ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Asia Cup 2022: ಭಾರತ vs ಪಾಕ್ ಸೂಪರ್ 4 ಪಂದ್ಯವನ್ನು ಮೊಬೈಲ್‌ನಲ್ಲಿ ವೀಕ್ಷಿಸುವುದು ಹೇಗೆ?

Asia Cup 2022: How to watch India vs Pakistan super 4 match live telecast in mobile?

ಪ್ರಸ್ತುತ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಏಷ್ಯಾಕಪ್ ಟೂರ್ನಿಯ ಗ್ರೂಪ್ ಹಂತದ ಪಂದ್ಯಗಳು ಮುಕ್ತಾಯವಾಗಿದ್ದು, ಇಂದಿನಿಂದ ( ಸೆಪ್ಟೆಂಬರ್ 3 ) ಸೂಪರ್ 4 ಸುತ್ತಿನ ಪಂದ್ಯಗಳು ಆರಂಭಗೊಂಡಿವೆ. ಗ್ರೂಪ್ ಹಂತದಲ್ಲಿ ಎ ಗುಂಪಿನಿಂದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಸೂಪರ್ 4 ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರೆ, ಬಿ ಗುಂಪಿನಿಂದ ಅಫ್ಘಾನಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಸೂಪರ್ 4 ಸುತ್ತಿಗೆ ಲಗ್ಗೆ ಇಟ್ಟಿವೆ. ಇನ್ನು ಈ ಸೂಪರ್ 4 ಸುತ್ತಿನಲ್ಲಿ ಪ್ರತೀ ತಂಡಗಳೂ ಸಹ ತಲಾ ಮೂರು ಪಂದ್ಯಗಳಲ್ಲಿ ಕಣಕ್ಕಿಳಿಯಲಿದ್ದು, ಒಟ್ಟು 6 ಪಂದ್ಯಗಳು ಜರುಗಲಿವೆ. ಈ ಸುತ್ತಿನಲ್ಲಿ ಟಾಪ್ ಎರಡು ಸ್ಥಾನಗಳನ್ನು ಪಡೆಯಲಿರುವ ತಂಡಗಳು ಫೈನಲ್ ಸುತ್ತಿಗೆ ಪ್ರವೇಶಿಸಲಿವೆ.

Asia Cup 2022: ಸೂಪರ್ 4ನಲ್ಲಿ ಭಾರತದ ವಿರುದ್ಧ ಮತ್ತೆ ಆಡಲಿದೆ ಪಾಕ್; ಸೂಪರ್ 4 ವೇಳಾಪಟ್ಟಿ ಇಲ್ಲಿದೆAsia Cup 2022: ಸೂಪರ್ 4ನಲ್ಲಿ ಭಾರತದ ವಿರುದ್ಧ ಮತ್ತೆ ಆಡಲಿದೆ ಪಾಕ್; ಸೂಪರ್ 4 ವೇಳಾಪಟ್ಟಿ ಇಲ್ಲಿದೆ

ಇನ್ನು ಇಂದು ( ಸೆಪ್ಟೆಂಬರ್ 3 ) ನಡೆಯಲಿರುವ ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ತಂಡಗಳ ನಡುವಿನ ಪಂದ್ಯದ ಮೂಲಕ ಸೂಪರ್ 4 ಸುತ್ತು ಆರಂಭಗೊಳ್ಳುತ್ತಿದ್ದು, ಭಾರತ ಮುಖಾಮುಖಿ ನಾಳೆಯಿಂದ ( ಸೆಪ್ಟೆಂಬರ್ 4 ) ಶುರುವಾಗಲಿವೆ. ಟೀಮ್ ಇಂಡಿಯಾ ಈ ಸುತ್ತಿನಲ್ಲಿ ಭಾಗವಹಿಸಲಿರುವ ಎಲ್ಲಾ ಮೂರು ತಂಡಗಳ ವಿರುದ್ಧ ತಲಾ ಒಂದೊಂದು ಪಂದ್ಯದಲ್ಲಿ ಭಾಗವಹಿಸಲಿದ್ದು, ಮೊದಲಿಗೆ ಪಾಕಿಸ್ತಾನದ ವಿರುದ್ಧ ಕಣಕ್ಕಿಳಿಯಲಿದೆ. ಉಭಯ ತಂಡಗಳ ನಡುವಿನ ಈ ಪಂದ್ಯ ನಾಳೆ ( ಸೆಪ್ಟೆಂಬರ್ 4 ) ದುಭೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಇದು ಇತ್ತಂಡಗಳ ನಡುವೆ ಈ ಬಾರಿಯ ಏಷ್ಯಾ ಕಪ್ ಟೂರ್ನಿಯಲ್ಲಿ ನಡೆಯಲಿರುವ ಎರಡನೇ ಮುಖಾಮುಖಿಯಾಗಿದೆ.

