ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ ಏಷ್ಯಾಕಪ್‌ ತಂಡದಲ್ಲಿ ಈ ನಾಲ್ವರು ಇಲ್ಲದಿರುವುದು ಅನ್ಯಾಯ, ತಂಡಕ್ಕೆ ದೊಡ್ಡ ಹೊಡೆತ!

ಏಷ್ಯಾಕಪ್ ಟೂರ್ನಿಗೆ ಪ್ರಕಟವಾದ ಭಾರತ ತಂಡದಲ್ಲಿ ಸ್ಥಾನ ಲಭಿಸದೇ ಮೂಲೆಗುಂಪಾದ ಆ ನಾಲ್ವರು ಅರ್ಹ ಆಟಗಾರರು ಯಾರು ಎಂಬ ಪಟ್ಟಿ ಈ ಕೆಳಕಂಡಂತಿದೆ ಓದಿ..

ಇದೇ ತಿಂಗಳ 27ರಿಂದ ಪ್ರತಿಷ್ಠಿತ ಏಷ್ಯಾಕಪ್ ಟೂರ್ನಿ ಆರಂಭವಾಗಲಿದ್ದು, ಬಿಸಿಸಿಐ ಈಗಾಗಲೇ ಹದಿನೈದು ಆಟಗಾರರ ಭಾರತ ತಂಡವನ್ನು ಪ್ರಕಟಿಸಿದ್ದು, ತಂಡದಲ್ಲಿ ಕೆಲ ಅರ್ಹ ಆಟಗಾರರಿಗೆ ಅವಕಾಶ ಲಭಿಸದೇ ಇರುವುದು ಅಭಿಮಾನಿಗಳಲ್ಲಿ ಹಾಗೂ ಮಾಜಿ ಕ್ರಿಕೆಟಿಗರಲ್ಲಿ ಬೇಸರ ಹಾಗೂ ಅಸಮಾಧಾನವನ್ನು ಉಂಟುಮಾಡಿದೆ. ಇನ್ನು ಈ ತಂಡದಲ್ಲಿ ಟಿ ಟ್ವೆಂಟಿ ಕ್ರಿಕೆಟ್ ಆಡಿ ಉತ್ತಮ ಪ್ರದರ್ಶನ ನೀಡಿರುವ ಆಟಗಾರರಿಗೆ ಅವಕಾಶ ನೀಡುವ ಬದಲು ಇತ್ತೀಚಿನ ದಿನಗಳಲ್ಲಿ ಟಿ ಟ್ವೆಂಟಿ ಕ್ರಿಕೆಟ್ ಮಾದರಿಯಲ್ಲಿ ಕಣಕ್ಕಿಳಿಯದೇ ಇರುವ ಆಟಗಾರರಿಗೆ ಅವಕಾಶ ನೀಡಿರುವುದು ಹೆಚ್ಚಿನ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದೆ ಎನ್ನಬಹುದು.

ಆ ಒಂದು ಕ್ರಮಾಂಕಕ್ಕೆ ಶೀಘ್ರದಲ್ಲೇ ಪರಿಹಾರ ಕಂಡುಕೊಳ್ಳಿ: ಟೀಮ್ ಇಂಡಿಯಾಗೆ ಸಬಾ ಕರೀಮ್ ಸಲಹೆಆ ಒಂದು ಕ್ರಮಾಂಕಕ್ಕೆ ಶೀಘ್ರದಲ್ಲೇ ಪರಿಹಾರ ಕಂಡುಕೊಳ್ಳಿ: ಟೀಮ್ ಇಂಡಿಯಾಗೆ ಸಬಾ ಕರೀಮ್ ಸಲಹೆ

ಅರ್ಹ ಆಟಗಾರರಿಗೆ ತಂಡದಲ್ಲಿ ಸ್ಥಾನ ಸಿಗದಿರುವುದರ ಕುರಿತು ಪ್ರತಿಕ್ರಿಯಿಸುತ್ತಿರುವ ಹಲವು ಮಾಜಿ ಕ್ರಿಕೆಟಿಗರು ಹಾಗೂ ಕ್ರಿಕೆಟ್ ಪ್ರೇಮಿಗಳು ಬಿಸಿಸಿಐನ ಈ ನಡೆಯಿಂದ ಆ ಆಟಗಾರರಿಗೆ ಅನ್ಯಾಯವಾಗಿದೆ ಹಾಗೂ ಟೂರ್ನಿಯಲ್ಲಿ ತಂಡದ ಮೇಲೆ ಇದು ಪ್ರಭಾವವನ್ನು ಬೀರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಹಾಗಿದ್ದರೆ ಏಷ್ಯಾಕಪ್ ಟೂರ್ನಿಗೆ ಪ್ರಕಟವಾದ ಭಾರತ ತಂಡದಲ್ಲಿ ಸ್ಥಾನ ಲಭಿಸದೇ ಮೂಲೆಗುಂಪಾದ ಆ ನಾಲ್ವರು ಅರ್ಹ ಆಟಗಾರರು ಯಾರು ಎಂಬ ಪಟ್ಟಿ ಈ ಕೆಳಕಂಡಂತಿದೆ ಓದಿ..

