ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಲ್ಲಿದ್ದಲ್ಲಿಂದ ಮತದಾನದ ಅವಕಾಶಕ್ಕೆ ಮೋದಿಗೆ ಆರ್ ಅಶ್ವಿನ್ ಮನವಿ

Ashwin urges PM Modi to allow Indian cricketers in IPL to vote wherever they are

ನವದೆಹಲಿ, ಮಾರ್ಚ್ 26 : ಇಂಡಿಯನ್ ಪ್ರೀಮಿಯರ್ ಲೀಗ್ ಆಡುತ್ತ ಇಡೀ ದೇಶ ಸುತ್ತುತ್ತಿರುವ ಕ್ರಿಕೆಟ್ ಆಟಗಾರರಿಗೆ, ಅವರಿದ್ದಲ್ಲಿಂದಲೇ ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡಲು ಅವಕಾಶ ಮಾಡಿಕೊಡುವಂತೆ ಕ್ರಿಕೆಟರ್ ರವಿಚಂದ್ರನ್ ಅಶ್ವಿನ್ ಅವರು ಮನವಿ ಮಾಡಿಕೊಂಡಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಕೆಲ ದಿನಗಳ ಹಿಂದೆ ನರೇಂದ್ರ ಮೋದಿ ಅವರು, ದೇಶದ ಯುವ ಜನತೆಯಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಭಾರೀ ಸಂಖ್ಯೆಯಲ್ಲಿ ಬಂದು ಮತದಾನ ಮಾಡುವಂತೆ ಉತ್ತೇಜಿಸಲು ರವಿಚಂದ್ರನ್ ಅಶ್ವಿನ್, ಶಿಖರ್ ಧವನ್, ಸಚಿನ್ ತೆಂಡೂಲ್ಕರ್, ದೀಪಾ ಕರ್ಮಾಕರ್, ಸಾಕ್ಷಿ ಮಲಿಕ್ ಮುಂತಾದವರಿಗೆ ಟ್ವೀಟ್ ಮಾಡಿದ್ದರು.

ಇದಕ್ಕೆ ಪ್ರತಿಯಾಗಿ ಉತ್ತರಿಸಿರುವ ರವಿಚಂದ್ರನ್ ಅಶ್ವಿನ್ ಅವರು, ನರೇಂದ್ರ ಮೋದಿ ಸರ್, ಐಪಿಎಲ್ ನಲ್ಲಿ ಆಡುತ್ತಿರುವ ಎಲ್ಲಾ ಭಾರತೀಯ ಕ್ರಿಕೆಟ್ ಪಟುಗಳಿಗೆ ಅವರಿದ್ದಲ್ಲಿಂದಲೇ ಮತದಾನ ಮಾಡಲು ಅವಕಾಶ ಮಾಡಿಕೊಡಿ ಎಂದು ವಿನಂತಿಸಿಕೊಂಡಿದ್ದಾರೆ.

ಮಾಜಿ ಕ್ರಿಕೆಟಿಗ ಗಂಭೀರ್ ಬಿಜೆಪಿ ಸೇರ್ಪಡೆ, ದೆಹಲಿಯಿಂದ ಸ್ಪರ್ಧೆ ಸಾಧ್ಯತೆ ಮಾಜಿ ಕ್ರಿಕೆಟಿಗ ಗಂಭೀರ್ ಬಿಜೆಪಿ ಸೇರ್ಪಡೆ, ದೆಹಲಿಯಿಂದ ಸ್ಪರ್ಧೆ ಸಾಧ್ಯತೆ

ಪ್ರಜಾಪ್ರಭುತ್ವದಲ್ಲಿ ಮತದಾನ ಮಾಡುವುದು ಎಲ್ಲಕ್ಕಿಂತ ಪ್ರಮುಖವಾದ ಕರ್ತವ್ಯ. ನೀವು ದೇಶದ ಯಾವುದೇ ಮೂಲೆಯಲ್ಲಿದ್ದರೂ ಮತದಾನ ಮಾಡಿ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕೆಂದು ಇಡೀ ದೇಶದ ಜನತೆಯನ್ನು ಆಗ್ರಹಿಸುತ್ತೇನೆ ಎಂದೂ ಅಶ್ವಿನ್ ಅವರು ಕೋರಿದ್ದಾರೆ. ಆದರೆ, ಇದು ಸಾಧ್ಯವೆ?

ರವಿಚಂದ್ರನ್ ಅಶ್ವಿನ್ ಅವರೇನೋ ಈರೀತಿ ನರೇಂದ್ರ ಮೋದಿಯವರನ್ನು ಕೋರಿಕೊಂಡಿದ್ದಾರೆ. ಆದರೆ, ಈ ಚುನಾವಣಾ ಪ್ರಕ್ರಿಯೆ ನಡೆಸುವುದು ಚುನಾವಣಾ ಆಯೋಗ. ಮತದಾನ ಮಾಡುವಾಗಲೂ ಕೆಲವೊಂದು ನಿಯಮಗಳಿರುತ್ತವೆ. ಅವನ್ನು ಪ್ರತಿಯೊಬ್ಬ ನಾಗರಿಕನೂ ಪಾಲಿಸಲೇಬೇಕಾಗುತ್ತದೆ. ಮತದಾನದ ದಿನವಾದರೂ ಕ್ರಿಕೆಟ್ ಪಟುಗಳು ಬಿಡುವು ಮಾಡಿಕೊಂಡು ಮತದಾನ ಮಾಡುವ ಅಗತ್ಯವಿದೆ.

ಸಾರ್ವತ್ರಿಕ ಚುನಾವಣೆಯ ಪ್ರಕ್ರಿಯೆ ಆರಂಭವಾಗಿದ್ದು, ದೇಶದೆಲ್ಲೆಡೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದಾರೆ. ಏಪ್ರಿಲ್ 11ರಿಂದ ಮತದಾನ ಆರಂಭವಾಗಿ ಮೇ 19ರವರೆಗೆ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಆದರೆ, ಮಾರ್ಚ್ 23ರಿಂದಲೇ ಐಪಿಎಲ್ ಆರಂಭವಾಗಿದ್ದು, ಮೇ 12ರಂದು ಚೆನ್ನೈನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಪಂದ್ಯಗಳು ಹೆಚ್ಚೂಕಡಿಮೆ ಬಿಡುವಿಲ್ಲದೆ ನಡೆಯಲಿವೆ.

Story first published: Tuesday, March 26, 2019, 14:53 [IST]
Other articles published on Mar 26, 2019
Read in English: Ashwin urges PM Modi
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X