ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

80 ಟೆಸ್ಟ್ ಪಂದ್ಯಗಳಲ್ಲಿ ಹರ್ಭಜನ್ ಸಿಂಗ್‌ ದಾಖಲೆ ಮೀರಿಸುವುದು ನಿಜಕ್ಕೂ ಅದ್ಭುತ: ರಾಹುಲ್‌ ದ್ರಾವಿಡ್‌

R ashwin
ಮೊದಲನೇ ಪಂದ್ಯದ Pitch ಸಿದ್ದಪಡಿಸಿದವರಿಗೆ Dravid ಕೊಟ್ಟ ಬಹುಮಾನ | Oneindia Kannada

ಟೀಂ ಇಂಡಿಯಾ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ರ ಅಮೋಘ ಸಾಧನೆಯ ಕುರಿತಾಗಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮುಕ್ತಕಂಠದಿಂದ ಹೊಗಳಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ 418ನೇ ವಿಕೆಟ್ ಪಡೆಯುವ ಮೂಲಕ ಲೆಜೆಂಡರಿ ಸ್ಪಿನ್ನರ್ ಹರ್ಭಜನ್ ಸಿಂಗ್ ದಾಖಲೆಯನ್ನ ಮುರಿದರು.

ಕೇವಲ 80 ಟೆಸ್ಟ್‌ ಪಂದ್ಯಗಳಲ್ಲಿ ಆರ್‌. ಅಶ್ವಿನ್ ಈ ಸಾಧನೆಯ ಶಿಖರ ತಲುಪಿದ್ದಕ್ಕಾಗಿ ಶುಭಾಶಯಗಳ ಮಹಾಪೂರವೇ ಹರಿದುಬಂದಿವೆ. ಅನೇಕ ಕ್ರಿಕೆಟ್ ದಿಗ್ಗಜರು ಅಶ್ವಿನ್ ಸಾಧನೆಯನ್ನ ಹೊಗಳಿದ್ದಾರೆ. ಪಂದ್ಯ ಮುಗಿದ ಬಳಿಕ ಮಾತನಾಡಿ ಕೋಚ್ ರಾಹುಲ್ ದ್ರಾವಿಡ್‌ ಅಶ್ವಿನ್ ಸಾಧನೆಯನ್ನ ಮೆಚ್ಚಿ ಮಾತನಾಡಿದ್ದಾರೆ.

ಅಶ್ವಿನ್ ಸಾಧನೆ ನಿಜಕ್ಕೂ ಅದ್ಭುತವಾಗಿದೆ: ರಾಹುಲ್ ದ್ರಾವಿಡ್

ಅಶ್ವಿನ್ ಸಾಧನೆ ನಿಜಕ್ಕೂ ಅದ್ಭುತವಾಗಿದೆ: ರಾಹುಲ್ ದ್ರಾವಿಡ್

"ಹರ್ಭಜನ್ ನಿಜವಾಗಿಯೂ ಉತ್ತಮ ಬೌಲರ್, ನಾನು ಅವರೊಂದಿಗೆ ಸಾಕಷ್ಟು ಕ್ರಿಕೆಟ್ ಆಡಿದ್ದೇನೆ. ಅವರು ಭಾರತಕ್ಕೆ ಅದ್ಭುತ ಬೌಲರ್ ಆಗಿದ್ದರು ಇದರ ಜೊತೆಗೆ, ಕೇವಲ 80 ಟೆಸ್ಟ್ ಪಂದ್ಯಗಳಲ್ಲಿ ಅಶ್ವಿನ್ , ಹರ್ಭಜನ್ ಸಿಂಗ್‌ರನ್ನ ಹಿಂದಿಕ್ಕಿ ಮಾಡಿರುವ ಸಾಧನೆ ಅದ್ಭುತವಾಗಿದೆ. "ಎಂದು ಪಂದ್ಯದ ನಂತರ ದ್ರಾವಿಡ್ ಹೇಳಿದರು.

ಕಾನ್ಪುರ ಪಿಚ್ ತಯಾರಿಸಿದ ಸಿಬ್ಬಂದಿಗಳಿಗೆ 35,000 ರೂ. ನೀಡಿದ ಕೋಚ್ ದ್ರಾವಿಡ್: ಕಾರಣ ಇಲ್ಲಿದೆ!