1. ಮೊಹಮ್ಮದ್ ಶಮಿ

1. ಮೊಹಮ್ಮದ್ ಶಮಿ

ಈ ಬಾರಿಯ ಏಷ್ಯಾಕಪ್ ಟೂರ್ನಿಗೆ ಪ್ರಕಟಿಸಲಾಗಿರುವ ಟೀಮ್ ಇಂಡಿಯಾದಲ್ಲಿ ಮೊಹಮ್ಮದ್ ಶಮಿ ಇಲ್ಲದಿರುವುದು ಆಶ್ಚರ್ಯಕರ ಸಂಗತಿ ಎಂದೇ ಹೇಳಬಹುದು. ಒಂದೆಡೆ ಗಾಯದ ಸಮಸ್ಯೆಯಿಂದಾಗಿ ತಂಡದ ಪ್ರಮುಖ ಬೌಲರ್ ಜಸ್ಪ್ರೀತ್ ಬುಮ್ರಾ ಅಲಭ್ಯರಾಗಿರುವಾಗ ಬಿಸಿಸಿಐ ಅನುಭವಿ ಮೊಹಮ್ಮದ್ ಶಮಿಗೆ ಅವಕಾಶ ನೀಡಬೇಕಿತ್ತು. ಇನ್ನು ಈಗ ಆಯ್ಕೆಯಾಗಿರುವ ಯುವ ವೇಗಿಗಳಾದ ಅರ್ಷ್‌ದೀಪ್ ಸಿಂಗ್ ಮತ್ತು ಅವೇಶ್ ಖಾನ್ ಹೆಚ್ಚೇನು ಅನುಭವವನ್ನು ಹೊಂದಿಲ್ಲದಿರುವುದರಿಂದ ತಂಡಕ್ಕೆ ಶಮಿ ಅವಶ್ಯಕತೆ ಇತ್ತು. ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಪರ ಕಣಕ್ಕಿಳಿದಿದ್ದ ಮೊಹಮ್ಮದ್ ಶಮಿ 16 ಎಸೆತಗಳಲ್ಲಿ 20 ವಿಕೆಟ್ ಪಡೆದು ಟಿ ಟ್ವೆಂಟಿಯಲ್ಲಿ ತಾನು ಇನ್ನೂ ಸಹ ಉತ್ತಮ ಆಟಗಾರ ಎಂಬುದನ್ನು ನಿರೂಪಿಸಿದ್ದರು.

2. ಶಿಖರ್ ಧವನ್

2. ಶಿಖರ್ ಧವನ್

ಟೀಮ್ ಇಂಡಿಯಾ ಪರ ಹಲವು ವರ್ಷಗಳಿಂದ ಉತ್ತಮ ಪ್ರದರ್ಶನ ನೀಡುತ್ತಾ ಬಂದಿರುವ ಶಿಖರ್ ಧವನ್ ಕೂಡ ಈ ಬಾರಿಯ ಏಷ್ಯಾಕಪ್ ಟೂರ್ನಿಗೆ ಪ್ರಕಟವಾದ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಅರ್ಹ ಆಟಗಾರ. ಒಟ್ಟಾರೆ ಎಲ್ಲಾ ಮಾದರಿಯ ಟಿ ಟ್ವೆಂಟಿ ಕ್ರಿಕೆಟ್ ಸೇರಿ 317 ಟಿ ಟ್ವೆಂಟಿ ಪಂದ್ಯಗಳನ್ನಾಡಿ 9000ಕ್ಕೂ ಹೆಚ್ಚು ರನ್ ಕಲೆಹಾಕಿರುವ ಶಿಖರ್ ಧವನ್ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ 14 ಪಂದ್ಯಗಳನ್ನಾಡಿ 460 ರನ್ ಕಲೆಹಾಕಿದ್ದರು. ಹೀಗೆ ಟಿ ಟ್ವೆಂಟಿ ಕ್ರಿಕೆಟ್‌ನಲ್ಲಿ ಉತ್ತಮವಾಗಿರುವ ಶಿಖರ್ ಧವನ್ ಅವರಿಗೆ ತಂಡದಲ್ಲಿ ಸ್ಥಾನ ಸಿಗಬೇಕಿತ್ತು.

