ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ಬಾರಿ ಯುಎಇಯಲ್ಲಿ ಏಷ್ಯಾಕಪ್: ಯುಎಇಯಲ್ಲಿ ಏಷ್ಯಾಕಪ್ ನಡೆದಾಗಲೆಲ್ಲಾ ಈ ದೇಶವೇ ಚಾಂಪಿಯನ್‍!

Asia Cup 2022: India won all the Asia Cup tournaments when it was held in UAE

ಸದ್ಯ ಟೀಮ್ ಇಂಡಿಯಾ ಸೇರಿದಂತೆ ಏಷ್ಯಾ ಖಂಡದ ಹಲವು ಕ್ರಿಕೆಟ್ ತಂಡಗಳು ವಿವಿಧ ದೇಶಗಳ ಜೊತೆ ದ್ವಿಪಕ್ಷೀಯ ಸರಣಿಗಳಲ್ಲಿ ಭಾಗವಹಿಸುತ್ತಿವೆ ಹಾಗೂ ಇದೇ ವರ್ಷ ನಡೆಯಲಿರುವ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಕಣಕ್ಕಿಳಿಯಲು ಸಿದ್ಧತೆ ನಡೆಸಿಕೊಳ್ಳುತ್ತಿವೆ.

ಡಿಸೆಂಬರ್ 2022ರವರೆಗೆ ಟೀಂ ಇಂಡಿಯಾದ ಸಂಪೂರ್ಣ ಕ್ರಿಕೆಟ್ ವೇಳಾಪಟ್ಟಿಯ ಅಪ್‌ಡೇಟ್‌ಡಿಸೆಂಬರ್ 2022ರವರೆಗೆ ಟೀಂ ಇಂಡಿಯಾದ ಸಂಪೂರ್ಣ ಕ್ರಿಕೆಟ್ ವೇಳಾಪಟ್ಟಿಯ ಅಪ್‌ಡೇಟ್‌

ವಿಶ್ವ ಕ್ರಿಕೆಟ್‍ನ ಇತರೆ ದೇಶಗಳ ಚಿತ್ತ ಕೇವಲ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯತ್ತ ಇದ್ದರೆ, ಏಷ್ಯಾ ಖಂಡದ ದೇಶಗಳ ಕಣ್ಣು ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ನಡೆಯುವುದಕ್ಕೂ ಮುನ್ನ ಆಯೋಜನೆಯಾಗಿರುವ ಏಷ್ಯಾಕಪ್ ಟ್ರೋಫಿ ಎತ್ತಿ ಹಿಡಿಯುವತ್ತ ಕೂಡ ಇದೆ. ಹೌದು, ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಅಕ್ಟೋಬರ್ ತಿಂಗಳಿನಲ್ಲಿ ಆರಂಭವಾಗುತ್ತಿದ್ದರೆ, ಏಷ್ಯಾಕಪ್ ಟೂರ್ನಿ ಮುಂದಿನ ಆಗಸ್ಟ್ ತಿಂಗಳಿನಲ್ಲಿ ಆರಂಭಗೊಳ್ಳಲಿದೆ.

'ಟೀಮ್ ಇಂಡಿಯಾಗೆ ಈ 2 ಕಪ್ ಗೆಲ್ಲಿಸಿಕೊಡುವುದೇ ನನ್ನ ಗುರಿ'; ಪಣತೊಟ್ಟ ಕಳಪೆ ಫಾರ್ಮ್‌ನಲ್ಲಿರುವ ಕೊಹ್ಲಿ!'ಟೀಮ್ ಇಂಡಿಯಾಗೆ ಈ 2 ಕಪ್ ಗೆಲ್ಲಿಸಿಕೊಡುವುದೇ ನನ್ನ ಗುರಿ'; ಪಣತೊಟ್ಟ ಕಳಪೆ ಫಾರ್ಮ್‌ನಲ್ಲಿರುವ ಕೊಹ್ಲಿ!