ಅಶ್ವಿನ್ ಒಬ್ಬ ಮ್ಯಾಚ್‌ ವಿನ್ನರ್

ಅಶ್ವಿನ್ ಒಬ್ಬ ಮ್ಯಾಚ್‌ ವಿನ್ನರ್

ರವಿಚಂದ್ರನ್ ಅಶ್ವಿನ್ ಕುರಿತು ಹೊಗಳಿರುವ ಭಾರತ ಕ್ರಿಕೆಟ್ ತಂಡದ ಕೋಚ್ ರಾಹುಲ್ ದ್ರಾವಿಡ್, ಅಶ್ವಿನ್ ಭಾರತ ತಂಡಕ್ಕೆ ಮ್ಯಾಚ್ ವಿನ್ನರ್ ಆಗಿದ್ದಾರೆ. 5ನೇ ದಿನದಂದು ಅಜಿಂಕ್ಯ ರಹಾನೆ ನೇತೃತ್ವದ ತಂಡವು ಮತ್ತೆ ಕಂಬ್ಯಾಕ್ ಮಾಡಲು ಕಾರಣರಾದ್ರು. ಅಶ್ವಿನ್ ಬೌಲರ್ ಆಗಿ ವಿಕಸನಗೊಳ್ಳುತ್ತಲೇ ಇರುತ್ತಾರೆ, ಹೀಗಾಗಿಯೇ ಅಶ್ವಿನ್ ಯಶಸ್ಸನ್ನು ಕಾಣುತ್ತಿದ್ದಾರೆ, ಹೀಗೆ ಸುಧಾರಿಸಿಕೊಳ್ಳದ ಹೊರತು ಯಶಸ್ಸು ಸಾಧ್ಯವಿಲ್ಲ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.

ಅವರು ಪಂದ್ಯದಿಂದ ಪಂದ್ಯಕ್ಕೆ ಅಪ್‌ಡೇಟ್ ಆಗುತ್ತಲೇ ಇರುತ್ತಾರೆ, ಬೆಳೆಯುತ್ತಲೇ ಇರುತ್ತಾನೆ. ಆಟದ ಬಗ್ಗೆ ಯೋಚಿಸುತ್ತಲೇ ಇರುವ, ಬದಲಾಗುತ್ತಲೇ ಇರುವ, ವಿಕಸನಗೊಳ್ಳುವ ವ್ಯಕ್ತಿಗಳಲ್ಲಿ ಅವನು ಒಬ್ಬ. ಅದಕ್ಕಾಗಿಯೇ ಅವನು ಇಲ್ಲಿಗೆ ಬಂದು ನಿಂತಿದ್ದಾರೆ ಎಂದು ದ್ರಾವಿಡ್ ಅಭಿಪ್ರಾಯ ಪಟ್ಟಿದ್ದಾರೆ.

ಕೇವಲ 80 ಪಂದ್ಯಗಳಲ್ಲಿ ಅಶ್ವಿನ್ ಅಮೋಘ ಸಾಧನೆ

ಕೇವಲ 80 ಪಂದ್ಯಗಳಲ್ಲಿ ಅಶ್ವಿನ್ ಅಮೋಘ ಸಾಧನೆ

80 ಪಂದ್ಯಗಳನ್ನ ಆಡಿರುವ ರವಿಚಂದ್ರನ್ ಅಶ್ವಿನ್, ನ್ಯೂಜಿಲೆಂಡ್‌ನ ಟಾಮ್ ಲಥಾಮ್‌ರವ ವಿಕೆಟ್ ಎಗರಿಸುತ್ತಿದ್ದಂತೆ, ಹರ್ಭಜನ್ ಸಿಂಗ್ ದಾಖಲೆಯನ್ನ ಮುರಿದು ಗರಿಷ್ಠ ವಿಕೆಟ್ ಪಡೆದ ಭಾರತದ ಬೌಲರ್ಸ್‌ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿಕೆಗೊಂಡರು. ಹರ್ಭಜನ್ ಸೀಂಗ್ 103 ಪಂದ್ಯಗಳಿಂದ 417 ವಿಕೆಟ್ ಪಡೆದಿದ್ದಾರೆ. ಆದ್ರೆ ಆರ್. ಅಶ್ವಿನ್ ಕೇವಲ 80 ಪಂದ್ಯಗಳಲ್ಲಿ 418 ವಿಕೆಟ್ ಕಬಳಿಸಿದ್ದಾರೆ. 30 ಬಾರಿ ಐದು ವಿಕೆಟ್‌ಗಳ ಗೊಂಚಲು ಪಡೆದಿರುವ ಆರ್. ಅಶ್ವಿನ್, 7 ಬಾರಿ 10 ವಿಕೆಟ್ ತನ್ನದಾಗಿಸಿಕೊಂಡಿದ್ದಾರೆ.

