ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Asia Cup 2022: ಭಾರತ ತಂಡಕ್ಕೆ ಆಯ್ಕೆಯಾಗದ ಈತನಿಗೆ ಖಂಡಿತ ನಿರಾಶೆಯಾಗಿದೆ; ಸ್ಕಾಟ್ ಸ್ಟೈರಿಸ್

Asia Cup 2022: Definitely Disappointed For Ishan Kishan Not Selected For India Team Says Scott Styris

ಸೋಮವಾರ (ಆಗಸ್ಟ್ 8)ದಂದು ಏಷ್ಯಾಕಪ್‌ಗಾಗಿ ಪ್ರಕಟಿಸಿದ 15 ಸದಸ್ಯರ ಭಾರತೀಯ ತಂಡವನ್ನು ಪ್ರಕಟಿಸಿದ್ದು, ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪ ನಾಯಕ ಕೆಎಲ್ ರಾಹುಲ್ ತಂಡಕ್ಕೆ ಮರಳಿದ್ದಾರೆ. ಇದೇ ವೇಳೆ ಅನುಭವಿ ವೇಗಿ ಜಸ್ಪ್ರೀತ್ ಬುಮ್ರಾ ಬೆನ್ನುನೋವಿನ ಕಾರಣದಿಂದ ಹೊರಗುಳಿದಿದ್ದಾರೆ.

ಏಷ್ಯಾ ಕಪ್ 2022: 8ನೇ ಪ್ರಶಸ್ತಿ ನಿರೀಕ್ಷೆಯಲ್ಲಿ ರೋಹಿತ್ ಶರ್ಮಾ ಬಳಗ; ಟೀಂ ಇಂಡಿಯಾದ ವಿಶ್ಲೇಷಣೆಏಷ್ಯಾ ಕಪ್ 2022: 8ನೇ ಪ್ರಶಸ್ತಿ ನಿರೀಕ್ಷೆಯಲ್ಲಿ ರೋಹಿತ್ ಶರ್ಮಾ ಬಳಗ; ಟೀಂ ಇಂಡಿಯಾದ ವಿಶ್ಲೇಷಣೆ

ಏಷ್ಯಾ ಕಪ್ 2022 ದುಬೈ ಮತ್ತು ಶಾರ್ಜಾದಲ್ಲಿ ಆಗಸ್ಟ್ 27ರಿಂದ ಸೆಪ್ಟೆಂಬರ್ 11ರವರೆಗೆ ನಡೆಯಲಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪ್ರಮುಖ ಘರ್ಷಣೆ ಆಗಸ್ಟ್ 28 ರಂದು (ಭಾನುವಾರ) ನಡೆಯಲಿದೆ. ಕೆಎಲ್ ರಾಹುಲ್ ಮರಳಿದ ಕಾರಣ ವಿಕೆಟ್ ಕೀಪರ್- ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಏಷ್ಯಾ ಕಪ್‌ ತಂಡದಿಂದ ಕೈಬಿಡಲಾಗಿದೆ.

ಏಷ್ಯಾಕಪ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾದ ಇಶಾನ್ ಕಿಶನ್

ಏಷ್ಯಾಕಪ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾದ ಇಶಾನ್ ಕಿಶನ್

ಎಡಗೈ ಬ್ಯಾಟರ್ ಇಶಾನ್ ಕಿಶನ್ ವಿಶ್ವ ಕ್ರಿಕೆಟ್‌ನಲ್ಲಿ ನಡೆಯುವ ಅತ್ಯಂತ ಕ್ರಿಯಾತ್ಮಕ ಬ್ಯಾಟರ್‌ಗಳಲ್ಲಿ ಒಬ್ಬರು ಮತ್ತು ಅವರು ಎದುರಾಳಿಯ ಬೌಲಿಂಗ್ ಪಡೆಯನ್ನು ಬೆಂಡೆತ್ತುವ ಸಾಮರ್ಥ್ಯ ಅವರಲ್ಲಿದೆ. ಆದಾಗ್ಯೂ ವಿಕೆಟ್ ಕೀಪರ್- ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಭಾರತದ ಏಷ್ಯಾಕಪ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.

