ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Asia Cup: ಶ್ರೀಲಂಕಾದಲ್ಲಿ ಅಸಾಧ್ಯವಾದರೆ ಈ ದೇಶಕ್ಕೆ ಏಷ್ಯಾಕಪ್ 2022 ಶಿಫ್ಟ್ ಆಗುವ ಸಾಧ್ಯತೆ!

Asia Cup 2022 Likely To Shift To UAE Says SLC Secretary Mohan de Silva

ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ನಡೆಯುತ್ತಿರುವ ರಾಜಕೀಯ ಪ್ರಕ್ಷುಬ್ಧತೆ, ಆರ್ಥಿಕ ಬಿಕ್ಕಟ್ಟು ಮತ್ತು ನಾಗರಿಕ ಅಶಾಂತಿಯ ಕರಿನೆರಳು ಏಷ್ಯಾಕಪ್ 2022 ಮೇಲೂ ಬೀಳುವ ಸಾಧ್ಯತೆ ದಟ್ಟವಾಗಿದೆ.

ಶ್ರೀಲಂಕಾದಲ್ಲಿನ ರಾಜಕೀಯ ಅಶಾಂತಿಯ ಹಿನ್ನೆಲೆಯಲ್ಲಿ ಏಷ್ಯಾ ಕಪ್ ಅನ್ನು ಶ್ರೀಲಂಕಾದಿಂದ ಸ್ಥಳಾಂತರಿಸುವ ಸಾಧ್ಯತೆಯಿದೆ ಎಂದು ಶ್ರೀಲಂಕಾ ಕ್ರಿಕೆಟ್ (ಎಸ್ಎಲ್‌ಸಿ) ಕಾರ್ಯದರ್ಶಿ ಮೋಹನ್ ಡಿ ಸಿಲ್ವಾ ಭಾನುವಾರ ಹೇಳಿದ್ದಾರೆ.

ಏಷ್ಯಾಕಪ್ 2022ರ ಆತಿಥ್ಯ ವಹಿಸುವ ಕುರಿತು ಶ್ರೀಲಂಕಾ ಕ್ರಿಕೆಟ್‌ನಿಂದ ಮಹತ್ವದ ಹೇಳಿಕೆಏಷ್ಯಾಕಪ್ 2022ರ ಆತಿಥ್ಯ ವಹಿಸುವ ಕುರಿತು ಶ್ರೀಲಂಕಾ ಕ್ರಿಕೆಟ್‌ನಿಂದ ಮಹತ್ವದ ಹೇಳಿಕೆ

ಏಷ್ಯಾಕಪ್ ಪಂದ್ಯಾವಳಿಯನ್ನು ಯುಎಇಯಲ್ಲಿ ಆಡಬಹುದು ಎಂದು ಹೇಳಿದ್ದು, ಆರ್ಥಿಕ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿರುವ ಶ್ರೀಲಂಕಾ ದೇಶ ಹಲವು ವಾರಗಳಿಂದ ಸರ್ಕಾರದ ವಿರುದ್ಧ ವ್ಯಾಪಕ ಪ್ರತಿಭಟನೆಗಳಿಗೆ ಸಾಕ್ಷಿಯಾಗಿದೆ. ಆದಾಗ್ಯೂ, ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರು ಮಿಲಿಟರಿ ಜೆಟ್‌ನಲ್ಲಿ ದೇಶದಿಂದ ಪಲಾಯನ ಮಾಡುವುದರೊಂದಿಗೆ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ.

ಏಷ್ಯಾ ಕಪ್ ಯುಎಇಯಲ್ಲಿ ನಡೆಯುವ ಸಾಧ್ಯತೆ

ಏಷ್ಯಾ ಕಪ್ ಯುಎಇಯಲ್ಲಿ ನಡೆಯುವ ಸಾಧ್ಯತೆ

"ಏಷ್ಯಾ ಕಪ್ ಯುಎಇಯಲ್ಲಿ ನಡೆಯುವ ಸಾಧ್ಯತೆಯಿದೆ" ಎಂದು ಶ್ರೀಲಂಕಾ ಕ್ರಿಕೆಟ್ ಕಾರ್ಯದರ್ಶಿ ಮೋಹನ್ ಡಿ ಸಿಲ್ವಾ ಟಿ20 ಪಂದ್ಯಾವಳಿಯ ಸ್ಥಳದಲ್ಲಿ ಸಂಭವನೀಯ ಬದಲಾವಣೆಯ ಬಗ್ಗೆ ಕೇಳಿದಾಗ ಪಿಟಿಐಗೆ ತಿಳಿಸಿದರು.

