ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind vs Pak: ಶೇ. 100ರಷ್ಟು ಗೆಲುವಿನ ದಾಖಲೆ ಹೊಂದಿರುವ 3 ನಾಯಕರು

India vs Pakistan

ಬಹುನಿರೀಕ್ಷಿತ ಏಷ್ಯಾಕಪ್ ಟೂರ್ನಮೆಂಟ್‌ಗೆ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಅಗಸ್ಟ್ 28ರಂದು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕ್‌ ಮುಖಾಮುಖಿಯಾಗುತ್ತಿವೆ. 2021ರ ಟಿ20 ವಿಶ್ವಕಪ್‌ ಬಳಿಕ ಕಣಕ್ಕಿಳಿಯುತ್ತಿರುವ ಉಭಯ ತಂಡಗಳು ಗೆಲುವಿಗಾಗಿ ಕಣ್ಣಿಟ್ಟಿವೆ.

ಗಡಿ ವಿವಾದದಿಂದಾಗಿ ಉಭಯ ರಾಷ್ಟ್ರಗಳು ದ್ವಿಪಕ್ಷೀಯ ಸರಣಿ ಆಡುವುದನ್ನ ಬಿಟ್ಟು ವರ್ಷಗಳೇ ಉರುಳಿ ಹೋಗಿವೆ. ಹೀಗಿರುವಾಗ ಉಭಯ ತಂಡಗಳು ಕೇವಲ ಐಸಿಸಿ ಟೂರ್ನಮೆಂಟ್‌ನಲ್ಲಿ ಮಾತ್ರ ಎದುರಾಗುತ್ತಿದ್ದು, ಅದ್ರ ಜೊತೆಗೆ ಏಷ್ಯಾಕಪ್ ಕೂಡ ಸೇರಿದೆ. 2018ರಲ್ಲಿ ಚಾಂಪಿಯನ್ ಭಾರತವು ನಾಲ್ಕು ವರ್ಷಗಳ ಬಳಿಕ ಏಷ್ಯಾಕಪ್‌ನಲ್ಲಿ ಪಾಕ್‌ ತಂಡವನ್ನ ಎದುರಿಸಲು ಸಜ್ಜಾಗಿದೆ.

ಕಳೆದ 2021ರ ಟಿ20 ವಿಶ್ವಕಪ್ ಮುಖಾಮುಖಿಯಲ್ಲಿ ಮೊದಲ ಬಾರಿಗೆ ಪಾಕಿಸ್ತಾನ ವಿರುದ್ಧ ಸೋಲನ್ನು ಅನುಭವಿಸಿದ ಭಾರತ, ಇತಿಹಾಸದಲ್ಲೇ ಕಾಣದ 10 ವಿಕೆಟ್‌ಗಳಿಂದ ಹೀನಾಯ ಸೋಲು ಕಂಡಿತು. ಇದಷ್ಟೇ ಅಲ್ಲದೆ ಲೀಗ್ ಹಂತದಲ್ಲಿಯೇ ಹೊರಬಿದ್ದಿತು. ಹೀಗೆ ಉಭಯ ತಂಡಗಳ ಮುಖಾಮುಖಯಲ್ಲಿ ಭಾರತವೇ ಹೆಚ್ಚು ಮೇಲುಗೈ ಸಾಧಿಸಿದ್ದರೂ ಸಹ, ಇತಿಹಾಸದಲ್ಲಿ 100 ಪರ್ಸೆಂಟ್ ಗೆದ್ದ ನಾಯರು ಇದ್ದಾರೆ. ಆ ಆಟಗಾರರು ಯಾರು ಎಂಬುದನ್ನ ಈ ಕೆಳಗೆ ತಿಳಿಯಿರಿ.

ಬಾಬರ್ ಅಜಮ್

ಬಾಬರ್ ಅಜಮ್

ಪಾಕಿಸ್ತಾನದ ಹಾಲಿ ನಾಯಕ ಬಾಬರ್ ಅಜಮ್ ಕೂಡ ನೂರರಷ್ಟು ಗೆಲುವಿನ ಒಬ್ಬರು. ಬಾಬರ್ ನಾಯಕತ್ವದಲ್ಲಿ ಪಾಕಿಸ್ತಾನವು ಭಾರತವನ್ನು ಒಮ್ಮೆ ಮಾತ್ರ ಎದುರಿಸಿತು. ಬಾಬರ್ ಭಾರತವನ್ನು ಇತಿಹಾಸದಲ್ಲಿ ಮರೆಯಲಾಗದ ಸೋಲಿಗೆ ತಳ್ಳಿದರು. 2021 ರ ಟಿ 20 ವಿಶ್ವಕಪ್‌ನಲ್ಲಿ ಪಾಕಿಸ್ತಾನವು ಭಾರತವನ್ನು 10 ವಿಕೆಟ್‌ಗಳಿಂದ ಸೋಲಿಸಿತು. ವಿಶ್ವಕಪ್ ಇತಿಹಾಸದಲ್ಲಿ ಭಾರತದ ವಿರುದ್ಧ ಪಾಕಿಸ್ತಾನದ ಮೊದಲ ಜಯ ಇದಾಗಿದೆ. ಇದೇ ತಿಂಗಳ 28ರಂದು ಭಾರತ-ಪಾಕಿಸ್ತಾನ ಪಂದ್ಯ ನಡೆಯಲಿದೆ. ಬಾಬರ್ ನಾಯಕತ್ವದಲ್ಲಿ ಪಾಕಿಸ್ತಾನ, ಭಾರತಕ್ಕೆ ಮತ್ತೆ ಸವಾಲು ಒಡ್ಡಲಿದೆಯೇ ಕಾದು ನೋಡೋಣ.

