ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ತನ್ನ ಬೆಳವಣಿಗೆಯಲ್ಲಿ ಆತನ ಪಾತ್ರ ದೊಡ್ಡದಿದೆ: ಹಾರ್ದಿಕ್ ಪಾಂಡ್ಯ ಹೇಳಿದ್ದು ಯಾರ ಬಗ್ಗೆ?

Asia Cup 2022: Indian allrounder Hardik Pandya said MS Dhoni has played a big role in my growth

ಟೀಮ್ ಇಂಡಿಯಾದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಸದ್ಯ ಅತ್ಯದ್ಭುತ ಫಾರ್ಮ್‌ನಲ್ಲಿದ್ದಾರೆ. ಕಳೆದ ಐಪಿಎಲ್‌ನ ಮೂಲಕ ಕಮ್‌ಬ್ಯಾಕ್ ಮಾಡಿದ ಬಳಿಕ ಹಾರ್ದಿಕ್ ಪಾಂಡ್ಯ ಸ್ಥಿರವಾಗಿ ಪ್ರದರ್ಶನ ನೀಡುತ್ತಿದ್ದು ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿಯೂ ಪರಿಣಾಮಕಾರಿಯಾಗಿದ್ದಾರೆ. ಕಳೆದ ಭಾನುವಾರ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿಯೂ ಮ್ಯಾಚ್ ವಿನ್ನರ್ ಆಗಿ ತಂಡಕ್ಕೆ ಗೆಲುವು ತಂದಿಟ್ಟ ಹಾರ್ದಿಕ್ ಪಾಂಡ್ಯ ತನ್ನ ಬೆಳವಣಿಗೆಯಲ್ಲಿ ಓರ್ವ ಮಾಜಿ ಕ್ರಿಕೆಟಿಗನ ಪಾತ್ರ ದೊಡ್ಡದಿದೆ ಎಂದಿದ್ದಾರೆ.

ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ತನ್ನ ಯಶಸ್ಸಿನ ವಿಚಾರವಾಗಿ ಮಾತನಾಡುತ್ತಾ ಶ್ರೇಯಸ್ಸು ನೀಡಿದ್ದು ಬೇರೆ ಯಾರಿಗೂ ಅಲ್ಲ. ಮಾಜಿ ಕ್ರಿಕೆಟಿಗ ಎಂಎಸ್ ಧೋನಿಗೆ. ಮಾಜಿ ನಾಯಕ ಎಂಎಸ್ ಧೋನಿ ತನ್ನ ಬೆಳವಣಿಗೆಯಲ್ಲಿ ಬಹಳಷ್ಟು ದೊಡ್ಡ ಪಾತ್ರವಹಿಸಿದ್ದಾರೆ ಎಂದಿದ್ದಾರೆ ಹಾರ್ದಿಕ್ ಪಾಂಡ್ಯ.

Asia Cup 2022: ಬಾಂಗ್ಲಾ ವಿರುದ್ಧವೂ ಗೆದ್ದ ಅಫ್ಘಾನ್; ಸೂಪರ್ 4 ಪ್ರವೇಶಿಸಿದ ಮೊದಲ ತಂಡ!Asia Cup 2022: ಬಾಂಗ್ಲಾ ವಿರುದ್ಧವೂ ಗೆದ್ದ ಅಫ್ಘಾನ್; ಸೂಪರ್ 4 ಪ್ರವೇಶಿಸಿದ ಮೊದಲ ತಂಡ!

ತನ್ನ ಬೆಳವಣಿಗೆಯಲ್ಲಿ ಧೋನಿಯ ಪಾತ್ರ ದೊಡ್ಡದು

ತನ್ನ ಬೆಳವಣಿಗೆಯಲ್ಲಿ ಧೋನಿಯ ಪಾತ್ರ ದೊಡ್ಡದು

"ಜೀವನ ಹಾಗೂ ಕ್ರಿಕೆಟ್‌ನಲ್ಲಿ ಹೊಸ ಹೊಸ ಸಂಗತಿಗಳನ್ನು ಕಲಿತುಕೊಳ್ಳುವ ಪ್ರಯತ್ನದಲ್ಲಿ ನಾನಿನ್ನೂ ಚಿಕ್ಕವನು. ನನ್ನ ಬೆಳವಣಿಗೆಯಲ್ಲಿ ಎಂಎಸ್ ಧೋನಿ ಅತ್ಯಂತ ದೊಡ್ಡ ಪಾತ್ರವನ್ನು ವಹಿಸಿದ್ದಾರೆ. ನನಗೆ ಯಾವಾಗೆಲ್ಲಾ ಅವಕಾಶಗಳು ದೊರೆತಿದೆಯೋ ಆಗ ನಾನು ಅವರಿಂದ ಏನೆಲ್ಲಾ ಸಾಧ್ಯವೋ ಅದನ್ನು ಕಲಿಯುವ ಪ್ರಯತ್ನ ಮಾಡಿದ್ದೇನೆ. ಅವರಲ್ಲಿ ಬಹಳ ದೊಡ್ಡದಾದ ಜ್ಞಾನವಿದ್ದು ಅದನ್ನು ಕೇವಲ ಗ್ರಹಿಸಿಕೊಳ್ಳಬೇಕಷ್ಟೆ. ಅದು ನನ್ನ ವ್ಯಕ್ತಿತ್ವದಲ್ಲಿ ಹಾಗೂ ಅಂಗಳದಲ್ಲಿ ವ್ಯಕ್ತವಾಗಿದೆ" ಎಂದಿದ್ದಾರೆ ಹಾರ್ದಿಕ್ ಪಾಂಡ್ಯ.

