ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Asia Cup 2022: 12 ದಿನ ತಡವಾಗಿ ಕೊನೆಗೂ ಏಷ್ಯಾಕಪ್‌ಗೆ 20 ಆಟಗಾರರ ತಂಡ ಪ್ರಕಟಿಸಿದ ಶ್ರೀಲಂಕಾ!

Asia Cup 2022: After 12 days of delay Sri Lanka announced 20 men squad for Asia Cup 2022

ಎಲ್ಲವೂ ಯೋಜನೆಯಂತೆಯೇ ನಡೆದಿದ್ದರೆ ಈ ಬಾರಿಯ ಪ್ರತಿಷ್ಠಿತ ಏಷ್ಯಾಕಪ್ ಟೂರ್ನಿ ಶ್ರೀಲಂಕಾ ನೆಲದಲ್ಲಿ ನಡೆಯಬೇಕಿತ್ತು. ಆದರೆ ಶ್ರೀಲಂಕಾದಲ್ಲಿನ ಆರ್ಥಿಕ ಬಿಕ್ಕಟ್ಟು ಟೂರ್ನಿ ಆಯೋಜನೆಯ ಮೇಲೆ ದುಷ್ಪರಿಣಾಮವನ್ನು ಬೀರಿದ್ದು, ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಟೂರ್ನಿಯನ್ನು ನಡೆಸಲಾಗಲಿಲ್ಲ. ಹೀಗಾಗಿ ಏಷ್ಯಾಕಪ್ ಕೌನ್ಸಿಲ್ ಈ ಬಾರಿಯ ಏಷ್ಯಾಕಪ್ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸಿದ್ದು, ಟೂರ್ನಿ ಇದೇ ತಿಂಗಳ ಅಂತಿಮ ವಾರದಲ್ಲಿ ಆರಂಭವಾಗಲಿದೆ.

ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ 14 ವರ್ಷ ಕಳೆದ ಬಳಿಕ ಸಚಿನ್‌ಗಿಂತ ವಿರಾಟ್ ಕೊಹ್ಲಿ ಎಲ್ಲದರಲ್ಲೂ ಮುಂದು!ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ 14 ವರ್ಷ ಕಳೆದ ಬಳಿಕ ಸಚಿನ್‌ಗಿಂತ ವಿರಾಟ್ ಕೊಹ್ಲಿ ಎಲ್ಲದರಲ್ಲೂ ಮುಂದು!

‌ಆಗಸ್ಟ್ 27ರಂದು ನಡೆಯಲಿರುವ ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ತಂಡಗಳ ನಡುವಿನ ಪಂದ್ಯದ ಮೂಲಕ ಟೂರ್ನಿ ಆರಂಭವಾಗಲಿದ್ದು, ಈ ಟೂರ್ನಿಗೆ ತಂಡಗಳನ್ನು ಪ್ರಕಟಿಸಲು ಆಗಸ್ಟ್ 8 ಕೊನೆಯ ದಿನಾಂಕ ಎಂಬುದನ್ನು ಏಷ್ಯಾಕಪ್ ಕೌನ್ಸಿಲ್ ಘೋಷಣೆ ಮಾಡಿತ್ತು. ಆದರೆ ಶ್ರೀಲಂಕಾ ತನ್ನ ದೇಶದಲ್ಲಿನ ಆರ್ಥಿಕ ಬಿಕ್ಕಟ್ಟಿನ ಸಮಸ್ಯೆಯಿಂದಾಗಿ ಏಷ್ಯಾಕಪ್ ಟೂರ್ನಿಗೆ ತಂಡ ಪ್ರಕಟಿಸುವಲ್ಲಿ ವಿಳಂಬವಾಗಲಿದೆ ಎಂದು ಏಷ್ಯಾಕಪ್ ಕೌನ್ಸಿಲ್ ಬಳಿ ಮನವಿಯನ್ನು ಮಾಡಿಕೊಂಡು ಕಾಲಾವಕಾಶವನ್ನು ಕೇಳಿತ್ತು.

Asia Cup 2022: ಏಷ್ಯಾಕಪ್ ಇತಿಹಾಸದಲ್ಲಿ ಅತಿಹೆಚ್ಚು ಮತ್ತು ಅತಿಕಡಿಮೆ ಮೊತ್ತ ಗಳಿಸಿರುವ ತಂಡಗಳಿವುAsia Cup 2022: ಏಷ್ಯಾಕಪ್ ಇತಿಹಾಸದಲ್ಲಿ ಅತಿಹೆಚ್ಚು ಮತ್ತು ಅತಿಕಡಿಮೆ ಮೊತ್ತ ಗಳಿಸಿರುವ ತಂಡಗಳಿವು

ಇದೀಗ ಹನ್ನೆರಡು ದಿನಗಳು ತಡವಾಗಿ ತನ್ನ ತಂಡವನ್ನು ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಪ್ರಕಟಿಸಿದ್ದು, 20 ಆಟಗಾರರಿಗೆ ಈ ತಂಡದಲ್ಲಿ ಅವಕಾಶ ನೀಡಲಾಗಿದೆ. ತಂಡಕ್ಕೆ ದಸುನ್ ಶನಕ ಅವರ ನಾಯಕತ್ವ ಇರಲಿದ್ದು, ಧನುಷ್ಕಾ ಗುಣತಿಲಕ, ಪತುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್, ವನಿಂದು ಹಸರಂಗ ಹಾಗೂ ಭಾನುಕ ರಾಜಪಕ್ಸೆ ರೀತಿಯ ಉತ್ತಮ ಪ್ರದರ್ಶನ ನೀಡಬಲ್ಲ ಆಟಗಾರರು ತಂಡದಲ್ಲಿದ್ದಾರೆ. ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಪ್ರಕಟಿಸಿರುವ ಆಟಗಾರರ ಸಂಪೂರ್ಣ ಪಟ್ಟಿ ಕೆಳಕಂಡಂತಿದೆ.

