ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Asia Cup 2022: ಪಾಕ್ ವಿರುದ್ಧ ಕಳಪೆ ಆಟ ಆಡಿ ಮಕಾಡೆ ಮಲಗಿದ ಭಾರತದ ಮೂವರು ಆಟಗಾರರಿವರು!

Asia Cup 2022: 3 Indian players who flopped against Pakistan

ಬಹುನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಏಷ್ಯಾ ಕಪ್ ಹಣಾಹಣಿ ನಿನ್ನೆಯಷ್ಟೇ ( ಆಗಸ್ಟ್ 28 ) ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಜರುಗಿತು. ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ಪಾಕಿಸ್ತಾನ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಟೀಮ್ ಇಂಡಿಯಾದ ಭುವನೇಶ್ವರ್ ಕುಮಾರ್ ಹಾಗೂ ಹಾರ್ದಿಕ್ ಪಾಂಡ್ಯ ಬಲಿಷ್ಠ ಬೌಲಿಂಗ್ ದಾಳಿಯ ಎದುರು ತತ್ತರಿಸಿತು.

ಇದಪ್ಪಾ ಆತ್ಮವಿಶ್ವಾಸ!: ಕಣ್ಸನ್ನೆಯಲ್ಲೇ 'ನಾನ್ ಇದೀನಲ್ಲಾ' ಎಂದ ಹಾರ್ದಿಕ್: ವೈರಲ್ ಆಯ್ತು ವಿಡಿಯೋಇದಪ್ಪಾ ಆತ್ಮವಿಶ್ವಾಸ!: ಕಣ್ಸನ್ನೆಯಲ್ಲೇ 'ನಾನ್ ಇದೀನಲ್ಲಾ' ಎಂದ ಹಾರ್ದಿಕ್: ವೈರಲ್ ಆಯ್ತು ವಿಡಿಯೋ

19.5 ಓವರ್ ಆಡಿದ ಬಾಬರ್ ಅಜಮ್ ನೇತೃತ್ವದ ಪಾಕಿಸ್ತಾನ ತಂಡ 147 ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಭಾರತ ತಂಡಕ್ಕೆ ಗೆಲ್ಲಲು 148 ರನ್‌ಗಳ ಗುರಿಯನ್ನು ನೀಡಿತು. ಇತ್ತ ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಹಾಗೂ ಹಾರ್ದಿಕ್ ಪಾಂಡ್ಯ ಅವರ ಜವಾಬ್ದಾರಿಯುತ ಆಟದ ನೆರವಿನಿಂದ 19.4 ಓವರ್‌ಗಳಲ್ಲಿ 148 ರನ್ ಕಲೆಹಾಕಿ 5 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿತು.

ಟಿ20 ಮಾದರಿಯ ಅತ್ಯುತ್ತಮ ಆಲ್‌ರೌಂಡರ್: ಹಾರ್ದಿಕ್ ಬಗ್ಗೆ ರವಿ ಶಾಸ್ತ್ರಿ ಹೊಗಳಿಕೆಯ ಸುರಿಮಳೆಟಿ20 ಮಾದರಿಯ ಅತ್ಯುತ್ತಮ ಆಲ್‌ರೌಂಡರ್: ಹಾರ್ದಿಕ್ ಬಗ್ಗೆ ರವಿ ಶಾಸ್ತ್ರಿ ಹೊಗಳಿಕೆಯ ಸುರಿಮಳೆ

ಹೀಗೆ ಈ ಮಹತ್ವದ ಪಂದ್ಯದ ಮೂಲಕ ಭುವನೇಶ್ವರ್ ಕುಮಾರ್, ಹಾರ್ದಿಕ್ ಪಾಂಡ್ಯ ಉತ್ತಮ ಪ್ರದರ್ಶನ ನೀಡಿ ದೊಡ್ಡ ಮಟ್ಟದಲ್ಲಿ ಕಮ್ ಬ್ಯಾಕ್ ಮಾಡಿದರೆ, ವಿರಾಟ್ ಕೊಹ್ಲಿ ಕೂಡ ಒಳ್ಳೆಯ ಕೊಡುಗೆ ನೀಡಿದರು. ಆದರೆ ತಂಡದ ಕೆಲ ಆಟಗಾರರು ಮಾತ್ರ ನೀರಸ ಪ್ರದರ್ಶನ ತೋರಿ ಪಂದ್ಯದಲ್ಲಿ ಮಕಾಡೆ ಮಲಗಿದರು. ಆಟಗಾರರ ಪಟ್ಟಿ ಕೆಳಕಂಡಂತಿದೆ.

