ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಷ್ಯಾ ಕಪ್ 2022: ಸೂರ್ಯಕುಮಾರ್ ಯಾದವ್‌ರನ್ನು ಎಬಿಡಿಗೆ ಹೋಲಿಸಿದ ರಿಕಿ ಪಾಂಟಿಂಗ್

Asia Cup 2022: Former Australia Captain Ricky Ponting Compares Suryakumar Yadav To AB De Villiers

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಅವರು ಭಾರತದ ಯುವ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಅವರು 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕು ಎಂದು ಸಲಹೆ ನೀಡಿದ್ದಾರೆ ಮತ್ತು ಸೂರ್ಯಕುಮಾರ್ ಯಾದವ್‌ರನ್ನು ದಕ್ಷಿಣ ಆಫ್ರಿಕಾದ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್‌ಗೆ ಹೋಲಿಸಿದ್ದಾರೆ.

ಸೂರ್ಯಕುಮಾರ್ ಯಾದವ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎದುರಿಸಿದ ಮೊದಲ ಎಸೆತವೇ ಅವರಿಗೆ ಉಜ್ವಲ ಭವಿಷ್ಯವನ್ನು ಸೂಚಿಸಿತ್ತು ಮತ್ತು ಇಂಗ್ಲೆಂಡ್‌ನ ಸ್ಟಾರ್ ವೇಗಿ ಜೋಫ್ರಾ ಆರ್ಚರ್ ಅವರ ಶಾರ್ಟ್ ಬಾಲ್ ಅನ್ನು ಸಿಕ್ಸರ್ ಸಿಡಿಸಿದಾಗ ಅವರ ಬ್ಯಾಟಿಂಗ್ ಕೌಶಲ್ಯ ಮತ್ತು ಧೈರ್ಯದ ಸಂಕೇತವಾಗಿ ಕಂಡುಬಂದಿತ್ತು.

Breaking: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಐರ್ಲೆಂಡ್‌ನ ಕೆವಿನ್ ಓ'ಬ್ರಿಯನ್Breaking: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಐರ್ಲೆಂಡ್‌ನ ಕೆವಿನ್ ಓ'ಬ್ರಿಯನ್

ಸೂರ್ಯಕುಮಾರ್ ಯಾದವ್ ಕಳೆದ ಒಂದೂವರೆ ವರ್ಷಗಳಲ್ಲಿ ಕೆಲವು ಉತ್ತಮ ಪ್ರದರ್ಶನಗಳೊಂದಿಗೆ ತಮ್ಮ ಭರವಸೆಯ ಆರಂಭವನ್ನು ಮೂಡಿಸಿದ್ದಾರೆ. ಈಗ ಟಿ20 ಕ್ರಿಕೆಟ್ ವೃತ್ತಿಜೀವನದಲ್ಲಿ 23 ಪಂದ್ಯಗಳನ್ನು ಹೊಂದಿದ್ದಾರೆ ಮತ್ತು ಅವರು ಐಸಿಸಿ ಟಿ20 ಬ್ಯಾಟರ್ ಶ್ರೇಯಾಂಕದಲ್ಲಿ ಪಾಕಿಸ್ತಾನದ ಬಾಬರ್ ಅಜಮ್ ನಂತರ ಎರಡನೇ ಸ್ಥಾನದಲ್ಲಿದ್ದಾರೆ.

175.45ರ ಉತ್ತಮ ಸ್ಟ್ರೈಕ್ ರೇಟ್ ಹೊಂದಿರುವ ಸೂರ್ಯಕುಮಾರ್ ಯಾದವ್

175.45ರ ಉತ್ತಮ ಸ್ಟ್ರೈಕ್ ರೇಟ್ ಹೊಂದಿರುವ ಸೂರ್ಯಕುಮಾರ್ ಯಾದವ್

ಸೂರ್ಯಕುಮಾರ್ ಯಾದವ್ 175.45ರ ಉತ್ತಮ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಆದರೆ ಹೆಚ್ಚು ಪ್ರತಿಭಾನ್ವಿತ ಅಟಗಾರರು ಹೆಚ್ಚಿರುವ ಕಾರಣ, ಕೇವಲ ಎರಡು ತಿಂಗಳಲ್ಲಿ ನಡೆಯುವ ಐಸಿಸಿ ಟಿ20 ವಿಶ್ವಕಪ್‌ನ ಟೀಮ್ ಇಂಡಿಯಾದಲ್ಲಿ ಯಾವುದೇ ಆಟಗಾರನಿಗೆ ಖಚಿತವಾದ ಸ್ಥಾನವಿದ್ದಂತಿಲ್ಲ.

