ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರೋಚಕ ಗೆಲುವಿನ ಬಳಿಕ ಬಾಂಗ್ಲಾದೇಶವನ್ನು 'ನಾಗಿಣಿ ಡಾನ್ಸ್' ಮೂಲಕ ಕುಟುಕಿದ ಲಂಕಾ ಕ್ರಿಕೆಟರ್!

Asia cup 2022: Chamika Karunaratne celebrate with Nagini dance after win against

ಬಾಂಗ್ಲಾದೇಶ ಹಾಗೂ ಶ್ರೀಲಂಕಾ ವಿರುದ್ಧದ ಸೆಣೆಸಾಟದಲ್ಲಿ ಶ್ರೀಲಂಕಾ ತಂಡ ರೋಚಕವಾಗಿ ಗೆಲುವು ಸಾಧಿಸಿದೆ. ಅಂತಿಮ ಓವರ್ ತನಕ ಸಾಗಿದ ಈ ಪಂದ್ಯದಲ್ಲಿ ಶ್ರೀಲಂಕಾ ತಂಡ ಎರಡು ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಸೂಪರ್ 4 ಹಂತಕ್ಕೆ ಪ್ರವೇಶ ಪಡೆದುಕೊಂಡಿದೆ. ಮುಂದಿನ ಹಂತಕ್ಕೇರಬೇಕಾದರೆ ಎರಡೂ ತಂಡಗಳಿಗೂ ಗೆಲ್ಲೇಬೇಕಿದ್ದ ಪಂದ್ಯದಲ್ಲಿ ಎರಡು ತಮಡಗಳು ಕುಡ ಭರ್ಜರಿ ಪೈಪೋಟಿ ನೀಡಿದ ಕಾರಣದಿಂದಾಗಿ ಅಭಿಮಾನಿಗಳಿಗೆ ಭರಪೂರ ಮನರಂಜನೆ ದೊರೆತಿದೆ.

ಈ ರೋಚಕ ಸೆಣೆಸಾಟದಲ್ಲಿ ಗೆಲುವು ಸಾಧಿಸಿದ ಬಳಿಕ ಅಭಿಮಾನಿಗಳು ಹಾಗೂ ಶ್ರೀಲಂಕಾ ತಂಡದ ಸದಸ್ಯರು ಸಂತಸದಲ್ಲಿ ತೇಲಾಡಿದ್ದಾರೆ. ಈ ಗೆಲುವಿನ ಸಂದರ್ಭದಲ್ಲಿ ಶ್ರೀಲಂಕಾ ತಂಡದ ಆಟಗಾರ ಸಂಭ್ರಮಿಸುತ್ತಲೇ ಬಾಂಗ್ಲಾದೇಶ ತಂಡವನ್ನು ಟ್ರೋಲ್ ಮಾಡಿದ್ದಾರೆ. ಶ್ರೀಲಂಕಾದ ಆಟಗಾರ ಚಾಮಿಕಾ ಕರುಣರತ್ನೆ ನಾಗಿಣಿ ನೃತ್ಯದ ಮೂಲಕ ಬಾಂಗ್ಲಾದೇಶವನ್ನು ಕೆಣಕಿದ್ದಾರೆ.

Asia cup 2022: ಪಾಕಿಸ್ತಾನ vs ಹಾಂಕಾಂಗ್ ಡೂ or ಡೈ ಪಂದ್ಯ, ಸೂಪರ್ 4 ಪ್ರವೇಶಕ್ಕೆ ಇಂದು ಹೋರಾಟAsia cup 2022: ಪಾಕಿಸ್ತಾನ vs ಹಾಂಕಾಂಗ್ ಡೂ or ಡೈ ಪಂದ್ಯ, ಸೂಪರ್ 4 ಪ್ರವೇಶಕ್ಕೆ ಇಂದು ಹೋರಾಟ

