ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಷ್ಯಾ ಕಪ್ 2022: 8ನೇ ಪ್ರಶಸ್ತಿ ನಿರೀಕ್ಷೆಯಲ್ಲಿ ರೋಹಿತ್ ಶರ್ಮಾ ಬಳಗ; ಟೀಂ ಇಂಡಿಯಾದ ವಿಶ್ಲೇಷಣೆ

Asia Cup 2022: Can Rohit Sharma Team Win Their 8th Title? SWOT Analysis Of Team India

2022ರ ಏಷ್ಯಾ ಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಭಾರತವು ಒಂದಾಗಿದ್ದು, ಈಗಾಗಲೇ ಟೀಂ ಇಂಡಿಯಾ ಏಳು ಬಾರಿ ಪ್ರಶಸ್ತಿಯನ್ನು ಗೆದ್ದಿದೆ. 2018ರಲ್ಲಿ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಏಷ್ಯಾ ಕಪ್ ರೋಚಕ ಫೈನಲ್‌ನಲ್ಲಿ ಬಾಂಗ್ಲಾದೇಶವನ್ನು ಸೋಲಿಸಿದ ನಂತರ ಮೆನ್ ಇನ್ ಬ್ಲೂ ರೋಹಿತ್ ಶರ್ಮಾ ನಾಯಕತ್ವದಲ್ಲಿ ಗೆದ್ದಿತು.

ಈ ಬಾರಿ ಭಾರತ ತಂಡ ಬೆನ್ನುನೋವಿನ ಕಾರಣದಿಂದ ಹೊರಗುಳಿದಿರುವ ಜಸ್ಪ್ರೀತ್ ಬುಮ್ರಾ ಅವರ ಸೇವೆಯನ್ನು ಹೊಂದಿರುವುದಿಲ್ಲ. ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ವಿರುದ್ಧ ಭಾರತವು ಭಾನುವಾರ, ಆಗಸ್ಟ್ 28ರಂದು ದುಬೈನಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಈ ನಡುವೆ ಬಿಸಿಸಿಐ ಈಗಾಗಲೇ ಟೂರ್ನಿಗೆ ತಂಡವನ್ನು ಪ್ರಕಟಿಸಿದೆ.

ಲೆಜೆಂಡ್ಸ್ ಲೀಗ್ ಕ್ರಿಕೆಟ್: ಇಂಡಿಯಾ ಮಹಾರಾಜಸ್ vs ವರ್ಲ್ಡ್ ಜೈಂಟ್ಸ್ ತಂಡಗಳು; ಪಂದ್ಯದ ದಿನಾಂಕ, ಸ್ಥಳಲೆಜೆಂಡ್ಸ್ ಲೀಗ್ ಕ್ರಿಕೆಟ್: ಇಂಡಿಯಾ ಮಹಾರಾಜಸ್ vs ವರ್ಲ್ಡ್ ಜೈಂಟ್ಸ್ ತಂಡಗಳು; ಪಂದ್ಯದ ದಿನಾಂಕ, ಸ್ಥಳ

ಕಳೆದ ವರ್ಷ ಒಮನ್ ಮತ್ತು ಯುಎಇಯಲ್ಲಿ ನಡೆದ ಟಿ20 ವಿಶ್ವಕಪ್ ನಂತರ ವಿರಾಟ್ ಕೊಹ್ಲಿಯಿಂದ ನಾಯಕತ್ವದ ಅಧಿಕಾರ ವಹಿಸಿಕೊಂಡ ನಂತರ ರೋಹಿತ್ ಶರ್ಮಾ ಟಿ20 ತಂಡವನ್ನು ಅದ್ಭುತವಾಗಿ ಮುನ್ನಡೆಸಿದ್ದಾರೆ. ಭಾರತ ತಮ್ಮ ಎಂಟನೇ ಏಷ್ಯಾ ಕಪ್ ಪ್ರಶಸ್ತಿಯನ್ನು ಗೆದ್ದು ತಮ್ಮ ಏಷ್ಯನ್ ಪ್ರಾಬಲ್ಯವನ್ನು ಮುಂದುವರಿಸಬಹುದೇ? ಎಂಬುದು ಕುತೂಹಲ ಮೂಡಿಸಿದೆ.

