ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Asia Cup 2022: IND vs PAK ಪಂದ್ಯದಲ್ಲಿ ಇದೇ ಗೆಲ್ಲುವ ತಂಡ; ಭವಿಷ್ಯ ನುಡಿದ ಕಪಿಲ್ ದೇವ್

Asia Cup 2022: Kapil Dev Predicts The Winning Team In India vs Pakistan Match

ಇಂದು (ಭಾನುವಾರ, ಆಗಸ್ಟ್ 28) ನಡೆಯಲಿರುವ ಪುರುಷರ ಏಷ್ಯಾ ಕಪ್ 2022ರಲ್ಲಿ ಬ್ಲಾಕ್‌ಬಸ್ಟರ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಪರಸ್ಪರ ಮುಖಾಮುಖಿಯಾದಾಗ ವಿಶ್ವದ ಗಮನವನ್ನು ತನ್ನತ್ತ ಸೆಳೆಯುತ್ತವೆ.

ಎರಡೂ ತಂಡಗಳು ಕಳೆದ ವರ್ಷ ಟಿ20 ವಿಶ್ವಕಪ್‌ನಲ್ಲಿ ಮುಖಾಮುಖಿಯಾಗಿದ್ದವು, ಅಲ್ಲಿ ಪಾಕಿಸ್ತಾನ ತಂಡವು ಭಾರತವನ್ನು 10 ವಿಕೆಟ್‌ಗಳಿಂದ ಸೋಲಿಸಿ ವಿಶ್ವಕಪ್‌ನಲ್ಲಿ ತಮ್ಮ ಸಾಂಪ್ರದಾಯಿಕ ಎದುರಾಳಿಗಳ ವಿರುದ್ಧ ವಿಶ್ವಕಪ್‌ನಲ್ಲಿ ತಮ್ಮ ಮೊದಲ ಜಯವನ್ನು ದಾಖಲಿಸಿತು.

IND vs PAK: ಪಂತ್, ಕಾರ್ತಿಕ್ ನಡುವಿನ ಆಯ್ಕೆ ಭಾರತಕ್ಕೆ ದೊಡ್ಡ ತಲೆನೋವು; ಚೇತೇಶ್ವರ ಪೂಜಾರIND vs PAK: ಪಂತ್, ಕಾರ್ತಿಕ್ ನಡುವಿನ ಆಯ್ಕೆ ಭಾರತಕ್ಕೆ ದೊಡ್ಡ ತಲೆನೋವು; ಚೇತೇಶ್ವರ ಪೂಜಾರ

ಆದಾಗ್ಯೂ, ಭಾರತವು ಈ ಬಾರಿ ತನ್ನ ತಂಡಕ್ಕೆ ಹೆಚ್ಚಿನ ಫೈರ್‌ಪವರ್ ಅನ್ನು ಸೇರಿಸಿದೆ. ಅಲ್ಲದೆ, ಕಳೆದ ವರ್ಷ ನಡೆದ ಟಿ20 ವಿಶ್ವಕಪ್ ಬಳಿಕ ವಿರಾಟ್ ಕೊಹ್ಲಿ ನಾಯಕತ್ವ ವಹಿಸಿಕೊಂಡಿದ್ದ ಭಾರತ ತಂಡವನ್ನು ರೋಹಿತ್ ಶರ್ಮಾ ಈ ಬಾರಿ ಮುನ್ನಡೆಸಲಿದ್ದಾರೆ.

ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಮಾತನಾಡಿದ ಭಾರತದ ಮಾಜಿ ನಾಯಕ ಕಪಿಲ್ ದೇವ್, "ಟಿ20 ಒಂದು ಮಾರ್ಜಿನ್‌ನ ಸ್ವರೂಪ ಎಂದು ಭಾವಿಸುತ್ತೇನೆ ಮತ್ತು ಉತ್ತಮವಾಗಿ ಆಡುವ ತಂಡ ಅಂತಿಮವಾಗಿ ಗೆಲ್ಲುತ್ತದೆ," ಎಂದು ಹೇಳಿದರು.

ಭಾರತವು ಕಾಗದದ ಮೇಲೆ ಬಲಶಾಲಿಯಾಗಿದೆ

ಭಾರತವು ಕಾಗದದ ಮೇಲೆ ಬಲಶಾಲಿಯಾಗಿದೆ

ಆದಾಗ್ಯೂ, 1983ರ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್, "ಭಾರತವು ಕಾಗದದ ಮೇಲೆ ಬಲಶಾಲಿಯಾಗಿದೆ ಎಂದು ಭಾವಿಸಿದ್ದಾರೆ ಮತ್ತು ಭಾರತದ ಆಟಗಾರರು ತಮ್ಮ ಪಾಕಿಸ್ತಾನದ ಸಹವರ್ತಿ ಆಟಗಾರರಿಗೆ ಹೋಲಿಸಿದರೆ ಹೆಚ್ಚಿನ ಅನುಭವವನ್ನು ಹೊಂದಿದ್ದಾರೆ," ಎಂದರು.

