ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind vs Pak: ಭಾರತದ ವಿರುದ್ಧ ಅತಿ ಹೆಚ್ಚು ವಿಕೆಟ್ ಪಡೆದಿರುವ 3 ಪಾಕಿಸ್ತಾನದ ಬೌಲರ್ಸ್

India vs Pakistan

ನಾಲ್ಕು ವರ್ಷಗಳ ಬಳಿಕ ನಡೆಯಲಿರುವ ಏಷ್ಯಾಕಪ್ ಟಿ20 ಟೂರ್ನಿಯು ಆಗಸ್ಟ್ 27 ರಿಂದ ಯುಎಇನಲ್ಲಿ ಆರಂಭವಾಗಲಿದೆ. ಶ್ರೀಲಂಕಾದಲ್ಲಿ ನಡೆಯಬೇಕಿದ್ದ ಏಷ್ಯಾ ಕಪ್‌ ಟೂರ್ನಿಯನ್ನು ಲಂಕಾ ಆಯೋಜಿಸಲು ವಿಫಲಗೊಂಡ ಕಾರಣ ಮೆಗಾ ಟೂರ್ನಿಗೆ ಯುಎಇಗೆ ಶಿಫ್ಟ್‌ ಆಗಿದೆ.

ಆಗಸ್ಟ್ 28ರಂದು ದುಬೈನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯವನ್ನ ವೀಕ್ಷಿಸಲು ಇಡೀ ಕ್ರಿಕೆಟ್ ಲೋಕವೇ ಕಾಯುತ್ತಾ ಕುಳಿತಿದ್ದು, 2021ರ ಟಿ20 ವಿಶ್ವಕಪ್‌ ಬಳಿಕ ಉಭಯ ತಂಡಗಳು ಕಣಕ್ಕಿಳಿಯುತ್ತಿವೆ.

ಗ್ರೂಪ್ ಬಿನಲ್ಲಿ ಸ್ಥಾನ ಪಡೆದಿರುವ ಪಾಕಿಸ್ತಾನ ಮತ್ತು ಭಾರತ ತಂಡಗಳ ಜೊತೆಗೆ ಹಾಂಕಾಂಗ್, ಕುವೈತ್, ಸಿಂಗಾಪೂರ್ ಮತ್ತು ಯುಎಇಯಿಂದ ಅರ್ಹತಾ ತಂಡಗಳ ಗುಂಪಿನಲ್ಲಿ ಸ್ಥಾನ ಪಡೆದಿವೆ. ಈಗಾಗಲೇ ಟೀಂ ಇಂಡಿಯಾ ಮತ್ತು ಪಾಕಿಸ್ತಾನ ಏಷ್ಯಾ ಕಪ್‌ 2022 ಟೂರ್ನಿಗೆ ತಂಡವನ್ನು ಘೋಷಣೆ ಮಾಡಿವೆ.

ಏಷ್ಯಾಕಪ್‌ನಲ್ಲಿ ಇದುವರೆಗೂ 14 ಬಾರಿ ಮುಖಾಮುಖಿಯಾಗಿರುವ ಉಭಯ ತಂಡಗಳಲ್ಲಿ ಪಾಕಿಸ್ತಾನ ಐದು ಬಾರಿಯಷ್ಟೇ ಭಾರತದ ಯಶಸ್ವಿಯಾಗಿದ್ದು, ಟೀಂ ಇಂಡಿಯಾ 8 ಬಾರಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಏಷ್ಯಾಕಪ್‌ನಲ್ಲಿ ಪಾಕಿಸ್ತಾನದ ಮೂವರು ಬೌಲರ್‌ಗಳು ಹೆಚ್ಚು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಆ ಬೌಲರ್‌ಗಳು ಯಾರು ಎಂಬುದನ್ನ ಈ ಕೆಳಗೆ ತಿಳಿಸಲಾಗಿದೆ.

ಸಕ್ಲೈನ್ ಮುಷ್ತಾಕ್ 82 ವಿಕೆಟ್‌ಗಳು, 40 ಪಂದ್ಯಗಳು

ಸಕ್ಲೈನ್ ಮುಷ್ತಾಕ್ 82 ವಿಕೆಟ್‌ಗಳು, 40 ಪಂದ್ಯಗಳು

ಪಾಕಿಸ್ತಾನದ ಮಾಜಿ ಸ್ಪಿನ್ನರ್ ಸಕ್ಲೈನ್ ಮುಷ್ತಾಕ್ ಏಷ್ಯಾಕಪ್ ಟೂರ್ನಿಯಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ್ಲಲಿ ಒಬ್ಬಾತ. ದೂಸ್ರಾ ಬೌಲಿಂಗ್ ಮೂಲಕ ಹೆಸರುವಾಸಿಯಾದ ಸಕ್ಲೈನ್‌ ಭಾರತದ ವಿರುದ್ಧ 40 ಪಂದ್ಯಗಳಲ್ಲಿ 82 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

90ರ ದಶಕದಲ್ಲಿ ಮತ್ತು 2000ರ ಆರಂಭದಲ್ಲಿ ಭಾರತದ ವಿರುದ್ಧ ಸತತ ಪಂದ್ಯಗಳನ್ನಾಡಿದ ಸಕ್ಲೈನ್ ಮುಷ್ತಾಕ್‌ ಒಟ್ಟಾರೆ 496 ವಿಕೆಟ್ ಪಡೆಯುವಲ್ಲಿ ಯಶಸ್ಸು ಸಾಧಿಸಿದ್ದು, ಇದರಲ್ಲಿ ಭಾರತದ ವಿರುದ್ಧ 82 ವಿಕೆಟ್ ಪಡೆದಿದ್ದಾರೆ.

