ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಷ್ಯಾ ಕಪ್: ಭಾರತ-ಬಾಂಗ್ಲಾದೇಶ ಪಂದ್ಯದ ಕುತೂಹಲಕಾರಿ ಅಂಕಿ ಅಂಶಗಳು

ದುಬೈ, ಸೆಪ್ಟೆಂಬರ್ 29: ಬಾಂಗ್ಲಾದೇಶ ನೀಡಿದ ಸುಲಭದ ಗುರಿಯನ್ನು ಕಷ್ಟಪಟ್ಟು ತಲುಪಿದ ಭಾರತ ಏಳನೇ ಬಾರಿಗೆ ಏಷ್ಯಾ ಕಪ್ ಟ್ರೋಫಿಯನ್ನು ಎತ್ತಿಹಿಡಿದಿದೆ.

ಭಾರತ ಅನಾಯಾಸವಾಗಿ ಈ ಗುರಿ ಮುಟ್ಟಲಿದೆ ಎಂದು ಅಭಿಮಾನಿಗಳು ಭಾವಿಸಿದ್ದರು. ಆದರೆ, ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ಪರದಾಡಿದಂತೆಯೇ ಬ್ಯಾಟ್ಸ್‌ಮನ್‌ಗಳು ಬಾಂಗ್ಲಾದೇಶದ ಬೌಲರ್‌ಗಳನ್ನು ಎದುರಿಸಲು ಕಷ್ಟಪಟ್ಟರು.

ಎಡವುತ್ತಲೇ ಸಾಗಿದ ಭಾರತ ತಂಡ, ಮತ್ತೆ ಮುಗ್ಗರಿಸಿದ್ದರೆ ಕಪ್ ಮೊದಲ ಬಾರಿಗೆ ಬಾಂಗ್ಲಾದೇಶದ ಪಾಲಾಗುತ್ತಿತ್ತು. 2016ರಲ್ಲಿ ಟಿ20 ಮಾದರಿಯಲ್ಲಿ ನಡೆದಿದ್ದ ಟೂರ್ನಿಯಲ್ಲಿಯೂ ಭಾರತದ ವಿರುದ್ಧ ಫೈನಲ್‌ನಲ್ಲಿ ಸೆಣಸಿದ್ದ ಬಾಂಗ್ಲಾ ಹುಲಿಗಳು ಮತ್ತೆ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಯಿತು.

ಭಾರತಕ್ಕೆ ಸುಲಭ ಗೆಲುವು ದಕ್ಕದಿದ್ದರೂ, ಅಭಿಮಾನಿಗಳು ಬಯಸುವ ರೋಚಕತೆಯನ್ನು ಮತ್ತೊಮ್ಮೆ ನೀಡುವಲ್ಲಿ ಯಶಸ್ವಿಯಾಯಿತು. ಕೊನೆಯ ಎಸೆತದವರೆಗೂ ಪಂದ್ಯದ ಕೌತುಕವನ್ನು ಉಳಿಸಿಕೊಂಡ ಶ್ರೇಯಸ್ಸು ಬಾಂಗ್ಲಾದೇಶದ ಬೌಲರ್‌ಗಳಿಗೂ ಸಲ್ಲುತ್ತದೆ.

ಭಾರತ vs ಬಾಂಗ್ಲಾ ಮುಖಾಮುಖಿಯಲ್ಲಿ ಸರ್ವಕಾಲಿಕ ಅಧಿಕ ರನ್ ಸರದಾರರು ಭಾರತ vs ಬಾಂಗ್ಲಾ ಮುಖಾಮುಖಿಯಲ್ಲಿ ಸರ್ವಕಾಲಿಕ ಅಧಿಕ ರನ್ ಸರದಾರರು

ಬಾಂಗ್ಲಾದೇಶ ತಂಡ ಒಟ್ಟಾರೆಯಾಗಿ ಗಳಿಸಿದ ರನ್‌ನ ಅರ್ಧಕ್ಕಿಂತಲೂ ಹೆಚ್ಚು ಪಾಲನ್ನು ಆರಂಭಿಕ ಆಟಗಾರ ಲಿಟನ್ ದಾಸ್ ಗಳಿಸಿದ್ದರೆ, ಭಾರತದ ಪರ ಒಂದೂ ಅರ್ಧಶತಕ ದಾಖಲಾಗದೆ ಇರುವುದು ವಿಶೇಷ. ಈ ಪಂದ್ಯ ಮತ್ತು ಏಷ್ಯಾ ಕಪ್ ಟೂರ್ನಿಯ ಕೆಲವು ವಿಶಿಷ್ಟ ದಾಖಲೆಗಳ ಮಾಹಿತಿ ಇಲ್ಲಿದೆ.

