ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅವೇಶ್ ಖಾನ್ ಸೇರಿದಂತೆ ಎಲ್ಲರನ್ನೂ ಅರ್ಷ್‌ದೀಪ್‌ ಸಿಂಗ್ ಹಿಂದಿಕ್ಕಿದ್ದಾರೆ: ಸಂಜಯ್ ಮಂಜ್ರೇಕರ್

Arshdeep singh

ಟೀಂ ಇಂಡಿಯಾದ ಯುವ ವೇಗಿ ಸೆನ್ಷೇಷನ್ ಅರ್ಷ್‌ದೀಪ್ ಸಿಂಗ್ ಮುಂಬರುವ ಏಷ್ಯಾಕಪ್‌ ಸ್ಕ್ವಾಡ್‌ನಲ್ಲಿ 15 ಸದಸ್ಯರ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಭುವನೇಶ್ವರ್‌ನಂತಹ ಅನುಭವಿ ವೇಗದ ಬೌಲರ್‌ ಜೊತೆಗೆ ಅವೇಶ್ ಖಾನ್ ಮತ್ತು ಅರ್ಷ್‌ದೀಪ್ ಸಿಂಗ್ ಆಯ್ಕೆಯಾಗಿದ್ದಾರೆ.

ಮಧ್ಯಮ ಓವರ್‌ ಅಷ್ಟೇ ಅಲ್ಲದೆ ಡೆತ್‌ ಓವರ್‌ಗಳಲ್ಲಿ ಉತ್ತಮ ಬೌಲಿಂಗ್ ಕೌಶಲ್ಯ ಹೊಂದಿರುವ ಅರ್ಷ್‌ದೀಪ್ ಈಗಾಗಲೇ ತಂಡದ ಕೋಚ್ ಹಾಗೂ ನಾಯಕನನ್ನು ಮೆಚ್ಚಿಸಿದ್ದಾರೆ. ಅನೇಕ ಕ್ರಿಕೆಟ್ ಪಂಡಿತರು ಈತ ಭವಿಷ್ಯದ ಸೂಪರ್ ಸ್ಟಾರ್ ಎಂದೆಲ್ಲಾ ಹೊಗಳಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಕಳೆದ ಸರಣಿಯ ನಾಲ್ಕನೇ ಟಿ20 ಪಂದ್ಯದಲ್ಲಿ ಬೊಂಬಾಟ್ ಬೌಲಿಂಗ್ ಪ್ರದರ್ಶಿಸಿದ ಅರ್ಷ್‌ದೀಪ್ ಸಿಂಗ್ ಮೂರು ವಿಕೆಟ್‌ಗಳನ್ನ ಉರುಳಿಸಿದ್ರು. ಅದ್ರಲ್ಲೂ ಡೆತ್ ಓವರ್‌ಗಳಲ್ಲಿ ಅದ್ಭುತ ಬೌಲಿಂಗ್ ಮಾಡುವ ಮೂಲಕ ಆಯ್ಕೆಗಾರರನ್ನು ಸಹ ಮೆಚ್ಚಿಸಿದ್ದಾರೆ.

ಅರ್ಷ್‌ದೀಪ್ ಎಲ್ಲರನ್ನೂ ಹಿಂದಿಕ್ಕಿದ್ದಾರೆ ಎಂದ ಸಂಜಯ್ ಮಂಜ್ರೇಕರ್

ಅರ್ಷ್‌ದೀಪ್ ಎಲ್ಲರನ್ನೂ ಹಿಂದಿಕ್ಕಿದ್ದಾರೆ ಎಂದ ಸಂಜಯ್ ಮಂಜ್ರೇಕರ್

ಅರ್ಷ್‌ದೀಪ್ ಸಿಂಗ್ ಆಗಸ್ಟ್‌ 27ರಿಂದ ಆರಂಭಗೊಳ್ಳಲಿರುವ ಏಷ್ಯಾಕಪ್‌ ಸ್ಕ್ವಾಡ್‌ನಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅದ್ರಲ್ಲೂ ಪ್ರಮುಖ ಬೌಲರ್‌ಗಳನ್ನೇ ಹಿಂದಿಕ್ಕಿ ಅರ್ಷ್ದೀಪ್‌ ಈಗ ಮುನ್ನೆಲೆಗೆ ಬಂದಿದ್ದಾರೆ ಎಂದು ಭಾರತದ ಮಾಜಿ ಆಟಗಾರ ಹಾಗೂ ಖ್ಯಾತ ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ ಬೊಟ್ಟು ಮಾಡಿದ್ದಾರೆ.

