ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Asia Cup 2022: ಪಂದ್ಯಾವಳಿಯ ಅತಿ ಹೆಚ್ಚು ರನ್-ಸ್ಕೋರರ್ & ವಿಕೆಟ್ ಟೇಕರ್‌ಗಳ ಪಟ್ಟಿ

Asia Cup 2022: List of Highest Run-Scorers And Leading Wicket Takers of The Tournament

ಯುಎಇಯಲ್ಲಿ ನಡೆದ ಏಷ್ಯಾ ಕಪ್ 2022ರ ಫೈನಲ್ ತಲುಪಲು ಟೀಮ್ ಇಂಡಿಯಾ ತಪ್ಪಿಸಿಕೊಂಡಿರಬಹುದು ಆದರೆ ಶ್ರೀಲಂಕಾ ಗೆದ್ದ ಪಂದ್ಯಾವಳಿಯಲ್ಲಿ ರನ್ ಸ್ಕೋರಿಂಗ್ ಮತ್ತು ವಿಕೆಟ್ ಟೇಕಿಂಗ್ ಪಟ್ಟಿಯಲ್ಲಿ ಭಾರತ ತಂಡದ ಆಟಗಾರರು ಕ್ರಮವಾಗಿ ಎರಡನೇ ಸ್ಥಾನ ಮತ್ತು ಅಗ್ರಸ್ಥಾನದಲ್ಲಿರುವುದರಿಂದ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸ್ವಲ್ಪ ಉತ್ಸಾಹ ಇಮ್ಮಡಿಯಾಗಿದೆ.

Asia Cup 2022: ಪಾಕಿಸ್ತಾನ ವಿರುದ್ಧ ಶ್ರೀಲಂಕಾದ ಗೆಲುವಿಗೆ MS ಧೋನಿ, CSK ಸ್ಫೂರ್ತಿ; ದಸುನ್ ಶನಕAsia Cup 2022: ಪಾಕಿಸ್ತಾನ ವಿರುದ್ಧ ಶ್ರೀಲಂಕಾದ ಗೆಲುವಿಗೆ MS ಧೋನಿ, CSK ಸ್ಫೂರ್ತಿ; ದಸುನ್ ಶನಕ

ಶ್ರೀಲಂಕಾ ಭಾನುವಾರ (ಸೆಪ್ಟೆಂಬರ್ 11) ನಡೆದ ಫೈನಲ್‌ನಲ್ಲಿ 55 ರನ್ ಗಳಿಸುವ ಮೂಲಕ ಪಾಕಿಸ್ತಾನದ ವಿಶ್ವ ನಂ.1 ಟಿ20 ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಪಂದ್ಯಾವಳಿಯಲ್ಲಿ ಅಗ್ರ ಸ್ಕೋರರ್ ಆದರು. ಅವರಿಗಿಂತ 5 ರನ್ ಕಡಿಮೆ ಗಳಿಸಿರುವ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಎರಡನೇ ಸ್ಥಾನದಲ್ಲಿರಲು ಯಶಸ್ವಿಯಾಗಿದ್ದಾರೆ.

ಚೊಚ್ಚಲ ಟಿ20 ಶತಕವನ್ನು ಗಳಿಸಿದ ವಿರಾಟ್ ಕೊಹ್ಲಿ

ಚೊಚ್ಚಲ ಟಿ20 ಶತಕವನ್ನು ಗಳಿಸಿದ ವಿರಾಟ್ ಕೊಹ್ಲಿ

ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ 6 ಪಂದ್ಯಗಳಿಂದ 56.2 ಸರಾಸರಿಯಲ್ಲಿ ಮೂರು ಅರ್ಧ ಶತಕಗಳೊಂದಿಗೆ 281 ರನ್ ಗಳಿಸಿದ್ದರೆ, ಅಫ್ಘಾನಿಸ್ತಾನ ವಿರುದ್ಧದ ಕೊನೆಯ ಸೂಪರ್ 4 ಪಂದ್ಯದಲ್ಲಿ ತಮ್ಮ ಚೊಚ್ಚಲ ಟಿ20 ಶತಕವನ್ನು ಗಳಿಸಿದ ವಿರಾಟ್ ಕೊಹ್ಲಿ, ಐದು ಪಂದ್ಯಗಳಿಂದ 276 ರನ್ ಗಳಿಸಿದ್ದಾರೆ. ಐದು ಪಂದ್ಯಗಳಿಂದ 196 ರನ್ ಗಳಿಸಿರುವ ಅಫ್ಘಾನಿಸ್ತಾನದ ಬ್ಯಾಟ್ಸ್‌ಮನ್ ಇಬ್ರಾಹಿಂ ಜದ್ರಾನ್ 3ನೇ ಸ್ಥಾನದಲ್ಲಿದ್ದಾರೆ.

