ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಷ್ಯಾ ಕಪ್: ಪಾಕ್, ಶ್ರೀಲಂಕಾ ವಿರುದ್ಧ ಸೋತ ಬಳಿಕವೂ ಭಾರತಕ್ಕಿದೆಯಾ ಫೈನಲ್‌ಗೇರುವ ಅವಕಾಶ?

Asia Cup 2022: How India reach final after defeat against Pakistan and Sri Lanka?

ಏಷ್ಯಾ ಕಪ್‌ನ ಸೂಪರ್ 4 ಹಂತದಲ್ಲಿ ಭಾರತ ಸತತ ಎರಡು ಪಂದ್ಯಗಳಲ್ಲಿ ಸೀಲು ಅನುಭವಿಸಿದೆ. ಮೊದಲಿಗೆ ಪಾಕಿಸ್ತಾನದ ವಿರುದ್ಧ ಸೋಲು ಅನುಭವಿಸಿದ ಬಳಿಕ ಶ್ರೀಲಂಕಾ ವಿರುದ್ಧದ ಮಹತ್ವದ ಪಂದ್ಯದಲ್ಲಿಯೂ ಸೋತಿದೆ ಟೀಮ್ ಇಂಡಿಯಾ. ಈ ಎರಡು ಸೋಲಿನಿಂದಾಗಿ ಭಾರತ ತನ್ನ ಫೈನಲ್ ಪ್ರವೇಶದ ಹಾದಿಯನ್ನು ದುರ್ಗಮಗೊಳಿಸಿದೆ. ಪಾಕಿಸ್ತಾನದ ವಿರುದ್ಧದ ಸೋಲಿನ ಬಳಿಕ ಶ್ರೀಲಂಕಾ ವಿರುದ್ಧ ಗೆಲ್ಲಲೇಬೇಕಾಗಿದ್ದ ಪಂದ್ಯವಾಗಿತ್ತು. ಆದರೆ ಈ ಪಂದ್ಯವನ್ನು ಒಂದು ಎಸೆತ ಬಾಕಿಯಿರುವಂತೆ 6 ವಿಕೆಟ್‌ಗಳ ಅಂತರದಿಂದ ಭಾರತ ಸೋಲು ಒಪ್ಪಿಕೊಂಡಿದೆ.

ಹಾಗಿದ್ದರೂ ಭಾರತ ಟೂರ್ನಿಯಿಂದ ಇನ್ನೂ ಅಧಿಕೃತವಾಗಿ ಹೊರಬಿದ್ದಿಲ್ಲ ಎಂಬುದು ಗಮನಾರ್ಹ ಅಂಶ. ಈ ಟೂರ್ನಿಯಲ್ಲಿ ಇನ್ನೂ ಮೂರು ಪಂದ್ಯಗಳು ಬಾಕಿಯಿದೆ. ಟೂರ್ನಿಯ ಫೈನಲ್ ಹಂತಕ್ಕೇರುವ ಒಂದು ಬಾಗಿಲು ಭಾರತ ತಂಡಕ್ಕಿನ್ನೂ ತೆರೆದೇ ಇದೆ. ಆದರೆ ಇದು ಸಾಧ್ಯವಾಗನೇಕಾದರೆ ಪ್ರತಿ ಪಂದ್ಯದ ಫಲಿತಾಂಶ ಕೂಡ ಭಾರತ ಅಂದುಕೊಂಡಂತೆಯೇ ಬರಬೇಕಿದೆ!