3. ಅವೇಶ್ ಖಾನ್

3. ಅವೇಶ್ ಖಾನ್

ಈ ಬಾರಿಯ ಏಷ್ಯಾಕಪ್ ಟೂರ್ನಿಗೆ ಜಸ್ಪ್ರೀತ್ ಬುಮ್ರಾ ಹಾಗೂ ಹರ್ಷಲ್ ಪಟೇಲ್ ಅಲಭ್ಯರಾದ ಕಾರಣ ಅವೇಶ್ ಖಾನ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡರು. ಪಾಕ್ ವಿರುದ್ಧದ ಆಡುವ ಬಳಗದಲ್ಲಿಯೂ ಸಹ ಅವಕಾಶ ಪಡೆದ ಅವೇಶ್ ಖಾನ್ ಪಂದ್ಯದಲ್ಲಿ ಪಡೆದದ್ದು ಮಾತ್ರ ಕೇವಲ ಒಂದು ವಿಕೆಟ್. 2 ಓವರ್ ಬೌಲಿಂಗ್ ಮಾಡಿದ ಅವೇಶ್ ಖಾನ್ 9.5 ಎಕಾನಮಿ ದರದಲ್ಲಿ 19 ರನ್ ನೀಡಿ ದುಬಾರಿಯಾದರು. ಅದರಲ್ಲಿಯೂ ಅವೇಶ್ ಖಾನ್ ಮಾಡಿದ ಪವರ್ ಪ್ಲೇನ ಅಂತಿಮ ಓವರ್‌ನಲ್ಲಿ ಪಾಕ್ ಆಟಗಾರ ಮೊಹಮ್ಮದ್ ರಿಜ್ವಾನ್ 1 ಫೋರ್ ಹಾಗೂ 1 ಸಿಕ್ಸರ್ ಚಚ್ಚಿದರು. ಹೀಗೆ ದುಬಾರಿಯಾದ ಅವೇಶ್ ಖಾನ್ ತಮ್ಮ ಪಾಲಿನ ಎಲ್ಲಾ ಓವರ್ ಬೌಲಿಂಗ್ ಮಾಡುವ ಅವಕಾಶ ಪಡೆದುಕೊಳ್ಳುವಲ್ಲಿ ವಿಫಲರಾದರು.

2. ರೋಹಿತ್ ಶರ್ಮಾ

2. ರೋಹಿತ್ ಶರ್ಮಾ

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಪಾಕಿಸ್ತಾನ ವಿರುದ್ಧದ ಪಂದ್ಯಗಳಲ್ಲಿ ಕಳಪೆ ಅಂಕಿಅಂಶವನ್ನು ಹೊಂದಿದ್ದಾರೆ. ಇನ್ನು ಈ ಪಂದ್ಯದಲ್ಲಿಯೂ ಸಹ ಪಾಕ್ ವಿರುದ್ಧ ಮುಗ್ಗರಿಸಿದ ರೋಹಿತ್ ಶರ್ಮಾ 18 ಎಸೆತಗಳಲ್ಲಿ ಕೇವಲ 12 ರನ್ ಕಲೆ ಹಾಕಿದರು. ಪವರ್ ಪ್ಲೇನಲ್ಲಿ ಕೇವಲ ಒಂದೇ ಒಂದು ಫೋರ್ ಬಾರಿಸಿದ ರೋಹಿತ್ ಶರ್ಮಾ ದೊಡ್ಡ ಹೊಡೆತ ಬಾರಿಸಲು ಹಾಗೂ ನೆಲಕಚ್ಚಿ ನಿಲ್ಲಲು ಪರದಾಡಿದರು. ಹೀಗೆ ರೋಹಿತ್ ಶರ್ಮಾ ಕೂಡ ಈ ಪಂದ್ಯದಲ್ಲಿ ಆಟಗಾರನಾಗಿ ಅಕ್ಷರಶಃ ವಿಫಲರಾದರು.

1. ಕೆಎಲ್ ರಾಹುಲ್

1. ಕೆಎಲ್ ರಾಹುಲ್

ಈ ಪಂದ್ಯದಲ್ಲಿ ಅತಿ ಕೆಟ್ಟ ಪ್ರದರ್ಶನ ನೀಡಿದ ಭಾರತೀಯ ಆಟಗಾರರು ಯಾರು ಎಂದರೆ ಅದು ಕೆಎಲ್ ರಾಹುಲ್. ಹೌದು ಆರಂಭಿಕನಾಗಿ ಕಣಕ್ಕಿಳಿದ ಉಪನಾಯಕ ಕೆಎಲ್ ರಾಹುಲ್ ತಾವು ಎದುರಿಸಿದ ಮೊದಲ ಎಸೆತದಲ್ಲಿಯೇ ನಾಸೀರ್ ಶಾಗೆ ವಿಕೆಟ್ ಒಪ್ಪಿಸುವ ಮೂಲಕ ಗೋಲ್ಡನ್ ಡಕ್ ಔಟ್ ಆದರು. ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಹಲವು ಆಟಗಾರರ ನಡುವೆ ಪೈಪೋಟಿ ಏರ್ಪಟ್ಟ ವೇಳೆಯಲ್ಲಿ ಕೆಎಲ್ ರಾಹುಲ್ ಈ ರೀತಿಯ ಕಳಪೆ ಪ್ರದರ್ಶನ ನೀಡಿರುವುದು ಸದ್ಯ ಮುಂದಿನ ಪಂದ್ಯದಲ್ಲಿ ರಾಹುಲ್ ಸ್ಥಾನಕ್ಕೆ ಅಡ್ಡಿಯನ್ನುಂಟುಮಾಡುವ ಸಾಧ್ಯತೆಗಳಿವೆ.

Story first published: Monday, August 29, 2022, 20:24 [IST]
Other articles published on Aug 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X