ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಷ್ಯಾ ಕಪ್ 2022: ಪಾಕಿಸ್ತಾನ ವಿರುದ್ಧ ಭಾರತದ ಗೆಲುವಿಗೆ ಮೋದಿ, ಶಾ, ರಾಹುಲ್ ಶ್ಲಾಘನೆ

Asia Cup 2022: India vs Pakistan: PM Narendra Modi, Amit Shah And Rahul Gandhi Lavish Praise For Team India

ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ತಂಡದ ವಿರುದ್ಧ ಭಾರತದ ಗೆಲುವಿಗೆ ಇಡೀ ರಾಷ್ಟ್ರವು ಸಂತೋಷಪಡುತ್ತಿದೆ. ಭಾನುವಾರ (ಆಗಸ್ಟ್ 28) ಏಷ್ಯಾ ಕಪ್ 2022ರಲ್ಲಿ ತಮ್ಮ ಆರಂಭಿಕ ಪಂದ್ಯದಲ್ಲಿ 5 ವಿಕೆಟ್‌ಗಳ ಜಯವನ್ನು ದಾಖಲಿಸಿದ್ದಕ್ಕಾಗಿ ರೋಹಿತ್ ಶರ್ಮಾ ನಾಯಕತ್ವದ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದು, ಭಾರತ ತಂಡವು ಅತ್ಯುತ್ತಮ ಕೌಶಲ್ಯ ಮತ್ತು ಕೌಶಲ್ಯವನ್ನು ಪ್ರದರ್ಶಿಸುತ್ತಿದೆ ಎಂದು ಪ್ರಧಾನಿ ಮೋದಿ ಶ್ಲಾಘಿಸಿದರು.

Asia Cup 2022: ಪಾಕ್ ವಿರುದ್ಧ ಗೆಲುವಿನ ಬಳಿಕ ಜಡೇಜಾ-ಮಂಜ್ರೇಕರ್ ಮುಖಾಮುಖಿ; ನಡೆದಿದ್ದೇನು?Asia Cup 2022: ಪಾಕ್ ವಿರುದ್ಧ ಗೆಲುವಿನ ಬಳಿಕ ಜಡೇಜಾ-ಮಂಜ್ರೇಕರ್ ಮುಖಾಮುಖಿ; ನಡೆದಿದ್ದೇನು?

"ಏಷ್ಯಾ ಕಪ್ 2022 ಪಂದ್ಯದಲ್ಲಿ ಟೀಂ ಇಂಡಿಯಾ ಅದ್ಭುತ ಆಲ್‌ರೌಂಡ್ ಪ್ರದರ್ಶನ ನೀಡಿದೆ. ತಂಡವು ಅಮೋಘ ಕೌಶಲ್ಯ ಮತ್ತು ಛಲ ಪ್ರದರ್ಶಿಸಿದೆ. ಗೆಲುವಿಗಾಗಿ ಅವರಿಗೆ ಅಭಿನಂದನೆಗಳು," ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಭಾರತವನ್ನು ಗೆಲುವಿನತ್ತ ಕೊಂಡೊಯ್ದ ಜಡೇಜಾ, ಪಾಂಡ್ಯ

ಪಂದ್ಯವು ಆರಂಭದಲ್ಲಿ ಕೆಎಲ್ ರಾಹುಲ್‌ ವಿಕೆಟ್ ಕಳೆದುಕೊಳ್ಳುವುದರೊಂದಿಗೆ ಮಂದಗತಿಯಲ್ಲಿ ಆರಂಭಿಸಿತು ಮತ್ತು ರೋಹಿತ್ ಶರ್ಮಾ ಕೂಡ ಕಡಿಮೆ ರನ್ ಗಳಿಸಿ ನಿರ್ಗಮಿಸಿದರು. ಮಧ್ಯಮ ಕ್ರಮಾಂಕದಲ್ಲಿ ಆದರೆ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಮತ್ತು ಹಾರ್ದಿಕ್ ಪಾಂಡ್ಯ ಭಾರತವನ್ನು ಗೆಲುವಿನತ್ತ ಕೊಂಡೊಯ್ಯುವ ಮೂಲಕ ಭಾರತದ ಬೆನ್ನುಲುಬಾಗಿ ನಿಂತರು.

ರವೀಂದ್ರ ಜಡೇಜಾ ಮತ್ತು ಹಾರ್ದಿಕ್ ಪಾಂಡ್ಯ ನಡುವಿನ ನಿರ್ಣಾಯಕ ಜೊತೆಯಾಟವು ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಏಷ್ಯಾ ಕಪ್ 2022ರ ಎರಡನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಐದು ವಿಕೆಟ್‌ಗಳ ರೋಚಕ ಹಣಾಹಣಿಯಲ್ಲಿ ಭಾರತವನ್ನು ಸೋಲಿಸಲು ಸಹಾಯ ಮಾಡಿತು. ರವೀಂದ್ರ ಜಡೇಜಾ 35 ರನ್ ಸಿಡಿಸಿದರೆ, ಹಾರ್ದಿಕ್ ಪಾಂಡ್ಯ 17 ಎಸೆತಗಳಲ್ಲಿ 33 ರನ್ ಗಳಿಸಿದರು.

