ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಷ್ಯಾ ಕಪ್ 2022: ಶ್ರೀಲಂಕಾ ವಿರುದ್ಧ ಸೋತ ಭಾರತಕ್ಕೆ ಚೇತೇಶ್ವರ್ ಪೂಜಾರ ಕಿವಿ ಮಾತು

Asia Cup 2022: Cheteshwar Pujara said India needs to learn to bat well in the middle overs

ಏಷ್ಯಾ ಕಪ್ ಟೂರ್ನಿಯಲ್ಲಿ ಶ್ರೀಲಂಕಾ ವಿರುದ್ಧದ ಸೂಪರ್ 4 ಹಂತದ ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿದೆ. ಈ ಸೋಲಿನೊಂದಿಗೆ ಭಾರತ ತಂಡ ಏಷ್ಯಾ ಕಪ್ ಟೂರ್ನಿಯಿಂದ ಬಹುತೇಕ ಹೊರಬಿದ್ದಂತಾಗಿದೆ. ಈ ಹಿನ್ನೆಲೆಯಲ್ಲಿ ಸಾಖಷ್ಟು ಅಭಿಪ್ರಾಯಗಳು, ವಿಶ್ಲೇಷಣೆಗಳು ನಡೆಯುತ್ತಿದ್ದು ಮುಂದಿನ ವಿಶ್ವಕಪ್ ದೃಷ್ಟಿಯಿಂದ ತಂಡದಲ್ಲಿ ಮಾಡಿಕೊಳ್ಳಬೇಕಿರುವ ಬದಲಾವಣೆಗಳ ಬಗ್ಗೆ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.

ಈ ಸಂದರ್ಭದಲ್ಲಿ ಭಾರತ ಟೆಸ್ಟ್ ತಂಡದ ಸ್ಪೆಶಲಿಸ್ಟ್ ಆಟಗಾರ ಚೇತೇಶ್ವರ್ ಪೂಜಾರ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಪೂಜಾರ ಭಾರತ ತಂಡ ಎಡವುತ್ತಿರುವುದು ಎಲ್ಲಿ ಎಂಬ ಅಂಶವನ್ನು ಉಲ್ಲೇಖಿಸಿದ್ದು ಈ ಹಿನ್ನೆಲೆಯಲ್ಲಿ ಕಿವಿ ಮಾತು ಹೇಳಿದ್ದಾರೆ. ಭಾರತ ತಂಡ ಮಧ್ಯಮ ಓವರ್‌ಗಳಲ್ಲಿ ಹಿನ್ನಡೆ ಅನುಭವಿಸುತ್ತಿದೆ ಎಂದಿರುವ ಪೂಜಾರ ಈ ಹಂತದಲ್ಲಿ ಉತ್ತಮವಾಗಿ ಬ್ಯಾಟಿಂಗ್ ನಡೆಸುವ ಅಗತ್ಯವಿದೆ ಎಂದಿದ್ದಾರೆ.

Asia Cup 2022: ಏಷ್ಯಾ ಕಪ್‌ನಿಂದ ಹೊರಬಿದ್ದ ಭಾರತದ ಮತ್ತೊಬ್ಬ ಬೌಲರ್; ದೀಪಕ್ ಚಹಾರ್ ಎಂಟ್ರಿAsia Cup 2022: ಏಷ್ಯಾ ಕಪ್‌ನಿಂದ ಹೊರಬಿದ್ದ ಭಾರತದ ಮತ್ತೊಬ್ಬ ಬೌಲರ್; ದೀಪಕ್ ಚಹಾರ್ ಎಂಟ್ರಿ

ಟೀಮ್ ಇಂಡಿಯಾದ ಬ್ಯಾಟಿಂಗ್ ವಿಚಾರವಾಗಿ ಮಾತನಾಡಿದ ಚೇತೇಶ್ವರ್ ಪೂಜಾರ "ಪವರ್‌ಪ್ಲೇ ಅವಧಿಯಲ್ಲಿ ವಿಎಕಟ್ ಕಳೆದುಕೊಳ್ಳದೆ 50 ರನ್‌ಗಳನ್ನು ಗಳಿಸಿದರೆ ತಂಡಕ್ಕೆ ದೊಡ್ಡ ಬಲ ದೊರೆಯುತ್ತದೆ. ಆದರೆ ಭಾರತಕ್ಕೆ ತೊಂದರೆಯಾಗುತ್ತಿರುವುದು ಮಧ್ಯಮ ಓವರ್‌ಗಳಲ್ಲಿ. ಇಲ್ಲಿ ಹೆಚ್ಚಿನ ರನ್‌ಗಳು ಹರಿದು ಬರುತ್ತಿಲ್ಲ. ಅಲ್ಲದೆ ಉತ್ತಮವಾಗಿ ಫಿನಿಷ್ ಕೂಡ ಪಡೆಯಲು ಸಾಧ್ಯವಾಗುತ್ತಿಲ್ಲ" ಎಂದಿದ್ದಾರೆ ಚೇತೇಶ್ವರ್ ಪೂಜಾರ.

ಮುಂದುವರಿದು ಮಾತನಾಡಿದ ಚೇತೇಶ್ವರ್ ಪೂಜಾರ ಭಾರತ ತಂಡ ಮಧ್ಯಮ ಓವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳುತ್ತಿರುವ ಪರಿಣಾಮವಾಗಿ 15-20 ಓವರ್‌ಗಳ ಮಧ್ಯೆ ಬ್ಯಾಟಿಂಗ್ ನಡೆಸಲು ಸೂಕ್ತವಾದ ಆಟಗಾರರು ದೊರೆಯುವುದಿಲ್ಲ. ಹೀಗಾಗಿ ಭಾರತ ತಂಡ ಮಧ್ಯಮ ಓವರ್‌ಗಳಲ್ಲಿ ಉತ್ತಮವಾಗಿ ಬ್ಯಾಟಿಂಗ್ ನಡೆಸುವ ಅನಿವಾರ್ಯತೆಯಿದೆ ಎಂದಿದ್ದಾರೆ.

