ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Asia Cup 2022: ಈಗಲೇ ಭಾರತಕ್ಕೆ ಎಚ್ಚರಿಕೆ ನೀಡಿದ ಬಾಬರ್ ಅಜಂ ನಾಯಕತ್ವದ ಪಾಕ್ ಟೀಂ

Asia Cup 2022 IND vs PAK: Babar Azam-led By Pakistan Team Gave A Warning To Team India

ಏಷ್ಯಾ ಕಪ್ 2022ರಲ್ಲಿ ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ವಿರುದ್ಧ ಆಗಸ್ಟ್ 28ರಂದು ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡ ದೊಡ್ಡ ಹಣಾಹಣಿಗೆ ಸಜ್ಜಾಗುತ್ತಿದೆ.

ಏಷ್ಯಾ ಕಪ್‌ಗೆ ಮುಂಚಿತವಾಗಿ ಮೆನ್ ಇನ್ ಗ್ರೀನ್ ಪಾಕಿಸ್ತಾನ ತಂಡ ನೆದರ್‌ಲ್ಯಾಂಡ್ಸ್‌ನಲ್ಲಿ ಏಕದಿನ ಸರಣಿಯ ಪ್ರವಾಸದಲ್ಲಿದ್ದಾರೆ. ಅಲ್ಲಿ ಅವರು ಮೂರು ಏಕದಿನ ಪಂದ್ಯಗಳನ್ನು ಆಡಲು ನಿರ್ಧರಿಸಿದ್ದಾರೆ. ಏಕದಿನ ಸರಣಿಯ ಮೊದಲ ಪಂದ್ಯವು ಇಂದು (ಆಗಸ್ಟ್ 16, ಮಂಗಳವಾರ) ರೋಟರ್‌ಡ್ಯಾಮ್‌ನ ಹಝೆಲಾರ್ವೆಗ್‌ನಲ್ಲಿ ನಡೆಯುತ್ತಿದೆ.

IND vs ZIM: ಕೆಎಲ್ ರಾಹುಲ್‌ ನಾಯಕನಾಗಿ ಮರಳಿದ್ದಕ್ಕೆ ಶಿಖರ್ ಧವನ್ ಪ್ರತಿಕ್ರಿಯೆ ಹೀಗಿತ್ತು

ಪಾಕಿಸ್ತಾನದ ಆರಂಭಿಕ ಬ್ಯಾಟ್ಸ್‌ಮನ್ ಫಖರ್ ಜಮಾನ್ ಮತ್ತು ನಾಯಕ ಬಾಬರ್ ಅಜಂ ದೊಡ್ಡ ಹೊಡೆತದ ಮೂಲಕ ನೆದರ್‌ಲ್ಯಾಂಡ್ಸ್ ವಿರುದ್ಧ ಪಾಕಿಸ್ತಾನ ದೊಡ್ಡ ಮೊತ್ತ ದಾಖಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಫಖರ್ ಜಮಾನ್ (109) ಶತಕ ಬಾರಿಸಿದರೆ, ಬಾಬರ್ ಅಜಂ (74) ರನ್ ಬಾರಿಸುವುದರೊಂದಿಗೆ ಪಾಕಿಸ್ತಾನದ ಈ ಜೋಡಿಯು ಏಷ್ಯಾ ಕಪ್ 2022ರ ಹಣಾಹಣಿಗೆ ಮುಂಚಿತವಾಗಿ ಭಾರತಕ್ಕೆ ದೊಡ್ಡ ಎಚ್ಚರಿಕೆಯನ್ನು ಕಳುಹಿಸಿದೆ.

ಜಿಂಬಾಬ್ವೆಗೆ ಎರಡನೇ ತಂಡವನ್ನು ಕಳುಹಿಸಿದ ಭಾರತ

ಜಿಂಬಾಬ್ವೆಗೆ ಎರಡನೇ ತಂಡವನ್ನು ಕಳುಹಿಸಿದ ಭಾರತ

ಪಾಕಿಸ್ತಾನವು ತಮ್ಮ ಆಟಗಾರರನ್ನು ಪ್ರಮುಖ ಟೂರ್ನಿಗೆ ಸಿದ್ಧಗೊಳಿಸಲು ನೆದರ್ಲೆಂಡ್ಸ್‌ಗೆ ತಮ್ಮ ಬಲಿಷ್ಠ ತಂಡವನ್ನು ಕಳುಹಿಸಿದರೆ, ಮತ್ತೊಂದೆಡೆ ಭಾರತವು ಜಿಂಬಾಬ್ವೆಗೆ ತನ್ನ ಎರಡನೇ ಸ್ಟ್ರಿಂಗ್ ತಂಡವನ್ನು ಕಳುಹಿಸಿದೆ. ಜಿಂಬಾಬ್ವೆಯಲ್ಲಿ ಭಾರತ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡುತ್ತಿದೆ.

