ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Asia Cup 2022: ಒಂದು ದಿನ ಮುನ್ನವೇ ಲೀಕ್ ಆಯ್ತು ಪಾಕ್ ವಿರುದ್ಧ ಆಡುವ ಭಾರತ ತಂಡದ ಆಟಗಾರರ ಪಟ್ಟಿ

Asia Cup 2022: India leaked playing 11 against Pakistan; Dinesh Karthik to play instead of D Hooda

ಇಂದು ( ಆಗಸ್ಟ್ 27 ) ನಡೆಯುತ್ತಿರುವ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನಗಳ ನಡುವಿನ ಪಂದ್ಯದ ಮೂಲಕ ಹದಿನೈದನೇ ಆವೃತ್ತಿಯ ಏಷ್ಯಾಕಪ್ ಟೂರ್ನಿ ಆರಂಭವನ್ನು ಪಡೆದುಕೊಂಡಿದೆ. ಹಾಗೂ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ನಾಳೆ ( ಆಗಸ್ಟ್ 28 ) ಸಂಜೆ 7.30ಕ್ಕೆ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿದೆ.

Asia Cup 2022: ಆ ಓರ್ವ ಆಟಗಾರನಿಂದಾಗಿ ಪಾಕ್ ವಿರುದ್ಧ ಅವಕಾಶ ಸಿಗದೇ ಬೆಂಚ್ ಕಾಯಲಿದ್ದಾರೆ ಡಿಕೆ!Asia Cup 2022: ಆ ಓರ್ವ ಆಟಗಾರನಿಂದಾಗಿ ಪಾಕ್ ವಿರುದ್ಧ ಅವಕಾಶ ಸಿಗದೇ ಬೆಂಚ್ ಕಾಯಲಿದ್ದಾರೆ ಡಿಕೆ!

ಟೂರ್ನಿ ಇಂದು ಆರಂಭಗೊಂಡಿದ್ದರೂ ಸಹ ನಾಳೆ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯಕ್ಕಾಗಿ ಕ್ರಿಕೆಟ್ ಅಭಿಮಾನಿಗಳು ದೊಡ್ಡ ಪ್ರಮಾಣದಲ್ಲಿ ಕಾಯುತ್ತಿದ್ದು, ಬದ್ಧ ವೈರಿಗಳ ಕಾದಾಟದ ನೇರಪ್ರಸಾರವನ್ನು ವೀಕ್ಷಿಸಲು ತುದಿಗಾಲಲ್ಲಿ ನಿಂತಿದ್ದಾರೆ.

ಈ ಬಾರಿ ಏಷ್ಯಾಕಪ್‌ನಲ್ಲಿ ಆಡಲಿರುವ 5 ತಂಡಗಳ ವಿರುದ್ಧ ಹೆಚ್ಚು ರನ್ ಗಳಿಸಿದವರಲ್ಲಿ ಕೊಹ್ಲಿಗಿಂತ ರೋಹಿತ್ ಮುಂದು!ಈ ಬಾರಿ ಏಷ್ಯಾಕಪ್‌ನಲ್ಲಿ ಆಡಲಿರುವ 5 ತಂಡಗಳ ವಿರುದ್ಧ ಹೆಚ್ಚು ರನ್ ಗಳಿಸಿದವರಲ್ಲಿ ಕೊಹ್ಲಿಗಿಂತ ರೋಹಿತ್ ಮುಂದು!

ಅದರಲ್ಲಿಯೂ ಕಳೆದ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಹೀನಾಯ ಸೋಲನ್ನು ಕಂಡಿದ್ದ ಕಾರಣ ಈ ಬಾರಿ ಏಷ್ಯಾಕಪ್ ಟೂರ್ನಿಯ ಮುಖಾಮುಖಿಯಲ್ಲಿ ಬಲಿಷ್ಠ ತಂಡದೊಂದಿಗೆ ಕಣಕ್ಕಿಳಿದು ಪ್ರತೀಕಾರ ತೀರಿಸಿಕೊಳ್ಳುವ ಯೋಜನೆಯಲ್ಲಿದೆ. ಇನ್ನು ಈ ಭಾರಿಯ ಏಷ್ಯಾಕಪ್ ಟೂರ್ನಿಗೆ 15 ಆಟಗಾರರ ತಂಡವನ್ನು ಬಿಸಿಸಿಐ ಪ್ರಕಟಿಸಿದ್ದು, ಈ ಪೈಕಿ ಯಾವ ಆಟಗಾರರಿಗೆ ಪಾಕಿಸ್ತಾನ ವಿರುದ್ಧದ ಪ್ರಮುಖ ಪಂದ್ಯದಲ್ಲಿ ಕಣಕ್ಕಿಳಿಯುವ ಅವಕಾಶ ಸಿಗಲಿದೆ ಎಂಬ ಕುತೂಹಲ ಹಾಗೂ ಪ್ರಶ್ನೆ ಮೂಡಿದೆ.

