ಏಷ್ಯಾ ಕಪ್ 2022: ಭಾರತ ತಂಡವೇ ಚಾಂಪಿಯನ್ ಆಗಲಿದೆ ಎಂದ ಪಾಕ್ ಮಾಜಿ ನಾಯಕ

2022ರ ಏಷ್ಯಾ ಕಪ್ ಯುಎಇಯಲ್ಲಿ ಇದೇ ಆಗಸ್ಟ್ 27ರಿಂದ ಕಿಕ್‌ಸ್ಟಾರ್ಟ್‌ ಪಡೆಯಲಿದ್ದು, ಟೀಂ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಆಗಸ್ಟ್ 28ರಂದು ದುಬೈನಲ್ಲಿ ಸೆಣಸಾಟ ನಡೆಸಲಿದೆ. ಬದ್ಧ ಎದುರಾಳಿಗಳ ಕಾದಾಟ ವೀಕ್ಷಿಸಲು ಇಡೀ ಕ್ರಿಕೆಟ್ ಲೋಕವೇ ಕಾಯುತ್ತಾ ಕುಳಿತಿದ್ದು, 2021ರ ಟಿ20 ವಿಶ್ವಕಪ್‌ ಬಳಿಕ ಉಭಯ ತಂಡಗಳು ಕಣಕ್ಕಿಳಿಯುತ್ತಿವೆ.

Asia Cup 2022: ತಂಡದಲ್ಲಿ ದಿನೇಶ್ ಕಾರ್ತಿಕ್ ಜೊತೆಗಿನ ಪೈಪೋಟಿಗೆ ಪಂತ್ ಕೊಟ್ಟ ಉತ್ತರವೇನು?

ನಾಲ್ಕು ವರ್ಷಗಳ ಬಳಿಕ ನಡೆಯಲಿರುವ ಏಷ್ಯಾಕಪ್ ಟಿ20 ಟೂರ್ನಿಯು ಆಗಸ್ಟ್ 27ರಿಂದ ಯುಎಇನಲ್ಲಿ ಆರಂಭವಾಗಲಿದೆ. ಇದಕ್ಕೂ ಮೊದಲು ಶ್ರೀಲಂಕಾದಲ್ಲಿ ನಡೆಯಬೇಕಿದ್ದ ಏಷ್ಯಾ ಕಪ್‌ ಟೂರ್ನಿಯನ್ನು ಆರ್ಥಿಕ ಬಿಕ್ಕಟ್ಟಿನಿಂದಾಗಿ ಲಂಕಾ ಆಯೋಜಿಸಲು ವಿಫಲಗೊಂಡ ಕಾರಣ ಮೆಗಾ ಟೂರ್ನಿಗೆ ಯುಎಇಗೆ ಸ್ಥಳಾಂತರಗೊಂಡಿದೆ.

ಆಗಸ್ಟ್ 28ರಂದು ದುಬೈನಲ್ಲಿ ಭಾರತ, ಪಾಕಿಸ್ತಾನ

ಆಗಸ್ಟ್ 28ರಂದು ದುಬೈನಲ್ಲಿ ಭಾರತ, ಪಾಕಿಸ್ತಾನ

ಇದೇ ವೇಳೆ, ಭಾರತ ತಂಡವೇ ಮುಂಬರುವ ಏಷ್ಯಾ ಕಪ್ ಗೆಲ್ಲುವ ನೆಚ್ಚಿನ ತಂಡ ಎಂದು ಪಾಕಿಸ್ತಾನದ ಮಾಜಿ ನಾಯಕ ಸಲ್ಮಾನ್ ಬಟ್ ಅಭಿಪ್ರಾಯಪಟ್ಟಿದ್ದಾರೆ. ಏಷ್ಯಾಕಪ್‌ನಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತನ್ನ ಮೊದಲ ಪಂದ್ಯದಲ್ಲಿ ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನವನ್ನು ಆಗಸ್ಟ್ 28ರಂದು ದುಬೈನಲ್ಲಿ ಎದುರಿಸಲಿದೆ.

ಗಮನಾರ್ಹವೆಂದರೆ, "ಏಷ್ಯಾ ಕಪ್‌ನ ಕಳೆದ ಎರಡು ಆವೃತ್ತಿಗಳಲ್ಲಿ ಭಾರತವು ತನ್ನ ಮೊದಲ ಆಯ್ಕೆಯ ತಂಡವನ್ನು ಕಣಕ್ಕಿಳಿಸದೆ ಗೆದ್ದಿದೆ. ಏಷ್ಯಾ ಕಪ್ ಗೆಲ್ಲುವ ಭಾರತದ ಸಾಧ್ಯತೆಗಳನ್ನು ವಿಶ್ಲೇಷಿಸುವಾಗ, ಭಾರತ ತಂಡವು ದೊಡ್ಡ ಆಟಗಾರರ ಗುಂಪನ್ನು ಹೊಂದಿದೆ, ಇದು ಯುಎಇಯಲ್ಲಿ ತಮ್ಮ ಕಿರೀಟವನ್ನು ಉಳಿಸಿಕೊಳ್ಳಲು ಅವರನ್ನು ಮೆಚ್ಚಿನವುಗಳನ್ನಾಗಿ ಮಾಡುತ್ತದೆ," ಎಂದು ಸಲ್ಮಾನ್ ಬಟ್ ಹೇಳಿದರು.

