ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಷ್ಯಾ ಕಪ್ 2018: ಭಾರತ vs ಪಾಕಿಸ್ತಾನ ಪಂದ್ಯದ ಆಸಕ್ತಿಕರ ಅಂಕಿ ಅಂಶಗಳು

Asia cup 2018: India vs Pakistan interesting statistics

ದುಬೈ, ಸೆಪ್ಟೆಂಬರ್ 24: ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತ ಸತತ ಎರಡನೆಯ ಬಾರಿಗೆ ಪಾಕಿಸ್ತಾನವನ್ನು ಬಗ್ಗುಬಡಿದಿದೆ.

ಯುಎಇಯನ್ನು ತವರು ನೆಲವನ್ನಾಗಿಸಿಕೊಂಡು ಆಡುತ್ತಿದ್ದ ಪಾಕಿಸ್ತಾನ, ಇತ್ತೀಚೆಗೆ ಅಮೋಘ ಪ್ರದರ್ಶನ ನೀಡಿತ್ತು. ಈ ಗೆಲುವಿನ ಹುಮ್ಮಸ್ಸಿನೊಂದಿಗೇ ಅದು ಏಷ್ಯಾ ಕಪ್‌ನಲ್ಲಿ ಭಾರತವನ್ನು ಸೋಲಿಸುವ ಬಯಕೆ ವ್ಯಕ್ತಪಡಿಸಿತ್ತು.

ಪಾಕಿಸ್ತಾನಕ್ಕೆ ಹೀಗಾ ಬಾರಿಸೋದು?: ಟ್ವಿಟ್ಟರ್‌ನಲ್ಲಿ ಕ್ರಿಕೆಟ್ ಫ್ಯಾನ್ಸ್‌ ಸಂಭ್ರಮ ಪಾಕಿಸ್ತಾನಕ್ಕೆ ಹೀಗಾ ಬಾರಿಸೋದು?: ಟ್ವಿಟ್ಟರ್‌ನಲ್ಲಿ ಕ್ರಿಕೆಟ್ ಫ್ಯಾನ್ಸ್‌ ಸಂಭ್ರಮ

ಹಳೆಯ ಅಂಕಿ ಅಂಶಗಳನ್ನು ನೋಡಿದಾಗ ಏಕದಿನ ಕ್ರಿಕೆಟ್‌ನಲ್ಲಿ ಉಭಯ ತಂಡಗಳ ಮುಖಾಮುಖಿಯಲ್ಲಿ ಪಾಕಿಸ್ತಾನವೇ ಮೇಲುಗೈ ಸಾಧಿಸಿದೆ.

ಕಳೆದ ವರ್ಷ ನಡೆದ ಚಾಂಪಿಯನ್ಸ್ ಟ್ರೋಫಿ ಲೀಗ್ ಪಂದ್ಯದಲ್ಲಿ ಭಾರತ, ಪಾಕಿಸ್ತಾನದ ವಿರುದ್ಧ ಭರ್ಜರಿ ಜಯ ದಾಖಲಿಸಿತ್ತು. ಆದರೆ, ಫೈನಲ್‌ನಲ್ಲಿ ಭಾರತ ಕಳಪೆ ಪ್ರದರ್ಶನ ತೋರಿ ಹೀನಾಯ ಸೋಲು ಅನುಭವಿಸಿದ್ದನ್ನು ಪಾಕ್ ಅಭಿಮಾನಿಗಳು ಈಗಲೂ ಜಪಿಸುತ್ತಿದ್ದಾರೆ.

ಭಾರತದ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆ(ಕ)ದ್ದ ಪಾಕ್ ಪೋರಿ ಭಾರತದ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆ(ಕ)ದ್ದ ಪಾಕ್ ಪೋರಿ

ಪಾಕ್ ಅಭಿಮಾನಿಗಳ ಆರ್ಭಟಕ್ಕೆ ಉತ್ತರ ನೀಡಲು ಭಾರತದ ಅಭಿಮಾನಿಗಳಿಗೆ ಅಸ್ತ್ರ ದೊರೆತಿದೆ. ಅದರ ಜತೆಗೆ ತಾಳೆ ಹಾಕಲು ಹೊಸ ದಾಖಲೆಗಳು ಸಹ ಸೃಷ್ಟಿಯಾಗಿವೆ. ಭಾನುವಾರ ನಡೆದ ಪಂದ್ಯದ ಕೆಲವು ಆಸಕ್ತಿಕರ ಅಂಕಿ ಅಂಶಗಳು ಇಲ್ಲಿವೆ.

