ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Asia Cup 2022: ಭಾರತ vs ಪಾಕಿಸ್ತಾನ ಸೂಪರ್ 4 ಪಂದ್ಯ; ಎರಡೂ ತಂಡಗಳಿಗೆ ಫೈನಲ್ ಚಾನ್ಸ್ ಹೇಗೆ?

Asia Cup 2022: India vs Pakistan Super 4 Match; How Are The Final Chances For Both Teams?

ಏಷ್ಯಾ ಕಪ್ 2022 ರಲ್ಲಿ ಸೂಪರ್ 4ರ ಹಂತವು ಇಂದು (ಸೆಪ್ಟೆಂಬರ್ 3) ಯುಎಇಯ ಶಾರ್ಜಾದಲ್ಲಿ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ತಂಡಗಳು ಎದುರುಗೊಳ್ಳಲಿವೆ. ಸೂಪರ್ 4 ಹಂತಕ್ಕೆ ಅರ್ಹತೆ ಪಡೆದಿರುವ ಇತರ 2 ತಂಡಗಳೆಂದರೆ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ.

Asia Cup ನಿಂದ Ravindra Jadejaಗೆ ಗೇಟ್ ಪಾಸ್!! Axar Patel ಗೆ ಈ ಸ್ಥಾನ ಫಿಕ್ಸಾ?? | *Cricket | OneIndia

ಲೆಜೆಂಡ್ಸ್ ಲೀಗ್‌ ಕ್ರಿಕೆಟ್: ವಿಶೇಷ ಪಂದ್ಯದಲ್ಲಿ ಆಡುವುದರಿಂದ ಹಿಂದೆ ಸರಿದ ಸೌರವ್ ಗಂಗೂಲಿ!ಲೆಜೆಂಡ್ಸ್ ಲೀಗ್‌ ಕ್ರಿಕೆಟ್: ವಿಶೇಷ ಪಂದ್ಯದಲ್ಲಿ ಆಡುವುದರಿಂದ ಹಿಂದೆ ಸರಿದ ಸೌರವ್ ಗಂಗೂಲಿ!

ಭಾರತ ತಂಡವು ಪಾಕಿಸ್ತಾನ ಮತ್ತು ಹಾಂಗ್‌ಕಾಂಗ್ ವಿರುದ್ಧ ಜಯಗಳಿಸುವ ಮೂಲಕ ಸೂಪರ್ 4ರ ಹಂತವನ್ನು ತಲುಪಿತು. ಪಾಕಿಸ್ತಾನ ತನ್ನ ಮೊದಲ ಪಂದ್ಯದಲ್ಲಿ ಭಾರತ ವಿರುದ್ಧ ಸೋಲನ್ನು ಅನುಭವಿಸಿದರೆ, ಶುಕ್ರವಾರದ ಪಂದ್ಯದಲ್ಲಿ ಹಾಂಗ್‌ಕಾಂಗ್ ತಂಡವನ್ನು ಸೋಲಿಸುವ ಮೂಲಕ ಪಂದ್ಯಾವಳಿಯಲ್ಲಿ ಪುಟಿದೆದ್ದರು.

