ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Asia Cup 2022 Final: ಪಾಕಿಸ್ತಾನ ಮಣಿಸಿ 6ನೇ ಬಾರಿ ಚಾಂಪಿಯನ್ ಆದ ಶ್ರೀಲಂಕಾ

Asia Cup 2022 Final: Sri Lanka beat Pakistan By 23 Runs And Became 6th Time Asia Cup Champion

ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಇಂದು (ಸೆಪ್ಟೆಂಬರ್ 11) ಭಾನುವಾರ ನಡೆಯುತ್ತಿರುವ 2022ರ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಶ್ರೀಲಂಕಾ 5 ರನ್‌ಗಳ ರೋಚಕ ಗೆಲುವನ್ನು ಸಾಧಿಸಿ, ನೂತನ ಏಷ್ಯಾ ಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಏಷ್ಯಾ ಕಪ್‌ 2022ರ ಫೈನಲ್ ಪಂದ್ಯದಲ್ಲಿ ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡದ ವಿರುದ್ಧ ದಸುನ್ ಶನಕ ನಾಯಕತ್ವದ ಶ್ರೀಲಂಕಾ ತಂಡ 23 ರನ್‌ಗಳ ಜಯ ದಾಖಲಿಸಿ, 6ನೇ ಬಾರಿ ಏಷ್ಯಾ ಕಪ್ ಚಾಂಪಿಯನ್ ಪಟ್ಟ ಅಂಲಂಕರಿಸಿತು.

2022ರ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ 45 ಎಸೆತಗಳಲ್ಲಿ ಅಜೇಯ 71 ರನ್ ಗಳಿಸಿ, ಉತ್ತಮ ಮೊತ್ತ ಕಲೆಹಾಕಲು ಸಹಾಯ ಮಾಡಿದ ಶ್ರೀಲಂಕಾದ ಭಾನುಕ ರಾಜಪಕ್ಸ "ಪಂದ್ಯದ ಆಟಗಾರ' ಪ್ರಶಸ್ತಿಯನ್ನು ಪಡೆದುಕೊಂಡರು.

ಭಾರತ ಪ್ರಶಸ್ತಿ ಗೆದ್ದಿಲ್ಲ, ಆದರೂ ಈತನಿಗಾಗಿ ಏಷ್ಯಾ ಕಪ್ ತಯಾರಿಸಿದಂತಿತ್ತು; ಸಂಜಯ್ ಮಂಜ್ರೇಕರ್ಭಾರತ ಪ್ರಶಸ್ತಿ ಗೆದ್ದಿಲ್ಲ, ಆದರೂ ಈತನಿಗಾಗಿ ಏಷ್ಯಾ ಕಪ್ ತಯಾರಿಸಿದಂತಿತ್ತು; ಸಂಜಯ್ ಮಂಜ್ರೇಕರ್

ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಫೀಲ್ಡಿಂಗ್ ಆಯ್ದುಕೊಳ್ಳುವುದರ ಮೂಲಕ ಶ್ರೀಲಂಕಾ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 170 ರನ್ ಕಲೆ ಹಾಕಿದ್ದು, ಎದುರಾಳಿ ಪಾಕಿಸ್ತಾನ ತಂಡಕ್ಕೆ ಗೆಲ್ಲಲು 171 ರನ್‌ಗಳ ಗುರಿಯನ್ನು ನೀಡಿತ್ತು.

ಪಾಕಿಸ್ತಾನ ತಂಡದ ಬ್ಯಾಟಿಂಗ್

ಪಾಕಿಸ್ತಾನ ತಂಡದ ಬ್ಯಾಟಿಂಗ್

171 ರನ್‌ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡ 3.2 ಓವರ್‌ಗಳಲ್ಲಿ 22 ರನ್‌ಗಳಾಗಿದ್ದಾಗ ನಾಯಕ ಬಾಬರ್ ಅಜಂ ಮತ್ತು ಫಖರ್ ಜಮಾನ್ ಅವರ ವಿಕೆಟ್ ಕಳೆದುಕೊಂಡಿತು.

