ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಳೆದ ಬಾರಿ ಏಕದಿನ ಮಾದರಿಯಲ್ಲಿ ನಡೆದಿದ್ದ ಏಷ್ಯಾಕಪ್‌ ಈ ಬಾರಿ ಟಿ20 ಮಾದರಿಯಲ್ಲಿ ನಡೆಯಲು ಕಾರಣವೇನು?

Asia Cup 2022: Here is the reason Why Asia Cup 2022 is played in T20 format?

ಕೊರೋನಾವೈರಸ್ ಬಾರದೇ ಇದ್ದಿದ್ದರೆ ಈ ವರ್ಷ ಆಯೋಜನೆಯಾಗಿರುವ ಏಷ್ಯಾಕಪ್ ಟೂರ್ನಿ 2020ರಲ್ಲಿಯೇ ಮುಕ್ತಾಯಗೊಳ್ಳುತ್ತಿತ್ತು. ಹೌದು, ಇದೇ ತಿಂಗಳ ಅಂತಿಮ ವಾರದಲ್ಲಿ ಆರಂಭವಾಗಲಿರುವ ಹದಿನಾಲ್ಕನೇ ಆವೃತ್ತಿಯ ಏಷ್ಯಾಕಪ್ ಟೂರ್ನಿ ಕೊರೋನಾವೈರಸ್ ಕಾರಣದಿಂದ 2020ರಿಂದ ಮುಂದೂಡಲ್ಪಟ್ಟಿತ್ತು. ಅದರಲ್ಲಿಯೂ ಈ ಬಾರಿಯ ಏಷ್ಯಾಕಪ್ ಟೂರ್ನಿ ಶ್ರೀಲಂಕಾ ನೆಲದಲ್ಲಿ ನಡೆಯಬೇಕಿತ್ತು. ಆದರೆ ಅಲ್ಲಿನ ಆರ್ಥಿಕ ಪರಿಸ್ಥಿತಿ ಸರಿಯಿಲ್ಲದ ಕಾರಣದಿಂದಾಗಿ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸಲಾಗಿದೆ.

ಮಹಾರಾಜ ಟ್ರೋಫಿ: ಟೇಬಲ್ ಟಾಪರ್ಸ್ ವಿರುದ್ಧ ಗೆದ್ದು 2 ಸ್ಥಾನ ಜಿಗಿದ ಮೈಸೂರು ವಾರಿಯರ್ಸ್!ಮಹಾರಾಜ ಟ್ರೋಫಿ: ಟೇಬಲ್ ಟಾಪರ್ಸ್ ವಿರುದ್ಧ ಗೆದ್ದು 2 ಸ್ಥಾನ ಜಿಗಿದ ಮೈಸೂರು ವಾರಿಯರ್ಸ್!

ಈಗಾಗಲೇ ಪ್ರತಿಷ್ಠಿತ ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ ಕಳೆದ ಬಾರಿಯ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗಳು ನಡೆದಿರುವ ಯು ಎ ಇ ಪಿಚ್‌ಗಳಲ್ಲಿ ಆಡಿರುವ ಅನುಭವ ಬಹುತೇಕ ಅಂತರರಾಷ್ಟ್ರೀಯ ತಂಡದ ಆಟಗಾರರಿಗೆ ಇದ್ದು, ಟೂರ್ನಿಯ ಪ್ರಥಮ ಪಂದ್ಯ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ತಂಡಗಳ ನಡುವೆ ಆಗಸ್ಟ್ 27ರಂದು ನಡೆದರೆ, ಟೂರ್ನಿಯ ಅಂತಿಮ ಹಣಾಹಣಿ ಫೈನಲ್ ಪಂದ್ಯ ಸೆಪ್ಟೆಂಬರ್ 11ರಂದು ಜರುಗಲಿದೆ.