ಎ ಗುಂಪಿನಲ್ಲಿ ಭಾರತ, ಪಾಕಿಸ್ತಾನ ಅಗ್ರ ತಂಡಗಳು

ಎ ಗುಂಪಿನಲ್ಲಿ ಭಾರತ, ಪಾಕಿಸ್ತಾನ ಅಗ್ರ ತಂಡಗಳು

ಭಾರತ, ಪಾಕಿಸ್ತಾನ ಮತ್ತು ಹಾಂಗ್‌ಕಾಂಗ್ ಈ 3 ತಂಡಗಳು ಎ ಗುಂಪಿನ ಭಾಗವಾಗಿದ್ದು, ಕೇವಲ 2 ತಂಡಗಳು ಸೂಪರ್ 4ರ ಹಂತ ತಲುಪಬಹುದಾಗಿದೆ. ಯಾವುದೇ ಪಂದ್ಯ ಗೆಲ್ಲದ ಹಾಂಗ್‌ಕಾಂಗ್ ತಂಡ ಹೊರ ಹೋಗಿದೆ. ಅಂತೆಯೇ, ಬಿ ಗುಂಪಿನಲ್ಲಿ ಬಾಂಗ್ಲಾದೇಶವು ಒಂದೇ ಒಂದು ಗೆಲುವು ಸಾಧಿಸಲು ವಿಫಲವಾಗಿ ಸೋತಿತು. ಅವರನ್ನು ಕ್ರಮವಾಗಿ ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಸೋಲಿಸಿ ಸೂಪರ್ 4ಗೆ ಪ್ರವೇಶಿಸಿದರು.

ಸೂಪರ್ 4 ಸ್ವರೂಪದ ಬಗ್ಗೆ ಅನೇಕ ಕ್ರಿಕೆಟ್ ಅಭಿಮಾನಿಗಳು ಗೊಂದಲಕ್ಕೊಳಗಾಗಿದ್ದಾರೆ. ಬಹು-ರಾಷ್ಟ್ರಗಳ ಪಂದ್ಯಾವಳಿಯಲ್ಲಿ ನಡೆಯುವಂತೆಯೇ ಇದು ಸೆಮಿಫೈನಲ್ ಹಂತ ಎಂದು ಕೆಲವರು ಭಾವಿಸುತ್ತಾರೆ. ಆದರೆ ಅದು ತಪ್ಪಾಗಿದೆ. ಇವು ಸೆಮಿಫೈನಲ್‌ಗಳಲ್ಲ. ಅದಕ್ಕಾಗಿಯೇ ಈ ಹಂತವನ್ನು ಸೂಪರ್ 4 ಎಂದು ಕರೆಯಲಾಗುತ್ತದೆ. ಈ ಹಂತದಲ್ಲಿ ಎಲ್ಲಾ ನಾಲ್ಕು ತಂಡಗಳು ಪರಸ್ಪರ ಆಡುತ್ತವೆ.

ಫೈನಲ್‌ನಲ್ಲಿ ಅಗ್ರ ಎರಡು ತಂಡಗಳು ಮುಖಾಮುಖಿ

ಫೈನಲ್‌ನಲ್ಲಿ ಅಗ್ರ ಎರಡು ತಂಡಗಳು ಮುಖಾಮುಖಿ

"ಸಾಮಾನ್ಯ ಸೆಮಿಫೈನಲ್ ಹಂತದ ಬದಲಿಗೆ, ಎರಡು ಗುಂಪುಗಳಿಂದ ಮುನ್ನಡೆ ಪಡೆಯುವ ತಂಡಗಳು ಮತ್ತೊಂದು ರೌಂಡ್ ರಾಬಿನ್ ಹಂತದಲ್ಲಿ ಪರಸ್ಪರ ಆಡುತ್ತವೆ. ಅಲ್ಲಿಂದ ಪಂದ್ಯಾವಳಿಯ ಫೈನಲ್‌ನಲ್ಲಿ ಅಗ್ರ ಎರಡು ತಂಡಗಳು ಮುಖಾಮುಖಿಯಾಗುತ್ತವೆ. ಆರಂಭಿಕ ಗುಂಪಿನಿಂದ ಪಾಯಿಂಟ್‌ಗಳು ಹಂತವು ಸೂಪರ್ ಫೋರ್ ಹಂತದಲ್ಲಿ ಪ್ರಯೋಜನಕ್ಕೆ ಬರುವುದಿಲ್ಲ," ಎಂದು ಐಸಿಸಿ ತಮ್ಮ ವೆಬ್‌ಸೈಟ್‌ನಲ್ಲಿ ಸೂಪರ್ 4 ಹಂತವನ್ನು ವಿವರಿಸುತ್ತದೆ.