Asia Cup 2022: ಅತಿಹೆಚ್ಚು ಡಕ್ಔಟ್ ಕೆಟ್ಟ ದಾಖಲೆಯಲ್ಲಿ ರೋಹಿತ್, ರಾಹುಲ್ ನಾ ಮುಂದು ತಾ ಮುಂದು!Asia Cup 2022: ಅತಿಹೆಚ್ಚು ಡಕ್ಔಟ್ ಕೆಟ್ಟ ದಾಖಲೆಯಲ್ಲಿ ರೋಹಿತ್, ರಾಹುಲ್ ನಾ ಮುಂದು ತಾ ಮುಂದು!

ಆಗಸ್ಟ್ 28ರಂದು ನಡೆದಿದ್ದ ಉಭಯ ತಂಡಗಳ ನಡುವಿನ ಗ್ರೂಪ್ ಹಂತದ ಪಂದ್ಯದಲ್ಲಿ ಟೀಮ್ ಇಂಡಿಯಾ ಪಾಕಿಸ್ತಾನದ ವಿರುದ್ಧ 5 ವಿಕೆಟ್‌ಗಳ ರೋಚಕ ಜಯ ಸಾಧಿಸಿತ್ತು. ಇದೀಗ ಪಾಕಿಸ್ತಾನ ಈ ಪಂದ್ಯದಲ್ಲಿ ಗೆದ್ದು ಕಳೆದ ಪಂದ್ಯದ ಸೋಲಿನ ಪ್ರತೀಕಾರವನ್ನು ತೀರಿಸುವ ಯೋಜನೆಯಲ್ಲಿದ್ದರೆ, ಟೀಮ್ ಇಂಡಿಯಾ ಈ ಪಂದ್ಯವನ್ನೂ ಗೆದ್ದು ತನ್ನ ಗೆಲುವಿನ ನಾಗಲೋಟವನ್ನು ಮುಂದುವರೆಸುವತ್ತ ಚಿತ್ತ ನೆಟ್ಟಿದೆ. ಇನ್ನು ಈ ಪಂದ್ಯದ ನೇರಪ್ರಸಾರವನ್ನು ದೂರದರ್ಶನ ಹಾಗೂ ಮೊಬೈಲ್‌ನಲ್ಲಿ ವೀಕ್ಷಿಸುವುದು ಹೇಗೆ ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ.

ನೇರಪ್ರಸಾರ

ನೇರಪ್ರಸಾರ

ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಈ ಸೂಪರ್ 4 ಪಂದ್ಯದ ನೇರಪ್ರಸಾರ ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ಪ್ರಸಾರವಾಗಲಿದೆ ಹಾಗೂ ಮೊಬೈಲ್‌ನಲ್ಲಿ ಡಿಸ್ನೆ ಪ್ಲಸ್ ಹಾಟ್‌ಸ್ಟಾರ್ ಅಪ್ಲಿಕೇಶನ್‌ ಮೂಲಕ ಈ ಪಂದ್ಯದ ನೇರಪ್ರಸಾರವನ್ನು ವೀಕ್ಷಿಸಬಹುದಾಗಿದೆ. ಇನ್ನು ಮೈಖೇಲ್ ವೆಬ್‌ಸೈಟ್‌ಗಳಲ್ಲಿಯೂ ಈ ಪಂದ್ಯದ ಲೈವ್ ಸ್ಕೋರ್ ಅಪ್‌ಡೇಟ್ ಇರಲಿದೆ.

ಭಾರತ ಮತ್ತು ಪಾಕಿಸ್ತಾನ ಸ್ಕ್ವಾಡ್

ಭಾರತ ಮತ್ತು ಪಾಕಿಸ್ತಾನ ಸ್ಕ್ವಾಡ್

ಭಾರತ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಆರ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಶ್ದೀಪ್ ಸಿಂಗ್, ಅವೇಶ್ ಖಾನ್.

ಮೀಸಲು ಆಟಗಾರರು: ಶ್ರೇಯಸ್ ಅಯ್ಯರ್, ದೀಪಕ್ ಚಹಾರ್.

ರವೀಂದ್ರ ಜಡೇಜಾ ಗಾಯದ ಸಮಸ್ಯೆಯಿಂದಾಗಿ ಏಷ್ಯಾಕಪ್‌ನಿಂದ ಹೊರಬಿದ್ದಿದ್ದು ಅಕ್ಷರ್ ಪಟೇಲ್ ಬದಲಿ ಆಟಗಾರನಾಗಿ ಆಯ್ಕೆಯಾಗಿದ್ದಾರೆ.

