ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಜ್ಯುರಿಯಿಂದ ಈಗಷ್ಟೇ ಚೇತರಿಸಿಕೊಂಡ KL ರಾಹುಲ್‌ಗೆ ಇಷ್ಟು ಬೇಗನೆ ತಂಡಕ್ಕೆ ಸೇರಿಸಿಕೊಳ್ಳಬೇಕಿತ್ತಾ? ಡ್ಯಾನಿಶ್ ಕನೇರಿಯಾ ಪ್ರಶ್ನೆ

KL Rahul

ಟೀಂ ಇಂಡಿಯಾ ಸ್ಟಾರ್ ಓಪನರ್ ಕೆ.ಎಲ್ ರಾಹುಲ್‌ ಅಂತಿಮವಾಗಿ ಟೀಂ ಇಂಡಿಯಾಗೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೂ ಮುನ್ನ ಇಂಜ್ಯುರಿಯಿಂದ ತಂಡದಿಂದ ಹೊರಬಿದ್ದ ಕೆ.ಎಲ್ ರಾಹುಲ್ ಅನೇಕ ಸರಣಿಗಳಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದರು.

ಆದ್ರೀಗ ಮುಂಬರುವ ಏಷ್ಯಾಕಪ್‌ ಸ್ಕ್ವಾಡ್‌ನ 15 ಸದಸ್ಯರನ್ನೊಳಗೊಂಡ ತಂಡದಲ್ಲಿ ಕೆ.ಎಲ್ ರಾಹುಲ್ ಅವಕಾಶ ಪಡೆದಿದ್ದು, ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ಪಡೆಯಲು ಎದುರು ನೋಡುತ್ತಿದ್ದಾರೆ.

ಆದ್ರೆ ಪಾಕಿಸ್ತಾನ ಮಾಜಿ ಸ್ಪಿನ್ನರ್ ಡ್ಯಾನಿಶ್ ಕನೇರಿಯಾ ಕೆ.ಎಲ್ ರಾಹುಲ್ ಆಯ್ಕೆ ಕುರಿತಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದು, ಆತನನ್ನು ತಂಡಕ್ಕೆ ಸೇರಿಸಿಕೊಳ್ಳುವ ಅವಸರ ಮಾಡಲಾಗಿದೆ ಎಂದಿದ್ದಾರೆ. ಕೆ.ಎಲ್ ರಾಹುಲ್ ಐಪಿಎಲ್ 2022ರ ಸೀಸನ್‌ನ ಬಳಿಕ ಯಾವುದೇ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಭಾಗಿಯಾಗಿಲ್ಲ. ಹೀಗಿರುವಾಗ ಆತನನ್ನು ನೇರವಾಗಿ ಏಷ್ಯಾಕಪ್‌ಗೆ ಆಯ್ಕೆ ಮಾಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಗೆ ನಾಯಕನಾಗಿದ್ದ ಕೆ.ಎಲ್ ರಾಹುಲ್

ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಗೆ ನಾಯಕನಾಗಿದ್ದ ಕೆ.ಎಲ್ ರಾಹುಲ್

ಕೆ.ಎಲ್ ರಾಹುಲ್‌ರನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ನಾಯಕರನ್ನಾಗಿ ಆಯ್ಕೆ ಮಾಡಲಾಗಿತ್ತು. ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಿದ್ದರ ಪರಿಣಾಮವಾಗಿ ರಾಹುಲ್ ತಂಡವನ್ನ ಮುನ್ನಡೆಸಬೇಕಾಗಿತ್ತು. ಆದ್ರೆ ಸರಣಿ ಪ್ರಾರಂಭಕ್ಕೂ ಒಂದು ದಿನ ಮುಂಚೆ ರಾಹುಲ್ ತೊಡೆಸಂದು ನೋವಿನಿಂದ ಬಳಲಿದ ಪರಿಣಾಮ ಇಡೀ ಟೂರ್ನಿಯಿಂದಲೇ ಹೊರಬಿದ್ದರು. ಉನ್ನತ ಚಿಕಿತ್ಸೆಗಾಗಿ ಜರ್ಮನಿಗೆ ತೆರಳಿದ್ದ ರಾಹುಲ್ ಶಸ್ತ್ರ ಚಿಕಿತ್ಸೆ ಪೂರ್ಣಗೊಳಿಸಿದ್ದಾರೆ.