ಏಷ್ಯಾ ಕಪ್ 2022ಗಾಗಿ ಭಾರತದ ಸಾಮರ್ಥ್ಯ

ಏಷ್ಯಾ ಕಪ್ 2022ಗಾಗಿ ಭಾರತದ ಸಾಮರ್ಥ್ಯ

ಇತ್ತೀಚಿನ ದಿನಗಳಲ್ಲಿ ಭಾರತದ ಬೌಲಿಂಗ್ ದಾಳಿ ಉತ್ತಮ ಫಾರ್ಮ್‌ನಲ್ಲಿದೆ. ಅವರ ಬಳಗದಲ್ಲಿ ಜಸ್ಪ್ರೀತ್ ಬುಮ್ರಾ ಇಲ್ಲದಿದ್ದರೂ, ಟೀಮ್ ಇಂಡಿಯಾದಲ್ಲಿ ಗುಣಮಟ್ಟದ ಆಟಕ್ಕೇನು ಕೊರತೆಯಿಲ್ಲ. ಅರ್ಷದೀಪ್ ಸಿಂಗ್ ಮತ್ತು ಭುವನೇಶ್ವರ್ ಕುಮಾರ್ ಪವರ್‌ಪ್ಲೇ ಮತ್ತು ಡೆತ್‌ನಲ್ಲಿ ಬೌಲಿಂಗ್‌ಗೆ ಸೂಕ್ತವಾಗಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಅವರು ಹೇಗೆ ಪ್ರದರ್ಶನ ನೀಡಿದರು ನೋಡಿದ್ದೇವೆ. ಅರ್ಷದೀಪ್ ಆಡುವ 11ರ ಬಳಗಕ್ಕೆ ಪ್ರವೇಶಿಸದಿದ್ದರೆ ಅದು ಆಶ್ಚರ್ಯಕರವಾಗಿರುತ್ತದೆ. ರವಿ ಬಿಷ್ಣೋಯ್ ಕೂಡ ತಮಗೆ ಸಿಕ್ಕ ಸೀಮಿತ ಅವಕಾಶಗಳಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದರು. ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಹಾಲ್ ಮತ್ತು ರವೀಂದ್ರ ಜಡೇಜಾ ತಮ್ಮ ನಿಖರತೆಗೆ ಹೆಸರುವಾಸಿಯಾಗಿದ್ದಾರೆ ಮತ್ತು ಬ್ಯಾಟರ್‌ಗಳು ಅವರನ್ನು ದೂರವಿಡುವುದು ಸುಲಭವಲ್ಲ.

ಹಾರ್ದಿಕ್ ಪಾಂಡ್ಯ ಅವರ ಫಾರ್ಮ್

ಹಾರ್ದಿಕ್ ಪಾಂಡ್ಯ ಅವರ ಫಾರ್ಮ್

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022ರಲ್ಲಿ ಹಾರ್ದಿಕ್ ಪಾಂಡ್ಯ ಅವರು ಚೊಚ್ಚಲ ಪ್ರವೇಶ ಪಡೆದ ಗುಜರಾತ್ ಟೈಟನ್ಸ್ ತಂಡವನ್ನು ಚಾಂಪಿಯನ್ ಮಾಡಿದರು. ಹಾರ್ದಿಕ್ ಪಾಂಡ್ಯ ಅವರು ತಮ್ಮ ಆಟದ ಮೇಲೆ ಸಾಕಷ್ಟು ಸುಧಾರಿಸಿದ್ದಾರೆ. ಹಾರ್ದಿಕ್ ಪಾಂಡ್ಯ ಅವರು ಇಂಗ್ಲೆಂಡ್ ವಿರುದ್ಧ ತಮ್ಮ ಚೊಚ್ಚಲ ಟಿ20 ಅರ್ಧಶತಕವನ್ನು ಗಳಿಸಿದರು ಮತ್ತು ವಿಶ್ವಾಸಾರ್ಹ ಶಕ್ತಿಯಾಗಿ ಮಾರ್ಪಟ್ಟಿದ್ದಾರೆ.