ಕಳೆದ ಇಂಗ್ಲೆಂಡ್ ಪ್ರವಾಸದಲ್ಲಿ ಪದಾರ್ಪಣೆ ಮಾಡಿದ್ದ ಅರ್ಷದೀಪ್ ಸಿಂಗ್ ಮೊದಲ ಪಂದ್ಯದಲ್ಲಿ ಎರಡು ವಿಕೆಟ್ ಪಡೆದಿದ್ದರು. ಅದರ ನಂತರ, ಆಟಗಾರ ವೆಸ್ಟ್ ಇಂಡೀಸ್ ವಿರುದ್ಧ ಎಲ್ಲಾ ಐದು ಟಿ20 ಗಳಲ್ಲಿ ಆಡಿದರು. ಅರ್ಷದೀಪ್ ಅವರ ಅದ್ಭುತ ಪ್ರದರ್ಶನಕ್ಕಾಗಿ ಸರಣಿ ಶ್ರೇಷ್ಟ ಆಟಗಾರ ಪ್ರಶಸ್ತಿಯನ್ನೂ ಸಹ ಪಡೆದರು.

ಭಾರತ vs ಪಾಕಿಸ್ತಾನ: ಟಿ20 ಸೆಣೆಸಾಟದಲ್ಲಿ ಹೆಚ್ಚು ಗೆದ್ದಿದ್ಯಾರು? ಅಂಕಿಅಂಶಗಳ ಕುತೂಹಲಕರ ಮಾಹಿತಿ

ಅವೇಶ್ ಖಾನ್‌ಗಿಂತಲೂ ಮಿಂಚುತ್ತಿದ್ದಾರೆ ಅರ್ಷ್‌ದೀಪ್ ಸಿಂಗ್‌

ಅವೇಶ್ ಖಾನ್‌ಗಿಂತಲೂ ಮಿಂಚುತ್ತಿದ್ದಾರೆ ಅರ್ಷ್‌ದೀಪ್ ಸಿಂಗ್‌

ಪ್ರಸ್ತುತ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಅರ್ಷ್‌ದೀಪ್ ಸಿಂಗ್ ಅವರು ಅವೇಶ್‌ ಖಾನ್‌ಗಿಂತ ಹೆಚ್ಚಿನ ಅವಕಾಶ ಹೊಂದಿದ್ದಾರೆ ಎಂದು ಸಂಜಯ್ ಮಂಜ್ರೇಕರ್ ಹೇಳಿದ್ದಾರೆ. ಅವರು ಸ್ಪೋರ್ಟ್ಸ್ 18 ರ ಸ್ಪೋರ್ಟ್ಸ್ ಓವರ್ ದಿ ಟಾಪ್ ಶೋನಲ್ಲಿ ಮಾತನಾಡುತ್ತಿದ್ದರು.

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಪಡೆಯಲು ಆಟಗಾರರ ನಡುವೆ ಸ್ಪರ್ಧೆ ತೀವ್ರಗೊಂಡಿದೆ. ಅರ್ಷ್‌ದೀಪ್ ಎಲ್ಲಾ ಯುವ ಬೌಲರ್‌ಗಳಿಗಿಂತಲೂ ಒಂದು ಹೆಜ್ಜೆ ಮುಂದಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ಮಂಜ್ರೇಕರ್ ಹೇಳಿದ್ದಾರೆ.

ಅರ್ಷ್‌ದೀಪ್‌ ಈಗಾಗಲೇ ಅವೇಶ್‌ ಖಾನ್ ಅವರಿಗಿಂತ ಸ್ವಲ್ಪ ಮುನ್ನಡೆ ಸಾಧಿಸಿದ್ದಾರೆ. ಏಕೆಂದರೆ ಅವರು ನಿಜವಾಗಿಯೂ ತಂಡದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಹೊಸ ಚೆಂಡನ್ನು ಬೌಲ್ ಮಾಡಲು ಮತ್ತು ಮಧ್ಯಮ ಮತ್ತು ಡೆತ್ ಓವರ್‌ಗಳಲ್ಲಿ ಉತ್ತಮವಾಗಿ ಬೌಲ್ ಮಾಡಲು ಅರ್ಶ್‌ದೀಪ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸಂಜಯ್ ಮಂಜ್ರೇಕರ್ ಅಭಿಪ್ರಾಯ ಪಟ್ಟಿದ್ದಾರೆ.

