ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾಗೆ ಸವಾಲೊಡ್ಡುವ 3 ಪಾಕಿಸ್ತಾನದ ಕ್ರಿಕೆಟಿಗರು

Pakistan

ಏಷ್ಯಾಕಪ್‌ 2022ರ ವೇಳಾಪಟ್ಟಿಯ ಜೊತೆಗೆ ಈಗಾಗಲೇ ಟೀಂ ಇಂಡಿಯಾ 15 ಸದಸ್ಯರನ್ನೊಳಗೊಂಡ ಸ್ಕ್ವಾಡ್ ಕೂಡ ಘೋಷಣೆಯಾಗಿದೆ. ಟೂರ್ನಿಗೆ ಮತ್ತಷ್ಟು ಕಿಕ್ ನೀಡಿರುವ ಭಾರತ-ಪಾಕಿಸ್ತಾನ ಪಂದ್ಯ ನೋಡಲು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

ಆಗಸ್ಟ್ 28ರಂದು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕ್‌ ಮುಖಾಮುಖಿಯಾಗುತ್ತಿವೆ. ದುಬೈನಲ್ಲಿ ನಡೆಯಲಿರುವ ಈ ಪಂದ್ಯವನ್ನ ವೀಕ್ಷಿಸಲು ಇಡೀ ಕ್ರಿಕೆಟ್ ಜಗತ್ತು ಜಾತಕ ಪಕ್ಷಿಯಂತೆ ಕಾದು ಕುಳಿತಿದೆ. ಅದ್ರಲ್ಲೂ ಟೀಂ ಇಂಡಿಯಾ ಕಳೆದ ಟಿ20 ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧ ಅನುಭವಿಸಿದ 10 ವಿಕೆಟ್‌ಗಳ ಹೀನಾಯ ಸೋಲಿಗೆ ಸೇಡು ತೀರಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದೆ.

ಭಾರತದ ಗುರಿ ಒಂದೆಡೆಯಾದ್ರೆ, ಟೀಂ ಇಂಡಿಯಾ ವಿರುದ್ಧ ತನ್ನ ಭರ್ಜರಿ ಪ್ರದರ್ಶನವನ್ನ ಮುಂದುವರಿಸುವ ಯೋಜನೆ ಬಾಬರ್ ಅಜಂ ಪಡೆಗಿದೆ. ಹೀಗಿರುವಾಗ ಭಾರತ ತಂಡಕ್ಕೆ ಹೆಚ್ಚು ಸವಾಲಾಗಬಲ್ಲ ಮೂವರು ಆಟಗಾರರ ಕುರಿತಾಗಿ ಈ ಲೇಖನದಲ್ಲಿ ತಿಳಿಸಲಾಗಿದೆ. ಈ ಕೆಳಗೆ ಓದಿ

ಶಾಹೀನ್ ಅಫ್ರಿದಿ

ಶಾಹೀನ್ ಅಫ್ರಿದಿ

ಟೀಂ ಇಂಡಿಯಾಗೆ ಮೊದಲ ಸವಾಲಾಗಿರೋದು ಎಡಗೈ ಸ್ಟಾರ್ ವೇಗಿ ಶಾಹೀನ್ ಅಫ್ರಿದಿ. ಕಳೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಮೂರು ವಿಕೆಟ್ ಕಬಳಿಸಿ ಭಾರತದ ಪರ ಪ್ರಮುಖ ವಿಕೆಟ್ ಟೇಕರ್ ಎನಿಸಿಕೊಂಡರು. ಶಾಹೀನ್ ಕಳೆದ ಮುಖಾಮುಖಿಯಲ್ಲಿ ರೋಹಿತ್ ಶರ್ಮಾ, ಕೆಎಲ್ ರಾಹುಲ್ ಮತ್ತು ನಾಯಕ ವಿರಾಟ್ ಕೊಹ್ಲಿ ಅವರ ಅಮೂಲ್ಯ ವಿಕೆಟ್ ಪಡೆದರು. ಪಾಕಿಸ್ತಾನವು ಹತ್ತು ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದಿದ್ದರಿಂದ, ಶಾಹಿನ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಕೂಡ ಪಡೆದರು. ಹೊಸ ಚೆಂಡಿನಲ್ಲಿ ಶಾಹೀನ್ ತುಂಬಾ ಅಪಾಯಕಾರಿ. ಚೆಂಡನ್ನು ಆಕರ್ಷಕವಾಗಿ ಸ್ವಿಂಗ್ ಮಾಡುವಲ್ಲಿಯೂ ನಿಪುಣತೆಯಿದೆ.

ಎಡಗೈ ವೇಗಿಗಳ ವಿರುದ್ಧ ಭಾರತದ ದಾಖಲೆ ಚಿಂತಾಜನಕವಾಗಿದೆ. ಇತ್ತೀಚೆಗಷ್ಟೇ ನಡೆದ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವೇಗಿ ಒಬೆದ್ ಮೆಕಾಯ್ ಭಾರತದ ವಿರುದ್ಧ ಆರು ವಿಕೆಟ್ ಕಬಳಿಸಿದ್ದರು. ಇದಕ್ಕೂ ಮುನ್ನ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಎಡಗೈ ವೇಗಿ ರೀಸ್ ಟೋಪ್ಲಿ ಕೂಡ ಆರು ವಿಕೆಟ್‌ಗಳನ್ನು ಕಬಳಿಸಿದ್ದರು.

