ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅತಿಹೆಚ್ಚು ಬಾರಿ ಏಷ್ಯಾಕಪ್ ಗೆದ್ದಿರುವ ತಂಡ ಯಾವುದು? ಎಲ್ಲಾ ಆವೃತ್ತಿಯ ವಿನ್ನರ್ಸ್, ರನ್ನರ್ ಅಪ್ ಪಟ್ಟಿ

Asia Cup 2022: List of champion and runner up teams in the history of Asia Cup

ಮಿನಿ ವಿಶ್ವಕಪ್ ಎಂದೇ ಖ್ಯಾತಿಯನ್ನು ಪಡೆದಿರುವ ಏಷ್ಯಾ ಖಂಡದ ಕ್ರಿಕೆಟ್ ತಂಡಗಳ ನಡುವಿನ ಸೆಣಸಾಟ ಪುನಃ ಆಗಮಿಸಿದ್ದು, ಇದೇ ತಿಂಗಳ 27ರಿಂದ ಟೂರ್ನಿ ಆರಂಭಗೊಳ್ಳಲಿದೆ. ಇನ್ನು ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ಈ ಬಾರಿಯ ಏಷ್ಯಾಕಪ್ ಟೂರ್ನಿ ಶ್ರೀಲಂಕಾದಲ್ಲಿ ನಡೆಯಬೇಕಿತ್ತು. ಆದರೆ, ಅಲ್ಲಿನ ಆರ್ಥಿಕ ಸ್ಥಿತಿ ಹದಗೆಟ್ಟಿರುವ ಕಾರಣ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸಲಾಗಿದೆ. ಈಗಾಗಲೇ ಟೂರ್ನಿಯಲ್ಲಿ ಭಾಗವಹಿಸಲಿರುವ ತಂಡಗಳನ್ನು ಆಯಾ ಕ್ರಿಕೆಟ್ ಬೋರ್ಡ್‌ಗಳು ಪ್ರಕಟಿಸಿದ್ದು, ಬಿಸಿಸಿಐ ಕೂಡ ನಿನ್ನೆಯಷ್ಟೇ ಹದಿನೈದು ಆಟಗಾರರ ಭಾರತ ತಂಡವನ್ನು ಪ್ರಕಟಿಸಿದೆ.

Asia Cup 2022: ಏಷ್ಯಾಕಪ್ ಟೂರ್ನಿಗೆ 15 ಆಟಗಾರರ ಭಾರತ ತಂಡ ಪ್ರಕಟಿಸಿದ ಬಿಸಿಸಿಐ; ಬುಮ್ರಾ ಔಟ್!Asia Cup 2022: ಏಷ್ಯಾಕಪ್ ಟೂರ್ನಿಗೆ 15 ಆಟಗಾರರ ಭಾರತ ತಂಡ ಪ್ರಕಟಿಸಿದ ಬಿಸಿಸಿಐ; ಬುಮ್ರಾ ಔಟ್!

ಏಷ್ಯಾ ಕ್ರಿಕೆಟ್ ತಂಡಗಳಿಗೆ ಪ್ರತಿಷ್ಠಿತವಾಗಿರುವ ಈ ಏಷ್ಯಾಕಪ್ ಟೂರ್ನಿ ಕೊನೆಯದ್ದಾಗಿ 2018ರಲ್ಲಿ ನಡೆದಿತ್ತು ಹಾಗೂ ಈ ಟೂರ್ನಿಯಲ್ಲಿ ಭಾರತ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಅಂದು ಏಷ್ಯಾಕಪ್ ಟ್ರೋಫಿಯನ್ನು ರೋಹಿತ್ ಶರ್ಮಾ ನಾಯಕತ್ವದಡಿಯಲ್ಲಿ ಮುಡಿಗೇರಿಸಿಕೊಂಡು ಹಾಲಿ ಚಾಂಪಿಯನ್ ಎನಿಸಿಕೊಂಡಿರುವ ಭಾರತ ಈ ಬಾರಿಯೂ ಸಹ ಟ್ರೋಫಿಯನ್ನು ಗೆದ್ದು ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವತ್ತ ಚಿತ್ತ ನೆಟ್ಟಿದೆ.