ಕೆ.ಎಲ್ ರಾಹುಲ್ ದಿಢೀರನೆ ಟೂರ್ನಿಯಿಂದ ಹೊರಬಿದ್ದ ಬಳಿಕ ರಿಷಭ್ ಪಂತ್‌ರನ್ನು ನಾಯರನ್ನಾಗಿ ಘೋಷಿಸಲಾಯ್ತ. ಮೊದಲೆರಡು ಪಂದ್ಯಗಳನ್ನ ಸೋತಿದ್ದ ಟೀಂ ಇಂಡಿಯಾ ನಂತರದ ಎರಡೂ ಪಂದ್ಯಗಳಲ್ಲಿ ದಾಖಲೆಯ ಜಯಪಡೆದು ಸರಣಿಯನ್ನ ಸಮಬಲಗೊಳಿಸಿತು. ಅಂತಿಮ ಪಂದ್ಯವು ಬೆಂಗಳೂರಿನಲ್ಲಿ ಮಳೆಯಲ್ಲಿಯೇ ಕೊಚ್ಚಿ ಹೋದ ಪರಿಣಾಮ ಸರಣಿ 2-2ರಿಂದ ಸಮಬಲಗೊಂಡಿತು.

ಅತಿಯಾಯ್ತಾ ಟೀಮ್ ಇಂಡಿಯಾದಲ್ಲಿ ಆಟಗಾರರ ಬದಲಾವಣೆ?: ನಾಯಕ ರೋಹಿತ್ ಕೊಟ್ರು ಬಲವಾದ ಸಮರ್ಥನೆ!

ಜರ್ಮನಿಯಲ್ಲಿ ಚಿಕಿತ್ಸೆ ಪಡೆದ ಕೆ.ಎಲ್ ರಾಹುಲ್‌ ಚೇತರಿಕೆಗೂ ಮುನ್ನ ಕೊರೊನಾ

ಜರ್ಮನಿಯಲ್ಲಿ ಚಿಕಿತ್ಸೆ ಪಡೆದ ಕೆ.ಎಲ್ ರಾಹುಲ್‌ ಚೇತರಿಕೆಗೂ ಮುನ್ನ ಕೊರೊನಾ

ಜರ್ಮನಿಯಿಂದ ಹೆರಿನಾ ಶಸ್ತ್ರಚಿಕಿತ್ಸೆ ನಂತರ ಭಾರತಕ್ಕೆ ಮರಳಿದ ಬಳಿಕ ರಾಹುಲ್ 6 ರಿಂದ 12 ವಾರಗಳ ಕಾಲ ಪುನರ್ವಸತಿ ಶಿಬಿರದಲ್ಲಿ ಚೇತರಿಕೆ ಪಡೆಯಬೇಕಾಗಿತ್ತು. ಇನ್ನೇನು ವೆಸ್ಟ್ ಇಂಡೀಸ್ ಸರಣಿಯಲ್ಲಿ ಆಡಲಿದ್ದಾರೆ ಎಂದು ಅಭಿಮಾನಿಗಳು ಕಾತುರದಿಂದ ಎದುರು ನೋಡುತ್ತಿದ್ದಾಗ ಕೋವಿಡ್-19 ಪಾಸಿಟಿವ್ ಆದ ಕಾರಣ ವೆಸ್ಟ್‌ ಇಂಡೀಸ್ ವಿರುದ್ಧ ಏಕದಿನ ಹಾಗೂ ಟಿ20 ಸರಣಿಯನ್ನು ಕಳೆದುಕೊಂಡರು.

ಜಿಂಬಾಬ್ವೆ ವಿರುದ್ಧ ಏಕದಿನ ಸರಣಿಗೆ ಆಯ್ಕೆಯಾಗದ ರಾಹುಲ್ ಕೊನೆಗೂ ಆಗಸ್ಟ್‌ 27ರಿಂದ ನಡೆಯಲಿರುವ ಏಷ್ಯಾಕಪ್‌ನಲ್ಲಿ ಭಾಗಿಯಾಗಲಿದ್ದಾರೆ.

ಕೆ.ಎಲ್ ರಾಹುಲ್ ಆಯ್ಕೆ ಕುರಿತು ಡ್ಯಾನೀಶ್ ಕನೇರಿಯಾ ಅಪಸ್ವರ

ಕೆ.ಎಲ್ ರಾಹುಲ್ ಆಯ್ಕೆ ಕುರಿತು ಡ್ಯಾನೀಶ್ ಕನೇರಿಯಾ ಅಪಸ್ವರ

ಪಾಕಿಸ್ತಾನ ಮಾಜಿ ಲೆಗ್ ಸ್ಪಿನ್ನರ್ ಡ್ಯಾನಿಶ್ ಕನೇರಿಯಾ ಪ್ರಕಾರ ಕೆ.ಎಲ್ ರಾಹುಲ್‌ ಚೇತರಿಕೆಗೆ ಇನ್ನಷ್ಟು ಸಮಯಾವಕಾಶ ನೀಡಬೇಕಾಗಿತ್ತು. ಏಕೆಂದರೆ ಟಿ20 ವಿಶ್ವಕಪ್ ಬಹುಮುಖ್ಯವಾಗಿರುವುದರಿಂದ ಕೆ.ಎಲ್ ರಾಹುಲ್‌ ಏಷ್ಯಾಕಪ್‌ಗೆ ಆಯ್ಕೆ ಮಾಡದೇ ಇದ್ದರೂ ಆಗುತ್ತಿತ್ತು ಎಂದಿದ್ದಾರೆ.