ಏಳನೇ ಟ್ರೋಫಿ

ಏಳನೇ ಟ್ರೋಫಿ

ಇದುವರೆಗೆ ನಡೆದಿರುವ 14 ಏಷ್ಯಾ ಕಪ್ ಟೂರ್ನಿಗಳಲ್ಲಿ ಭಾರತಕ್ಕೆ ಇದು ಏಳನೇ ದಿಗ್ವಿಜಯ. ಅಂದರೆ ಏಷ್ಯಾಕಪ್ ಇತಿಹಾಸದಲ್ಲಿ ಅರ್ಧದಷ್ಟು ಕಪ್‌ಗಳು ಭಾರತದ ಪಾಲಾಗಿವೆ. ಇದರಲ್ಲಿ 2016ರಲ್ಲಿ ನಡೆದ ಟಿ20 ಮಾದರಿಯ ಟೂರ್ನಿ ಕೂಡ ಸೇರಿದೆ. ಭಾರತ ಒಟ್ಟು 12 ಬಾರಿ ಫೈನಲ್ ಪ್ರವೇಶಿಸಿದೆ. ಮೂರುಬಾರಿ ರನ್ನರ್ ಅಪ್ ಆಗಿದೆ. ಶ್ರೀಲಂಕಾ ಐದು ಬಾರಿ ಟ್ರೋಫಿ ಗೆದ್ದಿದ್ದರೆ, ಪಾಕಿಸ್ತಾನ ಒಂದು ಬಾರಿ ಗೆದ್ದಿದೆ. ಬಾಂಗ್ಲಾದೇಶ ಸತತ ಎರಡನೆಯ ಬಾರಿಗೆ ರನ್ನರ್‌ ಅಪ್ ಆಗಿದೆ.

ಏಷ್ಯಾ ಕಪ್: ಚೊಚ್ಚಲ ಅಂತಾರಾಷ್ಟ್ರೀಯ ಏಕದಿನ ಶತಕ ಚಚ್ಚಿದ ಲಿಟನ್ ದಾಸ್

ಆರನೇ ಫೈನಲ್

ಆರನೇ ಫೈನಲ್

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಬಳಿಕ ಬಾಂಗ್ಲಾದೇಶ ಪ್ರಮುಖ ಟೂರ್ನಿಗಳಲ್ಲಿ ಆಡಿದ ಆರನೇ ಫೈನಲ್ ಪಂದ್ಯವಿದು. ದುರ್ಬಲ ತಂಡ ಎನಿಸಿಕೊಂಡಿದ್ದ ಬಾಂಗ್ಲಾದೇಶ, ಪ್ರಬಲ ತಂಡಗಳಿಗೂ ಆಘಾತ ನೀಡುವ ಮೂಲಕ ತನ್ನ ಸಾಮರ್ಥ್ಯವನ್ನು ಹಲವು ಬಾರಿ ಸಾಬೀತುಪಡಿಸಿದೆ. ಆದರೆ, ಒಮ್ಮೆಯೂ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿಲ್ಲ.

2009 ಶ್ರೀಲಂಕಾ ವಿರುದ್ಧ- 2 ವಿಕೆಟ್ ಸೋಲು (ತ್ರಿಕೋನ ಸರಣಿ)
2012 ಪಾಕಿಸ್ತಾನ ವಿರುದ್ಧ - 2 ರನ್ ಸೋಲು (ಏಷ್ಯಾ ಕಪ್ ಸರಣಿ)
2016 ಭಾರತ ವಿರುದ್ಧ- 8 ವಿಕೆಟ್ ಸೋಲು (ಏಷ್ಯಾ ಕಪ್)
2018 ಶ್ರೀಲಂಕಾ ವಿರುದ್ಧ- 79 ರನ್ ಸೋಲು (ತ್ರಿಕೋನ ಸರಣಿ)
2018 ಭಾರತ ವಿರುದ್ಧ- 4 ವಿಕೆಟ್ ಸೋಲು (ನಿದಹಾಸ್ ಟ್ರೋಫಿ)
2018 ಭಾರತ ವಿರುದ್ಧ-3 ವಿಕೆಟ್ ಸೋಲು (ಏಷ್ಯಾ ಕಪ್)