Asia Cup 2022: ಟಿವಿ, ಮೊಬೈಲ್ ಮಾತ್ರವಲ್ಲ, ಈ ಚಿತ್ರಮಂದಿರಗಳಲ್ಲೂ ಭಾರತ vs ಪಾಕ್ ಪಂದ್ಯದ ನೇರಪ್ರಸಾರ! ಟಿಕೆಟ್ ದರವೆಷ್ಟು?Asia Cup 2022: ಟಿವಿ, ಮೊಬೈಲ್ ಮಾತ್ರವಲ್ಲ, ಈ ಚಿತ್ರಮಂದಿರಗಳಲ್ಲೂ ಭಾರತ vs ಪಾಕ್ ಪಂದ್ಯದ ನೇರಪ್ರಸಾರ! ಟಿಕೆಟ್ ದರವೆಷ್ಟು?

ಅದರಲ್ಲಿಯೂ ಇತ್ತೀಚೆಗೆ ಟಿ ಟ್ವೆಂಟಿ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಭಾರತ ತಂಡಕ್ಕೆ ಮರಳಿರುವ ದಿನೇಶ್ ಕಾರ್ತಿಕ್ ಅವರಿಗೆ ಸ್ಥಾನ ಸಿಗುತ್ತಾ ಅಥವಾ ದೀಪಕ್ ಹೂಡಾ ಅವರಿಗೆ ಸ್ಥಾನ ಸಿಗುತ್ತಾ ಎಂಬ ಪ್ರಶ್ನೆ ಮೂಡಿತ್ತು. ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಕೆಎಲ್ ರಾಹುಲ್ ಆಡುವ ಬಳಗದ ಮಾಹಿತಿ ನೀಡಲಿದ್ದಾರೆ ಎಂಬ ನಿರೀಕ್ಷೆ ಇತ್ತು ಆದರೆ ರಾಹುಲ್ ಕೂಡ ಈ ಕುರಿತು ಸುಳಿವು ನೀಡಲಿಲ್ಲ. ಆದರೆ ಇದೀಗ ಇಂಡಿಯನ್ ಕ್ರಿಕೆಟ್ ಟೀಮ್ ತನ್ನ ಅಧಿಕೃತ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹೊಸ ಪೋಸ್ಟ್ ಮಾಡಿದ್ದು, ಇದರಲ್ಲಿ ಹಂಚಿಕೊಂಡಿರುವ ಚಿತ್ರಗಳು ಪಾಕ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುಬಹುದಾದ ಭಾರತ ತಂಡದ ಸುಳಿವನ್ನು ನೀಡಿದಂತಿದೆ.

ಅಭ್ಯಾಸದ ಚಿತ್ರ ಹಂಚಿಕೊಂಡ ತಂಡ, ಪ್ಲೇಯಿಂಗ್ ಇಲೆವೆನ್ ಬಯಲು?

ಮೀಸಲು ಆಟಗಾರರು ಸೇರಿದಂತೆ ಟೀಮ್ ಇಂಡಿಯಾ ಏಷ್ಯಾಕಪ್ ಟೂರ್ನಿಗೆ ಒಟ್ಟು 18 ಆಟಗಾರರನ್ನು ಪ್ರಕಟಿಸಿದೆ. ಆದರೆ ಪಾಕ್ ವಿರುದ್ಧದ ಪಂದ್ಯದ ಹಿಂದಿನ ದಿನ ಇಂಡಿಯನ್ ಕ್ರಿಕೆಟ್ ಟೀಮ್ ತನ್ನ ಅಧಿಕೃತ ಇನ್ ಸ್ಟಾಗ್ರಾಂ ಖಾತೆಯಲ್ಲಿ ಅಭ್ಯಾಸ ನಡೆಸಿರುವ ಎಲ್ಲಾ ಆಟಗಾರರ ಚಿತ್ರವನ್ನು ಹಂಚಿಕೊಳ್ಳುವ ಬದಲು ಕೇವಲ 11 ಆಟಗಾರರ ಚಿತ್ರಗಳನ್ನು ಹಂಚಿಕೊಂಡಿದೆ. ಅದರಲ್ಲಿಯೂ ಆರಂಭಿಕ ಆಟಗಾರರಿಂದ ಹಿಡಿದು ಅಂತಿಮ ಬೌಲರ್ ತನಕ ಕ್ರಮವಾಗಿ ಚಿತ್ರಗಳನ್ನು ಹಂಚಿಕೊಂಡಿರುವುದು ಇದೀಗ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಇಲ್ಲಿ ಹಂಚಿಕೊಳ್ಳಲಾಗಿರುವ 11 ಆಟಗಾರರೇ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುತ್ತಾರಾ ಎಂಬ ಅನುಮಾನ ಇದೀಗ ಶುರುವಾಗಿದೆ. ಹೀಗೆ ಟೀಮ್ ಇಂಡಿಯಾ ಚಿತ್ರಗಳನ್ನು ಹಂಚಿಕೊಳ್ಳುವುದರ ಮೂಲಕ ಆಡುವ ಬಳಗದ ಬಗ್ಗೆ ಸುಳಿವು ಕೊಟ್ಟಿದೆಯಾ ಎಂಬ ಚರ್ಚೆ ಆರಂಭವಾಗಿದೆ.

