರನ್ ಮಾಡಿತ್ತು. ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ, ಫಾ ಡು ಪ್ಲೆಸಿಸ್ 24, ಪೈಟ್ ವ್ಯಾನ್ ಬಿಲ್ಜಾನ್ 16, ಕಾಗಿಸೊ ರಬಾಡ 22 ರನ್‌ ಕೊಡುಗೆಯೊಂದಿಗೆ 14.3 ಓವರ್‌ನಲ್ಲಿ ಸರ್ವ ಪತನ ಕಂಡು ಕೇವಲ 89 ರನ್ ಬಾರಿಸಿ ತಲೆ ಬಾಗಿತು.

ಆ್ಯಷ್ಟನ್‌ ಹ್ಯಾಟ್ರಿಕ್ ವಿಕೆಟ್

ಆ್ಯಷ್ಟನ್‌ ಹ್ಯಾಟ್ರಿಕ್ ವಿಕೆಟ್

ದಕ್ಷಿಣ ಆಫ್ರಿಕಾ ಇನ್ನಿಂಗ್ಸ್‌ನಲ್ಲಿ ಆಸೀಸ್ ಸ್ಪಿನ್ನರ್ ಆ್ಯಷ್ಟನ್ ಅಗರ್, ಹ್ಯಾಟ್ರಿಕ್ ವಿಕೆಟ್ ಸಹಿತ ದಾಖಲೆಯ ವಿಕೆಟ್ ಪಡೆದು ಗಮನ ಸೆಳೆದರು. 7.4ನೇ ಓವರ್‌ನಲ್ಲಿನ ಫಾ ಡು ಪ್ಲೆಸಿಸ್, 7.5ನೇ ಓವರ್‌ನಲ್ಲಿ ಆಂಡಿಲೆ ಫೆಹ್ಲುಕ್ವಾಯೊ, 7.6ನೇ ಓವರ್‌ನಲ್ಲಿ ಡೇಲ್ ಸ್ಟೇನ್ ವಿಕೆಟ್ ಉರುಳಿಸಿ ಹ್ಯಾಟ್ರಿಕ್ ದಾಖಲೆ ಸ್ಥಾಪಿಸಿದರು. ಅಲ್ಲದೆ ಕೇವಲ 24 ರನ್‌ಗೆ 5 ವಿಕೆಟ್‌ ಮುರಿದಿದ್ದೂ ದಾಖಲೆಯಾಗಿ ಗುರುತಿಸಿಕೊಂಡಿದೆ.

ಜೇಮ್ಸ್ ಫಾಕ್ನರ್ ದಾಖಲೆ ಪತನ

ಜೇಮ್ಸ್ ಫಾಕ್ನರ್ ದಾಖಲೆ ಪತನ

ಟಿ20ಐ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ಪರ ಅತ್ಯುತ್ತಮ ಬೌಲಿಂಗ್ ಫಿಗರ್‌ ದಾಖಲೆ ಜೇಮ್ಸ್ ಫಾಕ್ನರ್ ಹೆಸರಿನಲ್ಲಿತ್ತು. 2016ರಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಫಾಕ್ನರ್ 27 ರನ್‌ಗೆ 5 ವಿಕೆಟ್ ಮುರಿದಿದ್ದರು. ಆದರೆ ಆ್ಯಷ್ಟನ್ ಅಗರ್ ಈಗ 24 ರನ್‌ಗೆ 5 ವಿಕೆಟ್ ಪಡೆದಿರುವುದರಿಂದ ಫಾಕ್ನರ್ ದಾಖಲೆ ಬದಿಗೆ ಸರಿದಿದೆ.

ದಕ್ಷಿಣ ಆಫ್ರಿಕಾ ಕೆಟ್ಟ ದಾಖಲೆ

ದಕ್ಷಿಣ ಆಫ್ರಿಕಾ ಕೆಟ್ಟ ದಾಖಲೆ

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತೀ ಹೆಚ್ಚಿನ ರನ್‌ಗೆ ಪರಾಭವಗೊಂಡ ಕೆಟ್ಟ ದಾಖಲೆಗೆ ದಕ್ಷಿಣ ಆಫ್ರಿಕಾ ಕಾರಣವಾಗಿದೆ. ಅಷ್ಟೇ ಅಲ್ಲ, ಸುಮಾರು 14 ವರ್ಷಗಳ ಹಿಂದಿನ ಕೆಟ್ಟ ದಾಖಲೆಗಿಂತಲೂ ಕೆಟ್ಟ ದಾಖಲೆಯೀಗ ಆಫ್ರಿಕಾ ಹಣೆಪಟ್ಟಿಗೆ ಸೇರಿದೆ. 2006ರಲ್ಲಿ ಆಸ್ಟ್ರೇಲಿಯಾ ವಿರುದ್ಧ 95 ರನ್ ಸೋಲನುಭವಿಸಿದ್ದು ದಕ್ಷಿಣ ಆಫ್ರಿಕಾದ ಹಿಂದಿನ ಕೆಟ್ಟ ದಾಖಲೆಯಾಗಿತ್ತು. ಈ ಬಾರಿ 107 ರನ್‌ನಿಂದ ಸೋತಿರುವುದರಿಂದ ಆಫ್ರಿಕಾ ಮತ್ತೆ ಕೆಟ್ಟ ದಾಖಲೆ ನಿರ್ಮಿಸಿದೆ.

Story first published: Saturday, February 22, 2020, 13:16 [IST]
Other articles published on Feb 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X