CWG 2022: ಕಾಮನ್‍ವೆಲ್ತ್ ಮುಕ್ತಾಯ; ಭಾರತದ ಪರ ಪದಕ ಗೆದ್ದ ಎಲ್ಲಾ ಕ್ರೀಡಾಪಟುಗಳ ಪಟ್ಟಿCWG 2022: ಕಾಮನ್‍ವೆಲ್ತ್ ಮುಕ್ತಾಯ; ಭಾರತದ ಪರ ಪದಕ ಗೆದ್ದ ಎಲ್ಲಾ ಕ್ರೀಡಾಪಟುಗಳ ಪಟ್ಟಿ

ಇನ್ನು ಏಷ್ಯಾಕಪ್ ಟೂರ್ನಿ 1984ರಿಂದ ಜರುಗುತ್ತಿದ್ದು 2018ರ ಏಷ್ಯಾಕಪ್ ಟೂರ್ನಿಯವರೆಗೆ ಒಟ್ಟು 14 ಆವೃತ್ತಿಗಳು ಜರುಗಿವೆ. ಯುಎಇಯಲ್ಲಿ ನಡೆದಿದ್ದ ಚೊಚ್ಚಲ ಏಷ್ಯಾಕಪ್ ಆವೃತ್ತಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಭಾರತ ಸದ್ಯ ಅಂತಿಮವಾಗಿ ನಡೆದಿರುವ 2018ರ ಏಷ್ಯಾಕಪ್ ಟೂರ್ನಿಯಲ್ಲಿಯೂ ಚಾಂಪಿಯನ್ ಆಗಿದೆ. ಹೀಗೆ ನಡೆದಿರುವ ಎಲ್ಲಾ ಏಷ್ಯಾಕಪ್‌ನ ಪ್ರತೀ ಆವೃತ್ತಿಯಲ್ಲಿಯೂ ಯಾವ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ ಹಾಗೂ ಯಾವ ತಂಡಗಳು ರನ್ನರ್ ಅಪ್ ಆಗಿ ಹೊರಹೊಮ್ಮಿವೆ ಎಂಬುದರ ಕುರಿತಾದ ಪಟ್ಟಿ ಈ ಕೆಳಕಂಡಂತಿದೆ.

ಏಷ್ಯಾಕಪ್ ವಿನ್ನರ್ಸ್ ಮತ್ತು ರನ್ನರ್ ಅಪ್ ತಂಡಗಳ ಪಟ್ಟಿ

ಏಷ್ಯಾಕಪ್ ವಿನ್ನರ್ಸ್ ಮತ್ತು ರನ್ನರ್ ಅಪ್ ತಂಡಗಳ ಪಟ್ಟಿ

1984ರಿಂದ 2018ರವರೆಗೂ ನಡೆದಿರುವ ಒಟ್ಟು 14 ಏಷ್ಯಾಕಪ್ ಆವೃತ್ತಿಗಳ ಚಾಂಪಿಯನ್ ಮತ್ತು ರನ್ನರ್ ಅಪ್ ತಂಡಗಳ ಪಟ್ಟಿ