ಫೈನಲ್‌ನಲ್ಲಿ 'ಪ್ಲೇಯರ್ ಆಫ್ ದಿ ಮ್ಯಾಚ್' ಪಡೆದ ಭಾನುಕಾ ರಾಜಪಕ್ಸೆ, ಪಾಕಿಸ್ತಾನ ವಿರುದ್ಧ ಫೈನಲ್‌ನಲ್ಲಿ ಔಟಾಗದೆ 71 ರನ್‌ಗಳೊಂದಿಗೆ 6 ಪಂದ್ಯಗಳಿಂದ 191 ರನ್‌ಗಳೊಂದಿಗೆ 4ನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಮುಗಿಸಿದರು. 6 ಪಂದ್ಯಗಳಿಂದ 173 ರನ್ ಗಳಿಸಿದ ಚಾಂಪಿಯನ್ ಶ್ರೀಲಂಕಾ ತಂಡದ ಆರಂಭಿಕ ಬ್ಯಾಟರ್ ಪಾಥುಮ್ ನಿಸ್ಸಾಂಕ 5ನೇ ಸ್ಥಾನ ಪಡೆದರು.

5 ಪಂದ್ಯಗಳಿಂದ 11 ವಿಕೆಟ್‌ಗಳೊಂದಿಗೆ ಭುವನೇಶ್ವರ್ ಆಗ್ರಸ್ಥಾನ

5 ಪಂದ್ಯಗಳಿಂದ 11 ವಿಕೆಟ್‌ಗಳೊಂದಿಗೆ ಭುವನೇಶ್ವರ್ ಆಗ್ರಸ್ಥಾನ

ಇನ್ನು ಬೌಲಿಂಗ್‌ನಲ್ಲಿ ಭಾರತದ ವೇಗಿ ಭುವನೇಶ್ವರ್ ಕುಮಾರ್ ಅವರು ಅಫ್ಘಾನಿಸ್ತಾನ ವಿರುದ್ಧ 4 ರನ್ ನೀಡಿ ಅತ್ಯುತ್ತಮ 5 ವಿಕೆಟ್ ಗೊಂಚಲು ಸೇರಿದಂತೆ 5 ಪಂದ್ಯಗಳಿಂದ 11 ವಿಕೆಟ್‌ಗಳೊಂದಿಗೆ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಮೂಡಿಬಂದರು.

ಇನ್ನು 'ಪ್ಲೇಯರ್ ಆಫ್ ದಿ ಟೂರ್ನಮೆಂಟ್' ಪ್ರಶಸ್ತಿ ಪಡೆದ ಶ್ರೀಲಂಕಾದ ಆಲ್‌ರೌಂಡರ್ ವನಿಂದು ಹಸರಂಗ 6 ಪಂದ್ಯಗಳಿಂದ 9 ವಿಕೆಟ್‌ಗಳೊಂದಿಗೆ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಪಾಕಿಸ್ತಾನದ ವೇಗಿ ಹ್ಯಾರಿಸ್ ರೌಫ್ ಆರು ಪಂದ್ಯಗಳಿಂದ 8 ವಿಕೆಟ್ ಪಡೆದು ಮೂರನೇ ಸ್ಥಾನ ಪಡೆದರು.