ವೈಫಲ್ಯಗಳಿಂದ ಪಾಠ ಕಲಿಯಬೇಕು

ವೈಫಲ್ಯಗಳಿಂದ ಪಾಠ ಕಲಿಯಬೇಕು

"ಇದು ತನ್ನ ತಪ್ಪುಗಳನ್ನು ಅರಿತುಕೊಳ್ಳುವುದು, ಅವಕಾಶಗಳನ್ನು ಗಳಿಸುವುದು, ವೈಫಲ್ಯಗಳಿಂದ ಪಾಠವನ್ನು ಕಲಿಯುವುದಾಗಿದೆ. ಕೆಲವೊಮ್ಮೆ ನಮಗೆ ವೈಫಲ್ಯಗಳೇ ಪಾಠ ಕಲಿಸುತ್ತವೆ. ನಮ್ಮ ಹತ್ತಿರದವರಿಂದ, ಆಪ್ರರಿಂದ ಕಲಿಯುವುದು ಸಾಧ್ಯವಾಗದಿರಬಹುದು. ಇಂಥಾ ಸಂದರ್ಭದಲ್ಲಿ ಮಾಹಿ ಭಾಯ್ ನನಗೆ ಸಾಕಷ್ಟು ಉತ್ತಮ ಸಲಹೆಗಳನ್ನು ನೀಡಿದ್ದಾರೆ. ಕೆಲ ವೈಫಲ್ಯಗಳನ್ನು ನೀವು ಕೇವಲ ಅನುಭವಿಸಬೇಕು ಹಾಗೂ ಅವುಗಳಿಂದ ಪಾಠ ಕಲಿಯಬೇಕು" ಎಂದಿದ್ದಾರೆ ಹಾರ್ದಿಕ್ ಪಾಂಡ್ಯ.

ವಿರಾಟ್ ಕೊಹ್ಲಿ ಸೂರ್ಯ ಕುಮಾರ್ ಯಾದವ್ ಆಟ ನೋಡಿ ತಲೆಬಾಗಿ ಶರಣಾದರು | Oneindia Kannada
ಅಂತಿಮ ಸ್ಪರ್ಶ ನೀಡಿದರೆ ಮಾತ್ರ ಪರಿಪೂರ್ಣ!

ಅಂತಿಮ ಸ್ಪರ್ಶ ನೀಡಿದರೆ ಮಾತ್ರ ಪರಿಪೂರ್ಣ!

ಇನ್ನು ಫಿನಿಷರ್ ಆಗಿ ಯಶಸ್ಸು ಗಳಿಸುವ ಬಗ್ಗೆಯೂ ಹಾರ್ದಿಕ್ ಪಾಂಡ್ಯ ಮಾತನಾಡಿದ್ದಾರೆ. ಆಟದಲ್ಲಿ ಫಿನಿಷರ್ ಆಗಿ ಗೆಲುವಿನ ಸಮೀಪಕ್ಕೆ ಹೋದರೆ ಸಾಕಾಗುವುದಿಲ್ಲ ಪಂದ್ಯವನ್ನು ಗೆಲ್ಲಿಸಿಕೊಡಬೇಕಾಗುತ್ತದೆ. ಅಂತಿಮ ಸ್ಪರ್ಶ ನೀಡದ ಹೊರತು ನಿಮ್ಮ ಕಾರ್ಯ ಸಂಪೂರ್ಣವಾಗುವುದಿಲ್ಲ ಎಂದು ಹಾರ್ದಿಕ್ ಪಾಂಡ್ಯ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ಟಿ20 ವಿಶ್ವಕಪ್‌ನ ಬಳಿಕ ಫಿಟ್‌ನೆಸ್‌ನ ಸಮಸ್ಯೆಯಿಂದಾಗಿ ಹೊರಗುಳಿದಿದ್ದ ಹಾರ್ದಿಕ್ ಪಾಂಡ್ಯ ಅವರ ಕ್ರಿಕೆಟ್ ಭವಿಷ್ಯದ ಬಗ್ಗೆ ಅನುಮಾನಗಳು ಮೂಡಿದ್ದವು. ಸುಮಾರು ಐದು ತಿಂಗಳುಗಳ ಕಾಲ ಪಾಂಡ್ಯ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರವುಳಿದುಕೊಂಡಿದ್ದರು . ಆದರೆ ಐಪಿಎಲ್ 2022ರಲ್ಲಿ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ ಅವರು ಸಂಪೂರ್ಣ ಫಿಟ್ ಆಗಿದ್ದು ಮಾತ್ರವಲ್ಲದೆ ಅದ್ಭುತ ಪ್ರದರ್ಶನ ನೀಡುತ್ತಾ ಮಿಂಚುತ್ತಿದ್ದಾರೆ.

Story first published: Wednesday, August 31, 2022, 17:19 [IST]
Other articles published on Aug 31, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X