Asia Cup 2022: ಏಷ್ಯಾ ಕಪ್‌ನಿಂದ ಹೊರಬಿದ್ದ ಭಾರತದ ಮತ್ತೊಬ್ಬ ಬೌಲರ್; ದೀಪಕ್ ಚಹಾರ್ ಎಂಟ್ರಿAsia Cup 2022: ಏಷ್ಯಾ ಕಪ್‌ನಿಂದ ಹೊರಬಿದ್ದ ಭಾರತದ ಮತ್ತೊಬ್ಬ ಬೌಲರ್; ದೀಪಕ್ ಚಹಾರ್ ಎಂಟ್ರಿ

ಉಳಿದಿರುವ ಪಂದ್ಯಗಳು

ಉಳಿದಿರುವ ಪಂದ್ಯಗಳು

ಏಷ್ಯಾ ಕಪ್‌ನ ಫೈನಲ್ ಹಂತಕ್ಕೂ ಮುನ್ನ ಇನ್ನು ಮೂರು ಪಂದ್ಯಗಳು ಬಾಕಿಯಿದೆ. ಸೆಪ್ಟೆಂಬರ್ 7 ಬುಧವಾರ ಪಾಕಿಸ್ತಾನ ಹಾಘೂ ಅಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾದರೆ ಸಪ್ಟೆಂಬರ್ 8ರಂದು ಭಾರತ ಹಾಗೂ ಅಫ್ಘಾನಿಸ್ತಾನ ತಂಡಗಳು ಸೆಣೆಸಾಡಲಿದೆ. ಸೆಪ್ಟೆಂಬರ್ 9ರಂದು ಶ್ರೀಲಂಕಾ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಹಣಾಹಣಿ ನಡೆಯಲಿದೆ.

ನಿರ್ಣಾಯಕ ಪಂದ್ಯದಲ್ಲಿ ರವಿ ಬಿಷ್ಣೋಯ್‌ನನ್ನು ಕೈಬಿಟ್ಟ ಭಾರತ: ಭಾರೀ ಟೀಕೆಗೆ ಗುರಿ

ಸದ್ಯದ ಅಂಕಪಟ್ಟಿಯ ಪರಿಸ್ಥಿತಿ

ಸದ್ಯದ ಅಂಕಪಟ್ಟಿಯ ಪರಿಸ್ಥಿತಿ

ಸೂಪರ್ 4 ಹಂತದಲ್ಲಿ ಪ್ರಸ್ತುತ ಎರಡು ಪಂದ್ಯಗಳಲ್ಲಿ ಎರಡು ಗೆಲುವು ಸಾಧಿಸಿರುವ ಶ್ರೀಲಂಕಾ ಅಗ್ರಸ್ಥಾನದಲ್ಲಿದೆ. ನಂತರ ಒಂದು ಗೆಲುವು ಸಾಧಿಸಿರುವ ಪಾಕಿಸ್ತಾನ ತಂಡವಿದ್ದು ನಂತರ ಭಾರತ ಹಾಘೂ ಅಫ್ಘಾನಿಸ್ತಾನ ತಂಡಗಳಿದೆ. ಎರಡು ತಂಡಗಳು ಕೂಡ ಶೂನ್ಯ ಅಂಕಗಳನ್ನು ಹೊಂದಿದ್ದು ನೆಟ್‌ರನ್‌ರೇಟ್‌ನಲ್ಇ ಭಾರತ ಮುಂದಿದೆ.

ಫೈನಲ್‌ಗೆ ಅರ್ಹತೆ ಪಡೆಯುವ ಅವಕಾಶ ಹೇಗಿದೆ?

ಫೈನಲ್‌ಗೆ ಅರ್ಹತೆ ಪಡೆಯುವ ಅವಕಾಶ ಹೇಗಿದೆ?