ಭಾರತ ತಂಡವೇ ಏಷ್ಯಾ ಕಪ್ ಗೆಲ್ಲಬಹುದು

ಭಾರತ ತಂಡವೇ ಏಷ್ಯಾ ಕಪ್ ಗೆಲ್ಲಬಹುದು

"ಹೌದು, ಭಾರತ ತಂಡವೇ ಏಷ್ಯಾ ಕಪ್ ಗೆಲ್ಲಬಹುದು. ಅವರಿಗೆ ವಿಟಮಿನ್ ಸಿ ಕೊರತೆಯಿದೆಯೇ? ಎಂದು ನಗುತ್ತಲೇ ಉತ್ತರಿಸಿದರು. ಅವರು ಆಡುವ ಕ್ರಿಕೆಟ್ ನೋಡಿದರೆ ಹಾಗೂ ಅವರಲ್ಲಿರುವ ಆಟಗಾರರ ತಂಡವನ್ನು ಗನಿಸಿದರೆ, ಜನರು ಅವರನ್ನು ಮೆಚ್ಚಿನ ತಂಡವೆಂದು ಪರಿಗಣಿಸುತ್ತಾರೆ," ಎಂದು ಸಲ್ಮಾನ್ ಬಟ್ ತಮ್ಮ YouTube ಚಾನಲ್‌ನಲ್ಲಿ ವಿಡಿಯೋ ಅಪ್‌ಲೋಡ್ ಮಾಡಿದ್ದಾರೆ.

ಆದಾಗ್ಯೂ, ಅದೃಷ್ಟವಿದ್ದರೆ ಪಾಕಿಸ್ತಾನವು ಯಾವುದೇ ತಂಡವನ್ನು ಸೋಲಿಸಬಹುದು ಎಂದು ಸಲ್ಮಾನ್ ಬಟ್ ಭಾವಿಸಿದ್ದು, ಅಫ್ಘಾನಿಸ್ತಾನವನ್ನು 'ಡಾರ್ಕ್ ಹಾರ್ಸ್' ಎಂದು ಹೆಸರಿಸಿದ್ದಾರೆ.

ಒಂದೇ ಗುಂಪಿನಲ್ಲಿ ಭಾರತ, ಪಾಕಿಸ್ತಾನ

ಒಂದೇ ಗುಂಪಿನಲ್ಲಿ ಭಾರತ, ಪಾಕಿಸ್ತಾನ

"ಆದರೆ, ಅವರ ನಂತರ ಪಾಕಿಸ್ತಾನವಿದ್ದು, ಅವರ ದಿನದಂದು ಯಾವುದೇ ತಂಡವನ್ನು ಸೋಲಿಸಬಹುದು. ಅಫ್ಘಾನಿಸ್ತಾನವು ಡಾರ್ಕ್ ಹಾರ್ಸ್ ಆಗಿದ್ದು, ಅವರು ಪಾಕಿಸ್ತಾನ ತಂಡವನ್ನು ಸುಲಭವಾಗಿ ಬೌಲ್ಡ್ ಮಾಡಬಹುದು, ಇತರ ತಂಡಗಳಿಗೂ ಅದೇ ರೀತಿ ಮಾಡಬಹುದು," ಎಂದು ಪಾಕಿಸ್ತಾನ ತಂಡದ ಮಾಜಿ ನಾಯಕ ಸಲ್ಮಾನ್ ಬಟ್ ತಿಳಿಸಿದರು.

ಪ್ರತಿಷ್ಠಿತ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಆರು ತಂಡಗಳನ್ನು ಮೂರು ತಂಡಗಳ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಭಾರತ ತಂಡವು ಪಾಕಿಸ್ತಾನದೊಂದಿಗೆ ಎ ಗುಂಪಿನಲ್ಲಿದ್ದು, ಅಂತಿಮ ಸ್ಥಾನವನ್ನು ಕ್ವಾಲಿಫೈಯರ್ ವಿಜೇತ ತಂಡ ಪಡೆಯಲಿದೆ.

ಬಿ ಗುಂಪಿನಲ್ಲಿ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ತಂಡಗಳು ಸೂಪರ್ 4 ಸ್ಥಾನಕ್ಕಾಗಿ ಸೆಣಸಾಡಲಿವೆ. ಈ ಬಾರಿಯ ಏಷ್ಯಾಕಪ್ ಟಿ20 ಮಾದರಿಯಲ್ಲಿ ನಡೆಯಲಿದೆ. ಕಡೆಯ ಬಾರಿ ಟಿ20 ಮಾದರಿ ನಡೆದಿದ್ದು 2016ರಲ್ಲಿ. ಆಗಲೂ ಭಾರತವೇ ಚಾಂಪಿಯನ್ ಆಗಿತ್ತು.

ಏಷ್ಯಾಕಪ್‌ಗೆ ಭಾರತ ತಂಡ

ಏಷ್ಯಾಕಪ್‌ಗೆ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್.

ಸ್ಟ್ಯಾಂಡ್‌ಬೈ ಆಟಗಾರರು; ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್ ಮತ್ತು ದೀಪಕ್ ಚಹಾರ್.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Monday, August 15, 2022, 20:47 [IST]
Other articles published on Aug 15, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X