ಟೀಂ ಇಂಡಿಯಾ ಪೂರ್ಣ ಸಾಮರ್ಥ್ಯದ ತಂಡವನ್ನು ಹೆಸರಿಸಿದ್ದು, ಗಾಯದ ಕಾರಣದಿಂದ ಹೊರಗುಳಿದಿದ್ದ ನಂತರ ಕೆಎಲ್ ರಾಹುಲ್ ಉಪನಾಯಕನಾಗಿ ತಂಡಕ್ಕೆ ಮರಳಿರುವುದು ತಂಡಕ್ಕೆ ಮತ್ತಷ್ಟು ಬಲ ತಂದುಕೊಡಲಿದೆ. ಆದರೆ ಏಷ್ಯಾಕಪ್‌ನಿಂದ ಹೊರಗುಳಿದಿರುವ ಇಶಾನ್ ಕಿಶನ್‌ಗೆ ಖಂಡಿತ ನಿರಾಶೆಯಾಗಿದೆ ಎಂದು ನ್ಯೂಜಿಲೆಂಡ್‌ನ ಮಾಜಿ ಆಲ್‌ರೌಂಡರ್ ಸ್ಕಾಟ್ ಸ್ಟೈರಿಸ್ ಅಭಿಪ್ರಾಯಪಟ್ಟಿದ್ದಾರೆ.

ಫಾರ್ಮ್‌ನಲ್ಲಿದ್ದ ಇಶಾನ್ ಕಿಶನ್ ಅವರನ್ನು ಕೈಬಿಟ್ಟಿರುವುದು ನಿರಾಶೆ

ಫಾರ್ಮ್‌ನಲ್ಲಿದ್ದ ಇಶಾನ್ ಕಿಶನ್ ಅವರನ್ನು ಕೈಬಿಟ್ಟಿರುವುದು ನಿರಾಶೆ

"ಕೆಎಲ್ ರಾಹುಲ್ ಬಹುಶಃ ನಾವು ಚರ್ಚಿಸಿದ ಎಲ್ಲಾ ಸಂಭವನೀಯ ಪಂದ್ಯಗಳಲ್ಲಿ ಸರಳ ನಿರ್ಧಾರವಾಗಿತ್ತು, ಇದು ಸುಲಭವಾದದ್ದು ಎಂದು ನಾನು ಭಾವಿಸುತ್ತೇನೆ. ಭಾರತೀಯ ತಂಡಕ್ಕೆ ಮರಳಿದ ಕೆಎಲ್ ರಾಹುಲ್‌ಗೆ ಮ್ಯಾನೇಜ್ಮೆಂಟ್ ಮತ್ತು ಆಯ್ಕೆದಾರರು ಎಷ್ಟು ಮೌಲ್ಯಯುತವಾಗಿ ಉಪನಾಯಕತ್ವ ನೀಡಿದೆ. ಅಗ್ರ ಕ್ರಮಾಂಕದಲ್ಲಿ ಭಾರತದ ಬ್ಯಾಟಿಂಗ್ ಬಲಪಡಿಸಲು ರಾಹುಲ್ ಅಗತ್ಯ. ಆದರೆ ಕಳೆದ ಕೆಲವು ತಿಂಗಳಿನಿಂದ ಅಂತಾರಾಷ್ಟ್ರೀಯ ಪಂದ್ಯವಾಡದಿರುವುದು ಚಿಂತೆಗೆ ಕಾರಣವಾಗಿದೆ ಮತ್ತು ಫಾರ್ಮ್‌ನಲ್ಲಿದ್ದ ಇಶಾನ್ ಕಿಶನ್ ಅವರನ್ನು ಕೈಬಿಟ್ಟಿರುವುದು ಅವರು ನಿರಾಶೆಗೊಳ್ಳುವಂತೆ ಮಾಡಿದೆ," ಎಂದು ಸ್ಪೋರ್ಟ್ಸ್ 18ನ ದೈನಂದಿನ ಕ್ರೀಡಾ ಸುದ್ದಿ ಶೋ 'ಸ್ಪೋರ್ಟ್ಸ್ ಓವರ್ ದಿ ಟಾಪ್'ನಲ್ಲಿ ಸ್ಕಾಟ್ ಸ್ಟೈರಿಸ್ ಹೇಳಿದರು.