"ರಾಹುಲ್ ಸ್ವಲ್ಪ ಸಮಯದವರೆಗೆ ಅಂತರಾಷ್ಟ್ರೀಯ ಕ್ರಿಕೆಟ್ ಆಡಿಲ್ಲ, ಆದರೂ ನಿರಂತರವಾಗಿ ಆಡುತ್ತಿದ್ದ ಶ್ರೇಯಸ್ ಅಯ್ಯರ್, ಶುಭಮನ್ ಗಿಲ್ ಮತ್ತು ಸಂಜು ಸ್ಯಾಮ್ಸನ್ ಅವರನ್ನು ಬಿಟ್ಟು ಆಯ್ಕೆ ಮಾಡಲಾಗಿದೆ. ಆಟಗಾರನು ಗಾಯದಿಂದ ಹಿಂತಿರುಗಿದಾಗ, ನೀವು ಅವನನ್ನು ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಆಡುವಂತೆ ಒತ್ತಡ ಹೇರಬಾರದು. ಟಿ20 ವಿಶ್ವಕಪ್‌ನಲ್ಲಿ ಭಾರತಕ್ಕೆ ರಾಹುಲ್‌ ಪ್ರಮುಖ ಆಟಗಾರನಾಗಿರುವುದರಿಂದ ತಂಡಕ್ಕೆ ಅವರಿಗೆ ಸ್ವಲ್ಪ ಸಮಯ ನೀಡಬೇಕಿತ್ತು "ಎಂದು ಡ್ಯಾನಿಶ್ ಕನೇರಿಯಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

ಕಾಮನ್‌ವೆಲ್ತ್‌ನಲ್ಲಿ ಮೊದಲ ಪದಕ ಗೆದ್ದ ಭಾರತೀಯ ಯಾರು? ಒಟ್ಟಾರೆ ಭಾರತ ಎಷ್ಟು ಪದಕ ಗೆದ್ದಿದೆ?

ಗೆದ್ದಿದ್ದೇ ತಡ...Rohit Sharma ಕ್ಯಾಪ್ಟನ್ಸ್ ಮೇಲೆ ಕಣ್ಣಿಟ್ಟ Hardik Pandya *Cricket | Oneindia Kannada
ಮೊಹಮ್ಮದ್ ಶಮಿ ಹೊರಗಿಟ್ಟಿದ್ದಕ್ಕೂ ಕನೇರಿಯಾ ಬೇಸರ

ಮೊಹಮ್ಮದ್ ಶಮಿ ಹೊರಗಿಟ್ಟಿದ್ದಕ್ಕೂ ಕನೇರಿಯಾ ಬೇಸರ

ಕೆ.ಎಲ್ ರಾಹುಲ್ ಆಯ್ಕೆ ಒಂದೆಡೆಯಾದ್ರೆ, ಅನುಭವಿ ವೇಗಿ ಮೊಹಮ್ಮದ್ ಶಮಿಯನ್ನು ತಂಡದಿಂದ ಹೊರಗಿಟ್ಟ ಕುರಿತಾಗಿಯೂ ಕನೇರಿಯಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವೇಶ್ ಖಾನ್ ಬದಲು ಮೊಹಮ್ಮದ್ದ ಶಮಿಯನ್ನ ಏಷ್ಯಾಕಪ್‌ಗೆ ಆಯ್ಕೆ ಮಾಡಬೇಕಿತ್ತು ಎಂದಿದ್ದಾರೆ.

ಮೊಹಮ್ಮದ್ ಶಮಿ ಏಕದಿನ ಕ್ರಿಕೆಟ್ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪ್ರಮುಖ ಬೌಲರ್ ಆಗಿರುವುದರಿಂದ ಆಯ್ಕೆಗಾರರು ವರ್ಕ್ ಲೋಡ್ ಮ್ಯಾನೇಜ್ ಮಾಡುವ ಸಲುವಾಗಿ ಶಮಿಯನ್ನು ಆಯ್ಕೆ ಮಾಡಿಲ್ಲ ಎಂಬ ಅಭಿಪ್ರಾಯಗಳು ಸಹ ಕೇಳಿಬಂದಿವೆ.

Story first published: Wednesday, August 10, 2022, 13:34 [IST]
Other articles published on Aug 10, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X