ಸಚಿನ್ ಪ್ರಥಮ ಶತಕಕ್ಕೆ 32 ವರ್ಷ: ಯಾರ ವಿರುದ್ಧ, ಗಳಿಸಿದ್ದೆಷ್ಟು ರನ್, ಸಚಿನ್ ಆಡಿದ್ದ ಕ್ರಮಾಂಕ ಯಾವುದು?ಸಚಿನ್ ಪ್ರಥಮ ಶತಕಕ್ಕೆ 32 ವರ್ಷ: ಯಾರ ವಿರುದ್ಧ, ಗಳಿಸಿದ್ದೆಷ್ಟು ರನ್, ಸಚಿನ್ ಆಡಿದ್ದ ಕ್ರಮಾಂಕ ಯಾವುದು?

ಇನ್ನು ಏಷ್ಯಾಕಪ್ ಟೂರ್ನಿ ಮುಕ್ತಾಯವಾದ ಕೆಲವೇ ದಿನಗಳ ನಂತರ ಪ್ರತಿಷ್ಠಿತ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ಈ ಬಾರಿಯ ಏಷ್ಯಾಕಪ್ ಟೂರ್ನಿ ಟಿ ಟ್ವೆಂಟಿ ಕ್ರಿಕೆಟ್ ಮಾದರಿಯಲ್ಲಿ ನಡೆಯುವುದರಿಂದ ಮುಂಬರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಏಷ್ಯಾಕಪ್ ಆಡುವ ತಂಡಗಳು ತಯಾರಿ ನಡೆಸಿಕೊಳ್ಳುವುದಕ್ಕೂ ಕೂಡ ಇದು ಸಹಕಾರಿಯಾಗಲಿದೆ ಎನ್ನಬಹುದಾಗಿದ್ದು, ಕಳೆದ ಬಾರಿ ಏಕದಿನ ಕ್ರಿಕೆಟ್ ಮಾದರಿಯಲ್ಲಿ ನಡೆದಿದ್ದ ಏಷ್ಯಾಕಪ್ ಈ ಬಾರಿ ಟಿ ಟ್ವೆಂಟಿ ಮಾದರಿಯಲ್ಲಿ ನಡೆಯಲು ಕಾರಣವೇನು ಎಂಬುದರ ಕುರಿತು ಕೆಲವರಲ್ಲಿ ಪ್ರಶ್ನೆಗಳು ಮೂಡಿವೆ. ಈ ಪ್ರಶ್ನೆಯ ಕುರಿತಾದ ಉತ್ತರ ಕೆಳಕಂಡಂತಿದೆ ಓದಿ.

ಈ ಬಾರಿಯ ಆವೃತ್ತಿ ಟಿ ಟ್ವೆಂಟಿ ಮಾದರಿಯಲ್ಲಿ ನಡೆಯಲು ಕಾರಣವೇನು?

ಈ ಬಾರಿಯ ಆವೃತ್ತಿ ಟಿ ಟ್ವೆಂಟಿ ಮಾದರಿಯಲ್ಲಿ ನಡೆಯಲು ಕಾರಣವೇನು?