ಬಾಂಗ್ಲಾ ವಿರುದ್ಧ ರೋಚಕ ಜಯ, 7ನೇ ಬಾರಿಗೆ ಏಷ್ಯಾಕಪ್ ಎತ್ತಿದ ಭಾರತ!

ಧೋನಿ 800 ಔಟ್

ಧೋನಿ 800 ಔಟ್

ಲಿಟನ್ ದಾಸ್‌ ಅವರನ್ನು ಸ್ಟಂಪ್ ಔಟ್ ಮಾಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 800ನೇ ಬಲಿ ತೆಗೆದುಕೊಂಡರು. ಈ ಸಾಧನೆ ಮಾಡಿದ ಮೂರನೇ ವಿಕೆಟ್ ಕೀಪರ್ ಎನಿಸಿಕೊಂಡರು. ಮಾರ್ಕ್ ಬೌಷರ್ (998) ಮತ್ತು ಆಡಂ ಗಿಲ್‌ಕ್ರಿಸ್ಟ್ (905) ಧೋನಿಗಿಂತ ಮೊದಲ ಎರಡು ಸ್ಥಾನದಲ್ಲಿದ್ದಾರೆ.

ಧೋನಿ ಸಾಧನೆಗಳು:
ಏಕದಿನ
306 ಕ್ಯಾಚ್‌ಗಳು
113 ಸ್ಟಂಪಿಂಗ್ಸ್

ಟೆಸ್ಟ್
256 ಕ್ಯಾಚ್‌ಗಳು
38 ಸ್ಟಂಪಿಂಗ್ಸ್

ಟಿ20
54 ಕ್ಯಾಚ್‌ಗಳು
33 ಸ್ಟಂಪಿಂಗ್ಸ್

ಹರ್ಷ ಭೋಗ್ಲೆ ಆಯ್ಕೆಯ ಏಷ್ಯಾ ಕಪ್ 2018 XIರಲ್ಲಿ ಧೋನಿ ಇಲ್ಲ

ಫೈನಲ್‌ನಲ್ಲಿ ಗರಿಷ್ಠ ಸ್ಕೋರ್

ಫೈನಲ್‌ನಲ್ಲಿ ಗರಿಷ್ಠ ಸ್ಕೋರ್

ಬಾಂಗ್ಲಾದೇಶದ ಪರ ಫೈನಲ್‌ನಲ್ಲಿ ಗರಿಷ್ಠ ವೈಯಕ್ತಿಕ ರನ್ ಬಾರಿಸಿದ ಸಾಧನೆಯನ್ನು ಲಿಟನ್ ದಾಸ್ ಮಾಡಿದರು. ಇದು ಫೈನಲ್‌ನಲ್ಲಿ ಬಾಂಗ್ಲಾದೇಶದ ಕ್ರಿಕೆಟಿಗನೊಬ್ಬರ ಅತ್ಯಧಿಕ ಸ್ಕೋರ್ ಕುಡ ಹೌದು.
121 ರನ್ ಲಿಟನ್ ದಾಸ್ vs ಭಾರತ, 2018 (ಟಿ20)
77 ರನ್ ಶಬ್ಬೀರ್ ಅಹ್ಮದ್ vs ಭಾರತ, 2018 (ಟಿ20)
76 ಮಹಮದುಲ್ಲಾ vs ಶ್ರೀಲಂಕಾ, 2018 (ಏಕದಿನ)
68 ಶಕೀಬ್ ಅಲ್ ಹಸನ್ vs ಪಾಕಿಸ್ತಾನ, 2012 (ಏಕದಿನ)