ಭಾರತಕ್ಕೆ ದೊಡ್ಡ ಗೆಲುವು (ಚೆಂಡು ಬಾಕಿ ಇರುವಾಗ)

ಭಾರತಕ್ಕೆ ದೊಡ್ಡ ಗೆಲುವು (ಚೆಂಡು ಬಾಕಿ ಇರುವಾಗ)

ಭಾರತವು ಪಾಕಿಸ್ತಾನದ ವಿರುದ್ಧ ಚೇಸಿಂಗ್‌ನಲ್ಲಿ ಅತಿ ಹೆಚ್ಚು ಚೆಂಡುಗಳು ಬಾಕಿ ಇರುವಾಗಲೇ ಗೆದ್ದಿರುವುದು ಇದು ನಾಲ್ಕನೇ ಬಾರಿ. ದೊಡ್ಡ ಗೆಲುವು ಸಹ ಇದೇ ಟೂರ್ನಿಯಲ್ಲಿ ಮೊದಲ ಪಂದ್ಯದಲ್ಲಿ ದಾಖಲಾಗಿತ್ತು.

ಹೀಗೆ ಚೇಸಿಂಗ್‌ನಲ್ಲಿ ಹೆಚ್ಚು ಚೆಂಡುಗಳು ಬಾಕಿ ಇರುವಾಗಲೇ ಪಾಕ್ ವಿರುದ್ಧ ಭಾರತ ಗೆದ್ದ ಕೆಲವು ನಿದರ್ಶನಗಳು..

126, ದುಬೈ, 2018 (ಗುರಿ 163)
105, ಮುಲ್ತಾನ್, 2006 (ಗುರಿ 162)
92, ಟೊರಾಂಟೊ, 1997 (ಗುರಿ 117)
63, ದುಬೈ, 2018 (ಗುರಿ 238)*
53, ಢಾಕಾ, 1998 (ಗುರಿ 213)

ಚಾಹಲ್ ಅರ್ಧಶತಕ

ಚಾಹಲ್ ಅರ್ಧಶತಕ

ಭಾರತದ ಲೆಗ್‌ ಸ್ಪಿನ್ನರ್ ಯಜುವೇಂದ್ರ ಚಾಹಲ್ ವಿಕೆಟ್ ಕಬಳಿಕೆಯಲ್ಲಿ ಅರ್ಧಶತಕ ಪೂರೈಸಿದರು. 30ನೇ ಪಂದ್ಯದಲ್ಲಿ ಅವರು ತಮ್ಮ 50ನೇ ವಿಕೆಟ್ ಪಡೆದುಕೊಂಡರು. ಈ ಸಾಧನೆಯನ್ನು ವೇಗವಾಗಿ ಮಾಡಿದ ಭಾರತದ ಐದನೇ ಬೌಲರ್ ಎನಿಸಿಕೊಂಡರು.

ಭಾರತದ ಪರ ಅಜಿತ್ ಅಗರ್ಕರ್ (23 ಪಂದ್ಯಗಳು), ಕುಲದೀಪ್ ಯಾದವ್ 24), ಜಸ್ ಪ್ರೀತ್ ಬೂಮ್ರಾ (28) ಮತ್ತು ಮಹಮದ್ ಶಮಿ (29) ತ್ವರಿತವಾಗಿ 50 ವಿಕೆಟ್ ಗುರಿ ಮುಟ್ಟಿದ್ದಾರೆ.