8 ವಿಕೆಟ್‌ಗಳೊಂದಿಗೆ ನಾಲ್ಕನೇ ಸ್ಥಾನ ಪಡೆದ ಮೊಹಮ್ಮದ್ ನವಾಜ್

8 ವಿಕೆಟ್‌ಗಳೊಂದಿಗೆ ನಾಲ್ಕನೇ ಸ್ಥಾನ ಪಡೆದ ಮೊಹಮ್ಮದ್ ನವಾಜ್

ಅದೇ ರೀತಿ ರನ್ನರ್-ಅಪ್ ಪಾಕಿಸ್ತಾನದ ಆಲ್‌ರೌಂಡರ್ ಮೊಹಮ್ಮದ್ ನವಾಜ್ 8 ವಿಕೆಟ್‌ಗಳೊಂದಿಗೆ ನಾಲ್ಕನೇ ಸ್ಥಾನ ಪಡೆದರೆ, ಪಾಕಿಸ್ತಾನದ ಮೊತ್ತೊಬ್ಬ ಸ್ಪಿನ್ನರ್ ಶದಾಬ್ ಖಾನ್ 8 ವಿಕೆಟ್‌ಗಳೊಂದಿಗೆ ಎಕಾನಮಿ ದರದಲ್ಲಿ ಐದನೇ ಸ್ಥಾನದಲ್ಲಿದ್ದಾರೆ.

"ನಾನು ಬ್ಯಾಟ್ ಮಾಡಲು ಹೋದಾಗ, ನಾವು 60 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದೆವು. ಆದ್ದರಿಂದ ನಾವು 150ಕ್ಕಿಂತ ಹೆಚ್ಚು ಸ್ಕೋರ್ ಮಾಡಿದರೆ ಅದು ಉತ್ತಮ ಮೊತ್ತ ಎಂದು ನಾವು ಯೋಜಿಸಿದ್ದೇವೆ. ಮಧ್ಯಮ ಕ್ರಮಾಂಕದಲ್ಲಿ ನಾನು ನನ್ನದೇ ಆದ ಪಾತ್ರವನ್ನು ನಿರ್ವಹಿಸುತ್ತೇನೆ ಎಂದು ನಾನು ಹೇಳಿದೆ, ಆದ್ದರಿಂದ ನಾನು ನನ್ನ ಸಾಮಾನ್ಯ ಹೊಡೆತಗಳನ್ನು ಆಡಿದ್ದೇನೆ," ಎಂದು ವನಿಂದು ಹಸರಂಗ ಫೈನಲ್‌ನಲ್ಲಿನ ಒತ್ತಡದ ಪರಿಸ್ಥಿತಿಯ ಬಗ್ಗೆ ಹೇಳಿದರು.

ಕೊನೆಯ ಓವರ್‌ನಲ್ಲಿ ಮೂರು ವಿಕೆಟ್‌ ಪಡೆದ ಹಸರಂಗ

ಕೊನೆಯ ಓವರ್‌ನಲ್ಲಿ ಮೂರು ವಿಕೆಟ್‌ ಪಡೆದ ಹಸರಂಗ

"ನಾನು ಉಪಖಂಡದಲ್ಲಿ ಬೌಲಿಂಗ್ ಮಾಡಲು ಇಷ್ಟಪಡುತ್ತೇನೆ. ನಾನು ಸ್ಟಂಪ್ ಮೇಲೆ ಬೌಲ್ ಮಾಡಲು ಇಷ್ಟಪಡುತ್ತೇನೆ, ಅದು ನನಗೆ ಯಶಸ್ವಿಯಾಗಲು ಸಹಾಯ ಮಾಡುತ್ತದೆ ಎಂದು ನಾನು ಭಾವಿಸುದ್ದೇನೆ. ನಾನು ಬೌಂಡರಿಗಳಿಲ್ಲದೆ ಬೌಲ್ ಮಾಡಲು ಪ್ರಯತ್ನಿಸುತ್ತೇನೆ, ಹಾಗಾಗಿ ಇಂದು ಕೊನೆಯ ಓವರ್‌ನಲ್ಲಿ ಮೂರು ವಿಕೆಟ್‌ಗಳನ್ನು ಪಡೆದಿದ್ದೇನೆ. ವಿಶೇಷವಾಗಿ ಗುಂಪು ಹಂತದಲ್ಲಿ ಅಫ್ಘಾನಿಸ್ತಾನದ ವಿರುದ್ಧ ಸೋತ ನಂತರ ನಮ್ಮ ಹುಡುಗರು ಉತ್ತಮ ಕೆಲಸ ಮಾಡಿದರು," ಎಂದು ಸರಣಿ ಶ್ರೇಷ್ಠ ಆಟಗಾರ ವನಿಂದು ಹಸರಂಗ ತಿಳಿಸಿದರು.

Story first published: Monday, September 12, 2022, 12:56 [IST]
Other articles published on Sep 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X