ಸೂರ್ಯಕುಮಾರ್ ಯಾದವ್ ಅವರನ್ನು ಆಸ್ಟ್ರೇಲಿಯ ಮಾಜಿ ನಾಯಕ ರಿಕಿ ಪಾಂಟಿಂಗ್ ಬೆಂಬಲಿಸಿದ್ದು, ಅವರು ತಮ್ಮ ಆರಂಭಿಕ ವರ್ಷಗಳಲ್ಲಿ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ನಲ್ಲಿದ್ದಾಗ ಸೂರ್ಯಕುಮಾರ್‌ನನ್ನು ನೋಡಿದ್ದರು. ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಸೂರ್ಯಕುಮಾರ್ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಸುರಕ್ಷಿತ ಸ್ಥಾನವನ್ನು ಹೊಂದಿರಬೇಕು ಎಂದು ಪಾಂಟಿಂಗ್ ಭಾವಿಸಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಒಳ್ಳೆಯ ಆಟಗಾರನ ಆಟವನ್ನು ನೋಡುತ್ತಾರೆ

ಆಸ್ಟ್ರೇಲಿಯಾದಲ್ಲಿ ಒಳ್ಳೆಯ ಆಟಗಾರನ ಆಟವನ್ನು ನೋಡುತ್ತಾರೆ

"ಸೂರ್ಯಕುಮಾರ್ ಯಾದವ್ ತುಂಬಾ ಉತ್ತೇಜಕ ಆಟಗಾರರಾಗಿದ್ದಾರೆ ಮತ್ತು ಪ್ರಮುಖ ಟೂರ್ನಿಯ ತಂಡದಲ್ಲಿ ಕಾಣಿಸಿಕೊಳ್ಳುವ ಯಾರಾದರೂ ಆಟಗಾರನಿದ್ದರೆ ಅದು ಸೂರ್ಯಕುಮಾರ್ ಎಂದು ನನಗೆ ಖಚಿತವಾಗಿದೆ. ಟಿ20 ವಿಶ್ವಕಪ್‌ಗಾಗಿ ಭಾರತ ತಂಡದಲ್ಲಿ ನೀವು ಸೂರ್ಯಕುಮಾರ್‌ನನ್ನು ಕಾಣುತ್ತೀರಿ ಎಂದು ತಿಳಿಸಿದ ಅವರು, ಆತ ಭಾರತದ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡರೆ, ಆಸ್ಟ್ರೇಲಿಯಾದ ಎಲ್ಲಾ ಅಭಿಮಾನಿಗಳು ತುಂಬಾ ಒಳ್ಳೆಯ ಆಟಗಾರನ ಆಟವನ್ನು ನೋಡುತ್ತಾರೆ ಎಂದು ನಾನು ಭಾವಿಸುತ್ತೇನೆ," ಎಂದು ಐಸಿಸಿ ವಿಮರ್ಶೆಯ ಇತ್ತೀಚಿನ ಸಂಚಿಕೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ರಿಕಿ ಪಾಂಟಿಂಗ್ ಹೇಳಿದರು.

ಇಂಗ್ಲೆಂಡ್ ಸರಣಿಯಲ್ಲಿ ಚೊಚ್ಚಲ ಶತಕ ಬಾರಿಸಿದ ಯಾದವ್

ಇಂಗ್ಲೆಂಡ್ ಸರಣಿಯಲ್ಲಿ ಚೊಚ್ಚಲ ಶತಕ ಬಾರಿಸಿದ ಯಾದವ್

"ಸೂರ್ಯಕುಮಾರ್ ಯಾದವ್ ಸಾಕಷ್ಟು ಆತ್ಮವಿಶ್ವಾಸದ ಆಟಗಾರನಾಗಿದ್ದು, ಅವನು ತನ್ನನ್ನು ತಾನೇ ಬೆಂಬಲಿಸಿಕೊಳ್ಳುತ್ತಿದ್ದಾನೆ ಮತ್ತು ಅವನು ಎಂದಿಗೂ ಸವಾಲು ಉದ್ಭವಿಸುವ ಯಾವುದೇ ಸನ್ನಿವೇಶದಿಂದ ಹಿಂದೆ ಸರಿಯುವುದಿಲ್ಲ. ಅವರು ಯಾವುದೇ ಪರಿಸ್ಥಿತಿಯನ್ನು ಗೆಲ್ಲಲು ನೋಡುತ್ತಾರೆ, ಆದ್ದರಿಂದ ತಮ್ಮ ತಂಡಕ್ಕಾಗಿ ಪಂದ್ಯವನ್ನು ಗೆಲ್ಲಿಸಬಹುದು," ಎಂದು ರಿಕಿ ಪಾಂಟಿಂಗ್ ಅಭಿಪ್ರಾಯಪಟ್ಟರು.

