ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಯುಎಇಗೆ ಏಷ್ಯಾ ಕಪ್ ಆತಿಥ್ಯ ಹಸ್ತಾಂತರಿಸಿದ ಬಿಸಿಸಿಐ

Asia Cup 2018 in UAE; BCCI hands over hosting rights to Emirates Cricket Board

ದುಬೈ, ಆಗಸ್ಟ್ 17: ಏಷ್ಯಾ ಕಪ್‌ಗೆ ಆತಿಥ್ಯ ವಹಿಸುವ ಗೊಂದಲ ಕೊನೆಗೂ ಬಗೆಹರಿದಿದೆ.

ಏಷ್ಯಾ ಕಪ್ ಆಯೋಜಿಸುವ ಹಕ್ಕನ್ನು ಬಿಸಿಸಿಐ, ಎಮಿರೇಟ್ಸ್ ಕ್ರಿಕೆಟ್ ಮಂಡಳಿಗೆ ಶುಕ್ರವಾರ ಅಧಿಕೃತವಾಗಿ ಹಸ್ತಾಂತರಿಸಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತು ಎಮಿರೇಟ್ಸ್ ಕ್ರಿಕೆಟ್ ಮಂಡಳಿಗಳು ಏಷ್ಯಾಕಪ್ 2018ನೇ ಆವೃತ್ತಿಯ ಆತಿಥ್ಯದ ಕುರಿತಂತೆ ಒಪ್ಪಂದ ಮಾಡಿಕೊಂಡಿವೆ ಎಂದು ಬಿಸಿಸಿಐ ಹೇಳಿಕೆ ತಿಳಿಸಿದೆ.

ಟ್ರೆಂಟ್ ಬ್ರಿಡ್ಜ್‌ನಲ್ಲಿ ಮೂರನೇ ಟೆಸ್ಟ್: ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ ಟ್ರೆಂಟ್ ಬ್ರಿಡ್ಜ್‌ನಲ್ಲಿ ಮೂರನೇ ಟೆಸ್ಟ್: ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ

ದುಬೈನಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಮತ್ತು ಸಿಇಓ ರಾಹುಲ್ ಜೊಹ್ರಿ ಬಿಸಿಸಿಐ ಪ್ರತಿನಿಧಿಗಳಾಗಿ ಹಾಜರಿದ್ದರು.

ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಅಪ್ಘಾನಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಈ ಟೂರ್ನಿಯಲ್ಲಿ ಸೆಣಸಾಡಲಿವೆ. ಜತೆಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ನಡೆಸುವ ಅರ್ಹತಾ ಸುತ್ತಿನ ಟೂರ್ನಿಯಲ್ಲಿ ವಿಜಯಿ ತಂಡ ಕೂಡ ಈ ಕಪ್‌ನಲ್ಲಿ ಆಡುವ ಅರ್ಹತೆ ಗಿಟ್ಟಿಸಿಕೊಳ್ಳಲಿದೆ.

3ನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ vs ಭಾರತದ ಸಂಭಾವ್ಯ ತಂಡ 3ನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ vs ಭಾರತದ ಸಂಭಾವ್ಯ ತಂಡ

ಸೆಪ್ಟೆಂಬರ್ 15ರಿಂದ 28ರವರೆಗೆ ಅಬುದಾಬಿ ಹಾಗೂ ದುಬೈಗಳಲ್ಲಿ ಟೂರ್ನಿ ನಡೆಯಲಿದೆ.

ಈ ಟೂರ್ನಿಯು ಭಾರತದಲ್ಲಿ ನಡೆಸುವುದಾಗಿ ಮೊದಲು ತೀರ್ಮಾನಿಸಲಾಗಿತ್ತು. ಆದರೆ, ಉಭಯ ದೇಶಗಳ ರಾಜಕೀಯ ಪರಿಸ್ಥಿತಿಯ ಸಮಸ್ಯೆಯ ಕಾರಣ ಪಾಕಿಸ್ತಾನದ ಪಾಲ್ಗೊಳ್ಳುವಿಕೆಯ ಗೊಂದಲ ಎದುರಾಗಿತ್ತು. ಪಾಕಿಸ್ತಾನವನ್ನು ಆಹ್ವಾನಿಸುವ ಉದ್ದೇಶಕ್ಕೆ ಸರ್ಕಾರಿ ಭದ್ರತಾ ಸಂಸ್ಥೆಗಳು ಅಗತ್ಯ ಅನುಮತಿ ನೀಡದ ಕಾರಣ ಬಿಸಿಸಿಐ, ಪಂದ್ಯ ನಡೆಸುವ ಅವಕಾಶವನ್ನು ಯುಎಇಗೆ ಹಸ್ತಾಂತರಿಸುವುದು ಅನಿವಾರ್ಯವಾಯಿತು.

ವರ್ಷದ ಆರಂಭದಲ್ಲಿ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸಲು ಮತ್ತು ಬಿಸಿಸಿಐ ಟೂರ್ನಿಯ ಆತಿಥ್ಯ ವಹಿಸಲು ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ನಿರ್ಧಾರ ಕೈಗೊಂಡಿತ್ತು.

Story first published: Thursday, August 30, 2018, 15:41 [IST]
Other articles published on Aug 30, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X