ರಿಷಭ್ ಪಂತ್‌ ಪೋಸ್ಟ್‌ಗೆ ತಿರುಗೇಟು ನೀಡಿದ ಊರ್ವಶಿ ರೌಟೇಲಾ: 'ಸಹೋದರ ಅಡ್ವಾಂಟೇಜ್ ತೆಗೆದುಕೊಳ್ಳಬೇಡ' ಎಂದ ಬಾಲಿವುಡ್ ನಟಿ

ವಾಸಿಂ ಅಕ್ರಂ 106 ವಿಕೆಟ್‌ಗಳು, 60 ಪಂದ್ಯಗಳು

ವಾಸಿಂ ಅಕ್ರಂ 106 ವಿಕೆಟ್‌ಗಳು, 60 ಪಂದ್ಯಗಳು

ಪಾಕಿಸ್ತಾನದ ಮಾಜಿ ನಾಯಕ ವಾಸಿಂ ಅಕ್ರಂ ಭಾರತದ ವಿರುದ್ಧ ಅತಿ ಹೆಚ್ಚು ವಿಕೆಟ್ ಪಡೆದ ಪಾಕ್ ಬೌಲರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಅಲಂಕರಿಸಿದ್ದಾರೆ ವಾಸಿಂ ಅಕ್ರಂ 60 ಪಂದ್ಯಗಳಲ್ಲಿ 106 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದ್ರು.

ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವಷ್ಟರಲ್ಲಿ ಅಕ್ರಂ 1000್ಕ್ಕೂ ಅಧಿಕ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದ್ರು. ಇದ್ರಲ್ಲಿ 100ಕ್ಕೂ ಹೆಚ್ಚು ವಿಕೆಟ್‌ಗಳು ಭಾರತದ ವಿರುದ್ಧವೇ ಆಗಿದೆ. ಇವರ ಅವಧಿಯಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್‌ ವಿರುದ್ಧ ಬೌಲಿಂಗ್ ಕಾಳಗ ನೋಡುವುದನ್ನ ಅಭಿಮಾನಿಗಳು ಹೆಚ್ಚು ಇಷ್ಟ ಪಡುತ್ತಿದ್ದರು.

CSA ಟಿ20 ಲೀಗ್: RPSG-ಮಾಲೀಕತ್ವದ ಡರ್ಬನ್ ಫ್ರಾಂಚೈಸ್ ಪರ ಆಡಲಿದ್ದಾರೆ ಕ್ವಿಂಟನ್ ಡಿ ಕಾಕ್, ಹೋಲ್ಡರ್‌

ಇಮ್ರಾನ್ ಖಾನ್ 129 ವಿಕೆಟ್‌ಗಳು, 52 ಪಂದ್ಯಗಳು

ಇಮ್ರಾನ್ ಖಾನ್ 129 ವಿಕೆಟ್‌ಗಳು, 52 ಪಂದ್ಯಗಳು

ಪಾಕಿಸ್ತಾನದ ಮಾಜಿ ಪ್ರಧಾನಿ ಮತ್ತು ಪಾಕ್ ಕ್ರಿಕೆಟ್ ತಂಡದ ಮಾಜಿ ಯಶಸ್ವಿ ನಾಯಕ ಇಮ್ರಾನ್ ಖಾನ್ ಭಾರತದ ವಿರುದ್ಧ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. 52 ಪಂದ್ಯಗಳಲ್ಲಿ 129 ವಿಕೆಟ್ ಪಡೆದಿರುವ ಇಮ್ರಾನ್ ಖಾನ್ 1992ರ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡವನ್ನ ಚಾಂಪಿಯನ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಪಾಕಿಸ್ತಾನದ 22ನೇ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿರುವ ಇಮ್ರಾನ್ ಖಾನ್, ಏಪ್ರಿಲ್ 2018ರಿಂದ ಏಪ್ರಿಲ್ 2022ರವರೆಗೆ ಆಡಳಿತ ನಡೆಸಿದ್ದಾರೆ. ಕ್ರಿಕೆಟ್‌ ವಿಚಾರಕ್ಕೆ ಬಂದ್ರೆ, ಈತ ವಿಶ್ವದ ಆಲ್‌ಟೈಂ ಬೆಸ್ಟ್‌ ಆಲ್‌ರೌಂಡರರ್‌ಗಳಲ್ಲಿ ಒಬ್ಬಾತ.

Story first published: Saturday, August 13, 2022, 14:25 [IST]
Other articles published on Aug 13, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X