ಏಷ್ಯಾ ಕಪ್ 2022: ದೊಡ್ಡ ದಾಖಲೆಯ ಮೇಲೆ ಕಣ್ಣಿಟ್ಟ ರವೀಂದ್ರ ಜಡೇಜಾ, ಶಕೀಬ್ ಅಲ್ ಹಸನ್

2022ರ ಏಷ್ಯಾ ಕಪ್ ಯುಎಇಯಲ್ಲಿ ಇದೇ ಆಗಸ್ಟ್ 27ರಂದು ಕಿಕ್‌ಸ್ಟಾರ್ಟ್‌ ಪಡೆಯಲಿದ್ದು, ಟೀಂ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಆಗಸ್ಟ್ 28ರಂದು ದುಬೈನಲ್ಲಿ ಸೆಣಸಾಟ ನಡೆಸಲಿದೆ. ಬದ್ಧ ಎದುರಾಳಿಗಳ ಕಾದಾಟ ವೀಕ್ಷಿಸಲು ಇಡೀ ಕ್ರಿಕೆಟ್ ಲೋಕವೇ ಕಾಯುತ್ತಾ ಕುಳಿತಿದ್ದು, 2021ರ ಟಿ20 ವಿಶ್ವಕಪ್‌ ಬಳಿಕ ಉಭಯ ತಂಡಗಳು ಕಣಕ್ಕಿಳಿಯುತ್ತಿವೆ.

ನಾಲ್ಕು ವರ್ಷಗಳ ಬಳಿಕ ನಡೆಯಲಿರುವ ಏಷ್ಯಾಕಪ್ ಟಿ20 ಟೂರ್ನಿಯು ಆಗಸ್ಟ್ 27ರಿಂದ ಯುಎಇನಲ್ಲಿ ಆರಂಭವಾಗಲಿದೆ. ಇದಕ್ಕೂ ಮೊದಲು ಶ್ರೀಲಂಕಾದಲ್ಲಿ ನಡೆಯಬೇಕಿದ್ದ ಏಷ್ಯಾ ಕಪ್‌ ಟೂರ್ನಿಯನ್ನು ಲಂಕಾ ಆಯೋಜಿಸಲು ವಿಫಲಗೊಂಡ ಕಾರಣ ಮೆಗಾ ಟೂರ್ನಿಗೆ ಯುಎಇಗೆ ಸ್ಥಳಾಂತರಗೊಂಡಿದೆ.

Asia Cup 2022: ಭಾರತ vs ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯದಲ್ಲಿ ಈ ತಂಡ ಗೆಲ್ಲಲಿದೆ; ರಿಕಿ ಪಾಂಟಿಂಗ್Asia Cup 2022: ಭಾರತ vs ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯದಲ್ಲಿ ಈ ತಂಡ ಗೆಲ್ಲಲಿದೆ; ರಿಕಿ ಪಾಂಟಿಂಗ್

ಇನ್ನು ಭಾರತದ ಆಲ್‌ರೌಂಡರ್ ರವೀಂದ್ರ ಜಡೇಜಾ ಮತ್ತು ಬಾಂಗ್ಲಾದೇಶ ನಾಯಕ ಶಕೀಬ್ ಅಲ್ ಹಸನ್ ಪ್ರತಿಷ್ಠಿತ ಏಷ್ಯಾಕಪ್ ಟೂರ್ನಿ ಇತಿಹಾಸದಲ್ಲಿ ಪ್ರಮುಖ ವಿಕೆಟ್ ಟೇಕರ್ ಆಗುವ ಸಮೀಪದಲ್ಲಿದ್ದಾರೆ.

33 ವಿಕೆಟ್‌ಗಳೊಂದಿಗೆ ಮೊದಲ ಸ್ಥಾನದಲ್ಲಿರುವ ಲಸಿತ್ ಮಾಲಿಂಗ

33 ವಿಕೆಟ್‌ಗಳೊಂದಿಗೆ ಮೊದಲ ಸ್ಥಾನದಲ್ಲಿರುವ ಲಸಿತ್ ಮಾಲಿಂಗ

ಶ್ರೀಲಂಕಾದ ಮಾಜಿ ವೇಗಿ ಲಸಿತ್ ಮಾಲಿಂಗ ಪ್ರಸ್ತುತ 4.70ರ ಎಕಾನಮಿ ದರದಲ್ಲಿ 15 ಪಂದ್ಯಗಳಿಂದ 33 ವಿಕೆಟ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಈಗಾಗಲೇ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವ ಲಸಿತ್ ಮಾಲಿಂಗ ಅವರಿಗೆ ತಮ್ಮ ಖಾತೆಯನ್ನು ವಿಸ್ತರಿಸಲು ಅವಕಾಶವಿಲ್ಲ. ಆದರೆ, ರವೀಂದ್ರ ಜಡೇಜಾ ಮತ್ತು ಶಕೀಬ್ ಅಲ ಹಸನ್ ಶ್ರೀಲಂಕಾದ ಬೌಲರ್‌ನ ದಾಖಲೆಯನ್ನು ಅಳಿಸಿ ಹಾಕುವ ಅವಕಾಶವನ್ನು ಹೊಂದಿದ್ದಾರೆ.