ಕಳೆದ ವಾರದ ಆರಂಭದಲ್ಲಿ, ಪಾಕಿಸ್ತಾನ ದೇಶದ ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಿತಾರಾ-ಎ-ಪಾಕಿಸ್ತಾನ ಪ್ರಶಸ್ತಿಯನ್ನು ಬಾಬರ್‌ ಅಜಂಗೆ ನೀಡಲಾಗಿದೆ. ಬಾಬರ್ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದ ಪಾಕಿಸ್ತಾನದ ಅತ್ಯಂತ ಕಿರಿಯ ಕ್ರಿಕೆಟಿಗ ಮತ್ತು ಈ ಪ್ರಶಸ್ತಿಯು ಪಾಕಿಸ್ತಾನದ ಮೂರನೇ ಅತ್ಯುನ್ನತ ನಾಗರಿಕ ಗೌರವವಾಗಿದೆ.

ಏಷ್ಯಾ ಕಪ್ 2022ಗಾಗಿ ಭಾರತ ಮತ್ತು ಪಾಕಿಸ್ತಾನ ತಂಡ

ಏಷ್ಯಾ ಕಪ್ 2022ಗಾಗಿ ಭಾರತ ಮತ್ತು ಪಾಕಿಸ್ತಾನ ತಂಡ

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್.

ಸ್ಟ್ಯಾಂಡ್‌ಬೈ ಆಟಗಾರರು: ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ದೀಪಕ್ ಚಹಾರ್

ಪಾಕಿಸ್ತಾನ ತಂಡ: ಬಾಬರ್ ಅಜಂ (ನಾಯಕ), ಮೊಹಮ್ಮದ್ ರಿಜ್ವಾನ್, ಫಖರ್ ಜಮಾನ್, ಹೈದರ್ ಅಲಿ, ಶಾದಾಬ್ ಖಾನ್ (ಉಪನಾಯಕ), ಆಸಿಫ್ ಅಲಿ, ಮೊಹಮ್ಮದ್ ನವಾಜ್, ಹ್ಯಾರಿಸ್ ರೌಫ್, ನಸೀಮ್ ಶಾ, ಶಾಹೀನ್ ಶಾ ಆಫ್ರಿದಿ, ಉಸ್ಮಾನ್ ಖಾದಿರ್

ಭಾರತದಲ್ಲಿ ಏಷ್ಯಾ ಕಪ್ 2022 ಪಂದ್ಯವನ್ನು ಎಲ್ಲಿ ವೀಕ್ಷಿಸಬೇಕು?

ಭಾರತದಲ್ಲಿ ಏಷ್ಯಾ ಕಪ್ 2022 ಪಂದ್ಯವನ್ನು ಎಲ್ಲಿ ವೀಕ್ಷಿಸಬೇಕು?

ಏಷ್ಯಾ ಕಪ್ 2022 ಸ್ಟಾರ್ ಸ್ಪೋರ್ಟ್ಸ್ ಅನ್ನು ತಮ್ಮ ಅಧಿಕೃತ ಬ್ರಾಡ್‌ಕಾಸ್ಟರ್ ಪಾಲುದಾರರನ್ನಾಗಿ ಹೊಂದಿದ್ದು, ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ನಲ್ಲಿ ಪ್ರಸಾರಗೊಳ್ಳಲಿದೆ.

ಭಾರತದಲ್ಲಿ ನಾನು ಏಷ್ಯಾ ಕಪ್ 2022 ಅನ್ನು ಎಲ್ಲಿ ಲೈವ್-ಸ್ಟ್ರೀಮ್ ಮಾಡಬಹುದು?
ಏಷ್ಯಾ ಕಪ್ 2022 ಅನ್ನು ಡಿಸ್ನಿ+ ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್-ಸ್ಟ್ರೀಮ್ ಮಾಡಬಹುದು.

ಯಾವ ಗುಂಪಿನಲ್ಲಿ ಯಾವ ತಂಡ

ಯಾವ ಗುಂಪಿನಲ್ಲಿ ಯಾವ ತಂಡ

ಗುಂಪು ಎ ತಂಡಗಳು
ಭಾರತ vs ಪಾಕಿಸ್ತಾನ: ಆಗಸ್ಟ್ 28, ದುಬೈ

ಭಾರತ ವಿರುದ್ಧ ಕ್ವಾಲಿಫೈಯರ್: 31 ಆಗಸ್ಟ್, ದುವಾಬಿ

ಪಾಕಿಸ್ತಾನ ವಿರುದ್ಧ ಕ್ವಾಲಿಫೈಯರ್: 2 ಸೆಪ್ಟೆಂಬರ್, ಶಾರ್ಜಾ

ಗುಂಪು ಬಿ ತಂಡಗಳು
ಶ್ರೀಲಂಕಾ ವಿರುದ್ಧ ಅಫ್ಘಾನಿಸ್ತಾನ: 27 ಆಗಸ್ಟ್, ದುಬೈ

ಬಾಂಗ್ಲಾದೇಶ ವಿರುದ್ಧ ಅಫ್ಘಾನಿಸ್ತಾನ, ಆಗಸ್ಟ್ 30, ಶಾರ್ಜಾ

ಶ್ರೀಲಂಕಾ v ಬಾಂಗ್ಲಾದೇಶ, 1 ಸೆಪ್ಟೆಂಬರ್, ದುಬೈ

Story first published: Tuesday, August 16, 2022, 21:59 [IST]
Other articles published on Aug 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X