ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಷ್ಯಾ ಕಪ್ 2020 ರದ್ದುಗೊಳಿಸಲಾಗಿದೆ ಎಂದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

Asia Cup 2020 Has Been Cancelled, Says Sourav Ganguly

ಐಪಿಎಲ್ ಹಾಗೂ ಟಿ20 ವಿಶ್ವಕಪ್ ಆಯೋಜನೆಯ ಹಗ್ಗಜಗ್ಗಾಟದ ಮಧ್ಯೆ ಏಷ್ಯಾ ಕಪ್ ಆಯೋಜನೆಯ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಒತ್ತಡವನ್ನು ಹೇರುವ ಪ್ರಯತ್ನ ಮಾಡಿತ್ತು. ಆದರೆ ಈ ಬಾರಿಯ ಏಷ್ಯಾ ಕಪ್ ರದ್ದಾಗಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

ಕೊರೊನಾ ವೈರಸ್‌ನ ಕಾರಣದಿಂದಾಗಿ ಏಷ್ಯಾ ಕಪ್ ಟೂರ್ನಿಯನ್ನು ರದ್ದುಗೊಳಿಸಲಾಗಿದೆ ಎಂದು ಸೌರವ್ ಗಂಗೂಲಿ ಹೇಳಿಕೆ ನೀಡಿದ್ದಾರೆ. ಜುಲೈ 9ರಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸಭೆಯನ್ನು ಕರೆದಿದೆ. ಆದರೆ ಅದಕ್ಕೂ ಮುನ್ನಾದಿನವೇ ಗಂಗೂಲಿ ವಿಕ್ರಾಂತ್ ಗುಪ್ತಾ ಜೊತೆಗೆ ಇನ್ಸ್ಟಾಗ್ರಾಮ್ ಲೈವ್‌ನಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.

ಆಸೀಸ್ ಕೋಚ್ ಟಾಮ್ ಮೂಡಿ ನೆಚ್ಚಿನ ಟಿ20 ‍XIನಲ್ಲಿ ಮೂವರು ಭಾರತೀಯರು!ಆಸೀಸ್ ಕೋಚ್ ಟಾಮ್ ಮೂಡಿ ನೆಚ್ಚಿನ ಟಿ20 ‍XIನಲ್ಲಿ ಮೂವರು ಭಾರತೀಯರು!

ಏಷ್ಯಾ ಕಪ್ 2020 ಆಯೋಜನೆಯನ್ನು ಪಾಕಿಸ್ತಾನ ವಹಿಸಿಕೊಳ್ಳಬೇಕಾಗಿತ್ತು. ಆದರೆ ಪಾಕಿಸ್ತಾನದಲ್ಲಿ ಭಾರತ ಕ್ರಿಕೆಟ್ ತಂಡ ಯಾವುದೇ ಕಾರಣಕ್ಕೂ ಪಾಲ್ಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ ನಂತರ ಶ್ರೀಲಂಕಾದಲ್ಲಿ ಆಯೋಜನೆ ಮಾಡುವ ಬಗ್ಗೆ ನಿರ್ಧಾರವನ್ನು ಕೈಗೊಳ್ಳಲಾಗಿತ್ತು.

ಇದೇ ಸಂದರ್ಭದಲ್ಲಿ ಗಂಗೂಲಿ ಭಾರತದಲ್ಲಿ ಕ್ರಿಕೆಟ್ ಚಟುವಟಿಕೆಯ ಆರಂಭದ ಬಗ್ಗೆ ಇನ್ನೂ ಸ್ಪಷ್ಟತೆಯಿಲ್ಲ ಎಂದು ಹೇಳಿದ್ದಾರೆ. ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗಂಗೂಲಿ ಈ ಬಗ್ಗೆ ಪ್ರತಿಕ್ರಿಯಿಸಿದರು. ಈ ವರ್ಷದ ಫೆಬ್ರವರಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದ ಬಳಿಕ ಯಾವುದೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ.

vದಕ್ಷಿಣ ಆಫ್ರಿಕಾವನ್ನು ಭಾರತ 5-1ರಿಂದ ಸೋಲಿಸಿದ್ದ ಕ್ಷಣ ನೆನೆದ ಫಾ ಡು ಪ್ಲೆಸಿಸ್vದಕ್ಷಿಣ ಆಫ್ರಿಕಾವನ್ನು ಭಾರತ 5-1ರಿಂದ ಸೋಲಿಸಿದ್ದ ಕ್ಷಣ ನೆನೆದ ಫಾ ಡು ಪ್ಲೆಸಿಸ್

ಕೊರೊನಾ ವೈರಸ್ ಬಳಿಕದ ಭಾರತ ಮೊದಲ ಸರಣಿ ಯಾವುದು ಎಂಬ ಬಗ್ಗೆ ಹೇಳುವುದು ಕಷ್ಟವಿದೆ. ನಾವು ನಮ್ಮ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಆದರೆ ಸರ್ಕಾರದ ನಿಯಮಗಳ ಬಗ್ಗೆ ತಿಳಿದುಕೊಳ್ಲದೆ ಹೆಚ್ಚಿನ ಸಿದ್ಧತೆ ಮಾಡಿಕೊಳ್ಳುವಂತಿಲ್ಲ. ಆರೋಗ್ಯದ ವಿಚಾರವಾಗಿರುವುದರಿಂದ ನಮಗೂ ಆತುರವಿಲ್ಲ ಎಂದು ಸೌರವ್ ಗಂಗೂಲಿ ಈ ಲೈವ್ ಸಂವಾದದಲ್ಲಿ ಹೇಳಿಕೊಂಡಿದ್ದಾರೆ

Story first published: Thursday, July 9, 2020, 10:08 [IST]
Other articles published on Jul 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X