ಏಷ್ಯಾಕಪ್ ಟೂರ್ನಿಗೆ ಪ್ರಕಟವಾದ ಶ್ರೀಲಂಕಾ ತಂಡ

ಏಷ್ಯಾಕಪ್ ಟೂರ್ನಿಗೆ ಪ್ರಕಟವಾದ ಶ್ರೀಲಂಕಾ ತಂಡ

ದಾಸುನ್ ಶನಕ (ನಾಯಕ), ಧನುಷ್ಕ ಗುಣತಿಲಕ, ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಚರಿತ್ ಅಸಲಂಕ (ಉಪನಾಯಕ), ಭಾನುಕ ರಾಜಪಕ್ಷ (ವಿಕೆಟ್ ಕೀಪರ್‌), ಅಶೇನ್ ಬಂಡಾರ, ಧನಂಜಯ ಡಿ ಸಿಲ್ವ, ವನಿದು ಹಸರಂಗ, ಮಹೇಶ್ ತೀಕ್ಷಣ, ಜೆಫರಿ ವಂಡರ್ಸೆ, ಪ್ರವೀಣ್ ಜಯವ್ಮ್ರೆಣ್ಣ, ಡಿ. ಚಮೀರ, ಬಿನೂರ ಫೆರ್ನಾಂಡೋ, ಚಾಮಿಕ ಕರುಣಾರತ್ನೆ, ದಿಲ್ಶನ್ ಮಧುಶಂಕ, ಮಥೀಶ ಪತಿರಾನ, ದಿನೇಶ್ ಚಾಂಧಿಮಾಲ್ (ಡಬ್ಲ್ಯುಕೆ), ನುವಾನಿಂದು ಫೆರ್ನಾಂಡೋ, ಕಸುನ್ ರಜಿತ

ಶ್ರೀಲಂಕಾ ಎಷ್ಟು ಬಾರಿ ಏಷ್ಯಾ ಕಪ್ ಗೆದ್ದಿದೆ?

ಶ್ರೀಲಂಕಾ ಎಷ್ಟು ಬಾರಿ ಏಷ್ಯಾ ಕಪ್ ಗೆದ್ದಿದೆ?

1984ರಲ್ಲಿ ಚೊಚ್ಚಲ ಬಾರಿಗೆ ನಡೆದ ಏಷ್ಯಾಕಪ್ ಟೂರ್ನಿ 2018ರ ಆವೃತ್ತಿಯವರೆಗೆ ಒಟ್ಟು 14 ಬಾರಿ ಜರುಗಿದೆ. ಈ ಪೈಕಿ ಟೀಮ್ ಇಂಡಿಯಾ 7 ಬಾರಿ ಟ್ರೋಫಿಯನ್ನು ಗೆಲ್ಲುವುದರ ಮೂಲಕ ಏಷ್ಯಾ ಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಟ್ರೋಫಿ ಎತ್ತಿ ಹಿಡಿದ ತಂಡ ಎನಿಸಿಕೊಂಡಿದ್ದರೆ, 5 ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿರುವ ಶ್ರೀಲಂಕಾ ಅತಿ ಹೆಚ್ಚು ಬಾರಿ ಏಷ್ಯಾ ಕಪ್ ಟ್ರೋಫಿ ಗೆದ್ದಿರುವ ದ್ವಿತೀಯ ತಂಡ ಎನಿಸಿಕೊಂಡಿದೆ.

ಏಷ್ಯಾಕಪ್ ವೇಳಾಪಟ್ಟಿ

ಏಷ್ಯಾಕಪ್ ವೇಳಾಪಟ್ಟಿ

27 ಆಗಸ್ಟ್‌: ಶ್ರೀಲಂಕಾ vs ಅಫ್ಘಾನಿಸ್ತಾನ (ದುಬೈ)
28 ಆಗಸ್ಟ್‌: ಭಾರತ vs ಪಾಕಿಸ್ತಾನ (ದುಬೈ)
30 ಆಗಸ್ಟ್‌: ಬಾಂಗ್ಲಾದೇಶ vs ಅಫ್ಘಾನಿಸ್ತಾನ (ದುಬೈ)
31 ಆಗಸ್ಟ್‌: ಭಾರತ vs ಕ್ವಾಲಿಫೈಯರ್ (ದುಬೈ)
1 ಸೆಪ್ಟೆಂಬರ್: ಶ್ರೀಲಂಕಾ vs ಬಾಂಗ್ಲಾದೇಶ (ದುಬೈ)
2 ಸೆಪ್ಟೆಂಬರ್: ಪಾಕಿಸ್ತಾನ vs ಕ್ವಾಲಿಫೈಯರ್ (ಶಾರ್ಜಾ)
3 ಸೆಪ್ಟೆಂಬರ್: B1 vs B2 (ಶಾರ್ಜಾ)
4 ಸೆಪ್ಟೆಂಬರ್: A1 vs A2 (ದುಬೈ)
6 ಸೆಪ್ಟೆಂಬರ್: A1 vs B1 (ದುಬೈ)
7 ಸೆಪ್ಟೆಂಬರ್: A2 vs B2 (ದುಬೈ)
8 ಸೆಪ್ಟೆಂಬರ್: A1 vs B2 (ದುಬೈ)
9 ಸೆಪ್ಟೆಂಬರ್: B1 vs A2 (ದುಬೈ)
11 ಸೆಪ್ಟೆಂಬರ್: ಫೈನಲ್‌ (ದುಬೈ)

Story first published: Saturday, August 20, 2022, 9:52 [IST]
Other articles published on Aug 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X