ಏಷ್ಯಾ ಕಪ್‌ನಲ್ಲಿ ಪ್ರಮುಖ ವಿಕೆಟ್ ಪಡೆದವರ ಪಟ್ಟಿಯಲ್ಲಿ ಶಕೀಬ್ ಅಲ್ ಹಸನ್ ಪ್ರಸ್ತುತ ಐದನೇ ಸ್ಥಾನದಲ್ಲಿದ್ದಾರೆ. ಬಾಂಗ್ಲಾದೇಶದ ನಾಯಕ 18 ಪಂದ್ಯಗಳಿಂದ 5.05 ಎಕಾನಮಿ ದರದಲ್ಲಿ 24 ವಿಕೆಟ್‌ಗಳನ್ನು ಕಬಳಿಸಿದ್ದು, ಒಂದು ಬಾರಿ ನಾಲ್ಕು ವಿಕೆಟ್‌ಗಳ ಸಾಧನೆಯನ್ನು ಮಾಡಿದ್ದಾರೆ.

22 ವಿಕೆಟ್‌ಗಳೊಂದಿಗಡ ಎಂಟನೇ ಸ್ಥಾನದಲ್ಲಿರುವ ರವೀಂದ್ರ ಜಡೇಜಾ

22 ವಿಕೆಟ್‌ಗಳೊಂದಿಗಡ ಎಂಟನೇ ಸ್ಥಾನದಲ್ಲಿರುವ ರವೀಂದ್ರ ಜಡೇಜಾ

ಇತ್ತೀಚೆಗೆ ಬಾಂಗ್ಲಾದೇಶದ ಟಿ20 ತಂಡದ ನಾಯಕರಾಗಿ ಮಹಮ್ಮದುಲ್ಲಾ ಅವರನ್ನು ಬದಲಿಸಿದ ಶಕೀಬ್ ಅಲ್ ಹಸನ್ ಅವರು ಶ್ರೀಲಂಕಾ ಮಾಜಿ ವೇಗಿ ಲಸಿತ್ ಮಾಲಿಂಗ ಅವರನ್ನು ಮೀರಿಸಲು ಪಂದ್ಯಾವಳಿಯಲ್ಲಿ 10 ವಿಕೆಟ್‌ಗಳನ್ನು ಗಳಿಸಬೇಕಾಗಿದೆ. ಮಗರಾ ಮೂಲದ ಆಲ್‌ರೌಂಡರ್ ಇತ್ತೀಚೆಗೆ ಟಿ20 ಮಾದರಿಯಲ್ಲಿ 2000 ರನ್ ಹಾಗೂ 100 ವಿಕೆಟ್ ಪಡೆದ ಮೊದಲ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.

ಮತ್ತೊಂದೆಡೆ, ಭಾರತದ ರವೀಂದ್ರ ಜಡೇಜಾ ಏಷ್ಯಾಕಪ್ ಟೂರ್ನಿಯಲ್ಲಿ 22 ವಿಕೆಟ್‌ಗಳನ್ನು ಹೊಂದಿದ್ದಾರೆ ಮತ್ತು ಮೊದಲ ಸ್ಥಾನಕ್ಕೇರಲು 12 ವಿಕೆಟ್‌ಗಳನ್ನು ಪಡೆಯಬೇಕಾಗಿದೆ. ರವೀಂದ್ರ ಜಡೇಜಾ ಪ್ರಸ್ತುತ ಪಟ್ಟಿಯಲ್ಲಿ ಬಾಂಗ್ಲಾದೇಶದ ಮಾಜಿ ನಾಯಕ ಮಶ್ರಫೆ ಮೊರ್ತಜಾಗಿಂತ ಎಂಟನೇ ಸ್ಥಾನದಲ್ಲಿದ್ದಾರೆ.

ಏಷ್ಯಾ ಕಪ್ 2022ರಲ್ಲಿ ಭಾರತದ ಅಭಿಯಾನವು ಬಾಬರ್ ಅಜಮ್ ಅವರ ಪಾಕಿಸ್ತಾನದ ವಿರುದ್ಧ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ, ಆಗಸ್ಟ್ 28ರಂದು ಪ್ರಾರಂಭವಾಗಲಿದೆ.

ಏಷ್ಯಾಕಪ್‌ಗೆ ಭಾರತ ತಂಡ

ಏಷ್ಯಾಕಪ್‌ಗೆ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್.

ಸ್ಟ್ಯಾಂಡ್‌ಬೈ ಆಟಗಾರರು; ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್ ಮತ್ತು ದೀಪಕ್ ಚಹಾರ್.

ಏಷ್ಯಾಕಪ್‌ಗೆ ಬಾಂಗ್ಲಾದೇಶ ತಂಡ

ಏಷ್ಯಾಕಪ್‌ಗೆ ಬಾಂಗ್ಲಾದೇಶ ತಂಡ

ಶಕೀಬ್ ಅಲ್ ಹಸನ್ (ನಾಯಕ), ಅನಾಮುಲ್ ಹಕ್, ಮುಜ್ಫಿಕುರ್ ರಹೀಮ್, ಅಫೀಬ್ ಹುಸೇನ್, ಮೊಸಾದೆಗ್ ಹುಸೇನ್, ಮಹಮುದುಲ್ಲಾ, ಮೆಹದಿ ಹಸನ್, ಮೊಹಮ್ಮದ್ ಸೈಫುದ್ದೀನ್, ಹಸನ್ ಮಹಮೂದ್, ಮುಸ್ತಾಫಿಜುರ್ ರೆಹಮಾನ್, ತಸ್ಕಿನ್ ಅಹ್ಮದ್, ನಸುಮ್ ಅಹ್ಮದ್, ಸಬೀರ್ ರೆಹಮಾನ್, ಮೆಹದಿ ಹಸನ್ ಮಿರಾಜ್, ಇಬಾದತ್ ಹುಸೇನ್, ಪರ್ವೇಜ್ ಹುಸೇನ್, ನೂರುಲ್ ಹಸನ್

For Quick Alerts
ALLOW NOTIFICATIONS
For Daily Alerts
Story first published: Monday, August 15, 2022, 17:10 [IST]
Other articles published on Aug 15, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X