ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಷ್ಯಾ ಕಪ್‌ 2022: ದೀರ್ಘಾವಧಿಯಿಂದ ತಂಡದಲ್ಲಿದ್ದವರನ್ನ ಹಿಂದಿಕ್ಕಿ ಸ್ಥಾನ ಪಡೆದ ಅಲ್ಪಾವಧಿ 3 ಆಟಗಾರರು

Team india

ಬಹುನಿರೀಕ್ಷಿತ ಏಷ್ಯಾಕಪ್ 2022ರ ಟೂರ್ನಮೆಂಟ್‌ಗೆ ಸೋಮವಾರ (ಆ.08) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಂಡವನ್ನ ಘೋಷಿಸಿದ್ದು 15 ಸದಸ್ಯರ ತಂಡವನ್ನ ಘೋಷಣೆ ಮಾಡಿದೆ. ತಂಡದಿಂದ ಪ್ರಮುಖ ಬೌಲರ್ ಜಸ್ಪ್ರೀತ್ ಬುಮ್ರಾ, ಹರ್ಷಲ್ ಪಟೇಲ್ ಹೊರಬಿದ್ದಿದ್ದು ಕೆ.ಎಲ್ ರಾಹುಲ್ ಉಪನಾಯಕರಾಗಿ ತಂಡಕ್ಕೆ ಆಯ್ಕೆಯಾಗಿದ್ದಾರೆ.

1984 ರಿಂದ ಈ ಪಂದ್ಯಾವಳಿಯನ್ನು ಆಯೋಜಿಸುತ್ತಿರುವಾಗ, ಇದುವರೆಗೆ ಭಾರತ ತಂಡ ಏಳು ಬಾರಿ ಟ್ರೋಫಿ ಗೆದ್ದಿದೆ. ಶ್ರೀಲಂಕಾ ಐದು ಬಾರಿ ಗೆದ್ದರೆ, ಪಾಕಿಸ್ತಾನ ಎರಡು ಬಾರಿ ಮಾತ್ರ ಗೆದ್ದಿದೆ. ಈ ಬಾರಿ ಮತ್ತೊಮ್ಮೆ ಟ್ರೋಫಿ ಗೆಲುವಿನ ಮೇಲೆ ಭಾರತ ಕಣ್ಣಿಟ್ಟಿದೆ.

ಏಷ್ಯಾದ ತಂಡಗಳಿಗೆ ಪ್ರತಿಷ್ಠಿತ ಟ್ರೋಫಿಯಾಗಿರುವ ಹಿನ್ನಲೆಯಲ್ಲಿ ಬಲಿಷ್ಟ ತಂಡವನ್ನೇ ಟೀಂ ಇಂಡಿಯಾ ಆಯ್ಕೆ ಸಮಿತಿಯು ಕಣಕ್ಕಿಳಿಸಿದೆ. ಆದ್ರೆ ಇದರಲ್ಲಿ ಅಚ್ಚರಿಕೆಯ ಆಯ್ಕೆಯು ಕಂಡುಬಂದಿದೆ. ದೀರ್ಘಾವಧಿಯಿಂದ ಟೀಂ ಇಂಡಿಯಾದಲ್ಲಿದ್ದು, ಟಿ20 ವಿಶ್ವಕಪ್‌ನಲ್ಲಿ ಆಡುವ ಕನಸು ಕಾಣುತ್ತಿದ್ದವರಿಗೆ ಅಚಾನಕ್ ಶಾಕ್ ಆಗಿದೆ. ಇದಕ್ಕಿದ್ದಂತೆ ಮೂವರು ಆಟಗಾರರು ಟೀಂ ಇಂಡಿಯಾ ಟಿ20 ಫಾರ್ಮೆಟ್‌ನಲ್ಲಿ ಕಾಣಿಸಿಕೊಂಡು ಮಿಂಚಿದ ಪರಿಣಾಮ, ಕಾಯುತ್ತಾ ಕುಳಿದಿದ್ದ ಮೂವರಿಗೆ ನಿರಾಸೆಯಾಗಿದೆ. ಆ ಆಟಗಾರರು ಯಾರು? ಯಾರು ಬದಲಿ ಆಟಗಾರರ ಎಂಟ್ರಿಯಾಗಿದೆ ಎಂಬುದನ್ನ ಈ ಕೆಳಗೆ ತಿಳಿಯಿರಿ.