ಈ ವೇಳೆ ಮೊಹಮ್ಮದ್ ರಿಜ್ವಾನ್ ಮತ್ತು ಇಫ್ತಿಕರ್ ಅಹ್ಮದ್ ಕುಸಿದಿದ್ದ ತಂಡಕ್ಕೆ ಆಸರೆಯಾದರು. ಇವರಿಬ್ಬರು 71 ರನ್‌ಗಳ ಜೊತೆಯಾಟ ನೀಡಿ ಶ್ರೀಲಂಕಾ ಬೌಲರ್‌ಗಳಿಗೆ ಸವಾಲೊಡ್ಡಿದರು. ಆದರೆ 32 ರನ್ ಗಳಿಸಿ ಆಡುತ್ತಿದ್ದ ಇಫ್ತಿಕರ್ ಅಹ್ಮದ್ ವಿಕೆಟ್‌ನೊಂದಿಗೆ ಮತ್ತೆ ಕುಸಿತ ಆರಂಭವಾಯಿತು. ನಂತರ ಬಂದ ಮೊಹಮ್ಮದ್ ನವಾಜ್ 6 ರನ್ ಗಳಿಸಿ ಪೆವಿಲಿಯನ್ ದಾರಿ ಹಿಡಿದರು.

ಪಾಕಿಸ್ತಾನ ಪರ ಏಕೈಕ ಅರ್ಧಶತಕ ಗಳಿಸಿದ್ದ ಮೊಹಮ್ಮದ್ ರಿಜ್ವಾನ್ (55 ರನ್) ಅವರ ವಿಕೆಟ್ ಕಳೆದುಕೊಳ್ಳುವುದರೊಂದಿಗೆ ಪಾಕಿಸ್ತಾನ ಸೋಲಿನ ಕಡೆ ಮುಖ ಮಾಡಿತು. ಕಕೊನೆಯಲ್ಲಿ ಹ್ಯಾರಿಸ್ ರೌಫ್ 13 ರನ್ ಗಳಿಸಿದ್ದು ಬಿಟ್ಟರೆ ಉಳಿದವರಾರು ಎರಡಂಕಿ ದಾಟಲಿಲ್ಲ. ಇನ್ನಿಂಗ್ಸ್‌ನ ಕೊನೆಯ ಎಸೆತದಲ್ಲಿ ಹ್ಯಾರಿಸ್ ರೌಫ್ ಕ್ಲೀನ್ ಬೌಲ್ಡ್ ಆಗುವುದರೊಂದಿಗೆ ಪಾಕಿಸ್ತಾನ 23 ರನ್‌ಗಳ ಸೊಲೊಪ್ಪಿಕೊಂಡಿತು ಮತ್ತು ಶ್ರೀಲಂಕಾ ಪ್ರಶಸ್ತಿ ಎತ್ತಿ ಹಿಡಿಯಲು ಕಾರಣವಾಯಿತು.

ಶ್ರೀಲಂಕಾ ತಂಡದ ಬೌಲಿಂಗ್

ಶ್ರೀಲಂಕಾ ತಂಡದ ಬೌಲಿಂಗ್

ಇನ್ನು ಬೌಲಿಂಗ್‌ನಲ್ಲಿ ಶ್ರೀಲಂಕಾ ಪರ ಪ್ರಮೋದ್ ಮದುಶನ್ 4 ಓವರ್‌ಗಳಲ್ಲಿ 34 ರನ್ ನೀಡಿ 4 ವಿಕೆಟ್ ಪಡೆದರು. ವನಿಂದು ಹಸರಂಗಾ 4 ಓವರ್‌ಗಳಲ್ಲಿ 27 ರನ್ ನೀಡಿ 3 ವಿಕೆಟ್ ಪಡೆದರು. ಚಮಿಕಾ ಕರುಣಾರತ್ನೆ 4 ಓವರ್‌ಗಳಲ್ಲಿ 33 ರನ್ ನೀಡಿ 2 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಮಹೀಶ್ ತೀಕ್ಷಣ 4 ಓವರ್‌ಗಳಲ್ಲಿ 25 ರನ್ ನೀಡಿ 1 ವಿಕೆಟ್ ಪಡೆದರು.