ಹೂಡಾ ಬೆಂಚ್, ಡಿಕೆಗೆ ಅವಕಾಶ

ಹೂಡಾ ಬೆಂಚ್, ಡಿಕೆಗೆ ಅವಕಾಶ

ಟೀಮ್ ಇಂಡಿಯಾ ಹಂಚಿಕೊಂಡಿರುವ ಈ 11 ಆಟಗಾರರ ಚಿತ್ರಗಳಲ್ಲಿ ದಿನೇಶ್ ಕಾರ್ತಿಕ್ ಏಳನೇ ಆಟಗಾರನಾಗಿದ್ದಾರೆ. ಈ ಮೂಲಕ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಆಡುವ ಬಳಗದಲ್ಲಿ ಇರಲಿದ್ದು ದೀಪಕ್ ಹೂಡ ಹೊರಬೀಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಚಿತ್ರದಲ್ಲಿರುವ ಹನ್ನೊಂದು ಆಟಗಾರರು ಯಾರು?

ಚಿತ್ರದಲ್ಲಿರುವ ಹನ್ನೊಂದು ಆಟಗಾರರು ಯಾರು?

ಟೀಮ್ ಇಂಡಿಯಾ ಹಂಚಿಕೊಂಡಿರುವ ಹನ್ನೊಂದು ಆಟಗಾರರ ಚಿತ್ರಗಳಲ್ಲಿ ಮೊದಲಿಗೆ ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಇದ್ದಾರೆ. ಈ ಮೂಲಕ ಈ ಇಬ್ಬರು ಆರಂಭಿಕರಾಗಿ ಕಣಕ್ಕಿಳಿಯುವ ಸೂಚನೆ ಸಿಕ್ಕಂತಾಗಿದೆ. ನಂತರ ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್ ಇದ್ದಾರೆ. ಈ ಇಬ್ಬರೂ ಮೂರನೇ ಮತ್ತು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ಐದನೇ ಸ್ಥಾನದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಆರನೇ ಸ್ಥಾನದಲ್ಲಿ ರಿಷಭ್ ಪಂತ್ ಇದ್ದು, ಏಳನೇ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್ ಚಿತ್ರವಿದೆ. ಇನ್ನು ಬೌಲರ್‌ಗಳಾಗಿ ಭುವನೇಶ್ವರ್ ಕುಮಾರ್, ಯಜುವೇಂದ್ರ ಚಾಹಲ್, ಅವೇಶ್ ಖಾನ್ ಹಾಗೂ ಅರ್ಶದೀಪ್ ಸಿಂಗ್ ಅವರ ಚಿತ್ರಗಳಿವೆ. ಈ ಮೂಲಕ ಇಷ್ಟು ಕ್ರಮವಾಗಿ ಚಿತ್ರಗಳನ್ನು ಪೋಸ್ಟ್ ಮಾಡಿರುವುದನ್ನು ಕಂಡ ನೆಟ್ಟಿಗರು ಈ ತಂಡವೇ ಪಾಕ್ ವಿರುದ್ಧ ಕಣಕ್ಕಿಳಿಯಲಿರುವ ಆಡುವ ಬಳಗ ಎಂದು ತಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಿದ್ದಾರೆ.


ಇನ್ನು ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್ ಹಾಗೂ ದೀಪಕ್ ಹೂಡಾ ಚಿತ್ರಗಳು ಈ ಪೋಸ್ಟ್‌ನಲ್ಲಿ ಇಲ್ಲದಿರುವುದು ಸದ್ಯ ಭಾರೀ ಚರ್ಚೆಗೆ ಗ್ರಾಸವಾಗಿದೆ.

Story first published: Saturday, August 27, 2022, 20:49 [IST]
Other articles published on Aug 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X