ಭಾರತ ಈ ಹಂತದಿಂದ ಫೈನಲ್‌ಗೆ ಪ್ರವೇಶ ಪಡೆಯಬೇಕಾದರೆ ತಂಡದ ಪ್ರಯತ್ನದ ಜೊತೆಗೆ ಅದೃಷ್ಟವೂ ಬೇಕಿದೆ. ರೋಹಿತ್ ಪಡೆಗೆ ಉಳಿದಿರುವ ಒಂದು ಪಂದ್ಯ ಅಫ್ಘಾಸ್ತಾನದ ವಿರುದ್ಧ ಮಾತ್ರ. ಈ ಪಂದ್ಯದಲ್ಲಿ ಭಾರತ ಉತ್ತಮ ಅಂತರದಿಂದ ಗೆಲುವು ಸಾಧಿಸಬೇಕಾಗಿದೆ. ಅದಾದ ಬಳಿಕ ಉಳಿದ ಪಂದ್ಯಗಳ ಫಲಿತಾಂಶ ಕೂಡ ಭಾರತಕ್ಕೆ ಮಹತ್ವದ್ದಾಗಿದೆ. ಸತತ ಎರಡು ಗೆಲುವು ಸಾಧಿಸಿರುವ ಶ್ರೀಲಂಕಾ ಫೈನಲ್ ಹಂತಕ್ಕೆ ಈಗಾಗಲೇ ಅರ್ಹತೆ ಪಡೆದುಕೊಂಡಿದೆ. ಉಳಿದ ಮೂರು ತಂಡಗಳು ಕೂಡ ಸಮವಾಗಿ ಅಂಕಗಳನ್ನು ಹೊಂದುವಂತಾಗುವುದು ಭಾರತದ ಪಾಲಿನ ಅಗತ್ಯವಾಗಿದೆ. ಇದರರ್ಥ ಈಗಾಗಲೇ ಒಂದು ಗೆಲುವು ಸಾಧಿಸಿರುವ ಉಳಿದ ಎರಡು ಪಂದ್ಯಗಳಲ್ಲಿಯೂ ಸೋಲು ಅನುಭವಿಸಲೇಬೇಕಿದೆ. ಆಗ ನೆಟ್‌ ರನ್‌ರೇಟ್‌ನಲ್ಲಿ ಭಾರತ ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನ ತಂಡಗಳಿಗಿಂತ ಮುಂದಿದ್ದರೆ ಭಾರತಕ್ಕೆ ಫೈನಲ್ ಹಂತಕ್ಕೇರುವ ಅವಕಾಶವಿದೆ.

Virat Kohli ಹೇಳಿಕೆ ಬಗ್ಗೆ BCCI ಪ್ರತಿಕ್ರಿಯೆ | *Cricket | OneIndia Kannada
ಭಾರತ ತಂಡದ ಫೈನಲ್ ಪ್ರವೇಶಕ್ಕೆ ಆಗಬೇಕಿರುವುದಿಷ್ಟು!

ಭಾರತ ತಂಡದ ಫೈನಲ್ ಪ್ರವೇಶಕ್ಕೆ ಆಗಬೇಕಿರುವುದಿಷ್ಟು!

ಪಾಕಿಸ್ತಾನ ತಂಡವನ್ನು ಅಫ್ಘಾನಿಸ್ತಾನ ತಂಡ ಸೋಲಿಸಬೇಕು
ಭಾರತ ಅಫ್ಘಾನಿಸ್ತಾನವನ್ನು ಸೋಲಿಸಬೇಕು
ಪಾಕಿಸ್ತಾನವನ್ನು ಶ್ರೀಲಂಕಾ ಸೋಲಿಸಬೇಕು
ಇಷ್ಟೆಲ್ಲಾ ಅಂದುಕೊಂಡಂತೆ ಆದರೆ ಭಾರತ ತಂಡದ ನೆಟ್‌ರನ್‌ರೇಟ್ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ತಂಡಗಳಿಗಿಂತ ಉತ್ತಮವಾಗಿರಬೇಕು. ಹಾಗಿದ್ದಲ್ಲಿ ಭಾರತ ಫೈನಲ್‌ಗೆ ಪ್ರವೇಶ ಪಡೆಯಲು ಸಾಧ್ಯವಿದೆ.

Story first published: Wednesday, September 7, 2022, 9:02 [IST]
Other articles published on Sep 7, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X