2015ರಲ್ಲಿ ಏಷ್ಯಾಕಪ್ ಆಯೋಜಕರಾದ ಏಷ್ಯಾಕಪ್ ಕೌನ್ಸಿಲ್ ಮುಂಬರುವ ಏಷ್ಯಾಕಪ್ ಆವೃತ್ತಿಗಳನ್ನು ಟಿ ಟ್ವೆಂಟಿ ಹಾಗೂ ಏಕದಿನ ಎರಡೂ ಮಾದರಿಯಲ್ಲಿಯೂ ನಡೆಸಲು ತೀರ್ಮಾನಿಸಿತ್ತು. ಒಂದು ಆವೃತ್ತಿ ಏಕದಿನ ಮಾದರಿಯಲ್ಲಿ ನಡೆದರೆ ನಂತರದ ಆವೃತ್ತಿ ಟಿ ಟ್ವೆಂಟಿ ಮಾದರಿಯಲ್ಲಿ ಹಾಗೂ ತದನಂತರದ ಆವೃತ್ತಿ ಮತ್ತೆ ಏಕದಿನ ಮಾದರಿಯಲ್ಲಿ ನಡೆಯಬೇಕು ಎಂದು ತೀರ್ಮಾನವನ್ನು ಮಾಡಲಾಗಿತ್ತು. ಅದರಂತೆ 2016ರ ಏಷ್ಯಾಕಪ್ ಟೂರ್ನಿ ಟಿ ಟ್ವೆಂಟಿ ಮಾದರಿಯಲ್ಲಿ ಹಾಗೂ 2018ರ ಏಷ್ಯಾಕಪ್ ಏಕದಿನ ಮಾದರಿಯಲ್ಲಿ ಜರುಗಿತ್ತು ಮತ್ತು ಇದೀಗ ಈ ಬಾರಿಯ ಏಷ್ಯಾಕಪ್ ಟೂರ್ನಿ ಮತ್ತೆ ಟಿ ಟ್ವೆಂಟಿ ಮಾದರಿಯಲ್ಲಿ ಜರುಗಲಿದೆ.

ಏಷ್ಯಾಕಪ್ ವೇಳಾಪಟ್ಟಿ

ಏಷ್ಯಾಕಪ್ ವೇಳಾಪಟ್ಟಿ

27 ಆಗಸ್ಟ್‌: ಶ್ರೀಲಂಕಾ ವರ್ಸಸ್ ಅಫ್ಘಾನಿಸ್ತಾನ (ದುಬೈ)

28 ಆಗಸ್ಟ್‌: ಭಾರತ ವರ್ಸಸ್ ಪಾಕಿಸ್ತಾನ (ದುಬೈ)

30 ಆಗಸ್ಟ್‌: ಬಾಂಗ್ಲಾದೇಶ ವರ್ಸಸ್ ಅಫ್ಘಾನಿಸ್ತಾನ (ದುಬೈ)

31 ಆಗಸ್ಟ್‌: ಭಾರತ ವರ್ಸಸ್ ಕ್ವಾಲಿಫೈಯರ್ (ದುಬೈ)

1 ಸೆಪ್ಟೆಂಬರ್: ಶ್ರೀಲಂಕಾ ವರ್ಸಸ್ ಬಾಂಗ್ಲಾದೇಶ (ದುಬೈ)

2 ಸೆಪ್ಟೆಂಬರ್: ಪಾಕಿಸ್ತಾನ ವರ್ಸಸ್ ಕ್ವಾಲಿಫೈಯರ್ (ಶಾರ್ಜಾ)

3 ಸೆಪ್ಟೆಂಬರ್: B1 vs B2 (ಶಾರ್ಜಾ)

4 ಸೆಪ್ಟೆಂಬರ್: A1 vs A2 (ದುಬೈ)

6 ಸೆಪ್ಟೆಂಬರ್: A1 vs B1 (ದುಬೈ)

7 ಸೆಪ್ಟೆಂಬರ್: A2 vs B2 (ದುಬೈ)

8 ಸೆಪ್ಟೆಂಬರ್: A1 vs B2 (ದುಬೈ)

9 ಸೆಪ್ಟೆಂಬರ್: B1 vs A2 (ದುಬೈ)

11 ಸೆಪ್ಟೆಂಬರ್: ಫೈನಲ್‌ (ದುಬೈ)

ಏಷ್ಯಾಕಪ್‌ಗೆ ಪ್ರಕಟವಾದ ಭಾರತ ತಂಡ

ಏಷ್ಯಾಕಪ್‌ಗೆ ಪ್ರಕಟವಾದ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜುವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್

ಹೆಚ್ಚುವರಿ ಆಟಗಾರರು: ದೀಪಕ್ ಚಹರ್, ಶ್ರೇಯಸ್ ಐಯ್ಯರ್ ಹಾಗೂ ಅಕ್ಷರ್ ಪಟೇಲ್

Story first published: Sunday, August 14, 2022, 13:45 [IST]
Other articles published on Aug 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X