ಸಂಜು ಸ್ಯಾಮ್ಸನ್‌ ಜಾಗದಲ್ಲಿ ದಿನೇಶ್ ಕಾರ್ತಿಕ್

ಸಂಜು ಸ್ಯಾಮ್ಸನ್‌ ಜಾಗದಲ್ಲಿ ದಿನೇಶ್ ಕಾರ್ತಿಕ್

ಟೀಂ ಇಂಡಿಯಾದ ಯುವ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಟೀಂ ಇಂಡಿಯಾದಲ್ಲಿ ಖಾಯಂ ಸ್ಥಾನಗಿಟ್ಟಿಸುವ ಕನಸನ್ನ ಹಲವು ಸಮಯದಿಂದ ಕಾಣುತ್ತಿದ್ದಾರೆ. ಇತ್ತೀಚೆಗೆ ಲಿಮಿಟೆಡ್ ಓವರ್‌ ಕ್ರಿಕೆಟ್‌ನಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಐರ್ಲೆಂಡ್ ವಿರುದ್ಧ ಟಿ20 ಸರಣಿ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಹಾಗೂ ಟಿ20 ಸರಣಿಯಲ್ಲಿ ಅವಕಾಶ ಪಡೆದಿದ್ದ ಸಂಜು ಜಿಂಬಾಬ್ವೆ ಸರಣಿಗೂ ಆಯ್ಕೆಯಾಗಿದ್ದಾರೆ.

ಹೀಗಿರುವಾವ ಸ್ಯಾಮ್ಸನ್ ಸ್ಥಾನಕ್ಕೆ ಹಿರಿಯ ಅನುಭವಿ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಅಡ್ಡಗಾಲಿಟ್ಟಿದ್ದಾರೆ. ತನ್ನ ಪ್ರಚಂಡ ಫಾರ್ಮ್‌ನಲ್ಲಿರುವ ಡಿಕೆ ಐಪಿಎಲ್ 2022ರಿಂದ ಅದ್ಭುತ ಆಟವಾಡುತ್ತಾ ಬಂದಿದ್ದಾರೆ. ಧೋನಿ ನಿವೃತ್ತಿ ಬಳಿಕ ಟೀಂ ಇಂಡಿಯಾದಲ್ಲಿ ಖಾಯಂ ಸ್ಥಾನ ಪಡೆಯಲು ಹೆಣಗಾಡುತ್ತಿರುವ ಸಂಜು ಸ್ಯಾಮ್ಸನ್‌ಗೆ ಏಷ್ಯಾಕಪ್‌ನಲ್ಲಿ ಆಯ್ಕೆಯಾಗದಿರುವುದು ನಿರಾಸೆ ಮೂಡಿಸಿದೆ.

CWG 2022: ಕಂಚಿನ ಪದಕ ಗೆದ್ದ ಪತ್ನಿ ಕುರಿತು ಹೆಮ್ಮೆ ವ್ಯಕ್ತಪಡಿಸಿದ ದಿನೇಶ್ ಕಾರ್ತಿಕ್

ಶ್ರೇಯಸ್ ಅಯ್ಯರ್ ಬದಲು ದೀಪಕ್ ಹೂಡಾ

ಶ್ರೇಯಸ್ ಅಯ್ಯರ್ ಬದಲು ದೀಪಕ್ ಹೂಡಾ

ಟಿ20 ಫಾರ್ಮೆಟ್‌ನಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ಆಲ್‌ರೌಂಡರ್ ದೀಪಕ್ ಹೂಡ ಆಯ್ಕೆಗಾರರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತೀಚೆಗಷ್ಟೇ ಭಾರತದ ತಂಡದಲ್ಲಿ ಇನ್ ಆದ ದೀಪಕ್ ಹೂಡಾ ಬೊಂಬಾಟ್ ಆಟವಾಡುವ ಮೂಲಕ ಚುಟುಕು ಫಾರ್ಮೆಟ್‌ನಲ್ಲಿ ಸತತ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದ್ರು.

ಐರ್ಲೆಂಡ್ ವಿರುದ್ಧ ಟಿ20ಯಲ್ಲಿ ಶತಕ ಸಿಡಿಸಿ ಗಮನಸೆಳೆದ ಹೂಡಾ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಜಾಗವನ್ನ ಆಕ್ರಮಿಸಿಕೊಂಡಿದ್ದಾರೆ. 2017ರಲ್ಲಿ ಟೀಂ ಇಂಡಿಯಾದಲ್ಲಿ ಆಡುವ ಅವಕಾಶ ಪಡೆದ ಅಯ್ಯರ್ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದರು. ಆದ್ರೆ ಐಪಿಎಲ್ 2022ರ ಸೀಸನ್‌ನಲ್ಲಿ ಬ್ಯಾಟಿಂಗ್‌ನಲ್ಲಿ ಮುಗ್ಗರಿಸಿದ ಶ್ರೇಯಸ್‌, ಟೀಂ ಇಂಡಿಯಾದಲ್ಲಿ ಸಿಕ್ಕ ಅವಕಾಶದಲ್ಲಿ ರನ್‌ ಕಲೆಹಾಕುವಲ್ಲಿ ಎಡವಿದ್ದಾರೆ. ಹೀಗಾಗಿ ಅಲ್ಪ ಸಮಯದಲ್ಲಿ ಮಿಂಚಿದ ದೀಪಕ್ ಹೂಡಾ ತಂಡದಲ್ಲಿ ಅವಕಾಶ ಪಡೆಯುವಲ್ಲಿ ಯಶಸ್ವಿಯಾದ್ರು.