ಇನ್ನು ಈ ಸೋಲಿನ ಬಳಿಕ ಸೋಲಿನ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ ಕೆಲ ಮಹತ್ವದ ಸಂಗತಿಗಳನ್ನು ಹಂಚಿಕೊಂಡರು. "ಮೊದಲಾರ್ಧದಲ್ಲಿ ಬ್ಯಾಟಿಂಗ್‌ನಲ್ಲಿ ಪಡೆದ ಮೇಲುಗೈಯನ್ನು ಮುನ್ನಡೆಸಿಕೊಂಡು ಹೋಗಲು ವಿಫಲವಾದೆವು. ಈ ಕಾರಣದಿಂದಾಗಿಯೇ 10-15 ರನ್‌ಗಳು ನಮಗೆ ಕೊರತೆಯಾದವು. ದ್ವಿತಿಯಾರ್ಧ ನಮ್ಮ ಪಾಲಿಗೆ ಉತ್ತಮವಾಗಿರಲಿಲ್ಲ. ವಿಕೆಟ್ ಕಳೆದುಕೊಂಡ ಆಟಗಾರರು ಯಾವ ಹೊಡೆತಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ಅರ್ಥ ಮಾಡುಕೊಳ್ಳುತ್ತಾರೆ. ಸೋಲುಗಳು ತಂಡಕ್ಕೆ ಯಾವೆಲ್ಲಾ ನಿರ್ಧಾರಗಳು ಸಹಾಯವಾಗುತ್ತವೆ ಎಂಬುದನ್ನು ತಿಳಿಸುತ್ತದೆ" ಎಂದು ರೋಹಿತ್ ಶರ್ಮಾ ಪ್ರತಿಕ್ರಿಯೆ ನೀಡಿದ್ದರು.

ನಿರ್ಣಾಯಕ ಪಂದ್ಯದಲ್ಲಿ ರವಿ ಬಿಷ್ಣೋಯ್‌ನನ್ನು ಕೈಬಿಟ್ಟ ಭಾರತ: ಭಾರೀ ಟೀಕೆಗೆ ಗುರಿನಿರ್ಣಾಯಕ ಪಂದ್ಯದಲ್ಲಿ ರವಿ ಬಿಷ್ಣೋಯ್‌ನನ್ನು ಕೈಬಿಟ್ಟ ಭಾರತ: ಭಾರೀ ಟೀಕೆಗೆ ಗುರಿ

ರೋಹಿತ್ ನಾಯಕತ್ವದಲ್ಲಿ ಮೊದಲ ಸತತ ಸೋಲು: ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಅದ್ಭುತ ಪ್ರದರ್ಶನವನ್ನು ನೀಡಿಕೊಂಡು ಬಂದಿದೆ. ಆದರೆ ಏಷ್ಯಾ ಕಪ್‌ನಲ್ಲಿ ನೀಡಿರುವ ಪ್ರದರ್ಶನ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಈ ಪಂದ್ಯದಲ್ಲಿ ಭಾರತ ಸೋಲು ಅನುಭವಿಸುವ ಮೂಲಕ ರೋಹಿತ್ ಶರ್ಮಾ ನಾಯಕತ್ವದಲ್ಲಿ ಮೊದಲ ಬಾರಿಗೆ ಸತತ ಎರಡು ಪಂದ್ಯಗಳಲ್ಲಿ ಭಾರತ ಟಿ20 ಪಂದ್ಯದಲ್ಲಿ ಸೋಲು ಅನುಭವಿಸಿದಂತಾಗಿದೆ.

ಟೀಮ್ ಇಂಡಿಯಾ ಪ್ಲೇಯಿಂಗ್ XI: ಕೆಎಲ್ ರಾಹುಲ್, ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್
ಬೆಂಚ್: ದಿನೇಶ್ ಕಾರ್ತಿಕ್, ಅಕ್ಸರ್ ಪಟೇಲ್, ಅವೇಶ್ ಖಾನ್, ರವಿ ಬಿಷ್ಣೋಯ್
ಶ್ರೀಲಂಕಾ ತಂಡ: ಪಾತುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್ (ವಿಕೆಟ್ ಕೀಪರ್), ಚರಿತ್ ಅಸಲಂಕ, ದನುಷ್ಕ ಗುಣತಿಲಕ, ಭಾನುಕ ರಾಜಪಕ್ಸೆ, ದಸುನ್ ಶನಕ (ನಾಯಕ), ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ಮಹೀಶ್ ತೀಕ್ಷಣ, ಅಸಿತ ಫೆರ್ನಾಂಡೋ, ದಿಲ್ಶನ್ ಮಧುಶಂಕ
ಬೆಂಚ್: ದಿನೇಶ್ ಚಾಂಡಿಮಲ್, ಧನಂಜಯ ಡಿ ಸಿಲ್ವಾ, ಜೆಫ್ರಿ ವಾಂಡರ್ಸೆ, ಅಶೆನ್ ಬಂಡಾರ, ಪ್ರವೀಣ್ ಜಯವಿಕ್ರಮ, ನುವಾನಿಡು ಫೆರ್ನಾಂಡೋ, ಪ್ರಮೋದ್ ಮದುಶನ್, ನುವಾನ್ ತುಷಾರ, ಮತೀಶ ಪತಿರಾನ

Story first published: Wednesday, September 7, 2022, 17:46 [IST]
Other articles published on Sep 7, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X