ಆಗಸ್ಟ್ 27ರ ಶನಿವಾರದಂದು ಈ ಬಾರಿಯ ಏಷ್ಯಾಕಪ್ ಟೂರ್ನಿ ಆರಂಭವಾಗಲಿದ್ದು, ಸೆಪ್ಟೆಂಬರ್ 11ರ ಭಾನುವಾರದಂದು ನಡೆಯಲಿರುವ ಫೈನಲ್ ಪಂದ್ಯದ ಮೂಲಕ ಟೂರ್ನಿ ಅಂತ್ಯಗೊಳ್ಳಲಿದೆ. ಇನ್ನು ಈ ಬಾರಿಯ ಏಷ್ಯಾಕಪ್ ಟೂರ್ನಿ ಶ್ರೀಲಂಕಾ ನೆಲದಲ್ಲಿ ನಡೆಯಬೇಕಿತ್ತು. ಆದರೆ, ಶ್ರೀಲಂಕಾ ದೇಶದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನಿಂದ ಟೂರ್ನಿಯನ್ನು ಇದೀಗ ಯುಎಇಗೆ ಸ್ಥಳಾಂತರಿಸಲಾಗಿದೆ. ಈ ಮೂಲಕ ನಾಲ್ಕನೇ ಬಾರಿಗೆ ಏಷ್ಯಾಕಪ್ ಟೂರ್ನಿ ಯುಎಇ ನೆಲದಲ್ಲಿ ಜರುಗಲಿದೆ. ಅಂದಹಾಗೆ ಇದಕ್ಕೂ ಮುನ್ನ ಯುಎಇ ನೆಲದಲ್ಲಿ ಯಾವ ವರ್ಷಗಳಲ್ಲಿ ಏಷ್ಯಾಕಪ್ ಟೂರ್ನಿ ನಡೆದಿತ್ತು ಮತ್ತು ಆ ಟೂರ್ನಿಗಳಲ್ಲಿ ಗೆದ್ದಿದ್ದ ತಂಡ ಯಾವುದು ಎಂಬುದರ ಕುರಿತಾದ ಮಾಹಿತಿ ಕೆಳಕಂಡಂತಿದೆ.

1984

1984

ಏಷ್ಯಾಕಪ್ ಕೌನ್ಸಿಲ್ 1983ರಲ್ಲಿ ಆರಂಭವಾಗಿತ್ತು. ಈ ಏಷ್ಯಾಕಪ್ ಕೌನ್ಸಿಲ್‌ಗೆ ಸಂಬಂಧಪಟ್ಟ ಕಛೇರಿಗಳು ಆಗಿನ ಸಮಯದಲ್ಲಿ ಯುಎಇಯಲ್ಲಿ ಇದ್ದ ಕಾರಣ 1984ರ ಏಷ್ಯಾಕಪ್ ಟೂರ್ನಿಯನ್ನು ಯುಎಇ ನೆಲದಲ್ಲಿಯೇ ಆಯೋಜನೆ ಮಾಡಲಾಗಿತ್ತು. ಈ ಚೊಚ್ಚಲ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ, ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳು ಭಾಗವಹಿಸಿದ್ದವು. ಟೂರ್ನಿಯಲ್ಲಿನ ಎಲ್ಲಾ ಪಂದ್ಯಗಳನ್ನು ಗೆದ್ದಿದ್ದ ಭಾರತ ಚೊಚ್ಚಲ ಏಷ್ಯಾಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈ ಟೂರ್ನಿಯಲ್ಲಿ ಭಾರತ ತಂಡವನ್ನು ಸುನಿಲ್ ಗವಾಸ್ಕರ್ ನಾಯಕನಾಗಿ ಮುನ್ನಡೆಸಿದ್ದರು.