ಆದರೆ, ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್‌ಗಿಂತ ಹೆಚ್ಚಾಗಿ ಗಮನ ಸೆಳೆದಿರುವುದು ಅವರ ಬೌಲಿಂಗ್‌. ಐಪಿಎಲ್ ಫೈನಲ್‌ನಲ್ಲಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಗೆದ್ದ ನಂತರ, ಅವರು ಇಂಗ್ಲಿಷ್ ನೆಲದಲ್ಲಿ ಎರಡು ಸಲ ನಾಲ್ಕು ವಿಕೆಟ್‌ಗಳನ್ನು ಪಡೆದರು. ವೆಸ್ಟ್ ಇಂಡೀಸ್‌ನಲ್ಲಿ ಆಡಿದ ನಾಲ್ಕು ಟಿ20 ಪಂದ್ಯಗಳಲ್ಲಿ ಹಾರ್ದಿಕ್ ಪಾಂಡ್ಯ ಕಳಪೆ ಆಟವನ್ನು ಆಡಿಲ್ಲ.

ಅವೇಶ್ ಖಾನ್ ಸಾಕಷ್ಟು ಸ್ಥಿರತೆ ತೋರುತ್ತಿಲ್ಲ

ಅವೇಶ್ ಖಾನ್ ಸಾಕಷ್ಟು ಸ್ಥಿರತೆ ತೋರುತ್ತಿಲ್ಲ

ದೆಹಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಪರ ಅವೇಶ್ ಖಾನ್ ಅತ್ಯುತ್ತಮ ಪ್ರದರ್ಶನ ನೀಡಿದರು. ಅವೇಶ್ ಖಾನ್ ಮ್ಯಾಜಿಕ್ ಬೌಲಿಂಗ್ ಹಿನ್ನೆಲೆಯಲ್ಲಿ ಅವರು ಭಾರತ ತಂಡದಲ್ಲಿ ಸ್ಥಿರವಾದ ಅವಕಾಶಗಳನ್ನು ಪಡೆದಿದ್ದಾರೆ. ಆದಾಗ್ಯೂ, ಅವೇಶ್ ಖಾನ್ ಇನ್ನೂ ಸಂಪೂರ್ಣ ಸ್ಥಿರತೆಯನ್ನು ತೋರಿಸಬೇಕಾಗಿದೆ.

ಇಂಗ್ಲೆಂಡ್ ಪ್ರವಾಸದಲ್ಲಿ ಅವೇಶ್ ಖಾನ್ ದುಬಾರಿಯಾಗಿದ್ದರು, ನಂತರ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ20 ಪಂದ್ಯದ ಸಮಯದಲ್ಲಿ ಅಂತಿಮ ಓವರ್‌ನಲ್ಲಿ 10 ರನ್‌ಗಳನ್ನು ರಕ್ಷಿಸಲು ವಿಫಲರಾದರು. ಆದಾಗ್ಯೂ, ಕೆರಿಬಿಯನ್ ಘಟಕದ ವಿರುದ್ಧ ನಾಲ್ಕನೇ ಟಿ20 ಪಂದ್ಯದಲ್ಲಿ ಅವರು ಒಂದೆರಡು ವಿಕೆಟ್‌ಗಳನ್ನು ಪಡೆದಿದ್ದಾರೆ ಎಂಬ ಅಂಶದಿಂದ ಅವರನ್ನು ಆಯ್ಕೆಗೆ ಪರಿಗಣಿಸಲಾಗಿದೆ.

ಈ ಆಟಗಾರನಿಗೆ ಅವಕಾಶ

ಈ ಆಟಗಾರನಿಗೆ ಅವಕಾಶ

ನಿಸ್ಸಂದೇಹವಾಗಿ ದೀಪಕ್ ಹೂಡಾ ಸ್ಫೋಟಕ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಆದಾಗ್ಯೂ ಅವರು ಇನ್ನೂ ಟಿ20 ಪಂದ್ಯಗಳಲ್ಲಿ ವಿಕೆಟ್ ಪಡೆದಿಲ್ಲ, ಆದರೆ ಅವರು ಬೌಲ್ ಮಾಡಿದ ಐದು ಓವರ್‌ಗಳಿಂದ 5.80ರ ಎಕಾನಮಿ ದರವನ್ನು ಹೊಂದಿದ್ದಾರೆ.