3. ಇಶಾನ್ ಕಿಶನ್

3. ಇಶಾನ್ ಕಿಶನ್

ಈಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ನಂತರ ಸಾಕಷ್ಟು ಅಂತರರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯಗಳನ್ನಾಡಿರುವ ಇಶಾನ್ ಕಿಶನ್ ಅವರನ್ನು ಏಷ್ಯಾಕಪ್‌ಗೆ ಆಯ್ಕೆ ಮಾಡದೇ ಇರುವುದು ದೊಡ್ಡ ಆಶ್ಚರ್ಯವೇ ಸರಿ. ಈ ವರ್ಷ ಒಟ್ಟು 14 ಅಂತರರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯಗಳನ್ನಾಡಿ 430 ರನ್ ಕಲೆಹಾಕಿರುವ ಇಶಾನ್ ಕಿಶನ್ ಈ ವರ್ಷ ಟೀಮ್ ಇಂಡಿಯಾ ಪರ ಅತಿಹೆಚ್ಚು ಟಿ ಟ್ವೆಂಟಿ ರನ್ ಬಾರಿಸಿದ ಎರಡನೇ ಆಟಗಾರ ಹಾಗೂ ಈ ವರ್ಷದ ಟಿ ಟ್ವೆಂಟಿ ಕ್ರಿಕೆಟ್‌ ಪಂದ್ಯಗಳ ಪವರ್‌ಪ್ಲೇನಲ್ಲಿ ಅತಿಹೆಚ್ಚು ರನ್ ಕಲೆಹಾಕಿದ ಭಾರತೀಯ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಹೀಗೆ ಉತ್ತಮ ಪ್ರದರ್ಶನ ನೀಡಿದ್ದರೂ ಸಹ ಇಶಾನ್ ಕಿಶನ್‌ಗೆ ಅವಕಾಶ ಸಿಗದೇ ಇರುವುದು ವಿ‍ಷಾದನೀಯವೇ ಸರಿ.

4. ಸಂಜು ಸ್ಯಾಮ್ಸನ್

4. ಸಂಜು ಸ್ಯಾಮ್ಸನ್

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಒಟ್ಟು 138 ಪಂದ್ಯಗಳನ್ನಾಡಿ 3500ಕ್ಕೂ ಹೆಚ್ಚು ರನ್ ಗಳಿಸಿ ಚುಟುಕು ಕ್ರಿಕೆಟ್‌ನಲ್ಲಿ ಅಪಾಯಕಾರಿ ಆಟಗಾರ ಎನಿಸಿಕೊಂಡಿರುವ ಸಂಜು ಸ್ಯಾಮ್ಸನ್ ಇಲ್ಲಿಯವರೆಗೂ 4 ಅಂತರರಾಷ್ಟ್ರೀಯ ಏಕದಿನ ಪಂದ್ಯಗಳು ಹಾಗೂ 16 ಟಿ ಟ್ವೆಂಟಿ ಪಂದ್ಯಗಳನ್ನು ಮಾತ್ರ ಆಡಿದ್ದು ಬಿಟ್ಟರೆ ಬಿಸಿಸಿಐ ಸ್ಯಾಮ್ಸನ್‌ಗೆ ಹೆಚ್ಚಿನ ಅವಕಾಶ ನೀಡಿಲ್ಲ. ಯುಎಇ ನೆಲದಲ್ಲಿ ಉತ್ತಮವಾಗಿ ಬ್ಯಾಟ್ ಬೀಸಬಲ್ಲ ಸಾಮರ್ಥ್ಯವಿರುವ ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡದ ಬಿಸಿಸಿಐ ಎಡವಿದೆ ಎಂಬ ಅಭಿಪ್ರಾಯಗಳೂ ಸಹ ವ್ಯಕ್ತವಾಗಿವೆ.

Story first published: Friday, August 12, 2022, 16:35 [IST]
Other articles published on Aug 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X