ಟೀಂ ಇಂಡಿಯಾಗೆ ಗೃಹ ಸಚಿವ ಅಮಿತ್ ಶಾ ಅಭಿನಂದನೆ

ಇದೇ ವೇಳೆ ದೇಶವು ಭಾರತದ ವಿಜಯವನ್ನು ಆಚರಿಸುತ್ತಿರುವಾಗ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೂಡ ಟೀಮ್ ಇಂಡಿಯಾವನ್ನು ಅಭಿನಂದಿಸಿದರು. "ಏಷ್ಯಾ ಕಪ್ 2022ರಲ್ಲಿ ಟೀಮ್ ಇಂಡಿಯಾ ಎಂತಹ ಅದ್ಭುತ ಆರಂಭ ಮಾಡಿದೆ. ಇದು ಉಗುರು ಕಚ್ಚುವ ಪಂದ್ಯವಾಗಿತ್ತು. ಈ ಅದ್ಭುತ ಗೆಲುವಿಗಾಗಿ ಇಡೀ ತಂಡಕ್ಕೆ ಅಭಿನಂದನೆಗಳು. ಹೀಗೇ ಗೆಲುವು ಮುಂದುವರಿಯಲಿ," ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

ಪಾಕಿಸ್ತಾನ ವಿರುದ್ಧ 'ಅದ್ಭುತ ಗೆಲುವು'

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಕೂಡ ಟೀಂ ಇಂಡಿಯಾವನ್ನು ಅಭಿನಂದಿಸಿದ್ದಾರೆ ಮತ್ತು ಪಾಕಿಸ್ತಾನ ವಿರುದ್ಧದ 'ಅದ್ಭುತ ಗೆಲುವು' ಎಂದು ಕರೆದಿದ್ದಾರೆ.

"ನೀಲಿ ಬಣ್ಣದ ಜೆರ್ಸಿಯಲ್ಲಿರುವ ಭಾರತದ ಹುಡುಗರು ಇದನ್ನು ಮತ್ತೊಮ್ಮೆ ಮಾಡುತ್ತಾರೆ. ಏಷ್ಯಾ ಕಪ್ 2022ರ ರೋಷಕ ಕ್ಷಣಗಳಲ್ಲಿ ಪಾಕಿಸ್ತಾನದ ವಿರುದ್ಧ ಅದ್ಭುತ ವಿಜಯವನ್ನು ಗಳಿಸಿದ್ದಕ್ಕೆ ಹೃತ್ಪೂರ್ವಕ ಅಭಿನಂದನೆಗಳು ಟೀಂ ಇಂಡಿಯಾ," ಎಂದು ಹರ್ದೀಪ್ ಸಿಂಗ್ ಪುರಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಭಾರತ ತಂಡವನ್ನು ಶ್ಲಾಘಿಸಿದ ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್‌ನಲ್ಲಿ, "ಪಂದ್ಯವು ರೋಚಕತೆಯಿಂದ ಕೂಡಿತ್ತು. ಉತ್ತಮವಾಗಿ ಆಡಿದ ಭಾರತ ತಣಡಕ್ಕೆ ಅಭಿನಂದನೆಗಳು. ಕ್ರೀಡೆಯ ಸೌಂದರ್ಯವೆಂದರೆ ಅದು, ದೇಶವನ್ನು ಹೇಗೆ ಪ್ರೇರೇಪಿಸುತ್ತದೆ ಮತ್ತು ಒಂದುಗೂಡಿಸುತ್ತದೆ. ಹೆಮ್ಮೆಯ ಭಾವನೆಯೊಂದಿಗೆ ಅತ್ಯಂತ ಸಂತೋಷವಾಗಿದೆ," ಎಂದು ಬರೆದುಕೊಂಡಿದ್ದಾರೆ.

ಏತನ್ಮಧ್ಯೆ, ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಕೂಡ ಪಾಕಿಸ್ತಾನದ ವಿರುದ್ಧ ಭಾರತದ ವಿಜಯವನ್ನು ಶ್ಲಾಘಿಸಿದರು. "ಹುರ್ರೇ! ಭಾರತ ಗೆದ್ದಿದೆ. ಅದ್ಭುತ ಪ್ರದರ್ಶನ ಮತ್ತು ಗೆಲುವಿಗಾಗಿ ಭಾರತ ತಂಡಕ್ಕೆ ಅಭಿನಂದನೆಗಳು. ಚೆನ್ನಾಗಿ ಆಡಿದ ನೀಲಿ ಬಣ್ಣದ ಪುರುಷರು! ಜೈ ಹಿಂದ್," ಎಂದು ಟ್ವೀಟ್ ಮಾಡಿದ್ದಾರೆ.

ಸಂಕ್ಷಿಪ್ತ ಸ್ಕೋರ್: ಪಾಕಿಸ್ತಾನ 19.5 ಓವರ್‌ಗಳಲ್ಲಿ 147 ಆಲೌಟ್ (ಮೊಹಮ್ಮದ್ ರಿಜ್ವಾನ್ 43, ಇಫ್ತಿಕರ್ ಅಹ್ಮದ್ 28; ಭುವನೇಶ್ವರ್ ಕುಮಾರ್ 4/26)
ಭಾರತ 19.4 ಓವರ್‌ಗಳಲ್ಲಿ 148/5 (ರವೀಂದ್ರ ಜಡೇಜಾ 35, ಹಾರ್ದಿಕ್ ಪಾಂಡ್ಯ 33*; ಮೊಹಮ್ಮದ್ ನವಾಜ್ 3/3)

Story first published: Monday, August 29, 2022, 9:28 [IST]
Other articles published on Aug 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X