ಏಷ್ಯಾ ಕಪ್ 2022: ರಿಷಭ್ ಪಂತ್‌ಗೆ ಹೊಸ ಬ್ಯಾಟಿಂಗ್ ಕ್ರಮಾಂಕ ನೀಡಿದ ಶ್ರೀಲಂಕಾ ಮಾಜಿ ನಾಯಕ

ಬಾಬರ್ ಅಜಮ್

ಬಾಬರ್ ಅಜಮ್

ಪಾಕ್ ನಾಯಕ ಮತ್ತು ಪ್ರಸ್ತುತ ವಿಶ್ವ ಕ್ರಿಕೆಟ್‌ನ ಅತ್ಯುತ್ತಮ ಬ್ಯಾಟ್ಸ್‌ಮನ್ ಬಾಬರ್ ಅಜಮ್ ಭಾರತ ಭಯಪಡಬೇಕಾದ ಇನ್ನೊಬ್ಬ ಆಟಗಾರ. ಮೂರೂ ಮಾದರಿಯಲ್ಲಿ ರನ್ ಗಳಿಸಿ ಮುನ್ನಡೆಯುತ್ತಿದ್ದಾರೆ. ಬಾಬರ್ ಅವರ ಆರಂಭಿಕ ಪಾಲುದಾರ ಮೊಹಮ್ಮದ್ ರಿಜ್ವಾನ್ ನಂತರ ಕಳೆದ ವರ್ಷ ಟಿ20 ನಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು.

ಸದ್ಯ ಟಿ20ಯಲ್ಲಿ ವಿಶ್ವದ ನಂಬರ್ ಒನ್ ಬ್ಯಾಟ್ಸ್‌ಮನ್ ಆಗಿದ್ದಾರೆ. ಭಾರತ ವಿರುದ್ಧದ ಕಳೆದ ಟಿ20 ವಿಶ್ವಕಪ್‌ನಲ್ಲಿ ಬಾಬರ್-ರಿಜ್ವಾನ್ ಜೋಡಿ ಪಾಕಿಸ್ತಾನದ 150 ರನ್‌ಗಳ ಗುರಿಯನ್ನು ಒಂದೇ ಒಂದು ವಿಕೆಟ್ ನಷ್ಟವಿಲ್ಲದೆ ಬೆನ್ನಟ್ಟಲು ನೆರವಾದರು. ಜೊತೆಗೆ ಅಂದಿನ ಪಂದ್ಯದಲ್ಲಿ ಇಬ್ಬರೂ ಅರ್ಧಶತಕ ಬಾರಿಸಿದ್ದರು.

Asia Cup 2022: ದಿನೇಶ್ ಕಾರ್ತಿಕ್ ಉತ್ತಮ ಫಿನಿಶರ್ ಆದರೆ, ನಿಜವಾದ ಫಿನಿಶರ್‌ಗಳು ಬೇರೆ; ಕ್ರಿಸ್ ಶ್ರೀಕಾಂತ್

Virat Kohli ತಮ್ಮ ನೂರನೇ ಪಂದ್ಯವನ್ನು Pakistan ವಿರುದ್ಧ ಆಡಲಿದ್ದಾರೆ | *Cricket | OneIndia Kannada
ಮೊಹಮ್ಮದ್ ರಿಜ್ವಾನ್

ಮೊಹಮ್ಮದ್ ರಿಜ್ವಾನ್

ಪಾಕಿಸ್ತಾನದ ಆರಂಭಿಕ ಮತ್ತು ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ ಭಾರತಕ್ಕೆ ಭಯಪಡಬೇಕಾದ ಇನ್ನೊಬ್ಬ ಆಟಗಾರರು. ಈತ ಟಿ20 ಮಾದರಿಯಲ್ಲಿ ರನ್ ಮಶೀನ್ ಆಗಿದ್ದಾರೆ. ರಿಜ್ವಾನ್‌ನನ್ನು ಬೇಗನೆ ಔಟ್‌ ಮಾಡಲು ಸಾಧ್ಯವಾಗದಿದ್ದರೆ ನಂತರದಲ್ಲಿ ತಡೆಯುವುದು ಅಸಾಧ್ಯವಾಗುತ್ತದೆ. ಈತ 2019 ರಿಂದ ಪಾಕಿಸ್ತಾನ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ.

ಕಳೆದ ವರ್ಷ ರಿಜ್ವಾನ್‌ಗೆ ಸ್ಮರಣೀಯವಾಗಿತ್ತು. ಅವರು 26 ಟಿ20 ಇನ್ನಿಂಗ್ಸ್‌ಗಳಿಂದ 73.66 ಸರಾಸರಿಯಲ್ಲಿ 1326 ರನ್ ಗಳಿಸಿದ್ದಾರೆ. ಒಂದು ಕ್ಯಾಲೆಂಡರ್ ವರ್ಷದಲ್ಲಿ ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಬೇರೆ ಯಾವುದೇ ಬ್ಯಾಟ್ಸ್‌ಮನ್ ಇಷ್ಟು ರನ್ ಗಳಿಸಿಲ್ಲ.

30ರ ಹರೆಯದ ರಿಜ್ವಾನ್ ಮುಂಬರುವ ಏಷ್ಯಾಕಪ್‌ನಲ್ಲಿ ಪಾಕಿಸ್ತಾನದ ಬ್ಯಾಟಿಂಗ್‌ನ ಟ್ರಂಪ್ ಕಾರ್ಡ್ ಆಗಲಿದ್ದಾರೆ. ಆದ್ದರಿಂದ, ಪವರ್‌ಪ್ಲೇನಲ್ಲಿಯೇ ಅವರನ್ನು ಔಟ್‌ ಮಾಡದಿದ್ರೆ, ಭಾರತಕ್ಕೆ ತುಂಬಾ ಕಠಿಣವಾಗುತ್ತದೆ.

Story first published: Wednesday, August 10, 2022, 23:05 [IST]
Other articles published on Aug 10, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X