ಹರ್ಭಜನ್ ಸಿಂಗ್ ದಾಖಲೆಯನ್ನ ಮುರಿದ ಆರ್. ಅಶ್ವಿನ್: ಭಾರತದ 3ನೇ ಗರಿಷ್ಠ ವಿಕೆಟ್ ಟೇಕರ್

ಭಾರತದ ಪರ ಅಗ್ರ ಪಟ್ಟಿಯಲ್ಲಿರುವ ಅನಿಲ್ ಕುಂಬ್ಳೆ, ಕಪಿಲ್ ದೇವ್

ಭಾರತದ ಪರ ಅಗ್ರ ಪಟ್ಟಿಯಲ್ಲಿರುವ ಅನಿಲ್ ಕುಂಬ್ಳೆ, ಕಪಿಲ್ ದೇವ್

ಟೀಂ ಇಂಡಿಯಾ ಪರ ಜಂಬೋ ಖ್ಯಾತಿಯ ಲೆಜೆಂಡರಿ ಅನಿಲ್‌ ಕುಂಬ್ಳೆ ಗರಿಷ್ಠ ಟೆಸ್ಟ್ ವಿಕೆಟ್ ಪಡೆದವರಾಗಿದ್ದು, ವಿಶ್ವದಲ್ಲಿ ನಾಲ್ಕನೇ ಗರಿಷ್ಠ ವಿಕೆಟ್ ಟೇಕರ್ ಎಂಬ ಸಾಧನೆ ಇವರಿಗಿದೆ. ವಿಶ್ವಕಪ್ ವಿಜೇತ ಕಪಿಲ್ ದೇವ್ ಭಾರತದ ಪರ ವಿಕೆಟ್ ಪಡೆದವರ ಪಟ್ಟಿಯಲ್ಲಿ ಎರಡನೇ ಸ್ಥಾನ ಅಲಂಕರಿಸಿದ್ದಾರೆ. ಇವರ ನಂತರದ ಸ್ಥಾನದಲ್ಲಿ ಅಶ್ವಿನ್ ಇದ್ದು, ಕಪಿಲ್ ರೆಕಾರ್ಡ್‌ ಮುರಿಯಲು ಇನ್ನು 16 ವಿಕೆಟ್‌ಗಳಷ್ಟು ಬಾಕಿ ಇದೆ. ಕುಂಬ್ಳೆ ಮತ್ತು ಕಪಿಲ್ ದೇವ್ ಟೆಸ್ಟ್ ವಿಕೆಟ್ ರೆಕಾರ್ಡ್ಸ್‌ ಈ ಕೆಳಗಿದೆ.

ಅನಿಲ್ ಕುಂಬ್ಳೆ
ಪಂದ್ಯ: 132
ಇನ್ನಿಂಗ್ಸ್‌: 236
ವಿಕೆಟ್: 619
ಬೆಸ್ಟ್: 10/74
ಎಕಾನಮಿ: 2.69
5 ವಿಕೆಟ್: 35
10 ವಿಕೆಟ್: 8

ಕಪಿಲ್ ದೇವ್‌
ಪಂದ್ಯ: 131
ಇನ್ನಿಂಗ್ಸ್‌: 227
ವಿಕೆಟ್: 434
ಬೆಸ್ಟ್: 9/83
ಎಕಾನಮಿ: 2.78
5 ವಿಕೆಟ್: 23
10 ವಿಕೆಟ್: 2

Story first published: Tuesday, November 30, 2021, 15:06 [IST]
Other articles published on Nov 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X