ಮಲಿಕ್ ಸರಾಸರಿ

ಮಲಿಕ್ ಸರಾಸರಿ

ಒಂದು ಕಾಲದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದ ಶೋಯೆಬ್ ಮಲಿಕ್, ಬಳಿಕ ಫಾರ್ಮ್ ಕಳೆದುಕೊಂಡು ತಂಡದಿಂದ ಸ್ಥಾನವನ್ನೇ ಕಳೆದುಕೊಂಡಿದ್ದರು. ಆದರೆ, 2015ರ ಮಧ್ಯಭಾಗದಲ್ಲಿ ತಂಡಕ್ಕೆ ಮರಳಿದ ಬಳಿಕ ಅಮೋಘ ಆಟವಾಡುತ್ತಿದ್ದಾರೆ. ಅಲ್ಲಿಂದ ಇದುವರೆಗೆ 49 ಇನ್ನಿಂಗ್ಸ್‌ಗಳಲ್ಲಿ ಮಲಿಕ್, 50.17ರ ಸರಾಸರಿ ಮತ್ತು 96.65 ಸ್ಟ್ರೈಕ್‌ ರೇಟ್‌ನಲ್ಲಿ 1706 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಶತಕ ಮತ್ತು 12 ಅರ್ಧಶತಕಗಳಿವೆ.

ಅತ್ಯಧಿಕ ಆರಂಭಿಕ ಜೊತೆಯಾಟ

ಅತ್ಯಧಿಕ ಆರಂಭಿಕ ಜೊತೆಯಾಟ

ಭಾರತದ ಪರ ರನ್ ಚೇಸಿಂಗ್‌ನಲ್ಲಿ ಮೊದಲ ವಿಕೆಟ್‌ಗೆ ಅತ್ಯಧಿಕ ರನ್ ಕಲೆಹಾಕಿದ ದಾಖಲೆಯನ್ನು ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಸೃಷ್ಟಿಸಿದ್ದಾರೆ. ಆರಂಭಿಕ ಜೋಡಿಯ ಕೆಲವು ದಾಖಲೆಗಳ ವಿವರ ಇಲ್ಲಿದೆ.

210 ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ Vs ಪಾಕಿಸ್ತಾನ, ದುಬೈ, 2018
201* ಗೌತಮ್ ಗಂಭೀರ್-ವೀರೇಂದ್ರ ಸೆಹ್ವಾಗ್ Vs ನ್ಯೂಜಿಲೆಂಡ್, ಹ್ಯಾಮಿಲ್ಟನ್, 2009
197* ಸೌರವ್ ಗಂಗೂಲಿ-ಸಚಿನ್ ತೆಂಡೂಲ್ಕರ್ Vs ಜಿಂಬಾಬ್ವೆ, ಶಾರ್ಜಾ, 1998
196 ಸೌರವ್ ಗಂಗೂಲಿ-ವೀರೇಂದ್ರ ಸೆಹ್ವಾಗ್ Vs ವೆಸ್ಟ್ಇಂಡೀಸ್, ರಾಜ್‌ಕೋಟ್, 2002
192 ಸೌರವ್ ಗಂಗೂಲಿ-ವೀರೇಂದ್ರ ಸೆಹ್ವಾಗ್ Vs ಇಂಗ್ಲೆಂಡ್, ಕೊಲಂಬೋ, 2002

ಮೂರನೇ ದ್ವಿಶತಕ ಜತೆಯಾಟ

ಮೂರನೇ ದ್ವಿಶತಕ ಜತೆಯಾಟ

ಇದು ಪಾಕಿಸ್ತಾನದ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಆರಂಭಿಕ ಆಟಗಾರರು ದಾಖಲಿಸಿದ ಮೂರನೇ ದ್ವಿಶತಕ ಜತೆಯಾಟವಾಗಿದೆ. 2017ರಲ್ಲಿ ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಮತ್ತು ಟ್ರಾವಿಸ್ ಹೆಡ್ ಮೊದಲ ವಿಕೆಟ್‌ಗೆ 284 ರನ್ ಕಲೆಹಾಕಿದ್ದರು. ಶ್ರೀಲಂಕಾದ ಉಪುಲ್ ತರಂಗ ಮತ್ತು ಮಹೇಲ ಜಯವರ್ಧನೆ 2009ರಲ್ಲಿ ದಾಂಬುಲದಲ್ಲಿ ನಡೆದ ಪಂದ್ಯದಲ್ಲಿ 202 ರನ್ ಸೇರಿಸಿದ್ದರು.