ಇದರರ್ಥ, ನಾವು ಉದಾಹರಣೆಯಾಗಿ ಭಾರತ ತಂಡವನ್ನು ತೆಗೆದುಕೊಂಡರೆ, ಏಷ್ಯಾ ಕಪ್ ಪಂದ್ಯಾವಳಿಯ ಸೂಪರ್ 4 ಹಂತದಲ್ಲಿ ಭಾರತ ತಂಡ ಒಮ್ಮೆ ಶ್ರೀಲಂಕಾ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾದ ವಿರುದ್ಧ ಆಡಲಿದ್ದಾರೆ.

ಅಫ್ಘಾನಿಸ್ತಾನ ತಂಡವನ್ನು ಯಾರೂ ತಳ್ಳಿಹಾಕುವಂತಿಲ್ಲ

ಅಫ್ಘಾನಿಸ್ತಾನ ತಂಡವನ್ನು ಯಾರೂ ತಳ್ಳಿಹಾಕುವಂತಿಲ್ಲ

ಆದ್ದರಿಂದ ಸೂಪರ್ 4ರಲ್ಲಿನ ಎಲ್ಲಾ ನಾಲ್ಕು ತಂಡಗಳು- ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ತಂಡಗಳು ತಮ್ಮ ಫೈನಲ್‌ಗೆ ಅರ್ಹತೆ ಪಡೆಯಲು ಸಾಧ್ಯವಾದಷ್ಟು ಪಂದ್ಯಗಳನ್ನು ಗೆಲ್ಲಬೇಕಾಗಿದೆ.

ಭಾರತ ಮತ್ತು ಪಾಕಿಸ್ತಾನ ತಂಡಗಳು ಸದ್ಯದ ಹಂತದಲ್ಲಿ ಅಗ್ರ 2 ಸ್ಥಾನದಲ್ಲಿರುವ ಕಾರಣ, ಈ ಎರಡು ಫೈನಲ್‌ಗೆ ಪ್ರವೇಶಿಸುವ ಸಾಧ್ಯತೆಗಳಿವೆ. ಆದಾಗ್ಯೂ, ಇಲ್ಲಿಯವರೆಗೆ ಪಂದ್ಯಾವಳಿಯಲ್ಲಿ ಅಜೇಯವಾಗಿರುವ ಅಫ್ಘಾನಿಸ್ತಾನ ತಂಡವನ್ನು ಯಾರೂ ತಳ್ಳಿಹಾಕುವಂತಿಲ್ಲ ಮತ್ತು ಶ್ರೀಲಂಕಾ ಕೂಡ ಅಗತ್ಯವಿದ್ದಾಗ ತಮ್ಮ ಉತ್ತಮ ಪ್ರದರ್ಶನ ನೀಡಿ ಫೈನಲ್ ಪ್ರವೇಶ ಮಾಡಬಹುದು.

ಭಾರತ ಮತ್ತು ಪಾಕಿಸ್ತಾನದ 11 ಸಂಭಾವ್ಯ ತಂಡಗಳು

ಭಾರತ ಮತ್ತು ಪಾಕಿಸ್ತಾನದ 11 ಸಂಭಾವ್ಯ ತಂಡಗಳು

ಭಾರತ ಸಂಭಾವ್ಯ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ದೀಪಕ್ ಹೂಡಾ/ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಅರ್ಶ್‌ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್, ಅವೇಶ್ ಖಾನ್

ಪಾಕಿಸ್ತಾನ ಸಂಭಾವ್ಯ ತಂಡ: ಮೊಹಮ್ಮದ್ ರಿಜ್ವಾನ್ (ವಿಕೆಟ್), ಬಾಬರ್ ಅಜಂ (ನಾಯಕ), ಫಖರ್ ಜಮಾನ್, ಇಫ್ತಿಕರ್ ಅಹ್ಮದ್, ಖುಶ್ದಿಲ್ ಶಾ, ಶಾದಾಬ್ ಖಾನ್, ಆಸಿಫ್ ಅಲಿ, ಮೊಹಮ್ಮದ್ ನವಾಜ್, ಹ್ಯಾರಿಸ್ ರೌಫ್, ನಸೀಮ್ ಶಾ, ಶಾನವಾಜ್ ದಹಾನಿ

Story first published: Saturday, September 3, 2022, 16:00 [IST]
Other articles published on Sep 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X