ಆರು ತಂಡಗಳ ಪಂದ್ಯಾವಳಿಯ ದಿನಾಂಕಗಳು ಆಗಸ್ಟ್ 26ರಿಂದ ಸೆಪ್ಟೆಂಬರ್ 11 ರವರೆಗೆ ಮೊದಲೇ ನಿಗದಿಪಡಿಸಿದಂತೆಯೇ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ. ಹಾಂಗ್ ಕಾಂಗ್, ಸಿಂಗಪುರ, ಕುವೈತ್ ಮತ್ತು ಯುಎಇ ಒಂದು ಅರ್ಹತಾ ಸ್ಥಾನಕ್ಕಾಗಿ ಸೆಣಸಾಡುವುದರೊಂದಿಗೆ ಮುಖ್ಯ ಸ್ಪರ್ಧೆಯ ಮೊದಲು ಅರ್ಹತಾ ಪಂದ್ಯವೂ ನಡೆಯುತ್ತದೆ. ಉಳಿದಂತೆ ಅಫ್ಘಾನಿಸ್ತಾನ, ಶ್ರೀಲಂಕಾ, ಪಾಕಿಸ್ತಾನ, ಭಾರತ ಮತ್ತು ಬಾಂಗ್ಲಾದೇಶ ಐದು ಪೂರ್ಣ ಸದಸ್ಯರ ತಂಡಗಳಾಗಿರುತ್ತವೆ.

ಏಷ್ಯನ್ ಕ್ರಿಕೆಟ್ ಕೌನ್ಸಿಲ್ ನೇತೃತ್ವ ವಹಿಸಿರುವ ಜಯ್ ಶಾ

ಏಷ್ಯನ್ ಕ್ರಿಕೆಟ್ ಕೌನ್ಸಿಲ್ ನೇತೃತ್ವ ವಹಿಸಿರುವ ಜಯ್ ಶಾ

ಶ್ರೀಲಂಕಾದಲ್ಲಿ ಇತ್ತೀಚೆಗೆ ಆಸ್ಟ್ರೇಲಿಯಾ ಪ್ರವಾಸವು ಸುಗಮವಾಗಿ ಸಾಗಿದೆ ಮತ್ತು ಪಾಕಿಸ್ತಾನವು ಪ್ರಸ್ತುತ ಶ್ರೀಲಂಕಾದಲ್ಲಿ ಟೆಸ್ಟ್ ಕ್ರಿಕೆಟ್ ಆಡುತ್ತಿದೆ. ಹೀಗಾಗಿ ಶ್ರೀಲಂಕಾ ಕ್ರಿಕೆಟ್ ಕಾಂಟಿನೆಂಟಲ್ ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಬಹುದು ಎಂಬ ಭರವಸೆ ಇತ್ತು.

ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಮುಂಚಿತವಾಗಿ ಏಷ್ಯನ್ ತಂಡಗಳಿಗೆ ಈ ಪಂದ್ಯಾವಳಿಯು ಉತ್ತಮ ತಯಾರಿಯಾಗಿ ಕಂಡುಬರುತ್ತದೆ.

ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಯಿಂದ ಟೂರ್ನಮೆಂಟ್ ಸ್ಥಳ ಬದಲಾವಣೆ ಕುರಿತು ಅಧಿಕೃತ ಪ್ರಕಟಣೆಯನ್ನು ಶೀಘ್ರದಲ್ಲೇ ನಿರೀಕ್ಷಿಸಲಾಗಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ನೇತೃತ್ವ ವಹಿಸಿದ್ದಾರೆ. ಆದರೆ ಏಷ್ಯಾಕಪ್ ಅನ್ನು ಶ್ರೀಲಂಕಾದಲ್ಲಿ ಆಡಬೇಕೆಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಶನಿವಾರ ಹೇಳಿದೆ.

