ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಷ್ಯಾಕಪ್ 2022: ದಿನೇಶ್ ಕಾರ್ತಿಕ್‌ಗೆ ಸ್ಥಾನ, ಈ ಇಬ್ಬರು ಸ್ಟಾರ್ ಆಟಗಾರರು ಮನೆಗೆ!

Asia Cup 2022: Ishan Kishan or Sanju Samson likely to miss Asia Cup 2022 because of Dinesh Karthik

ಸದ್ಯ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ನಿರತವಾಗಿದ್ದು ಸೀಮಿತ ಓವರ್ ಸರಣಿಗಳಲ್ಲಿ ಸೆಣಸಾಟ ನಡೆಸುತ್ತಿದೆ. ಮೊದಲಿಗೆ ನಡೆದ ಏಕದಿನ ಸರಣಿಯಲ್ಲಿ ವೈಟ್‌ವಾಷ್ ಸಾಧನೆ ಮಾಡಿದ್ದ ಟೀಮ್ ಇಂಡಿಯಾ ಇದೀಗ ಟಿ ಟ್ವೆಂಟಿ ಸರಣಿಯಲ್ಲಿ ಕಣಕ್ಕಿಳಿದಿದ್ದು ಇದನ್ನೂ ಸಹ ಗೆಲ್ಲುವ ಸನಿಹದಲ್ಲಿದೆ. ಇನ್ನು ಇದೇ ವರ್ಷ ಟಿ ಟ್ವೆಂಟಿ ಮಾದರಿಯಲ್ಲಿ ಎರಡು ಪ್ರತಿಷ್ಠಿತ ಟೂರ್ನಿಗಳಾ ಏಷ್ಯಾ ಕಪ್ ಹಾಗೂ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ನಡೆಯಲಿದ್ದು, ಈ ಟೂರ್ನಿಗಳಿಗಾಗಿ ಬಲಿಷ್ಟ ಟೀಮ್ ಇಂಡಿಯಾವನ್ನು ರಚಿಸುವತ್ತ ಬಿಸಿಸಿಐ ಆಯ್ಕೆಗಾರರು ಚಿತ್ತ ನೆಟ್ಟಿದ್ದಾರೆ.

ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ಭಾರತದ ಮಾಜಿ ಕ್ರಿಕೆಟಿಗ ಆರ್‌ಪಿ ಸಿಂಗ್ ಪುತ್ರ!ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ಭಾರತದ ಮಾಜಿ ಕ್ರಿಕೆಟಿಗ ಆರ್‌ಪಿ ಸಿಂಗ್ ಪುತ್ರ!

ಇದೇ ತಿಂಗಳ ಅಂತ್ಯದಲ್ಲಿ ಏಷ್ಯಾ ಕಪ್ ಟೂರ್ನಿ ಆರಂಭವಾಗಲಿದ್ದು, ಈ ಟೂರ್ನಿ ಮುಕ್ತಾಯವಾದ ಬೆನ್ನಲ್ಲೇ ಅಕ್ಟೋಬರ್ ತಿಂಗಳಿನಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಆರಂಭಗೊಳ್ಳಲಿದೆ. ಇನ್ನು ಏಷ್ಯಾಕಪ್ ಟೂರ್ನಿಗೆ ಎಲ್ಲಾ ತಂಡಗಳು ತಮ್ಮ ತಂಡಗಳನ್ನು ಪ್ರಕಟಿಸಲು ಆಗಸ್ಟ್ 7ರ ಸೋಮವಾರ ಕೊನೆಯ ದಿನ ಎಂದು ಏಷ್ಯಾ ಕ್ರಿಕೆಟ್ ಕೌನ್ಸಿಲ್ ಘೋಷಣೆ ಮಾಡಿದ್ದು, ವೆಸ್ಟ್ ಇಂಡೀಸ್ ವಿರುದ್ಧದ ಕೊನೆಯ ಎರಡು ಟಿ ಟ್ವೆಂಟಿ ಪಂದ್ಯಗಳನ್ನು ಆಯ್ಕೆಗಾರರು ಸೂಕ್ಷ್ಮವಾಗಿ ಗಮನಿಸಿ ತಂಡವನ್ನು ರಚಿಸಲಿದ್ದಾರೆ ಎಂಬ ಸುದ್ದಿಯಿದೆ. ಹೀಗಾಗಿ ವೆಸ್ಟ್ ಇಂಡೀಸ್ ವಿರುದ್ಧದ ಕೊನೆಯ ಎರಡು ಪಂದ್ಯಗಳಲ್ಲಿ ಕಣಕ್ಕಿಳಿಯುವ ಆಟಗಾರರು ಸಉತ್ತಮ ಪ್ರದರ್ಶನ ನೀಡಿ ಆಯ್ಕೆಗಾರರ ಮನ ಗೆಲ್ಲಬೇಕಿದೆ.