ಮೊದಲಿಗೆ ಬ್ಯಾಟಿಂಗ್ ಮಾಡಿದ ಬಾಂಗ್ಲಾ ಭರ್ಜರಿ ಪ್ರದರ್ಶನ

ಮೊದಲಿಗೆ ಬ್ಯಾಟಿಂಗ್ ಮಾಡಿದ ಬಾಂಗ್ಲಾ ಭರ್ಜರಿ ಪ್ರದರ್ಶನ

ಟಾಸ್ ಗೆದ್ದು ಬಾಂಗ್ಲಾದೇಶ ತಂಡವನ್ನು ಮೊದಲಿಗೆ ಬ್ಯಾಟಿಂಗ್‌ಗೆ ಆಹ್ವಾನಿಸಿದರು ಶ್ರೀಲಂಕಾ ನಾಯಕ ದಾಸುನ್ ಶನಕಾ. ಹೀಗಾಗಿ ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿದ ಬಾಂಗ್ಲಾದೇಶ ತಂಡ ಉತ್ತಮ ಪ್ರದರ್ಶನ ನೀಡಿತು. ಆರಂಭಿಕ ಆಟಗಾರ ಮೆಹಿದಿ ಹಸನ್, ಅಫಿಫ್ ಹುಸೈನ್ ಅವರ ಹೋರಾಟದ ಕಾರಣದಿಂದಾಗಿ ಬಾಂಗ್ಲಾದೇಶ ಉತ್ತಮ ಮೊತ್ತದ ಗುರಿ ನೀಡಲು ಸಾಧ್ಯವಾಯಿತು. ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು ಬಾಂಗ್ಲಾದೇಶ 183 ರನ್‌ಗಳನ್ನು ಗಳಿಸಿತು.

ರೋಚಕ ಸೆಣೆಸಾಟ ನಡೆಸಿದ ಲಂಕಾ

ರೋಚಕ ಸೆಣೆಸಾಟ ನಡೆಸಿದ ಲಂಕಾ

ಇನ್ನು ಬಾಂಗ್ಲಾದೇಶ ನೀಡಿದ ಈ ದೊಡ್ಡ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡಕ್ಕೆ ಉತ್ತಮ ಆರಂಭ ದೊರೆಯಿತು. ಆರಂಭಿಕ ಆಟಗಾರ ಕುಸಾಲ್ ಮೆಂಡಿಸ್ ಸ್ಪೋಟಕ ಪ್ರದರ್ಶನ ನೀಡಿದರು. ನಂತರ ಚರಿತ ಅಸಲಂಕಾ, ದನುಷ್ಕಾ ಗುಣತಿಲಕ, ಭಾನುಕಾ ರಾಜಪಕ್ಷ ಅಲ್ಪ ಮೊತ್ತಕ್ಕೆ ವಿಕೆಟ್ ಕಳೆದುಕೊಂಡರು. ಆದರೆ ನಾಯಕ ದಾಸುನ್ ಶನಕ 45 ರನ್‌ಗಳ ಕೊಡುಗೆ ನೀಡುವ ಮೂಲಕ ತಂಡಕ್ಕೆ ನೆರವಾದರು. ಅಂತಿಮ ಹಂತದಲ್ಲಿ ಮತ್ತೆ ವಿಕೆಟ್‌ಗಳನ್ನು ಕಳೆದುಕೊಳ್ಳುವ ಮೂಲಕ ಆತಂಕಕ್ಕೆ ಸಿಲುಕಿತು ಶ್ರೀಲಂಕಾ. ಅಂತಿಮವಾಗಿ ಅಸಿತಾ ಫೆರ್ನಾಂಡೋ ಕೊನೆಯ ಓವರ್‌ನಲ್ಲಿ ಶ್ರೀಲಂಕಾ ತಂಡಕ್ಕೆ ಗೆಲುವು ಸಾರಿದರು.