ಸ್ವಾಭಾವಿಕವಾಗಿ ಇಶಾನ್ ಕಿಶನ್ ಅದ್ಭುತ ಆಟಗಾರ

ಸ್ವಾಭಾವಿಕವಾಗಿ ಇಶಾನ್ ಕಿಶನ್ ಅದ್ಭುತ ಆಟಗಾರ

"ಕ್ಲಾಸ್ ಆಟಗಾರ ಕೆಎಲ್ ರಾಹುಲ್ ಭಾರತೀಯ ತಂಡದಲ್ಲಿ ಯಾವಾಗಲೂ ಮುಂಚೂಣಿಯ ಆಟಗಾರರಾಗಿದ್ದಾರೆ ಮತ್ತು ಇಶಾನ್ ಕಿಶನ್‌ಗೆ ಇದು ದುರದೃಷ್ಟಕರ ಎಂದು ನಾನು ಭಾವಿಸುತ್ತೇನೆ. ರಿಷಭ್ ಪಂತ್ ಅವರಂತಹ ಆಟಗಾರನನ್ನು ಪಡೆಯುವವರೆಗೂ ಭಾರತ ತಂಡ ಬಲಗೈ ಪ್ರಾಬಲ್ಯದ ತಂಡವಾಗಿತ್ತು. ಹಾಗಾಗಿ, ಇಶಾನ್ ಕಿಶನ್ ನಿರಾಶೆಗೊಳ್ಳುತ್ತಾರೆ ಮತ್ತು ಸ್ವಾಭಾವಿಕವಾಗಿ ಅವರು ಅದ್ಭುತ ಆಟಗಾರ ಎಂದು ನಾನು ಭಾವಿಸುತ್ತೇನೆ. ಆದರೆ ಕೆಎಲ್ ರಾಹುಲ್ ಹಿಂತಿರುಗಿರುವುದು ಭಾರತಕ್ಕೆ ಅದ್ಭುತವಾಗಿದೆ. ಏಕೆಂದರೆ ಅವರು ದೊಡ್ಡ ವೇದಿಕೆಯಲ್ಲೂ ನಿಜವಾದ ಮ್ಯಾಚ್ ವಿನ್ನರ್," ನ್ಯೂಜಿಲೆಂಡ್ ಮಾಜಿ ಆಟಗಾರ ಸ್ಕಾಟ್ ಸ್ಟೈರಿಸ್ ತಿಳಿಸಿದರು.

ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಇಶಾನ್ ಕಿಶನ್ ಮೊದಲ ನಾಲ್ಕು ಪಂದ್ಯಗಳಲ್ಲಿ ಬೆಂಚ್ ಕಾಯಿಸಿದ್ದರು, ಐದನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಆಡಿದ್ದರು. ಈ ಸಂದರ್ಭದಲ್ಲಿ ಕೇವಲ 11 ರನ್ ಗಳಿಸಿದರು. ಇಲ್ಲಿಯವರೆಗೆ ಎಡಗೈ ಬ್ಯಾಟರ್ ಇಶಾನ್ ಕಿಶನ್ 19 ಟಿ20 ಪಂದ್ಯಗಳನ್ನು ಆಡಿದ್ದಾರೆ ಮತ್ತು 30.16ರ ಸರಾಸರಿಯಲ್ಲಿ 543 ರನ್ ಗಳಿಸಿದ್ದಾರೆ ಮತ್ತು ಅವರ ಗರಿಷ್ಠ ಸ್ಕೋರ್ 89 ಆಗಿದೆ.

ಏಷ್ಯಾಕಪ್‌ಗೆ ಭಾರತ ತಂಡ

ಏಷ್ಯಾಕಪ್‌ಗೆ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ , ರವಿಂಚದ್ರನ್ ಅಶ್ವಿನ್, ಯುಜ್ವೇಂದ್ರ ಚಹಾಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್.

ಸ್ಟ್ಯಾಂಡ್‌ಬೈ ಆಟಗಾರರು; ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್ ಮತ್ತು ದೀಪಕ್ ಚಹಾರ್.

Story first published: Friday, August 12, 2022, 18:35 [IST]
Other articles published on Aug 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X