CWG 2022: ಕ್ರಿಕೆಟ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಭಾರತ; ಪಂದ್ಯ ಯಾರ ವಿರುದ್ಧ, ಯಾವಾಗ?CWG 2022: ಕ್ರಿಕೆಟ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಭಾರತ; ಪಂದ್ಯ ಯಾರ ವಿರುದ್ಧ, ಯಾವಾಗ?

ಇನ್ನು ಈ ಬಾರಿಯ ಏಷ್ಯಾಕಪ್ ಟೂರ್ನಿಗೆ 17 ಆಟಗಾರರನ್ನೊಳಗೊಂಡ ತಂಡವನ್ನು ಪ್ರಕಟಿಸಬಹುದಾಗಿದ್ದು, ಚೇತನ್ ಶರ್ಮಾ ನೇತೃತ್ವದ ಆಯ್ಕೆಗಾರರ ಸಮಿತಿ 15 ಆಟಗಾರರನ್ನೊಳಗೊಂಡ ತಂಡವನ್ನು ಪ್ರಕಟಿಸುವ ಸಾಧ್ಯತೆಗಳಿವೆ. ಸದ್ಯ ವಿಶ್ವ ಕ್ರಿಕೆಟ್‌ನಲ್ಲಿ ಎರಡು ತಂಡಗಳನ್ನು ಯಾವುದೇ ಚಿಂತೆಯಿಲ್ಲದೇ, ಆಟಗಾರರ ಕೊರತೆ ಇಲ್ಲದೇ ರಚಿಸಬಹುದಾದ ಸಾಮರ್ಥ್ಯವಿರುದ ಬಿಸಿಸಿಐ ಏಷ್ಯಾ ಕಪ್ ಟೂರ್ನಿಗೆ ಪ್ರಕಟಿಸುವ ತಂಡದಲ್ಲಿ ಯಾರಿಗೆ ಸ್ಥಾನ ನೀಡಲಿದ್ದಾರೆ ಎಂಬ ಪ್ರಶ್ನೆ ಹಾಗೂ ಕುತೂಹಲ ಮೂಡಿದೆ. ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರಿಷಭ್ ಪಂತ್ ಹಾಗೂ ಜಸ್ಪ್ರೀತ್ ಬುಮ್ರಾ ರೀತಿಯ ಅನುಭವಿ ಆಟಗಾರರು ಈ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವುದು ಖಚಿತವಾಗಿದ್ದು, ಇತ್ತೀಚೆಗೆ ತಂಡ ಸೇರಿ ಮಿಂಚುತ್ತಿರುವ ಹಾರ್ದಿಕ್ ಪಾಂಡ್ಯ ಹಾಗೂ ದಿನೇಶ್ ಕಾರ್ತಿಕ್ ಏಷ್ಯಾ ಕಪ್‌ನಲ್ಲಿ ಟೀಮ್ ಇಂಡಿಯಾ ಜೆರ್ಸಿ ತೊಟ್ಟು ಕಣಕ್ಕಿಳಿಯುವುದು ಖಚಿತ ಎಂಬ ಬಲ್ಲ ಮೂಲಗಳ ಮಾಹಿತಿ ಇದೆ. ಇನ್ನು ದಿನೇಶ್ ಕಾರ್ತಿಕ್‌ಗೆ ಸ್ಥಾನ ದೊರೆತರೆ ತಂಡದ ಇತರೆ ಇಬ್ಬರು ಆಟಗಾರರು ಅವಕಾಶ ವಂಚಿತರಾಗುವುದು ಖಚಿತ ಎನ್ನಲಾಗುತ್ತಿದೆ.

ದಿನೇಶ್ ಕಾರ್ತಿಕ್‌ ಆಯ್ಕೆ ಬಹುತೇಕ ಖಚಿತ

ದಿನೇಶ್ ಕಾರ್ತಿಕ್‌ ಆಯ್ಕೆ ಬಹುತೇಕ ಖಚಿತ

ದಿನೇಶ್ ಕಾರ್ತಿಕ್ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಬೇಕೆಂಬ ಗುರಿಯೊಂದಿಗೆ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆರ್‌ಸಿಬಿ ಪರ ಮಿಂಚಿ ನಂತರ ಟೀಮ್ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಇನ್ನು ದಿನೇಶ್ ಕಾರ್ತಿಕ್ ಭಾರತ ತಂಡಕ್ಕೆ ಮರಳಿದ ನಂತರ ನಡೆದ ಎಲ್ಲಾ ಸರಣಿಗಳಲ್ಲಿಯೂ ಸಾಲು ಸಾಲು ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದು, ಇದು ದಿನೇಶ್ ಕಾರ್ತಿಕ್ ಏಷ್ಯಾ ಕಪ್‌ಗೆ ಸಿದ್ಧರಾಗಲಿ ಎಂದು ಬಿಸಿಸಿಐ ನೀಡುತ್ತಿರುವ ಅವಕಾಶ ಎಂಬುದನ್ನು ಸುಲಭವಾಗಿ ಅರಿಯಬಹುದಾಗಿದೆ. ಈ ಮೂಲಕ ದಿನೇಶ್ ಕಾರ್ತಿಕ್‌ಗೆ ಏಷ್ಯಾಕಪ್ ಟಿಕೆಟ್ ಖಚಿತ ಎನ್ನಬಹುದಾಗಿದೆ.