ಮಹಾರಾಜ ಟ್ರೋಫಿ: 14 ಪಂದ್ಯಗಳ ನಂತರ ಅಂಕಪಟ್ಟಿಯಲ್ಲಿ ಯಾರು ಟಾಪ್? ಯಾರು ಲಾಸ್ಟ್?

ರೋಹಿತ್ ಶರ್ಮಾ

ರೋಹಿತ್ ಶರ್ಮಾ

ಪ್ರಸ್ತುತ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಪಾಕಿಸ್ತಾನದ ವಿರುದ್ಧ ಒಂದೇ ಒಂದು ಪಂದ್ಯವನ್ನು ಸೋತಿಲ್ಲದ ನಾಯಕರೂ ಹೌದು. ಪಾಕಿಸ್ತಾನ ವಿರುದ್ಧ ಎರಡು ಬಾರಿ ಭಾರತವನ್ನು ಮುನ್ನಡೆಸಿದಾಗಲೂ ರೋಹಿತ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದರು. ಕಳೆದ ಏಷ್ಯಾಕಪ್‌ನಲ್ಲಿ ಭಾರತವನ್ನು ಪ್ರಶಸ್ತಿಗೆ ಕೊಂಡೊಯ್ದಿದ್ದ ರೋಹಿತ್‌ಗೆ, ಐಸಿಸಿ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತವನ್ನು ಮುನ್ನಡೆಸುವ ಅವಕಾಶ ಸಿಗಲಿಲ್ಲ. ಈ ವರ್ಷದ ಟಿ20 ವಿಶ್ವಕಪ್ ಮೂಲಕ ಅದು ಸಾಧ್ಯವಾಗಲಿದೆ. ಇದೇ ತಿಂಗಳ 28 ರಂದು ನಡೆಯಲಿರುವ ಭಾರತ-ಪಾಕ್ ಪಂದ್ಯದೊಂದಿಗೆ ಬಾಬರ್ ಅಜಮ್ ಮತ್ತು ರೋಹಿತ್ ಶರ್ಮಾ ಅವರ ಶೇಕಡಾ 100 ಗೆಲುವಿನ ದಾಖಲೆ ಕೊನೆಗೊಳ್ಳುವುದು ಖಚಿತ.

ಇನ್‌ಸ್ಟಾಗ್ರಾಮ್‌ನಲ್ಲಿ ಹಠಾತ್ DP ಬದಲಿಸಿದ ಮಹೇಂದ್ರ ಸಿಂಗ್ ಧೋನಿ: ಅಭಿಮಾನಿಗಳಿಗೆ ಸಪ್ರೈಸ್‌

ಸಲೀಂ ಮಲಿಕ್

ಸಲೀಂ ಮಲಿಕ್

ಪಾಕಿಸ್ತಾನದ ಮಾಜಿ ನಾಯಕ ಸಲೀಂ ಮಲಿಕ್ ಈ ದಾಖಲೆಯನ್ನು ಹೊಂದಿರುವ ಮತ್ತೊಬ್ಬ ಆಟಗಾರ. ಅವರು ಭಾರತದ ವಿರುದ್ಧ ಎರಡು ಬಾರಿ ಪಾಕಿಸ್ತಾನವನ್ನು ಮುನ್ನಡೆಸಿದರು. ಸಲೀಂ ತಂಡಕ್ಕೆ ಎರಡೂ ಪಂದ್ಯಗಳಲ್ಲಿ ಗೆಲುವು ತಂದುಕೊಟ್ಟರು. ಪಾಕಿಸ್ತಾನದ ಯೂನಿಸ್ ಖಾನ್ ಭಾರತದ ವಿರುದ್ಧ 100 ಪ್ರತಿಶತ ಏಕದಿನ ಪಂದ್ಯವನ್ನು ಗೆದ್ದಿದ್ದಾರೆ. ಆದರೆ ಭಾರತದ ವಿರುದ್ಧ ನಾಯಕನಾಗಿ ಯೂನಿಸ್ ಖಾನ್ ಅವರ ಯಶಸ್ಸಿನ ಪ್ರಮಾಣವು ಟೆಸ್ಟ್‌ನಲ್ಲಿ ಶೇಕಡಾ 50 ಕ್ಕಿಂತ ಕಡಿಮೆಯಾಗಿದೆ.

Story first published: Sunday, August 14, 2022, 12:13 [IST]
Other articles published on Aug 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X