ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ ಲೆಜೆಂಡ್: ಹಸ್ತಾಕ್ಷರ ನೀಡಿದ್ದ ವಿರಾಟ್ ಕುರಿತಾಗಿ ಪಾಕ್ ಕ್ರಿಕೆಟಿಗನ ಮೆಚ್ಚುಗೆ

Haris rauf

ಭಾರತ-ಪಾಕಿಸ್ತಾನ ತಂಡಗಳು ಏಷ್ಯಾಕಪ್‌ 2022ರ ಟೂರ್ನಿಯಲ್ಲಿ ಎರಡನೇ ಬಾರಿಗೆ ಭಾನುವಾರ ಮುಖಾಮುಖಿಯಾಗುತ್ತಿವೆ. ಗ್ರೂಪ್‌ ಹಂತದಲ್ಲಿ ಗೆದ್ದ ಟೀಂ ಇಂಡಿಯಾ ಇದೀಗ ಸೂಪರ್ 4 ಸ್ಟೇಜ್‌ನಲ್ಲಿ ಪಾಕ್ ತಂಡದೆದುರು ಕಣಕ್ಕಿಳಿಯುತ್ತಿದೆ.

ಹಾಂಕಾಂಗ್ ವಿರುದ್ಧ ದಾಖಲೆಯ 155ರನ್‌ಗಳ ಗೆಲುವು ಪಡೆದ ಬಳಿಕ ಪಾಕಿಸ್ತಾನ ತಂಡವು ಬಹಳ ಹುರುಪಿನಲ್ಲಿದೆ. ಬಾಬರ್ ಅಜಮ್ ನಾಯಕತ್ವದ ಟೀಂ ಭಾರತಕ್ಕೆ ತಿರುಗೇಟು ನೀಡಲೇಬೇಕೆಂದು ಪಣತೊಟ್ಟಿರುವ ಬೆನ್ನಲ್ಲೇ ಪಾಕಿಸ್ತಾನದ ಪ್ರಮುಖ ಬೌಲರ್ ಹ್ಯಾರಿಸ್ ರೌಫ್‌ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಕುರಿತು ಹೊಗಳಿಕೆಯ ಮಾತನಾಡಿದ್ದಾರೆ.

ಮೊದಲ ಪಂದ್ಯದ ನಂತರ ಹ್ಯಾರಿಸ್‌ಗೆ ಜೆರ್ಸಿ ಉಡುಗೊರೆ ನೀಡಿದ ಕೊಹ್ಲಿ

ಪ್ರಸಕ್ತ ಏಷ್ಯಾಕಪ್‌ನಲ್ಲಿ ಭಾರತ-ಪಾಕಿಸ್ತಾನ ನಡುವಿನ ಮೊದಲ ಪಂದ್ಯದ ಕೊನೆಯಲ್ಲಿ ವಿರಾಟ್ ಕೊಹ್ಲಿ ಹ್ಯಾರಿಸ್‌ಗೆ ತಮ್ಮ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದರು. ಈ ಕುರಿತು ಹ್ಯಾರಿಸ್, "ಅವರಿಂದ ಜೆರ್ಸಿ ಪಡೆಯಲು ನಾನು ಬಹಳ ಹಿಂದೆಯೇ ವಿನಂತಿಸಿದ್ದೆ. ನಾವು ಒಂದರ ಹಿಂದೆ ಮತ್ತೊಂದು ಪಂದ್ಯಗಳನ್ನು ಆಡುತ್ತಿದ್ದೇವೆ. ಆದ್ರೂ ವಿರಾಟ್ ಭಾಯ್ ತಮ್ಮ ದೇಶಕ್ಕಾಗಿ ಸಾಕಷ್ಟು ಪ್ರದರ್ಶನ ನೀಡಿದ್ದಾರೆ, ಅವರೊಬ್ಬ ಲೆಜೆಂಡ್‌, ಅವರಿಂದ ನಾವು ಕಲಿಯಬಹುದು. ಅವರೊಂದಿಗೆ ಮಾತನಾಡುವಾಗ ನನಗೆ ಅವರ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದರು ಮತ್ತು ನನ್ನೊಂದಿಗೆ ಮಾತನಾಡಿದ್ದಕ್ಕಾಗಿ ನಾನು ಅವರಿಗೆ ಧನ್ಯವಾದಗಳನ್ನ ಅರ್ಪಿಸುತ್ತೇನೆ'' ಎಂದಿದ್ದಾರೆ.