ಕಳೆದ ಬಾರಿ ಏಷ್ಯಾ ಕಪ್ ನಡೆದಾಗ ಕೇದಾರ್ ಜಾಧವ್ 50 ಓವರ್‌ಗಳ ಮಾದರಿಯಲ್ಲಿ ಆರು ವಿಕೆಟ್‌ಗಳನ್ನು ಪಡೆದಿದ್ದರು. ಏಕದಿನ ಪಂದ್ಯಗಳಲ್ಲಿಯೂ ಸಹ, ದೀಪಕ್ ಹೂಡಾ 4.72ರ ಎಕಾನಮಿ ದರವನ್ನು ಹೊಂದಿದ್ದು, ಅವರನ್ನು ಸರಿಯಾಗಿ ಬಳಸಿಕೊಂಡರೆ ಅವರು ಸಾಕಷ್ಟು ವಿಕೆಟ್‌ಗಳನ್ನು ತೆಗೆದುಕೊಳ್ಳಬಹುದು ಎಂದು ತೋರಿಸುತ್ತದೆ.

ವಿರಾಟ್ ಕೊಹ್ಲಿಯ ಕಳಪೆ ಫಾರ್ಮ್ ಚಿಂತೆ

ವಿರಾಟ್ ಕೊಹ್ಲಿಯ ಕಳಪೆ ಫಾರ್ಮ್ ಚಿಂತೆ

ಏಷ್ಯಾ ಕಪ್‌ಗಳಲ್ಲಿ ವಿರಾಟ್ ಕೊಹ್ಲಿ ಸರಾಸರಿ 60ಕ್ಕಿಂತ ಹೆಚ್ಚು, ಅಂದರೆ ಅವರು ಬಹು-ಫಾರ್ಮ್ಯಾಟ್ ಪಂದ್ಯಾವಳಿಯ ಇತಿಹಾಸದಲ್ಲಿ ಉತ್ತಮ ರನ್ ಗಳಿಸಿದವರಾಗಿದ್ದಾರೆ. ಆದರೆ,ಸದ್ಯ ಅವರ ಫಾರ್ಮ್ ಕೊರತೆಯು ಭಾರತ ತಂಡಕ್ಕೆ ಕಳವಳವಾಗಿದೆ. ಅವರು ಗುಣಮಟ್ಟದ ವೇಗದ ಬೌಲಿಂಗ್ ವಿರುದ್ಧ ಹೋರಾಡಿದ್ದಾರೆ. ಆದರೆ ಅವರು ಹೊಂದಿರುವ ಕ್ಲಾಸ್ ಆಟವನ್ನು ಗಮನದಲ್ಲಿಟ್ಟುಕೊಂಡು ಫಾರ್ಮ್‌ಗೆ ಮರಳಲು ನಿರೀಕ್ಷಿಸುತ್ತಾರೆ.

ಕೆಎಲ್ ರಾಹುಲ್ ಆಟದ ಸಮಯದ ಕೊರತೆ

ಕೆಎಲ್ ರಾಹುಲ್ ಆಟದ ಸಮಯದ ಕೊರತೆ

ಕೆಎಲ್ ರಾಹುಲ್ ಇತ್ತೀಚೆಗೆ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡರು ಮತ್ತು ಜಿಂಬಾಬ್ವೆಯಲ್ಲಿನ ಏಕದಿನ ಸರಣಿಗಾಗಿ ಭಾರತ ತಂಡದ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. 2022ರ ಐಪಿಎಲ್ ಆವೃತ್ತಿಯ ನಂತರ ಅವರು ಯಾವುದೇ ಕ್ರಿಕೆಟ್ ಆಡಿಲ್ಲ. ಇದಲ್ಲದೆ, ಅವರು ಫೆಬ್ರವರಿ 2022ರಿಂದ ರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಂಡಿಲ್ಲ. ಭಾರತ ತಂಡ ಇತ್ತೀಚೆಗೆ ಸೂರ್ಯಕುಮಾರ್ ಯಾದವ್ ಮತ್ತು ರಿಷಭ್ ಪಂತ್ ಅವರನ್ನು ಆರಂಭಿಕರಾಗಿ ಬಳಸಿಕೊಂಡಿದೆ. ವಿರಾಮದ ನಂತರ, ತಂಡದಲ್ಲಿ ಕೆಎಲ್ ರಾಹುಲ್ ಕ್ರಮಾಂಕವನ್ನು ನೋಡಬೇಕಾಗಿದೆ.

Story first published: Friday, August 12, 2022, 16:50 [IST]
Other articles published on Aug 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X