ಏಷ್ಯಾಕಪ್ ವೇಳಾಪಟ್ಟಿ

ಏಷ್ಯಾಕಪ್ ವೇಳಾಪಟ್ಟಿ

ಇದೇ ತಿಂಗಳ 27ರಿಂದ ಏಷ್ಯಾಕಪ್ ಪ್ರಾರಂಭಗೊಳ್ಳಲಿದ್ದು, 28ರಂದು ಹಾಲಿ ಚಾಂಪಿಯನ್ ಭಾರತವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನ ಎದುರಿಸಲಿದೆ. ರೋಹಿತ್ ಶರ್ಮಾ ಮತ್ತು ಅವರ ತಂಡ ಮೊದಲ ಸುತ್ತಿನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಕಳೆದ ವರ್ಷ ನಡೆದ ಟಿ20 ವಿಶ್ವಕಪ್‌ನಲ್ಲಿ ಉಭಯ ತಂಡಗಳು ಕೊನೆಯ ಬಾರಿಗೆ ಮುಖಾಮುಖಿಯಾಗಿದ್ದವು. ಅಂದು ಪಾಕಿಸ್ತಾನ ಹತ್ತು ವಿಕೆಟ್‌ಗಳಿಂದ ಭಾರತವನ್ನು ಬೆನ್ನಟ್ಟಿತ್ತು.ಏಷ್ಯಾಕಪ್ 2022: ದಿನಾಂಕ, ಮುಖಾಮುಖಿ, ಆತಿಥ್ಯ ಸ್ಥಳ
27 ಆಗಸ್ಟ್‌: ಶ್ರೀಲಂಕಾ ವರ್ಸಸ್ ಅಫ್ಘಾನಿಸ್ತಾನ (ದುಬೈ)
28 ಆಗಸ್ಟ್‌: ಭಾರತ ವರ್ಸಸ್ ಪಾಕಿಸ್ತಾನ (ದುಬೈ)
30 ಆಗಸ್ಟ್‌: ಬಾಂಗ್ಲಾದೇಶ ವರ್ಸಸ್ ಅಫ್ಘಾನಿಸ್ತಾನ (ದುಬೈ)
31 ಆಗಸ್ಟ್‌: ಭಾರತ ವರ್ಸಸ್ ಕ್ವಾಲಿಫೈಯರ್ (ದುಬೈ)
1 ಸೆಪ್ಟೆಂಬರ್: ಶ್ರೀಲಂಕಾ ವರ್ಸಸ್ ಬಾಂಗ್ಲಾದೇಶ (ದುಬೈ)
2 ಸೆಪ್ಟೆಂಬರ್: ಪಾಕಿಸ್ತಾನ ವರ್ಸಸ್ ಕ್ವಾಲಿಫೈಯರ್ (ಶಾರ್ಜಾ)
3 ಸೆಪ್ಟೆಂಬರ್: B1 vs B2 (ಶಾರ್ಜಾ)
4 ಸೆಪ್ಟೆಂಬರ್: A1 vs A2 (ದುಬೈ)
6 ಸೆಪ್ಟೆಂಬರ್: A1 vs B1 (ದುಬೈ)
7 ಸೆಪ್ಟೆಂಬರ್: A2 vs B2 (ದುಬೈ)
8 ಸೆಪ್ಟೆಂಬರ್: A1 vs B2 (ದುಬೈ)
9 ಸೆಪ್ಟೆಂಬರ್: B1 vs A2 (ದುಬೈ)
11 ಸೆಪ್ಟೆಂಬರ್: ಫೈನಲ್‌ (ದುಬೈ)

ICC T20 Ranking: ನಂ.2 ಸ್ಥಾನ ಉಳಿಸಿಕೊಂಡ ಟೀಂ ಇಂಡಿಯಾ ಸ್ಟಾರ್; ನಂ.1 ಬ್ಯಾಟರ್ ಯಾರು?

ಏಷ್ಯಾಕಪ್‌ ಟೀಂ ಇಂಡಿಯಾ ಸ್ಕ್ವಾಡ್‌

ಏಷ್ಯಾಕಪ್‌ ಟೀಂ ಇಂಡಿಯಾ ಸ್ಕ್ವಾಡ್‌

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ದೀಪಕ್ ಹೂಡಾ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್ ಅಶ್ವಿನ್, ಯುಜವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್ ಮತ್ತು ಅವೇಶ್‌ ಖಾನ್

ಬ್ಯಾಕಪ್ ಆಟಗಾರರು- ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ದೀಪಕ್ ಚಹಾರ್.

Story first published: Wednesday, August 10, 2022, 18:22 [IST]
Other articles published on Aug 10, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X