''ನೀವು ಅವರೊಂದಿಗೆ ಮಾತನಾಡುವಾಗ, ನೀವು ಯಾವಾಗಲೂ ಬಹಳಷ್ಟು ಕಲಿಯುತ್ತೀರಿ. ನಾನು ಅವರಿಂದ ಶರ್ಟ್ ಪಡೆಯುವ ಬಗ್ಗೆ ಮೊದಲೇ ಮಾತನಾಡಿದ್ದೆ, ಆದ್ದರಿಂದ ಕೊಹ್ಲಿ ಆ ಪಂದ್ಯದ ನಂತರ ನನಗೆ ಜೆರ್ಸಿ ಕೊಟ್ಟರು, ನಿಜವಾಗಿಯೂ ಈಗ ಸಂತೋಷವಾಗಿದೆ" ಎಂದು ರೌಫ್ ಹೇಳಿದ್ದಾರೆ.

ಪಂದ್ಯ ಪೂರ್ವ ಪತ್ರಿಕಾಗೋಷ್ಟಿಯಲ್ಲಿ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಹ್ಯಾರಿಸ್‌ ಕೊಹ್ಲಿಯನ್ನ ಹೊಗಳುವುದರ ಜೊತೆಗೆ ಭಾರತದ ಎದುರು ತನ್ನ ಗೇಮ್‌ ಪ್ಲಾನ್ ಅನ್ನು ಬಿಚ್ಚಿಟ್ಟಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಮಹತ್ವದ ಘೋಷಣೆ: ಮುಂದಿನ ಐಪಿಎಲ್ ಟೂರ್ನಿಗೆ ಈತನೇ ನಾಯಕ!

ಹೆಚ್ಚು ಡಾಟ್ ಬಾಲ್‌ ಮಾಡುವುದು ಗುರಿಯಾಗಿದೆ, ವಿಕೆಟ್‌ಗಳಲ್ಲ!

ಹೆಚ್ಚು ಡಾಟ್ ಬಾಲ್‌ ಮಾಡುವುದು ಗುರಿಯಾಗಿದೆ, ವಿಕೆಟ್‌ಗಳಲ್ಲ!

ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಭಾರತದ ಮಧ್ಯಮ ಕ್ರಮಾಂಕದ ಆಟಗಾರರನ್ನು ನಿಯಂತ್ರಿಸುವ ಜವಾಬ್ದಾರಿ ಹ್ಯಾರಿಸ್ ರೌಫ್‌ ಅವರ ಮೇಲಿದೆ. "ವಿಕೆಟ್ ಪಡೆಯುವ ಬಗ್ಗೆ ನನಗೆ ಚಿಂತೆಯಿಲ್ಲ. ಟಿ20 ಕ್ರಿಕೆಟ್‌ನಲ್ಲಿ ಸಾಧ್ಯವಾದಷ್ಟು ಡಾಟ್ ಬಾಲ್‌ಗಳನ್ನು ಮಾಡುವುದು ನನ್ನ ಗುರಿ. ಟಿ20 ಕ್ರಿಕೆಟ್‌ನಲ್ಲಿ ನೀವು ಹೆಚ್ಚು ಡಾಟ್ ಬಾಲ್‌ಗಳನ್ನು ಮಾಡಿದ್ರೆ, ನಿಮಗೆ ವಿಕೆಟ್ ಪಡೆಯುವ ಹೆಚ್ಚಿನ ಅವಕಾಶಗಳಿವೆ''