ದಿನೇಶ್ ಕಾರ್ತಿಕ್‌ಗೆ ಅವಕಾಶ ಸಿಕ್ಕರೆ ಈ ಇಬ್ಬರು ಮನೆಗೆ

ದಿನೇಶ್ ಕಾರ್ತಿಕ್‌ಗೆ ಅವಕಾಶ ಸಿಕ್ಕರೆ ಈ ಇಬ್ಬರು ಮನೆಗೆ

ಇನ್ನು ವಿಕೆಟ್ ಕೀಪರ್ ಆಗಿರುವ ದಿನೇಶ್ ಕಾರ್ತಿಕ್‌ಗೆ ಏಷ್ಯಾಕಪ್ ಟೂರ್ನಿಯಲ್ಲಿ ಕಣಕ್ಕಿಳಿಯುವ ಅವಕಾಶ ನೀಡಿದರೆ ತಂಡದ ಇನ್ನಿಬ್ಬರು ವಿಕೆಟ್ ಕೀಪರ್‌ಗಳಾದ ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್ ಅವಕಾಶ ಸಿಗದೇ ಮೂಲೆಗುಂಪಾಗುವ ಸಾಧ್ಯತೆಗಳಿವೆ. ಆಯ್ಕೆಗಾರರು ಇಬ್ಬರು ವಿಕೆಟ್ ಕೀಪರ್‌ಗಳನ್ನು ಆಯ್ಕೆ ಮಾಡಿದರೆ ರಿಷಭ್ ಪಂತ್ ಹಾಗೂ ದಿನೇಶ್ ಕಾರ್ತಿಕ್ ಆಯ್ಕೆಯಾಗಲಿದ್ದು, ಒಂದುವೇಳೆ ಮೂವರು ವಿಕೆಟ್ ಕೀಪರ್‌ಗಳನ್ನು ಆರಿಸಿದ್ದೇ ಆದರೆ ಇಶಾನ್ ಕಿಶನ್ ಸ್ಥಾನ ಪಡೆಯುವ ಸಾಧ್ಯತೆಗಳಿವೆ. ಆದರೆ, ತಂಡದ ಪರ ಉತ್ತಮ ಪ್ರದರ್ಶನ ನೀಡಿರುವ ಹಲವು ಆಟಗಾರರು ಇರುವ ಕಾರಣ ಹಾಗೂ ವಿಕೆಟ್ ಕೀಪಿಂಗ್ ಮಾಡಬಲ್ಲ ಕೆಎಲ್ ರಾಹುಲ್ ತಂಡ ಸೇರುವ ಸಾಧ್ಯತೆಗಳಿದ್ದು, ಕೇವಲ ಇಬ್ಬರು ವಿಕೆಟ್ ಕೀಪರ್‌ಗಳಿಗೆ ಮಣೆ ಹಾಕುವ ಸಾಧ್ಯತೆಗಳಿವೆ.

ಏಷ್ಯಾಕಪ್ ಟೂರ್ನಿಗೆ ಪ್ರಕಟವಾಗುವ ತಂಡ ಹೀಗಿರಲಿದೆ

ಏಷ್ಯಾಕಪ್ ಟೂರ್ನಿಗೆ ಪ್ರಕಟವಾಗುವ ತಂಡ ಹೀಗಿರಲಿದೆ

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಹಾಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್.

ಬ್ಯಾಕ್ ಅಪ್ ಬ್ಯಾಟರ್: ದೀಪಕ್ ಹೂಡಾ/ಇಶಾನ್ ಕಿಶನ್/ಸಂಜು ಸ್ಯಾಮ್ಸನ್

ಬ್ಯಾಕ್-ಅಪ್ ವೇಗಿಗಳು: ಅರ್ಷದೀಪ್ ಸಿಂಗ್/ಅವೇಶ್ ಖಾನ್/ದೀಪಕ್ ಚಾಹರ್/ಹರ್ಷಲ್ ಪಟೇಲ್.

Story first published: Friday, August 5, 2022, 14:58 [IST]
Other articles published on Aug 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X