ಅರ್ಧಶತಕವಿಲ್ಲದೆ ಗೆಲುವು

ಅರ್ಧಶತಕವಿಲ್ಲದೆ ಗೆಲುವು

ಭಾರತದ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಒಂದೂ ವೈಯಕ್ತಿಕ ಅರ್ಧಶತಕ ದಾಖಲಾಗದೆಯೇ ಪಂದ್ಯವೊಂದನ್ನು ಗೆದ್ದಿರುವುದು ಇದೇ ಮೊದಲು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದುವರೆಗೆ ಗೆದ್ದ ಎಲ್ಲ ಏಕದಿನ ಪಂದ್ಯಗಳಲ್ಲಿಯೂ 50+ ವೈಯಕ್ತಿಕ ರನ್‌ ದಾಖಲಾಗಿತ್ತು. ನಾಯಕ ರೋಹಿತ್ ಶರ್ಮಾ ಗಳಿಸಿದ 48 ರನ್‌ಗಳೇ ಭಾರತದ ಪರ ಗರಿಷ್ಠ ವೈಯಕ್ತಿಕ ಮೊತ್ತ ಎನಿಸಿಕೊಂಡಿತು.

ಏಷ್ಯಾಕಪ್‌ ಫೈನಲ್‌ನಲ್ಲಿ ಐದು ಶತಕ

ಏಷ್ಯಾಕಪ್‌ ಫೈನಲ್‌ನಲ್ಲಿ ಐದು ಶತಕ

ಏಷ್ಯಾ ಕಪ್‌ನಲ್ಲಿ ಭಾರತ ಏಳು ಬಾರಿ ಟ್ರೋಫಿ ಗೆದ್ದಿದ್ದರೂ ಒಬ್ಬ ಆಟಗಾರ ಕೂಡ ಫೈನಲ್‌ನಲ್ಲಿ ಶತಕ ಬಾರಿಸಿಲ್ಲ. ಒಟ್ಟು ಏಳು ಶತಕಗಳು ಏಷ್ಯಾಕಪ್ ಫೈನಲ್‌ಗಳಲ್ಲಿ ದಾಖಲಾಗಿವೆ.
125 ರನ್- ಸನತ್ ಜಯಸೂರ್ಯ vs ಭಾರತ, ಕರಾಚಿ (2008)
114* ರನ್- ಫಾವದ್ ಆಲಮ್ vs ಶ್ರೀಲಂಕಾ, ಮೀರ್‌ಪುರ್ (2014)
101 ರನ್- ತಿರಿಮನ್ನೆ vs ಪಾಕಿಸ್ತಾನ, ಮೀರ್‌ಪುರ್ (2014)
100 ರನ್- ಮರ್ವನ್ ಅತ್ತಪಟ್ಟು vs ಪಾಕಿಸ್ತಾನ, ಢಾಕಾ (2000)
121 ರನ್- ಲಿಟನ್ ದಾಸ್ vs ಭಾರತ, ದುಬೈ (2018)

ಭಾರತ ಸೋತಿಲ್ಲ

ಭಾರತ ಸೋತಿಲ್ಲ

2017ರ ಜನವರಿ 1ರಿಂದ ಇಲ್ಲಿಯವರೆಗಿನ ಏಕದಿನ ಪಂದ್ಯಗಳಲ್ಲಿ ಭಾರತವು 200-300 ರನ್ ಗುರಿಯನ್ನು ಬೆನ್ನತ್ತಿದಾಗ ಒಂದೂ ಪಂದ್ಯದಲ್ಲಿ ಸೋಲು ಅನುಭವಿಸಿಲ್ಲ. 15 ಪಂದ್ಯಗಳಲ್ಲಿ 14 ರಲ್ಲಿ ಗೆದ್ದಿದ್ದರೆ, 1 ಪಂದ್ಯ ಟೈ ಆಗಿತ್ತು.