''ನಾವು ಒಂದು ಯೋಜನೆಯನ್ನು ಹೊಂದಿದ್ದೇವೆ. ಡೆತ್ ಬೌಲಿಂಗ್‌ನಲ್ಲಿ, ಪಿಚ್‌ಗೆ ಅನುಗುಣವಾಗಿ ನಿಧಾನವಾದ ಬಾಲ್ ಅಥವಾ ಯಾರ್ಕರ್ ಅನ್ನು ಬೌಲ್ ಮಾಡಬೇಕೆ ಎಂದು ನೀವು ನಿರ್ಧರಿಸಬೇಕು. ಸೂರ್ಯಕುಮಾರ್ ಯಾದವ್ ಅಥವಾ ಹಾರ್ದಿಕ್ ಪಾಂಡ್ಯರಂತಹ ಗುಣಮಟ್ಟದ ಕ್ರಿಕೆಟಿಗನ ವಿರುದ್ಧ, ನೀವು ನಿಮ್ಮ ಕೌಶಲ್ಯಕ್ಕೆ ಅಂಟಿಕೊಳ್ಳಬೇಕು. ಅವರ ದುರ್ಬಲ ಸ್ಥಳಗಳನ್ನು ಹುಡುಕಿ, ಅಲ್ಲಿ ಬೌಲ್ ಮಾಡಲು ಪ್ರಯತ್ನಿಸುತ್ತೇನೆ." ಎಂದು ಹ್ಯಾರಿಸ್ ಹೇಳಿದ್ದಾರೆ

ಏಷ್ಯಾ ಕಪ್: ಮತ್ತೆ ಭಾರತ ಪಾಕ್ ಮುಖಾಮುಖಿ: ರೋಚಕ ಕದನಕ್ಕೆ ಇತ್ತಂಡಗಳು ಸಜ್ಜು!

ಶಾಹೀನ್ ಶಾ ಆಫ್ರಿದಿ ಅವರ ಅನುಪಸ್ಥಿತಿಯಲ್ಲಿ ಬೌಲಿಂಗ್ ನೊಗ ಹೊರಬೇಕಿದೆ

ಶಾಹೀನ್ ಶಾ ಆಫ್ರಿದಿ ಅವರ ಅನುಪಸ್ಥಿತಿಯಲ್ಲಿ ಬೌಲಿಂಗ್ ನೊಗ ಹೊರಬೇಕಿದೆ

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹ್ಯಾರಿಸ್ ರೌಫ್ ಯಾವಾಗಲೂ ಶಾಹೀನ್ ಶಾ ಆಫ್ರಿದಿಯ ಹಿಂದೆ ಉಳಿದಿದ್ದಾರೆ. ಆದರೆ, ಶಾಹೀನ್ ಅನುಪಸ್ಥಿತಿಯು ಪಾಕಿಸ್ತಾನಕ್ಕೆ ದೊಡ್ಡ ನಷ್ಟವಾಗಿದೆ. ಅಫ್ರಿದಿ ಅನುಪಸ್ಥಿತಿಯಲ್ಲಿ ಏಷ್ಯಾಕಪ್‌ನಲ್ಲಿ ಪಾಕಿಸ್ತಾನದ ಬೌಲಿಂಗ್ ಅನ್ನು ಮುನ್ನಡೆಸುವ ಜವಾಬ್ದಾರಿ ರೌಫ್ ಮೇಲಿದೆ.

ಬೌಲಿಂಗ್ ಜೊತೆಗಾರ ಶಾಹಿನ್ ಅನುಪಸ್ಥಿತಿಯ ಕುರಿತು ಮಾತನಾಡಿದ ರೌಫ್, "ಶಾಹಿನ್ ಆರಂಭಿಕ ವಿಕೆಟ್‌ಗಳನ್ನು ಪಡೆಯುವ ಸಾಮರ್ಥ್ಯ ಹೊಂದಿದ್ದಾರೆ. ನಾನು ಬೌಲಿಂಗ್ ಮಾಡಲು ಬಂದಾಗ ಅದು ನನಗೆ ತುಂಬಾ ಆತ್ಮವಿಶ್ವಾಸವನ್ನು ನೀಡುತ್ತಾರೆ. ಬೌಲಿಂಗ್‌ನಲ್ಲಿ ಪಾಲುದಾರಿಕೆಯೂ ಮುಖ್ಯವಾಗಿದೆ. ನಾನು ಶಾಹಿನ್ ಜೊತೆ ಬಹಳ ಸಮಯದಿಂದ ಆಡುತ್ತಿದ್ದೇನೆ. ಆದ್ರೆ ಅವರು ತಂಡದಲ್ಲಿರುವುದು ಹಿನ್ನಡೆಯಾಗಿದೆ'' ಎಂದು ಹ್ಯಾರಿಸ್ ರೌಫ್ ಹೇಳಿದ್ದಾರೆ.

Story first published: Sunday, September 4, 2022, 12:43 [IST]
Other articles published on Sep 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X