ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಷ್ಯಾಕಪ್‌ಗೆ ಆರನೇ ತಂಡವಾಗಿ ಹಾಂಗ್‌ಕಾಂಗ್ ಆಯ್ಕೆಯಾದ ನಂತರ ಟೂರ್ನಿಯ ವೇಳಾಪಟ್ಟಿ ಹೇಗಿದೆ?

ಬಹುನಿರೀಕ್ಷಿತ ಏಷ್ಯಾಕಪ್ ಟೂರ್ನಿ ಇದೇ ತಿಂಗಳ 27ರಿಂದ ಆರಂಭವಾಗಲಿದೆ. ಇನ್ನು ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ. ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ತಂಡಗಳು ಭಾಗವಹಿಸುತ್ತಿದ್ದು, ಆರನೇ ತಂಡವು ಕ್ವಾಲಿಫಯರ್ ಸುತ್ತಿನಲ್ಲಿ ಗೆದ್ದು ಆಯ್ಕೆಯಾಗಬೇಕಿತ್ತು. ಕ್ವಾಲಿಫಯರ್ ಸುತ್ತು ಆಗಸ್ಟ್ 20ರಿಂದ 24ರವರೆಗೆ ನಡೆದಿದ್ದು, ಈ ಸುತ್ತಿನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್, ಹಾಂಗ್ ಕಾಂಗ್, ಕುವೈತ್ ಹಾಗೂ ಸಿಂಗಾಪುರ್ ತಂಡಗಳು ಭಾಗವಹಿಸಿದ್ದವು.

ರಾಹುಲ್ - ಅಥಿಯಾ ಶೆಟ್ಟಿ ಮದುವೆ ಫಿಕ್ಸ್: ದಿನಾಂಕದ ಬಗ್ಗೆ ಮುಕ್ತವಾಗಿ ಮಾತನಾಡಿದ ಸುನಿಲ್ ಶೆಟ್ಟಿ!ರಾಹುಲ್ - ಅಥಿಯಾ ಶೆಟ್ಟಿ ಮದುವೆ ಫಿಕ್ಸ್: ದಿನಾಂಕದ ಬಗ್ಗೆ ಮುಕ್ತವಾಗಿ ಮಾತನಾಡಿದ ಸುನಿಲ್ ಶೆಟ್ಟಿ!

ಈ ನಾಲ್ಕೂ ತಂಡಗಳೂ ಸಹ ತಲಾ 3 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದವು ಹಾಗೂ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಳ್ಳಲಿರುವ ತಂಡಕ್ಕೆ ಏಷ್ಯಾಕಪ್‌ಗೆ ಅರ್ಹತೆ ಪಡೆದುಕೊಳ್ಳುವ ಅವಕಾಶವಿತ್ತು. ಹೀಗೆ ಈ ಕ್ವಾಲಿಫಯರ್ ಸುತ್ತಿನಲ್ಲಿ ಆಡಿದ 3 ಪಂದ್ಯಗಳ ಪೈಕಿ ಎಲ್ಲಾ ಪಂದ್ಯಗಳನ್ನೂ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಹಾಂಗ್ ಕಾಂಗ್ ಏಷ್ಯಾಕಪ್ ಪ್ರವೇಶಕ್ಕೆ ಅರ್ಹತೆಯನ್ನು ಗಿಟ್ಟಿಸಿಕೊಂಡಿದೆ.

ಮಹಾರಾಜ ಟ್ರೋಫಿ: 400 ರನ್‌ಗಳ ಹೊಳೆ ಹರಿದ ಪಂದ್ಯ ವೀಕ್ಷಿಸಿ ಖುಷ್ ಆದ ಸಿಂಪಲ್ ಸುನಿಮಹಾರಾಜ ಟ್ರೋಫಿ: 400 ರನ್‌ಗಳ ಹೊಳೆ ಹರಿದ ಪಂದ್ಯ ವೀಕ್ಷಿಸಿ ಖುಷ್ ಆದ ಸಿಂಪಲ್ ಸುನಿ

ಹೀಗೆ ಏಷ್ಯಾಕಪ್ ಪ್ರವೇಶಿಸಿರುವ ಹಾಂಗ್ ಕಾಂಗ್ ಎ ಗುಂಪನ್ನು ಸೇರಿದ್ದು, ಏಷ್ಯಾಕಪ್ ಟೂರ್ನಿಯ ಲೀಗ್ ಹಂತದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ಜತೆ ಹಣಾಹಣಿ ನಡೆಸಲಿದೆ. ಇನ್ನು ಏಷ್ಯಾಕಪ್ ಎ ಗುಂಪಿಗೆ ಇದೀಗ ನೂತನ ಸದಸ್ಯನ ಆಗಮನವಾಗಿದ್ದು ವೇಳಾಪಟ್ಟಿ ಸಂಪೂರ್ಣವಾಗಿದೆ. ಹಾಗಿದ್ದರೆ ಹಾಂಗ್ ಕಾಂಗ್ ಅರ್ಹತೆ ಗಿಟ್ಟಿಸಿಕೊಂಡ ನಂತರ ಈ ಬಾರಿಯ ಏಷ್ಯಾಕಪ್ ಟೂರ್ನಿಯ ಅಂಕಪಟ್ಟಿ ಹೇಗಿದೆ ಮತ್ತು ಭಾರತ ಹಾಗೂ ಹಾಂಗ್ ಕಾಂಗ್ ತಂಡಗಳು ಯಾವಾಗ ಮುಖಾಮುಖಿಯಾಗಲಿವೆ ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ.