ಪಾಕ್ ವಿರುದ್ಧ ಇಬ್ಬರ ಶತಕ

ಪಾಕಿಸ್ತಾನದ ವಿರುದ್ಧ ಒಂದೇ ಪಂದ್ಯದಲ್ಲಿ ಭಾರತದ ಇಬ್ಬರು ಬ್ಯಾಟ್ಸ್‌ಮನ್‌ಗಳು ಶತಕ ಬಾರಿಸಿರುವುದು ಇದು ಮೂರನೇ ನಿದರ್ಶನವಾಗಿದೆ. 1996ರಲ್ಲಿ ಶಾರ್ಜಾದಲ್ಲಿ ನಡೆದ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ (118) ಮತ್ತು ನವಜೋತ್ ಸಿಂಗ್ ಸಿಧು (101), 2005ರಲ್ಲಿ ಕೊಚ್ಚಿಯಲ್ಲಿ ನಡೆದ ಪಂದ್ಯದಲ್ಲಿ ವೀರೇಂದ್ರ ಸೆಹ್ವಾಗ್ (108) ಮತ್ತು ರಾಹುಲ್ ದ್ರಾವಿಡ್ (104) ರನ್ ಗಳಿಸಿದ್ದರು.

ತೆಂಡೂಲ್ಕರ್-ಸಿಧು ಜತೆಯಾಟ

ಧವನ್ ಮತ್ತು ರೋಹಿತ್ ಪೇರಿಸಿದ 210 ರನ್ ಪಾಕಿಸ್ತಾನದ ವಿರುದ್ಧ ಭಾರತದ ಬ್ಯಾಟ್ಸ್‌ಮನ್‌ಗಳ ಎರಡನೆಯ ಗರಿಷ್ಠ ಜತೆಯಾಟವಾಗಿದೆ. 1996ರಲ್ಲಿ ಶಾರ್ಜಾದಲ್ಲಿ ನಡೆದ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ನವಜೋತ್ ಸಿಂಗ್ ಸಿಧು ಎರಡನೆಯ ವಿಕೆಟ್‌ಗೆ 231 ರನ್ ಸೇರಿಸಿದ್ದರು.

1998ರಲ್ಲಿ ಢಾಕಾದಲ್ಲಿ ತೆಂಡೂಲ್ಕರ್ ಮತ್ತು ಗಂಗೂಲಿ 159 ರನ್ ಸೇರಿಸಿದ್ದು, ಪಾಕ್ ವಿರುದ್ಧ ಇದುವರೆಗಿನ ಮೊದಲ ವಿಕೆಟ್‌ನ ಗರಿಷ್ಠ ರನ್ ಜತೆಯಾಟವಾಗಿತ್ತು.

ಚೇಸಿಂಗ್‌ನಲ್ಲಿ ಗರಿಷ್ಠ ರನ್

ಚೇಸಿಂಗ್‌ನಲ್ಲಿ ಗರಿಷ್ಠ ರನ್

ರೋಹಿತ್ ಮತ್ತು ಧವನ್ ಸೇರಿಸಿದ 210 ರನ್ ಚೇಸಿಂಗ್‌ನಲ್ಲಿ ಮೊದಲ ವಿಕೆಟ್‌ಗೆ ಭಾರತದ ಗರಿಷ್ಠ ಜತೆಯಾಟ. ನ್ಯೂಜಿಲೆಂಡ್ ವಿರುದ್ಧ 2009ರಲ್ಲಿ ಗಂಭೀರ್ ಮತ್ತು ಸೆಹ್ವಾಗ್ ಅಜೇಯ 201 ರನ್ ಗಳಿಸಿ ಗೆಲುವಿನ ಗುರಿ ಮುಟ್ಟಿಸಿದ್ದರು. ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಪರ ಆರಂಭಿಕ ಜೋಡಿಯ ನಾಲ್ಕನೆಯ ಗರಿಷ್ಠ ರನ್ ಜತೆಯಾಟವಾಗಿದೆ.

Story first published: Monday, September 24, 2018, 14:42 [IST]
Other articles published on Sep 24, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X