"ನೀವು ಟಿ20ಯಲ್ಲಿ ಯಾವುದರ ಬಗ್ಗೆಯೂ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ನೀವು ಏಕದಿನ ಮತ್ತು ಟೆಸ್ಟ್‌ ಪಂದ್ಯಗಳಲ್ಲಿ ಸ್ವಲ್ಪ ಮಟ್ಟಿಗೆ ಊಹಿಸಬಹುದು. ಆದರೆ ಟಿ20 ಪಂದ್ಯಗಳಲ್ಲಿ ಊಹಿಸುವುದು ತುಂಬಾ ಕಷ್ಟ. ನಾನು ಹೇಳುತ್ತೇನೆ ನಮ್ಮ ತಂಡವು ಅನುಭವವನ್ನು ಹೊಂದಿದೆ ಮತ್ತು ಅವರು ಉತ್ತಮರಾಗಿದ್ದಾರೆ, ಆದರೆ ನಾವು ಇನ್ನೂ ಉತ್ತಮವಾಗಿದ್ದೇವೆ. ಕಳೆದ ಬಾರಿಯೂ ಪಾಕಿಸ್ತಾನ ತಂಡವು ಭಾರತಕ್ಕಿಂತ ಉತ್ತಮವಾಗಿ ಆಡಿದ್ದಾರೆ".

ಭಾರತ ತಂಡವು ತುಂಬಾ ಉತ್ತಮವಾಗಿದೆ

ಭಾರತ ತಂಡವು ತುಂಬಾ ಉತ್ತಮವಾಗಿದೆ

"ಆದ್ದರಿಂದ, ಏನನ್ನೂ ಹೇಳುವುದು ತುಂಬಾ ಕಷ್ಟ. ನೀವು ಅಂಕಿಅಂಶಗಳು ಮತ್ತು ಆಟಗಾರರ ಅಂಕಿಅಂಶಗಳಿಗೆ ಹೋದರೆ, ಭಾರತ ತಂಡವು ತುಂಬಾ ಉತ್ತಮವಾಗಿದೆ. ಆದರೆ ಇದು ಆ ನಿರ್ದಿಷ್ಟ ದಿನದಂದು ತಂಡವು ಹೇಗೆ ಆಡುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ," ಎಂದು "ಅನ್‌ಕಟ್' ಎಂಬ ಯೂಟ್ಯೂಬ್ ಶೋನಲ್ಲಿ ಅಪ್‌ಲೋಡ್ ಮಾಡಿದ ವಿಡಿಯೋದಲ್ಲಿ ಮಾಜಿ ಆಲ್‌ರೌಂಡರ್ ಹೇಳಿದ್ದಾರೆ.

ಭಾರತ ತಂಡವು ಪಾಕಿಸ್ತಾನ ಮತ್ತು ಹಾಂಕಾಂಗ್ ಜೊತೆಗೆ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಏಷ್ಯಾ ಕಪ್‌ನ ಆರಂಭಿಕ ಪಂದ್ಯದಲ್ಲಿ ಅಫ್ಘಾನಿಸ್ತಾನ ಶನಿವಾರ ಶ್ರೀಲಂಕಾವನ್ನು 8 ವಿಕೆಟ್‌ಗಳಿಂದ ಸೋಲಿಸಿತು.

2022ರ ಏಷ್ಯಾ ಕಪ್‌ಗಾಗಿ ಭಾರತ ಮತ್ತು ಪಾಕಿಸ್ತಾನ ಪೂರ್ಣ ತಂಡಗಳು

2022ರ ಏಷ್ಯಾ ಕಪ್‌ಗಾಗಿ ಭಾರತ ಮತ್ತು ಪಾಕಿಸ್ತಾನ ಪೂರ್ಣ ತಂಡಗಳು

ಭಾರತ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್.
ಸ್ಟ್ಯಾಂಡ್‌ಬೈ ಆಟಗಾರರು: ದೀಪಕ್ ಚಹಾರ್, ಅಕ್ಷರ್ ಪಟೇಲ್, ಶ್ರೇಯಸ್ ಅಯ್ಯರ್.

ಪಾಕಿಸ್ತಾನ: ಬಾಬರ್ ಅಜಮ್ (ನಾಯಕ), ಶಾದಾಬ್ ಖಾನ್ (ಉಪನಾಯಕ), ಆಸಿಫ್ ಅಲಿ, ಫಖರ್ ಜಮಾನ್, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸಿಂ ಜೂನಿಯರ್, ನಸೀಮ್ ಶಾ, ಶಾಹೀನ್ ಶಾ ಆಫ್ರಿದಿ, ಶಹನವಾಜ್ ದಹಾನಿ ಮತ್ತು ಉಸ್ಮಾನ್ ಖಾದಿರ್.

Story first published: Sunday, August 28, 2022, 18:54 [IST]
Other articles published on Aug 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X