1995

1995

1995ರಲ್ಲಿ ಏಷ್ಯಾಕಪ್‌ನ ಐದನೇ ಆವೃತ್ತಿ ನಡೆದಿತ್ತು. ಇದು ಯುಎಇಯಲ್ಲಿ ಆಯೋಜನೆಯಾಗಿದ್ದ ಎರಡನೇ ಏಷ್ಯಾಕಪ್ ಟೂರ್ನಿಯಾಗಿತ್ತು. ಈ ಟೂರ್ನಿಯಲ್ಲಿ ಭಾರತ, ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳ ಜತೆ ಬಾಂಗ್ಲಾದೇಶ ಕೂಡ ಕಣಕ್ಕಿಳಿದಿತ್ತು ಹಾಗೂ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿದ್ದವು. ಫೈನಲ್ ಪಂದ್ಯದಲ್ಲಿ ಭಾರತದ ನಾಯಕ ಮೊಹಮ್ಮದ್ ಅಜರುದ್ದೀನ್ ಅಜೇಯ 90 ರನ್ ಬಾರಿಸಿದ ಪರಿಣಾಮ ಟೀಮ್ ಇಂಡಿಯಾ 1995ರ ಏಷ್ಯಾಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

2018

2018

2018ರ ಏಷ್ಯಾಕಪ್ ಟೂರ್ನಿ ಭಾರತದಲ್ಲಿ ನಡೆಯಬೇಕಿತ್ತು. ಆದರೆ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯಕ್ಕೆ ಅನುಮತಿ ಇಲ್ಲದೇ ಇದ್ದ ಕಾರಣ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸಲಾಗಿತ್ತು. ಈ ಟೂರ್ನಿಯಲ್ಲಿ ಭಾರತ, ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಹಾಂಗ್ ಕಾಂಗ್ ದೇಶಗಳು ಭಾಗವಹಿಸಿದ್ದವು. ಟೂರ್ನಿಯಲ್ಲಿನ ಗ್ರೂಪ್ ಹಂತ ಮತ್ತು ಮತ್ತು ಸೆಮಿಫೈನಲ್ ಸೆಣಸಾಟಗಳು ಮುಕ್ತಾಯವಾದ ನಂತರ ಫೈನಲ್ ಪಂದ್ಯಕ್ಕೆ ಬಾಂಗ್ಲಾದೇಶ ಮತ್ತು ಭಾರತ ತಂಡಗಳು ಪ್ರವೇಶಿಸಿದ್ದವು. ಈ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಬಾಂಗ್ಲಾದೇಶದ ವಿರುದ್ಧ ಗೆದ್ದು ಚಾಂಪಿಯನ್‍ ಆಗಿತ್ತು.

ಯುಎಇ ನೆಲದಲ್ಲಿ ನಡೆದಿದ್ದ 3 ಏಷ್ಯಾಕಪ್ ಟೂರ್ನಿಯಲ್ಲಿಯೂ ಭಾರತಕ್ಕೆ ಜಯ

ಯುಎಇ ನೆಲದಲ್ಲಿ ನಡೆದಿದ್ದ 3 ಏಷ್ಯಾಕಪ್ ಟೂರ್ನಿಯಲ್ಲಿಯೂ ಭಾರತಕ್ಕೆ ಜಯ

ಏಷ್ಯಾಕಪ್ ಟೂರ್ನಿ ಇದುವರೆಗೂ ಯುನೈಟೆಡ್ ಅರಬ್ ಎಮಿರೇಟ್ಸ್ ನೆಲದಲ್ಲಿ ಒಟ್ಟು 3 ಬಾರಿ ಆಯೋಜನೆಗೊಂಡಿದೆ. ಹಾಗೂ ಈ 3 ಏಷ್ಯಾಕಪ್ ಟೂರ್ನಿಗಳಲ್ಲಿಯೂ ಟೀಮ್ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿ ಮೇಲುಗೈ ಸಾಧಿಸಿದೆ.

Story first published: Monday, July 25, 2022, 10:32 [IST]
Other articles published on Jul 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X