ಏಷ್ಯಾಕಪ್ ವೇಳಾಪಟ್ಟಿ

ಏಷ್ಯಾಕಪ್ ವೇಳಾಪಟ್ಟಿ

27 ಆಗಸ್ಟ್‌: ಶ್ರೀಲಂಕಾ ವರ್ಸಸ್ ಅಫ್ಘಾನಿಸ್ತಾನ (ದುಬೈ)

28 ಆಗಸ್ಟ್‌: ಭಾರತ ವರ್ಸಸ್ ಪಾಕಿಸ್ತಾನ (ದುಬೈ)

30 ಆಗಸ್ಟ್‌: ಬಾಂಗ್ಲಾದೇಶ ವರ್ಸಸ್ ಅಫ್ಘಾನಿಸ್ತಾನ (ದುಬೈ)

31 ಆಗಸ್ಟ್‌: ಭಾರತ ವರ್ಸಸ್ ಹಾಂಗ್ ಕಾಂಗ್ (ದುಬೈ)

1 ಸೆಪ್ಟೆಂಬರ್: ಶ್ರೀಲಂಕಾ ವರ್ಸಸ್ ಬಾಂಗ್ಲಾದೇಶ (ದುಬೈ)

2 ಸೆಪ್ಟೆಂಬರ್: ಪಾಕಿಸ್ತಾನ ವರ್ಸಸ್ ಹಾಂಗ್ ಕಾಂಗ್ (ಶಾರ್ಜಾ)

3 ಸೆಪ್ಟೆಂಬರ್: B1 vs B2 (ಶಾರ್ಜಾ)

4 ಸೆಪ್ಟೆಂಬರ್: A1 vs A2 (ದುಬೈ)

6 ಸೆಪ್ಟೆಂಬರ್: A1 vs B1 (ದುಬೈ)

7 ಸೆಪ್ಟೆಂಬರ್: A2 vs B2 (ದುಬೈ)

8 ಸೆಪ್ಟೆಂಬರ್: A1 vs B2 (ದುಬೈ)

9 ಸೆಪ್ಟೆಂಬರ್: B1 vs A2 (ದುಬೈ)

11 ಸೆಪ್ಟೆಂಬರ್: ಫೈನಲ್‌ (ದುಬೈ)

ಗುಂಪುಗಳು ಹೀಗಿವೆ

ಗುಂಪುಗಳು ಹೀಗಿವೆ

ಗುಂಪು ಎ: ಭಾರತ, ಪಾಕಿಸ್ತಾನ ಹಾಗೂ ಹಾಂಗ್ ಕಾಂಗ್

ಗುಂಪು ಬಿ: ಅಫ್ಘಾನಿಸ್ತಾನ, ಶ್ರೀಲಂಕಾ ಹಾಗೂ ಬಾಂಗ್ಲಾದೇಶ

ಹಾಂಗ್ ಕಾಂಗ್ ತಂಡ

ಹಾಂಗ್ ಕಾಂಗ್ ತಂಡ

ಯಾಸಿಮ್ ಮುರ್ತಾಜಾ, ನಿಜಾಕತ್ ಖಾನ್ (ನಾಯಕ), ಬಾಬರ್ ಹಯಾತ್, ಕಿಂಚಿತ್ ಶಾ, ಐಜಾಜ್ ಖಾನ್, ಸ್ಕಾಟ್ ಮೆಕೆಚ್ನಿ ( ವಿಕೆಟ್ ಕೀಪರ್ ), ಜೀಶನ್ ಅಲಿ, ಹರೂನ್ ಅರ್ಷದ್, ಎಹ್ಸಾನ್ ಖಾನ್, ಮೊಹಮ್ಮದ್ ಗಜನ್ಫರ್, ಆಯುಷ್ ಶುಕ್ಲಾ, ವಾಜಿದ್ ಶಾ, ಅಫ್ತಾಬ್ ಹುಸೇನ್, ಧನಂಜಯ್ ರಾವ್, ಧನಂಜಯ್ ರಾವ್ , ಅಹಾನ್ ತ್ರಿವೇದಿ, ಅತೀಕ್ ಇಕ್ಬಾಲ್

ಕ್ವಾಲಿಫಯರ್ ಸುತ್ತು ಸಂಪೂರ್ಣವಾಗಿ ಮುಕ್ತಾಯಗೊಂಡ ನಂತರ ಅಂಕಪಟ್ಟಿ ಹೀಗಿದೆ:

ಹಾಂಗ್‌ಕಾಂಗ್: ಆಡಿದ ಪಂದ್ಯಗಳು 3 , ಗೆಲುವು 3

ಕುವೈತ್: ಆಡಿದ ಪಂದ್ಯಗಳು 3, ಗೆಲುವು 2, ಸೋಲು 1

ಯುಎಇ: ಆಡಿದ ಪಂದ್ಯಗಳು 3, ಗೆಲುವು 1, ಸೋಲು 2

ಸಿಂಗಾಪುರ್: ಆಡಿದ ಪಂದ್ಯಗಳು 3, ಸೋಲು 3

Story first published: Thursday, August 25, 2022, 10:25 [IST]
Other articles published on Aug 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X