ಸಂಭ್ರಮದಲ್ಲಿ ನಾಗಿಣಿ ಡಾನ್ಸ್ ಮೂಲಕ ಕೆಣಕಿದ ಚಾಮಿಕ

ಶ್ರೀಲಂಕಾ ತಂಡ ಈ ಭರ್ಜರಿ ಗೆಲುವು ಸಾಧಿಸುವ ಮೂಲಕ ಈ ಟೂರ್ನಿಯ ಸೂಪರ್ 4 ಹಂತಕ್ಕೇರುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಬಾಂಗ್ಲಾದೇಶದ ವಿರುದ್ಧದ ಗೆಲುವನ್ನು ಶ್ರೀಲಂಕಾ ತಂಡ ಭರ್ಜರಿಯಾಗಿ ಸಂಭ್ರಮಿಸಿದೆ. ಈ ಸಂದರ್ಭದಲ್ಲಿ ಶ್ರೀಲಂಕಾದ ಕ್ರಿಕೆಟಿಗ ಚಾಮಿಕಾ ಕರುಣರತ್ನೆ ಫೆವಿಲಿಯನ್‌ನಲ್ಲಿ ನಾಗಿಣಿ ಡಾನ್ಸ್ ಮಾಡುವ ಮೂಲಕ ಬಾಂಗ್ಲಾದೇಶ ತಂಡವನ್ನು ಕೆಣಕಿದ್ದಾರೆ. ಈ ದೇಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಗೆಲುವಿನೊಂದಿಗೆ ಶ್ರೀಲಂಕಾ ತಂಡ ಸೂಪರ್ 4 ಹಂತಕ್ಕೇರಿದೆ.

ಇತ್ತಂಡಗಳ ಆಡುವ ಬಳಗ

ಇತ್ತಂಡಗಳ ಆಡುವ ಬಳಗ

ಶ್ರೀಲಂಕಾ ಪ್ಲೇಯಿಂಗ್ XI: ದನುಷ್ಕ ಗುಣತಿಲಕ, ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಚರಿತ್ ಅಸಲಂಕ, ಭಾನುಕ ರಾಜಪಕ್ಸೆ, ದಾಸುನ್ ಶನಕ (ನಾಯಕ), ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ಮಹೀಶ್ ತೀಕ್ಷಣ, ಅಸಿತ ಫೆರ್ನಾಂಡೋ, ದಿಲ್ಶನ್ ಮಧುಶಂಕ
ಬೆಂಚ್: ಅಶೇನ್ ಬಂಡಾರ, ದಿನೇಶ್ ಚಾಂಡಿಮಲ್, ಧನಂಜಯ ಡಿ ಸಿಲ್ವಾ, ಜೆಫ್ರಿ ವಾಂಡರ್ಸೆ, ಪ್ರವೀಣ್ ಜಯವಿಕ್ರಮ, ನುವಾನಿಡು ಫೆರ್ನಾಂಡೋ, ಪ್ರಮೋದ್ ಮದುಶನ್, ನುವಾನ್ ತುಷಾರ, ಮತೀಶ ಪತಿರಣ

ಬಾಂಗ್ಲಾದೇಶ ಪ್ಲೇಯಿಂಗ್ XI: ಸಬ್ಬಿರ್ ರೆಹಮಾನ್, ಮೊಸದ್ದೆಕ್ ಹೊಸೈನ್, ಶಕೀಬ್ ಅಲ್ ಹಸನ್ (ನಾಯಕ), ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಮಹಮ್ಮದುಲ್ಲಾ, ಮೆಹಿದಿ ಹಸನ್ ಮಿರಾಜ್, ಅಫೀಫ್ ಹೊಸೈನ್, ಮಹೇದಿ ಹಸನ್, ತಸ್ಕಿನ್ ಅಹ್ಮದ್, ಎಬಾಡೋತ್ ಹೊಸೈನ್, ಮುಸ್ತಫಿಜುರ್ ರಹಮಾನ್
ಬೆಂಚ್: ಮೊಹಮ್ಮದ್ ನಯಿಮ್, ಅನಾಮುಲ್ ಹಕ್, ಮೊಹಮ್ಮದ್ ಸೈಫುದ್ದೀನ್, ನಸುಮ್ ಅಹ್ಮದ್, ಪರ್ವೇಜ್ ಹುಸೇನ್ ಎಮನ್

Story first published: Friday, September 2, 2022, 11:00 [IST]
Other articles published on Sep 2, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X