ಮೆಹದಿ ಆರಂಭಿಕ ಬ್ಯಾಟಿಂಗ್-ಬೌಲಿಂಗ್

ಮೆಹದಿ ಆರಂಭಿಕ ಬ್ಯಾಟಿಂಗ್-ಬೌಲಿಂಗ್

ಏಕದಿನ ಕ್ರಿಕೆಟ್‌ನ ಫೈನಲ್‌ನಲ್ಲಿ ಆರಂಭಿಕನಾಗಿ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡನ್ನೂ ನಿರ್ವಹಿಸಿದ ಐದನೇ ಆಟಗಾರ ಎಂಬ ಕೀರ್ತಿಗೆ ಬಾಂಗ್ಲಾದ ಮೆಹದಿ ಹಸನ್ ಪಾತ್ರರಾದರು. ಈ ಸಾಧನೆ ಮಾಡಿದ ಇತರೆ ಆಟಗಾರರು,
ಮನೋಜ್ ಪ್ರಭಾಕರ್, ಭಾರತ (ಮೂರು ಬಾರಿ)
ನೀಲ್ ಜಾನ್ಸನ್, ಜಿಂಬಾಬ್ವೆ
ಕ್ರಿಸ್ ಗೇಲ್, ವೆಸ್ಟ್ ಇಂಡೀಸ್
ಮೊಹಮ್ಮದ್ ಹಫೀಜ್, ಪಾಕಿಸ್ತಾನ

ಫೈನಲ್‌ನಲ್ಲಿ ವೇಗದ ಶತಕ

ಫೈನಲ್‌ನಲ್ಲಿ ವೇಗದ ಶತಕ

2001ರ ಜೂನ್ ಬಳಿಕ ಏಕದಿನ ಫೈನಲ್‌ನಲ್ಲಿ ದಾಖಲಾದ ಏಳನೇ ಅತಿ ವೇಗದ ಶತಕ ಇದು. ಲಿಟನ್ ದಾಸ್ 87 ಎಸೆತಗಳಲ್ಲಿ ತಮ್ಮ ಶತಕ ಪೂರೈಸಿದರು. ಇದು ಭಾರತದ ವಿರುದ್ಧ ಫೈನಲ್‌ನಲ್ಲಿ ದಾಖಲಾದ ಮೂರನೇ ಅತಿ ವೇಗದ ಶತಕ. ಸನತ್ ಜಯಸೂರ್ಯ (79, ಏಷ್ಯಾಕಪ್ 2008) ಮಹೇಲಾ ಜಯವರ್ಧನೆ (84, ವಿಶ್ವಕಪ್ 2011) ಭಾರತದ ವಿರುದ್ಧ ಫೈನಲ್‌ನಲ್ಲಿ ವೇಗದ ಶತಕ ದಾಖಲಿಸಿದ್ದರು.

250ರ ಗಡಿ ದಾಟಿದ ಮೊರ್ತಾಜ

250ರ ಗಡಿ ದಾಟಿದ ಮೊರ್ತಾಜ

ಬಾಂಗ್ಲಾದೇಶದ ನಾಯಕ ಮುಶ್ರಫೆ ಮೊರ್ತಾಜ,ಅಂಬಟಿ ರಾಯುಡು ವಿಕೆಟ್ ಪಡೆಯುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ 250 ವಿಕೆಟ್ ಗಡಿ ತಲುಪಿದರು. ಬಾಂಗ್ಲಾದೇಶದ ಪರ ಈ ಸಾಧನೆ ಮಾಡಿದ ಏಕೈಕ ಬೌಲರ್ ಎಂದೆನಿಸಿಕೊಂಡರು.

ಬ್ಯಾಟಿಂಗ್‌ನಲ್ಲಿ ಧೋನಿ ಕಳಪೆಯಾಟ

ಬ್ಯಾಟಿಂಗ್‌ನಲ್ಲಿ ಧೋನಿ ಕಳಪೆಯಾಟ

ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 2018ರಲ್ಲಿ ತಮ್ಮ ವೃತ್ತಿ ಜೀವನದ ಎರಡನೆಯ ಅತಿ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. 10 ಇನ್ನಿಂಗ್ಸ್‌ಗಳಲ್ಲಿ 28.12ರ ಸರಾಸರಿಯಲ್ಲಿ 225 ರನ್ ಮಾತ್ರ ಅವರು ಕಲೆಹಾಕಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಅವರ ಸ್ಟ್ರೈಕ್ ರೇಟ್ ಗಣನೀಯ ಪ್ರಮಾಣದಲ್ಲಿ ಕುಸಿದಿದ್ದು, 2018ರಲ್ಲಿ ಅವರ ವೃತ್ತಿ ಜೀವನದ ಅತಿ ಕಡಿಮೆ ಸ್ಟ್ರೈಕ್ ರೇಟ್ 67.36 ದಾಖಲಾಗಿದೆ.

Story first published: Saturday, September 29, 2018, 12:38 [IST]
Other articles published on Sep 29, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X