1984: ಭಾರತ ಚಾಂಪಿಯನ್, ಶ್ರೀಲಂಕಾ ರನ್ನರ್ ಅಪ್

1986 ಶ್ರೀಲಂಕಾ ಚಾಂಪಿಯನ್, ಪಾಕಿಸ್ತಾನ ರನ್ನರ್ ಅಪ್

1988 ಭಾರತ ಚಾಂಪಿಯನ್, ಶ್ರೀಲಂಕಾ ರನ್ನರ್ ಅಪ್

1990/91 ಭಾರತ ಚಾಂಪಿಯನ್, ಶ್ರೀಲಂಕಾ ರನ್ನರ್ ಅಪ್

1995 ಭಾರತ ಚಾಂಪಿಯನ್, ಶ್ರೀಲಂಕಾ ರನ್ನರ್ ಅಪ್

1997 ಶ್ರೀಲಂಕಾ ಚಾಂಪಿಯನ್, ಭಾರತ ರನ್ನರ್ ಅಪ್

2000 ಪಾಕಿಸ್ತಾನ ಚಾಂಪಿಯನ್, ಶ್ರೀಲಂಕಾ ರನ್ನರ್ ಅಪ್

2004 ಶ್ರೀಲಂಕಾ ಚಾಂಪಿಯನ್, ಭಾರತ ರನ್ನರ್ ಅಪ್

2008 ಶ್ರೀಲಂಕಾ ಚಾಂಪಿಯನ್, ಭಾರತ ರನ್ನರ್ ಅಪ್

2010 ಭಾರತ ಚಾಂಪಿಯನ್, ಶ್ರೀಲಂಕಾ ರನ್ನರ್ ಅಪ್

2012 ಪಾಕಿಸ್ತಾನ ಚಾಂಪಿಯನ್, ಬಾಂಗ್ಲಾದೇಶ ರನ್ನರ್ ಅಪ್

2014 ಶ್ರೀಲಂಕಾ ಚಾಂಪಿಯನ್, ಶ್ರೀಲಂಕಾ ರನ್ನರ್ ಅಪ್

2016 ಭಾರತ ಚಾಂಪಿಯನ್, ಬಾಂಗ್ಲಾದೇಶ ರನ್ನರ್ ಅಪ್

2018 ಭಾರತ ಚಾಂಪಿಯನ್, ಬಾಂಗ್ಲಾದೇಶ ರನ್ನರ್ ಅಪ್

ಭಾರತ ಅತಿಹೆಚ್ಚು ಬಾರಿ ಚಾಂಪಿಯನ್, ಲಂಕಾ ಅತಿಹೆಚ್ಚು ಬಾರಿ ರನ್ನರ್ ಅಪ್

ಭಾರತ ಅತಿಹೆಚ್ಚು ಬಾರಿ ಚಾಂಪಿಯನ್, ಲಂಕಾ ಅತಿಹೆಚ್ಚು ಬಾರಿ ರನ್ನರ್ ಅಪ್

ಇನ್ನು ಏಷ್ಯಾಕಪ್ ಇತಿಹಾಸದಲ್ಲಿ ಟೀಮ್ ಇಂಡಿಯಾ 7 ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದು ಅತಿಹೆಚ್ಚು ಬಾರಿ ಚಾಂಪಿಯನ್ ಆದ ದಾಖಲೆಯನ್ನು ಹೊಂದಿದೆ. ಅತ್ತ ಶ್ರೀಲಂಕಾ ಹನ್ನೊಂದು ಬಾರಿ ಫೈನಲಿಸ್ಟ್ ಆಗಿದ್ದು ಅತಿಹೆಚ್ಚು ಬಾರಿ ಫೈನಲ್ ಪ್ರವೇಶಿಸಿದ ತಂಡ ಎನಿಸಿಕೊಂಡಿದೆ. ಭಾರತ ಕೂಡ ಒಟ್ಟು ಹತ್ತು ಬಾರಿ ಏಷ್ಯಾಕಪ್‌ನಲ್ಲಿ ಫೈನಲ್ ಪ್ರವೇಶಿಸಿದೆ.

ಒಮ್ಮೆಯೂ ಫೈನಲ್‌ನಲ್ಲಿ ಮುಖಾಮುಖಿಯಾಗಿಲ್ಲ ಭಾರತ ಮತ್ತು ಪಾಕ್

ಒಮ್ಮೆಯೂ ಫೈನಲ್‌ನಲ್ಲಿ ಮುಖಾಮುಖಿಯಾಗಿಲ್ಲ ಭಾರತ ಮತ್ತು ಪಾಕ್

ಇನ್ನು ಏಷ್ಯಾಕಪ್ ಇತಿಹಾಸದಲ್ಲಿ ಒಮ್ಮೆಯೂ ಬದ್ಧ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿಲ್ಲ. ಹಾಗೂ ಉಭಯ ತಂಡಗಳ ಏಷ್ಯಾಕಪ್ ಮುಖಾಮುಖಿಯಲ್ಲಿ ಟೀಮ್ ಇಂಡಿಯಾ ಮೇಲುಗೈ ಸಾಧಿಸಿದ್ದು, ಈ ಬಾರಿ ಇತ್ತಂಡಗಳು ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗುವ ಸಾಧ್ಯತೆ ಹೆಚ್ಚಿದೆ.

Story first published: Wednesday, August 10, 2022, 11:02 [IST]
Other articles published on Aug 10, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X