ಸೂರ್ಯಕುಮಾರ್ ಯಾದವ್ ಭಾರತ ತಂಡದ ಪ್ರಮುಖ ಟಿ20 ಆಟಗಾರನಾಗಿದ್ದು, ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ನಾಟಿಂಗ್‌ಹ್ಯಾಮ್‌ನಲ್ಲಿ ಇತ್ತೀಚೆಗೆ ತಮ್ಮ ಮೊದಲ ಶತಕವನ್ನು ಬಾರಿಸಿದರು. ಭಾರತ ತಂಡ 31/3 ಅಂಕಿಅಂಶಗಳ ಮೂಲಕ ಹೆಣಗಾಡುತ್ತಿರುವಾಗ ಕ್ರೀಸ್‌ಗೆ ಬಂದ ಸೂರ್ಯಕುಮಾರ್, ನಂತರ 216 ರನ್ ಚೇಸ್‌ನಲ್ಲಿ ಉತ್ತಮ ಕೊಡಗೆ ನೀಡಿದರು. ಸೂರ್ಯಕುಮಾರ್ ಯಾದವ್ ಅವರ ಆಟ ಮತ್ತು ಕೌಶಲ್ಯದಲ್ಲಿನ ಆತ್ಮವಿಶ್ವಾಸವು ಇತರ ಉದಯೋನ್ಮುಖ ಆಟಗಾರರಿಂದ ಅವರನ್ನು ಪ್ರತ್ಯೇಕಿಸುತ್ತದೆ ಎಂದು ರಿಕಿ ಪಾಂಟಿಂಗ್ ತಿಳಿಸಿದ್ದಾರೆ.

ಎಬಿ ಡಿವಿಲಿಯರ್ಸ್ ಆಡಿದಂತೆಯೇ ಆಡುತ್ತಾರೆ

ಎಬಿ ಡಿವಿಲಿಯರ್ಸ್ ಆಡಿದಂತೆಯೇ ಆಡುತ್ತಾರೆ

"ಸೂರ್ಯಕುಮಾರ್ ಯಾದವ್ ಮೈದಾನದ ಸುತ್ತಲೂ 360 ಡಿಗ್ರಿ ಆಟವನ್ನು ಆಡುತ್ತಾನೆ. ಆರ್‌ಸಿಬಿ ಮಾಜಿ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಆಡಿದಂತೆಯೇ ಲ್ಯಾಪ್ ಶಾಟ್‌ಗಳು, ಲೇಟ್ ಕಟ್‌ಗಳು, ಅಪ್ಪರ್ ಕಟ್ ಸೇರಿದಂತೆ ಹಲವು ರೀತಿಯಾಗಿ ಬ್ಯಾಟ್ ಬೀಸುತ್ತಾರೆ. ವಿಶೇಷವಾಗಿ ಡೀಪ್ ಬ್ಯಾಕ್‌ವರ್ಡ್ ಸ್ಕ್ವೇರ್‌ಗೆ ಫ್ಲಿಕ್ ಮಾಡುತ್ತಾರೆ ಮತ್ತು ಅವರು ವೇಗದ ಬೌಲಿಂಗ್‌ನ ಉತ್ತಮ ಆಟಗಾರ ಮತ್ತು ಸ್ಪಿನ್ ಬೌಲಿಂಗ್‌ಗೂ ಉತ್ತಮವಾಗಿ ಬ್ಯಾಟ್ ಬೀಸುತ್ತಾರೆ," ಎಂದರು.

ಬಹುಕೌಶಲ್ಯದ ಟಿ20 ಬ್ಯಾಟರ್‌ಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಸೂರ್ಯಕುಮಾರ್ ಯಾದವ್ ಅವರ ಕೌಶಲ್ಯವು ಭಾರತದ ಆಡುವ ಹನ್ನೊಂದರ ಬಳಗದಲ್ಲಿ ಆಕರ್ಷಕ ಆಯ್ಕೆಯನ್ನಾಗಿ ಮಾಡುತ್ತದೆ. ಸೂರ್ಯಕುಮಾರ್ ಯಾದವ್ ಭಾರತದ ತಂಡಕ್ಕೆ ಆಯ್ಕೆಯಾಗುತ್ತಾರೆಯೇ ಎಂಬ ಪ್ರಶ್ನೆಗೆ, "ಕಳೆದ ಎರಡು ಸರಣಿಗಳಲ್ಲಿ ಅವರು ಭಾರತ ತಂಡದಲ್ಲಿ ಬೇರೆಯವರಿಗಿಂತ ಉತ್ತಮವಾಗಿ ಆಡಿದ್ದಾರೆ," ಎಂದು ಪಾಂಟಿಂಗ್ ಉತ್ತರಿಸಿದರು.

Story first published: Tuesday, August 16, 2022, 18:30 [IST]
Other articles published on Aug 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X