ಮೊದಲ ಆದ್ಯತೆ ಶ್ರೀಲಂಕಾವನ್ನು ಬೆಂಬಲಿಸುವುದು

ಮೊದಲ ಆದ್ಯತೆ ಶ್ರೀಲಂಕಾವನ್ನು ಬೆಂಬಲಿಸುವುದು

"ನಮ್ಮ ಮೊದಲ ಆದ್ಯತೆ ಶ್ರೀಲಂಕಾವನ್ನು ಬೆಂಬಲಿಸುವುದು ಮತ್ತು ಅಲ್ಲಿ ಏಷ್ಯಾ ಕಪ್ ಅನ್ನು ಆಡುವುದು. ಈ ಪಂದ್ಯಾವಳಿಯು ಶ್ರೀಲಂಕಾದಲ್ಲಿ ನಡೆಯದಿದ್ದರೆ, ಅದು ಅವರಿಗೆ ಕ್ರಿಕೆಟ್ ಮತ್ತು ದೊಡ್ಡ ಆರ್ಥಿಕ ನಷ್ಟವನ್ನುಂಟುಮಾಡುತ್ತದೆ. ಆಸ್ಟ್ರೇಲಿಯಾದ ಇತ್ತೀಚಿನ ಶ್ರೀಲಂಕಾ ಪ್ರವಾಸವು ಯಾವುದೇ ತೊಂದರೆಗಳಿಲ್ಲದೆ ಸಾಗಿದೆ," ಎಂದು ಪಿಸಿಬಿ ಮುಖ್ಯ ಕಾರ್ಯನಿರ್ವಾಹಕ ಫೈಸಲ್ ಹಸ್ನೇನ್ ಶನಿವಾರದ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ಅಂತೆಯೇ, ನಾವು ಶ್ರೀಲಂಕಾ ಕ್ರಿಕೆಟ್ (SLC) ಮತ್ತು ದೇಶದಲ್ಲಿನ ನಮ್ಮ ರಾಯಭಾರ ಕಚೇರಿಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುವುದರಿಂದ ಶ್ರೀಲಂಕಾದಲ್ಲಿ ನಡೆಯುತ್ತಿರುವ ಪಾಕಿಸ್ತಾನ ಪ್ರವಾಸದಲ್ಲಿ ಯಾವುದೇ ಸಮಸ್ಯೆಗಳಿಲ್ಲ".

"ಎಸಿಸಿ ಪ್ರತಿನಿಧಿಗಳೊಂದಿಗಿನ ನಮ್ಮ ಚರ್ಚೆಗಳು ಈ ಸಮಯದಲ್ಲಿ ಪಂದ್ಯಾವಳಿಯು ಟ್ರ್ಯಾಕ್‌ನಲ್ಲಿದೆ ಎಂದು ಸೂಚಿಸಿದೆ. ಏಕೆಂದರೆ ಅವರು ಪರಿಸ್ಥಿತಿಯನ್ನು ಬಹಳ ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಮತ್ತು ನಾವು ಅವರ ನಿರ್ಧಾರವನ್ನು ಬೆಂಬಲಿಸುತ್ತೇವೆ," ಎಂದು ಪಿಸಿಬಿ ಮುಖ್ಯ ಕಾರ್ಯನಿರ್ವಾಹಕ ಫೈಸಲ್ ಹಸ್ನೇನ್ ತಿಳಿಸಿದ್ದಾರೆ.

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪ್ರತಿಕ್ರಿಯೆ

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪ್ರತಿಕ್ರಿಯೆ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಅವರು ಗುರುವಾರ ಈ ಬಗ್ಗೆ ಮಾತನಾಡಿದ್ದಾರೆ. "ದ್ವೀಪ ರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಅಲ್ಲಿನ ಪರಿಸ್ಥಿತಿಯನ್ನು ಬಿಸಿಸಿಐ ಮೇಲ್ವಿಚಾರಣೆ ಮಾಡುತ್ತದೆ," ಎಂದು ಹೇಳಿದರು.

"ನಾನು ಈ ಕ್ಷಣದಲ್ಲಿ (ಭಾರತದ ಸಾಧ್ಯತೆಯ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ, ಟೂರ್ನಿಯನ್ನು ಬೇಕಾದರೆ ಆಯೋಜಿಸುತ್ತೇವೆ) ಶ್ರೀಲಂಕಾದ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಸದ್ಯ ಆಸ್ಟ್ರೇಲಿಯಾ ಅಲ್ಲಿ ಆಡುತ್ತಿದೆ. ಶ್ರೀಲಂಕಾ ತಂಡ ಕೂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ನಾನು ಈ ಕ್ಷಣದಲ್ಲಿ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ನಾವು ಒಂದು ತಿಂಗಳು ಕಾಯೋಣ," ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದರು.

Story first published: Sunday, July 17, 2022, 13:53 [IST]
Other articles published on Jul 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X