ಶ್ರೀಲಂಕಾ ತಂಡದ ಬ್ಯಾಟಿಂಗ್

ಶ್ರೀಲಂಕಾ ತಂಡದ ಬ್ಯಾಟಿಂಗ್

ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಪರ ಆರಂಭಿಕರಾಗಿ ಪಾತುಮ್ ನಿಸ್ಸಾಂಕ ಮತ್ತು ಕುಸಲ್ ಮೆಂಡಿಸ್ ಕಣಕ್ಕಿಳಿದರು. ಆದರೆ ತಂಡದ ಮೊತ್ತ 2 ರನ್‌ಗಳಾಗಿದ್ದಾಗ ಕುಸಲ್ ಮೆಂಡಿಸ್ ಡಕ್‌ಗೆ ಔಟಾದರು. ಇವರ ಬೆನ್ನಲ್ಲೇ 8 ರನ್ ಗಳಿಸಿ ಆಡುತ್ತಿದ್ದ ಪಾತುಮ್ ನಿಸ್ಸಾಂಕ ವಿಕೆಟ್ ಒಪ್ಪಿಸಿದರು. ನಂತರ ಬಂದ ಧನಂಜಯ ಡಿ ಸಿಲ್ವಾ 28 ರನ್ ಗಳಿಸಿ ತಂಡದ ಮೊತ್ತ ಹೆಚ್ಚಾಗಲು ಪ್ರಯತ್ನಿಸಿದರು.

ಇನ್ನು ದನುಷ್ಕ ಗುಣತಿಲಕ 1 ರನ್ ಗಳಿಸಿ ಪೆವಿಲಿಯನ್ ದಾರಿ ಹಿಡಿದರು. ನಾಯಕ ದಸುನ್ ಶನಕ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಇರದೆ ಹೊರನಡೆದರು. ನಂತರ ಕ್ರೀಸ್‌ಗೆ ಭಾನುಕ ರಾಜಪಕ್ಸೆ ಅವರು ವನಿಂದು ಹಸರಂಗಾ ಜೊತೆ ಉತ್ತಮ ಮೊತ್ತ ಕಲೆ ಹಾಕಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.

36 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ವನಿಂದು ಹಸರಂಗಾ ಕ್ಯಾಚ್ ನೀಡಿ ಪೆವಿಲಿಯನ್‌ಗೆ ಮರಳಿದರು. ಆಗ ತಂಡದ ಮೊತ್ತ 14.5 ಓವರ್‌ಗಳಲ್ಲಿ 116 ರನ್‌ಗಳು. ಮಧ್ಯಮ ಕ್ರಮಾಂಕದಲ್ಲಿ ಭಾನುಕ ರಾಜಪಕ್ಸೆ 45 ಎಸೆತಗಳಲ್ಲಿ ಅಜೇಯ 71 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್‌ಗಳಿದ್ದವು. ಕೊನೆಯಲ್ಲಿ ಚಮಿಕಾ ಕರುಣಾರತ್ನೆ 14 ರನ್ ಗಳಿಸಿ ಅಜೇಯರಾಗುಳಿದರು.

ಪಾಕಿಸ್ತಾನ ತಂಡದ ಬೌಲಿಂಗ್

ಪಾಕಿಸ್ತಾನ ತಂಡದ ಬೌಲಿಂಗ್

ಇನ್ನು ಬೌಲಿಂಗ್‌ನಲ್ಲಿ ಪಾಕಿಸ್ತಾನ ಪರ ಹ್ಯಾರಿಸ್ ರೌಫ್ 4 ಓವರ್‌ಗಳಲ್ಲಿ 29 ರನ್ ನೀಡಿ 3 ವಿಕೆಟ್ ಪಡೆದರು. ನಸೀಮ್ ಶಾ 4 ಓವರ್‌ಗಳಲ್ಲಿ 40 ರನ್ ನೀಡಿ 1 ವಿಕೆಟ್ ಪಡೆದರು. ಶಾದಾಬ್ ಖಾನ್ 4 ಓವರ್‌ಗಳಲ್ಲಿ 28 ರನ್ ನೀಡಿ 1 ವಿಕೆಟ್ ಪಡೆದರು. ಉಳಿದಂತೆ ಇಫ್ತಿಕರ್ ಅಹ್ಮದ್ ಒಂದು ವಿಕೆಟ್ ಪಡೆದರು.

Story first published: Monday, September 12, 2022, 0:03 [IST]
Other articles published on Sep 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X