ನಾನು ಸೆಲೆಕ್ಟರ್ ಆಗಿದ್ರೆ, ಮೊಹಮ್ಮದ್ ಶಮಿಯನ್ನು ತಂಡಕ್ಕೆ ಆಯ್ಕೆ ಮಾಡುತ್ತಿದ್ದೆ: ಕೃಷ್ಣಮಾಚಾರಿ ಶ್ರೀಕಾಂತ್‌

ಅಕ್ಷರ್ ಪಟೇಲ್ ಬದಲು ರವಿಚಂದ್ರನ್ ಅಶ್ವಿನ್

ಅಕ್ಷರ್ ಪಟೇಲ್ ಬದಲು ರವಿಚಂದ್ರನ್ ಅಶ್ವಿನ್

ಸದ್ಯದ ಫಾರ್ಮ್ ನೋಡಿದರೆ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅಕ್ಷರ್ ಪಟೇಲ್ ಎಷ್ಟು ಚೆನ್ನಾಗಿ ಆಡಬಲ್ಲರು ಎಂದು ಎಲ್ಲರಿಗೂ ತಿಳಿದಿದೆ. ಅವರು ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಸಂಪೂರ್ಣ ಆಟಗಾರರಾಗಿ ಮಿಂಚುತ್ತಾರೆ. ಹೀಗಿರುವಾಗ ಯಾರೂ ಊಹಿಸದ ರೀತಿಯಲ್ಲಿ ಹಿರಿಯ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಟೀಂ ಇಂಡಿಯಾದೊಳಗೆ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಅಶ್ವಿನ್ ಮತ್ತು ಜಡೇಜಾ ಅವರು ಅನುಭವಿ ಸ್ಪಿನ್ನರ್ಸ್‌ ಎಂಬ ಕಾರಣಕ್ಕೆ ಆಯ್ಕೆ ಸಮಿತಿ ಆಯ್ಕೆ ಮಾಡಿರುವುದು ಸ್ಪಷ್ಟವಾಗಿದೆ. ಆದ್ರೆ ಉತ್ತಮ ಫಾರ್ಮ್ ನಲ್ಲಿರುವ ಅಕ್ಷರ್ ಪಟೇಲ್ ಅವರನ್ನು ಸ್ಟ್ಯಾಂಡ್ ಬೈ ಆಗಿ ಇರಿಸಲಾಗಿದೆ. ಅಶ್ವಿನ್ ಬದಲಿಗೆ ಅಕ್ಷರ್ ಪಟೇಲ್ ಅವರನ್ನು ಕಣಕ್ಕಿಳಿಸಿದ್ರೆ ಬ್ಯಾಟಿಂಗ್‌ನಲ್ಲೂ ಮಿಂಚಬಹುದಿತ್ತು. ಆದ್ರೆ ಅಶ್ವಿನ್ ಎಲ್ಲರ ಊಹೆಯನ್ನ ಮೀರಿ ಟಿ20 ವಿಶ್ವಕಪ್‌ನಲ್ಲಿ ಅವಕಾಶ ಪಡೆದರು. ರವೀಂದ್ರ ಜಡೇಜಾ ಎಡಗೈ ಸಾಂಪ್ರದಾಯಿಕ ಸ್ಪಿನ್‌ ಬೌಲರ್ ಆಗಿರುವುದರಿಂದ ಅಕ್ಷರ್ ಪಟೇಲ್‌ಗೆ ಹಿನ್ನಡೆಯಾಗಿದೆ.

ಗೆದ್ದಿದ್ದೇ ತಡ...Rohit Sharma ಕ್ಯಾಪ್ಟನ್ಸ್ ಮೇಲೆ ಕಣ್ಣಿಟ್ಟ Hardik Pandya *Cricket | Oneindia Kannada
ಏಷ್ಯಾಕಪ್ 2022ಕ್ಕೆ ಭಾರತದ ಸ್ಕ್ವಾಡ್‌

ಏಷ್ಯಾಕಪ್ 2022ಕ್ಕೆ ಭಾರತದ ಸ್ಕ್ವಾಡ್‌

ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್

Story first published: Tuesday, August 9, 2022, 17:38 [IST]
Other articles published on Aug 9, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X