ಪಾಕಿಸ್ತಾನ: ಬಾಬರ್ ಆಜಮ್ (ನಾಯಕ), ಶಾದಾಬ್ ಖಾನ್, ಆಸಿಫ್ ಅಲಿ, ಫಖರ್ ಜಮಾನ್, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ನಸೀಮ್ ಶಾ, ಶಹನವಾಜ್ ದಹಾನಿ, ಉಸ್ಮಾನ್ ಖಾದಿರ್, ಮೊಹಮ್ಮದ್ ಹಸನೈನ್, ಹಸನ್ ಅಲಿ.

KL Rahul ಬ್ಯಾಟ್‌ನಿಂದ ರನ್‌ಗಳು ಬತ್ತಿ ಹೋಗಿವೆ | Sunil Gavaskar | T20 World Cup | *Cricket | OneIndia
ಇತರೆ ದೇಶಗಳಲ್ಲಿ ನೇರಪ್ರಸಾರ

ಇತರೆ ದೇಶಗಳಲ್ಲಿ ನೇರಪ್ರಸಾರ

ಭಾರತವನ್ನು ಹೊರತುಪಡಿಸಿ ಇತರೆ ದೇಶಗಳಲ್ಲಿ ಈ ಪಂದ್ಯದ ನೇರಪ್ರಸಾರ ಯಾವ ಚಾನೆಲ್‌ಗಳಲ್ಲಿ ಲಭ್ಯವಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ.

PTV ಮತ್ತು ಟೆನ್ ಸ್ಪೋರ್ಟ್ಸ್ ಪಾಕಿಸ್ತಾನದಲ್ಲಿ ಪಂದ್ಯದ ಅಧಿಕೃತ ಪ್ರಸಾರಕರು.

ಬಾಂಗ್ಲಾದೇಶದಲ್ಲಿ ಗಾಜಿ ಟಿವಿ ಪಂದ್ಯವನ್ನು ಪ್ರಸಾರ ಮಾಡಲಿದೆ.

ಅರಿಯಾನಾ ಟಿವಿ ಅಫ್ಘಾನಿಸ್ತಾನದಲ್ಲಿ ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ಪ್ರಸ್ತುತಪಡಿಸುತ್ತದೆ.

ಫಾಕ್ಸ್ ಸ್ಪೋರ್ಟ್ಸ್ ಆಸ್ಟ್ರೇಲಿಯಾದಲ್ಲಿ ಪಂದ್ಯದ ಲೈವ್‌ ಅನ್ನು ಪ್ರಸ್ತುತಪಡಿಸುತ್ತದೆ.

ಸ್ಕೈ ಸ್ಪೋರ್ಟ್ಸ್ ನ್ಯೂಜಿಲೆಂಡ್‌ನಲ್ಲಿ ಪಂದ್ಯದ ಲೈವ್ ಆಕ್ಷನ್ ಅನ್ನು ಪ್ರಸ್ತುತಪಡಿಸುತ್ತದೆ.

ದಕ್ಷಿಣ ಆಫ್ರಿಕಾದಲ್ಲಿ, ಸೂಪರ್‌ಸ್ಪೋರ್ಟ್ ನೆಟ್‌ವರ್ಕ್ ಪಂದ್ಯದ ಲೈವ್-ಆಕ್ಷನ್ ಅನ್ನು ಪ್ರಸ್ತುತಪಡಿಸುತ್ತದೆ.

ವಿಲೋ ಟಿವಿ USA ನಲ್ಲಿ ಪಂದ್ಯದ ನೇರ ಕ್ರಿಯೆಯನ್ನು ಪ್ರಸ್ತುತಪಡಿಸುತ್ತದೆ.

ಯುಕೆಯಲ್ಲಿ, ಸ್ಕೈ ಸ್ಪೋರ್ಟ್ಸ್ ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ಪ್ರಸ್ತುತಪಡಿಸುತ್ತದೆ.

ಯುಎಇಯಂತಹ ಮಧ್ಯಪ್ರಾಚ್ಯ ಪ್ರದೇಶಗಳಲ್ಲಿ, ಓಎಸ್ಎನ್ ಸ್ಪೋರ್ಟ್ಸ್ ಕ್ರಿಕೆಟ್ ಪಂದ್ಯದ ನೇರ ಪ್ರಸಾರವನ್ನು ಪ್ರಸ್ತುತಪಡಿಸುತ್ತದೆ.

Story first published: Saturday, September 3, 2022, 17:31 [IST]
Other articles published on Sep 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X